Home
ಟೆಕ್ ನೌಕರಿ

KPSC ಕಡ್ಡಾಯ ಕನ್ನಡ ಪರೀಕ್ಷೆ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ!

ಕರ್ನಾಟಕ ಲೋಕಸೇವಾ ಆಯೋಗವು (KPSC) ಕರ್ನಾಟಕ ರಾಜ್ಯದಲ್ಲಿ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕರ್ನಾಟಕದಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು KPSC ಪರೀಕ್ಷೆಗಳು ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ಮಾಡುತ್ತದೆ.

ಕಡ್ಡಾಯ ಕನ್ನಡ ಪರೀಕ್ಷೆಯು ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯಾಗಿದೆ. ಕನ್ನಡವನ್ನು ಮಾತೃಭಾಷೆಯಾಗಿ ಅಭ್ಯಾಸಿಸದಿರುವ ಆದರೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಪರೀಕ್ಷೆಯು ಕಡ್ಡಾಯವಾಗಿದೆ. ಇನ್ನು ಕಡ್ಡಾಯ ಕನ್ನಡ ಪರೀಕ್ಷೆಯ ಬರೆದ ಅಭ್ಯರ್ಥಿಗಳು ಪರೀಕ್ಷೆಯ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

KPSC ಕಡ್ಡಾಯ ಕನ್ನಡ ಪರೀಕ್ಷೆ ಪ್ರಮಾಣಪತ್ರ ಡೌನ್‌ಲೋಡ್‌ ಮಾಡಲು ಹೀಗೆ ಮಾಡಿ!

KPSC (ಕರ್ನಾಟಕ ಲೋಕಸೇವಾ ಆಯೋಗ) ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಮಾಣಪತ್ರ ವನ್ನು ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ :

ಹಂತ 1 : ಅಧಿಕೃತ KPSC ವೆಬ್‌ಸೈಟ್‌ಗೆ ಭೇಟಿ ನೀಡಿರಿ - ಅಭ್ಯರ್ಥಿಗಳು ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ 'KPSC official website' ಎಂದು ಟೈಪ್ ಮಾಡುವ ಮೂಲಕ ಅಥವಾ ಇಲ್ಲಿ ನೀಡಿರುವ URL ಗೆ ಭೇಟಿ ನೀಡುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - https://kpsc.kar.nic.in/

ಹಂತ 2 : KPSC (ಕರ್ನಾಟಕ ಲೋಕಸೇವಾ ಆಯೋಗ) ವೆಬ್‌ಸೈಟ್‌ ವೆಬ್‌ಸೈಟ್‌ನ ಹೋಮ್‌ ಪೇಜ್‌ನಲ್ಲಿ ಕಾಣಿಸುವ 'ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಮಾಣಪತ್ರ ವನ್ನು ಡೌನ್‌ಲೋಡ್' ಆಯ್ಕೆ ಕ್ಲಿಕ್ ಮಾಡಿರಿ

ಹಂತ 3 : ಬಳಿಕ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿರಿ - ನೀವು ಈಗಾಗಲೇ KPSC ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ್ದರೆ, ನಿಮ್ಮ ರುಜುವಾತುಗಳನ್ನು (ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್) ಬಳಸಿ ಲಾಗ್ ಇನ್ ಮಾಡಿರಿ. ಒಂದು ವೇಳೆ ನೀವು ನೋಂದಾಯಿಸದಿದ್ದರೆ, ಮೊದಲು ಖಾತೆಯನ್ನು ರಚಿಸಬೇಕಾಗಬಹುದು.

ಹಂತ 4 : ಬಳಿಕ ಎಡ ಭಾಗದಲ್ಲಿ ಕಾಣುವ ಆಯ್ಕೆಗಳಲ್ಲಿ ಮೈ ಅಪ್ಲಿಕೇಶನ್ ಆಯ್ಕೆ ಅನ್ನು ನೀವು ಸೆಲೆಕ್ಟ್ ಮಾಡಿರಿ.

ಹಂತ 5 : ಅಲ್ಲಿ ನಿಮಗೆ ಪರೀಕ್ಷೆಗಳ ಮಾಹಿತಿ ಕಾಣಿಸುತ್ತದೆ. ಹಾಗೆಯೇ ಮೇಲ್ಭಾಗದಲ್ಲಿ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಕಡ್ಡಾಯ ಕನ್ನಡ ಪ್ರಮಾಣಪತ್ರ (Compulsory kannada certificate) ಆಯ್ಕೆಯು ಕೂಡಾ ಕಾಣಿಸುತ್ತದೆ.

ಹಂತ 6 : ಪರೀಕ್ಷೆ ಆಯ್ಕೆ ಮಾಡಿಕೊಂಡು, ಬಳಿಕ ಕಡ್ಡಾಯ ಕನ್ನಡ ಪ್ರಮಾಣಪತ್ರ (Compulsory kannada certificate) ಆಯ್ಕೆ ಕ್ಲಿಕ್ ಮಾಡಿರಿ.

ಹಂತ 7 : ನಂತರ ನಿಮಗೆ 'ಕಡ್ಡಾಯ ಕನ್ನಡ ಭಾಷಾ ಪರೀಕ್ಷಾ ಉತ್ತೀ‍ರ್ಣ ಪ್ರಮಾಣ ಪತ್ರ' ಕಾಣಿಸುತ್ತದೆ.

ಹಂತ 8 : ಅದನ್ನು ನೀವು ಕಡ್ಡಾಯ ಕನ್ನಡ ಪ್ರಮಾಣಪತ್ರವನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಲ್ಲಿವೆ ನೇರವಾಗಿ ಪ್ರಿಂಟ್‌ ಕೂಡಾ ಮಾಡಬಹುದಾದ ಆಯ್ಕೆ ಇದೆ. ಹಾಗೆಯೇ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಮಾಣಪತ್ರ ಅನ್ನು PDF ಫೈಲ್ ನಲ್ಲಿ ಸಹ ಸೇವ್ ಮಾಡಬಹುದು.

ಅಭ್ಯರ್ಥಿಗಳೆ ಗಮನಿಸಿ : ಅಧಿಕೃತ KPSC (ಕರ್ನಾಟಕ ಲೋಕಸೇವಾ ಆಯೋಗ) ವೆಬ್‌ಸೈಟ್‌ಗೆ ಭೇಟಿ ನೀಡಿರಿ. ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಮಾಣಪತ್ರದ ಡೌನ್‌ಲೋಡ್ ಮಾಡುವಾಗ ನಿಮಗೆ ಯಾವುದೇ ಸಮಸ್ಯೆಗಳ ಬಂದಲ್ಲಿ ಅಧಿಕೃತ KPSC ಸಹಾಯವಾಣಿಯನ್ನು ಸಹ ಸಂಪರ್ಕ ಮಾಡಬಹುದು.

Best Mobiles in India

English summary
KPSC: To download the KPSC (Karnataka Public Service Commission) Compulsory Kannada Exam Certificate, you can follow these easy steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+