ಏನಿದು ಕೂ ಆಪ್‌?..ಇದನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಭಾರತದಲ್ಲಿ ಟಿಕ್‌ಟಾಕ್, ಪಬ್‌ಜಿ ಮೊಬೈಲ್ ಸೇರಿದಂತೆ ಹಲವು ಚೀನಾದ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದ ನಂತರ ಸ್ವದೇಶಿ ಅಪ್ಲಿಕೇಶನ್‌ಗಳು ಮುನ್ನೆಲೆಯಲ್ಲಿ ಕಾಣಿಸಿಕೊಂಡಿವೆ. ಪ್ರಸ್ತುತ ಆತ್ಮನಿರ್ಭಾರ ಭಾರತ್‌ ಬೆಂಬಲವಾಗಿ ಬಳಕೆದಾರರು ಸ್ವದೇಶಿ ಆಪ್‌ಗಳ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಟ್ವಿಟರ್‌ ಆಪ್‌ಗೆ ಪರ್ಯಾಯ ಎಂದು ಗುರುತಿಸಿಕೊಂಡಿರುವ ಭಾರತೀಯ ಕೂ-Koo ಆಪ್‌ ಸದ್ದು ಮಾಡುತ್ತಿದೆ.

ಪರ್ಯಾಯ

ಹೌದು, ಕೂ ಆಪ್‌ ಟ್ವಿಟರ್ ಆಪ್‌ಗೆ ಪರ್ಯಾಯ ಆಗಿದೆ. ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಸೇರಿದಂತೆ ಇತರೆ ಗಣ್ಯರು ಸಹ ಕೂ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಖಾತೆ ಪ್ರಾರಂಭಿಸಿದ್ದಾರೆ. ಟ್ವಿಟರ್‌ನಂತೆಯೇ, ಕೂ ಬಳಕೆದಾರರು 400 ಅಕ್ಷರಗಳನ್ನು ಒಳಗೊಂಡಿರುವ ಸಣ್ಣ ಪೋಸ್ಟ್‌ಗಳನ್ನು ಹಂಚಿಕೊಳ್ಳಬಹುದು. ಇದಲ್ಲದೆ, ಬಳಕೆದಾರರು ಆಡಿಯೋ ಮೆಸೆಜ್‌, ವೀಡಿಯೊಗಳು, ಫೋಟೋಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಬಹುದು. ಹಾಗಾದರೇ ಏನಿದು ಕೂ ಆಪ್‌?..ಈ ಆಪ್ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಏನಿದು ಕೂ ಆಪ್‌?

ಏನಿದು ಕೂ ಆಪ್‌?

ಕೂ ಮೂಲತಃ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಮತ್ತು ಟ್ವಿಟರ್‌ಗೆ ಭಾರತೀಯ ಪರ್ಯಾಯವಾಗಿದೆ. ಈ ಅಪ್ಲಿಕೇಶನ್ ಅನ್ನು ಏಪ್ರಿಲ್ 2020 ರಲ್ಲಿ ಅಪ್ರಮೇಯ ರಾಧಾಕೃಷ್ಣ ಮತ್ತು ಮಾಯಾಂಕ್ ಬಿಡಾವಟ್ಕಾ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಭಾರತೀಯ ಅಪ್ಲಿಕೇಶನ್‌ನಲ್ಲಿ ಭಾರತದ ಅನೇಕ ಅಧಿಕಾರಿಗಳು ತಮ್ಮ ಖಾತೆಗಳನ್ನು ರಚಿಸಿರುವುದರಿಂದ ಇದು ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅಪ್ಲಿಕೇಶನ್ ಡೆವಲಪರ್‌ಗಳು ಹಿಂದಿ, ತೆಲುಗು, ಕನ್ನಡ, ಬಂಗಾಳಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಒರಿಯಾ ಮತ್ತು ಅಸ್ಸಾಮೀಸ್ ಸೇರಿದಂತೆ ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲವನ್ನು ಸೇರಿಸಿದ್ದಾರೆ.

ಟ್ವಿಟರ್‌ಗೆ ಫೈಟ

ಟ್ವಿಟರ್‌ಗೆ ಫೈಟ

ಕೂ ಆಪ್‌ ಸಹ ಟ್ವಿಟರ್‌ನಂತೆ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಆಗಿದೆ. ಟ್ವಿಟರ್‌ನಂತೆ ಸ್ವದೇಶಿ ಕೂ ಆಪ್‌ನಲ್ಲಿಯೂ ಬಳಕೆದಾರರಿಗೆ 400 ಅಕ್ಷರಗಳನ್ನು ಒಳಗೊಂಡಿರುವ ಸಣ್ಣ ಪೋಸ್ಟ್‌ಗಳನ್ನು ಶೇರ್‌ ಮಾಡಬಹುದಾದ ಅವಕಾಶ ಇದೆ. ಇದರೊಂದಿಗೆ ಕೂ ಆಪ್‌ನಲ್ಲಿ ಬಳಕೆದಾರರು ಆಡಿಯೋ ಮೆಸೆಜ್, ವೀಡಿಯೊಗಳು ಕಂಟೆಂಟ್, ಫೋಟೋಗಳು ಮತ್ತು ಲಿಂಕ್‌ಗಳನ್ನು ಸಹ ಶೇರ್ ಮಾಡಬಹುದಾಗಿದೆ.

ಕೂ ಆಪ್‌ ಡೌನ್‌ಲೋಡ್ ಮಾಡುವುದು ಹೇಗೆ?

ಕೂ ಆಪ್‌ ಡೌನ್‌ಲೋಡ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಮತ್ತು ಐಓಎಸ್ ಈ ಇಬ್ಬರೂ ಬಳಕೆದಾರರು ಕೂ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್‌ ಬಳಕೆದಾರರು ಕೂ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಬಳಕೆದಾರರು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Most Read Articles
Best Mobiles in India

English summary
Koo App: What is it? How to download on Android, iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X