Subscribe to Gizbot

ಆಧಾರ್ ಕಾರ್ಡ್ ಬಯೊಮೇಟ್ರಿಕ್ ಲಾಕ್ ಮಾಡುವ ಮುನ್ನ ಎಚ್ಚರ: ಯಾಕೆ? ತೊಂದರೆ ಏನು?

Written By:

ದೇಶದ ಪ್ರತಿಯೊಬ್ಬ ನಾಗರೀಕರೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕಾದ ಅನಿರ್ವಾಯತೆಯನ್ನು ಆಡಳಿತ ಸರಕಾರವೂ ನಿರ್ಮಿಸಿದ್ದು, ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಮಾಹಿತಿಗಳು ಲೀಕ್ ಆಗುತ್ತಿರುವ ಸುದ್ಧಿಗಳು ಒಂದರ ಹಿಂದೆ ಒಂದರಂತೆ ವರದಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಬಯೊಮೇಟ್ರಿಕ್ ಲಾಕ್ ಎನ್ನುವ ಹೊಸದೊಂದು ಆಯ್ಕೆಯನ್ನು ನೀಡಲಾಗಿದೆ.

ಆಧಾರ್ ಕಾರ್ಡ್ ಬಯೊಮೇಟ್ರಿಕ್ ಲಾಕ್ ಮಾಡುವ ಮುನ್ನ ಎಚ್ಚರ: ಯಾಕೆ? ತೊಂದರೆ ಏನು.?

ಓದಿರಿ: ಜಿಯೋ-ಏರ್‌ಟೆಲ್-ವೊಡಾಗೆ ನೇರವಾಗಿ ಚಾಲೆಂಜ್ ಹಾಕಿದ ಐಡಿಯಾದಿಂದ ಸುಪರ್ ಆಫರ್

ಆದರೆ ಈ ಬಯೊಮೇಟ್ರಿಕ್ ಲಾಕ್ ಮಾಡುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು. ಒಮ್ಮೆ ನೀವು ಲಾಕ್ ಮಾಡಿದರೆ ನಿಮ್ಮ ಬಯೊಮೇಟ್ರಿಕ್ ಮಾಹಿತಿಯನ್ನು ಎಲ್ಲಿಯೂ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಇತ್ತೀಚೆಗೆ ಆನ್‌ಲಾಕ್ ಮಾಡುವುದು ಸಹ ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ನೀವು ಬಯೊಮೇಟ್ರಿಕ್ ಲಾಕ್ ಓಪನ್ ಮಾಡಲು ಸಾಧ್ಯವಾಗದೆ ಇದರಲ್ಲಿ ಇಂದಿನ ಲೇಖನ ನಿಮಗೆ ಸಹಾಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಯೊಮೇಟ್ರಿಕ್ ಲಾಕ್ ಒಳ್ಳೆಯದು, ಆದರೆ..?

ಬಯೊಮೇಟ್ರಿಕ್ ಲಾಕ್ ಒಳ್ಳೆಯದು, ಆದರೆ..?

ಆಧಾರ್ ಬಯೊಮೇಟ್ರಿಕ್ ಲಾಕ್ ಮಾಡುವುದು ಉತ್ತಮ. ಆದರೆ ನೀವು ಒಮ್ಮೆ ಲಾಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಮೂಲಕ ಸಿಮ್ ಕಾರ್ಡ್ ತೆಗೆದುಕೊಳ್ಳಲಾಗುವುದಿಲ್ಲ. ಆಧಾರ್ ಕಾರ್ಡ್ ಪೇಮೆಂಟ್ ಮಾಡಲು ಸಾಧ್ಯವಿಲ್ಲ. ಕಾರಣ ನಿಮ್ಮ ಬಯೊಮೇಟ್ರಿಕ್ ಲಾಕ್ ಆಗಿರುತ್ತದೆ. ಅದನ್ನು ಆನ್ ಲಾಕ್ ಮಾಡಿದ ನಂತರವೇ ಎಲ್ಲಾ ಸೇವೆಗಳನ್ನು ಪಡೆಯಲು ಸಾಧ್ಯ.

ಹೆಚ್ಚು ಆಧಾರ್ ಬಳಕೆ ಮಾಡುತ್ತಿದ್ದರೇ ಲಾಕ್ ಮಾಡಬೇಡಿ:

ಹೆಚ್ಚು ಆಧಾರ್ ಬಳಕೆ ಮಾಡುತ್ತಿದ್ದರೇ ಲಾಕ್ ಮಾಡಬೇಡಿ:

ನೀವು ಹೆಚ್ಚಿನ ಸೇವೆಗಳನ್ನು ಅದರಲ್ಲೂ ಬಯೊಮೇಟ್ರಿಕ್ ಮಾಹಿತಿಯನ್ನು ಬಯಸು ಕಡೆಗಳಲ್ಲಿ ಹೆಚ್ಚು ಆಧಾರ್ ಬಳಕೆ ಮಾಡುತ್ತಿದ್ದರೇ ನೀವು ಬಯೊಮೇಟ್ರಿಕ್ ಲಾಕ್ ಮಾಡಬೇಡಿ. ಕಾರಣ ಅದನ್ನು ಆನ್‌ಲಾಕ್ ಮಾಡಲು ಟೆಕ್ನಿಕಲ್ ಎರರ್ ಎದುರಾಗುತ್ತಿದೆ.

ಬಯೊಮೇಟ್ರಿಕ್ ಲಾಕ್ ಓಪನ್ ಮಾಡಲು ಆಗುತ್ತಿಲ್ಲವೇ.?

ಬಯೊಮೇಟ್ರಿಕ್ ಲಾಕ್ ಓಪನ್ ಮಾಡಲು ಆಗುತ್ತಿಲ್ಲವೇ.?

ಸದ್ಯ ಇಂದು ಹೆಚ್ಚಿನ ಕಂಪ್ಯೂಟರ್ ಗಳಲ್ಲಿ ಬಳಕೆಯಾಗುತ್ತಿರುವ ಬ್ರೌಸರ್ ಗಳಲ್ಲಿ ಕ್ರೋಮ್ ಮತ್ತು ಫೈಯರ್ ಫಾಕ್ಸ್ ಮೊದಲ ಸ್ಥಾನವನ್ನು ಅಲಂಕರಿಸಿವೆ. ಆದರೆ ಇವುಗಳಲ್ಲಿ ನೀವು ಆನ್‌ಲಾಕ್ ಮಾಡಲು ಇಂದಿನ ದಿನದಲ್ಲಿ ಸಾಧ್ಯವಾಗುತ್ತಿದೆ. ತಾಂತ್ರಿಕ ದೋಷ ಇದರಲ್ಲಿ ಎದುರಾಗುತ್ತಿದೆ.

ಹಾಗಿದ್ದರೇ ಬಯೊಮೇಟ್ರಿಕ್ ಆನ್‌ಲಾಕ್ ಮಾಡುವುದು ಹೇಗೆ..?

ಹಾಗಿದ್ದರೇ ಬಯೊಮೇಟ್ರಿಕ್ ಆನ್‌ಲಾಕ್ ಮಾಡುವುದು ಹೇಗೆ..?

ನೀವು ಬಯೊಮೇಟ್ರಿಕ್ ಆನ್‌ಲಾಕ್ ಮಾಡಬೇಕು ಎನ್ನುವುದಾದರೆ ವಿಂಡೋಸ್ ಡಿಫಾಲ್ಟ್ ಬ್ರೌಸರ್ ಇಂಟರ್‌ನೆಟ್ ಎಕ್ಸ್‌ಪ್ಲೂರ್ ನಲ್ಲಿ ಮಾತ್ರವೇ ಸಾಧ್ಯವಿದೆ. ಅಲ್ಲಿ ಆಧಾರ್ ವೆಬ್ ಓಪನ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿದರೆ ಒಟಿಪಿ ಬರಲಿದ್ದು, ಅದನ್ನು ದಾಖಲಿಸಿ ನಿಮ್ಮ ಬಯೊಮೇಟ್ರಿಕ್ ಆನ್‌ಲಾಕ್ ಮಾಡಿಕೊಳ್ಳಬಹುದು.

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಬಯೊಮೇಟ್ರಿಕ್ ಲಾಕ್ ಮಾಡುವುದು ಸುರಕ್ಷಿತ:

ಬಯೊಮೇಟ್ರಿಕ್ ಲಾಕ್ ಮಾಡುವುದು ಸುರಕ್ಷಿತ:

ಆಧಾರ್ ಕಾರ್ಡ್ ಬಯೊಮೇಟ್ರಿಕ್ ಲಾಕ್ ಮಾಡುವುದು ಉತ್ತಮವಾಗಿದೆ. ಕಾರಣ ಯಾರು ಸಹ ನಿಮ್ಮ ಮಾಹಿತಿಯನ್ನು ಕದಿಯಲು ಸಾಧ್ಯವಾಗುವುದಿಲ್ಲ. ಆದರೆ ನೀವು ಆನ್‌ಲಾಕ್ ಮಾಡುವ ವಿಧಾನವನ್ನು ತಿಳಿದಿದ್ದರೇ ಮಾತ್ರವೇ ನಿಮಗೆ ಅದು ಸಹಾಯವಾಗಲಿದೆ. ಇಲ್ಲವಾದರೆ ಅದೇ ದೊಡ್ಡ ತೊಂದರೆಯನ್ನು ನಿರ್ಮಿಸಿದಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Now UIDAI Aadhaar Portal have option with which you can easily lock or unlock your Aadhaar Biometrics Stored in UIDAI Database. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot