ಜಿಯೋ-ಏರ್‌ಟೆಲ್-ವೊಡಾಗೆ ನೇರ ಚಾಲೆಂಜ್: ಐಡಿಯಾದಿಂದ ಸೂಪರ್ ಆಫರ್

Written By:

ಟೆಲಿಕಾಂ ವಲಯದಲ್ಲಿ ದರ ಸಮರವೂ ದಿನದಿಂದ ದಿನಕ್ಕೇ ಕಾವು ಪಡೆದುಕೊಳ್ಳುತ್ತಿದ್ದು, ಜಿಯೋ ಹಾಕಿದ ಹಾದಿಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಸಾಗುತ್ತಿವೆ, ಎಲ್ಲಾ ಕಂಪನೊಗಳು ದಿನಕ್ಕೊಂದು ಹೊಸ ಹೊಸ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿರುವುದರಿಂದ ಗ್ರಾಹಕರಿಗೆ ಯಾವ ನೆಟ್ ವರ್ಕ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಸೃಷ್ಟಿಯಾಗುತ್ತಿದೆ.

ಜಿಯೋ-ಏರ್‌ಟೆಲ್-ವೊಡಾಗೆ ನೇರ ಚಾಲೆಂಜ್: ಐಡಿಯಾದಿಂದ ಸೂಪರ್ ಆಫರ್

ಓದಿರಿ: ಆನ್‌ಲೈನಿನಲ್ಲಿ ಹೊಸ-ಹೊಸ ಸಿನಿಮಾ ಡೌನ್‌ಲೋಡ್ ಮಾಡುವುದು ಹೇಗೆ?

ಇಷ್ಟು ದಿನ ಸದ್ದಿಲ್ಲದೇ ಇದ್ದ ಐಡಿಯಾ, ಹೊಸ ಎರಡು ಪ್ಲಾನ್ ಬಿಡುಗಡೆ ಮಾಡಿದ್ದು, ಜಿಯೋ-ಏರ್‌ಟೆಲ್-ವೊಡಾಫೋನ್ ಆಫರ್‌ಗಳಿಗೆ ಸೆಡ್ಡು ಹೊಡೆಯುವಂತಹ ಭರ್ಜರಿ ಕೊಡುಗೆಯನ್ನು ತನ್ನ ಪ್ಲಾನ್ ನಲ್ಲಿ ಗ್ರಾಹಕರಿಗೆ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾದಿಂದ ಎರಡು ಕೊಡುಗೆ:

ಐಡಿಯಾದಿಂದ ಎರಡು ಕೊಡುಗೆ:

ಐಡಿಯಾ ಜಿಯೋ ಮಾದರಿಯಲ್ಲಿ ರೂ.297 ಮತ್ತು ರೂ.447ಗಳ ಎರಡು ಆಫರ್ ಗಳನ್ನು ಬಿಡುಗಡೆ ಮಾಡಿದ್ದು, ಎರಡು ಆಫರ್ ಗಳು ಕೊಂಚ ವ್ಯತ್ಯಾಸವನ್ನು ಹೊಂದಿವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ.

ರೂ.447 ಕೊಡುಗೆ:

ರೂ.447 ಕೊಡುಗೆ:

ಈ ಕೊಡುಗೆಯಲ್ಲಿ ಗ್ರಾಹಕರು ಪ್ರತಿನಿತ್ಯ 1GB ಡೇಟಾವನ್ನು ಪಡೆದುಕೊಳ್ಳಲಿದ್ದು, 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಐಡಿಯಾ ದಿಂದ ಐಡಿಯಾಗೆ ಉಚಿತ ಕರೆ ಮಾಡಬಹುದಾಗಿದ್ದು, ಬೇರೆ ನೆಟ್‌ವರ್ಕ್ ಗಳಿಗೆ 3000 ನಿಮಿಷಗಳಷ್ಟು ಮಾತನಾಡಬಹುದು.

ರೂ.297 ಕೊಡುಗೆ:

ರೂ.297 ಕೊಡುಗೆ:

ಈ ಆಫರ್ ನಲ್ಲಿ ಗ್ರಾಹಕರು 70 ದಿನ ವ್ಯಾಲಿಡಿಟಿಯೊಂದಿಗೆ ಐಡಿಯಾ ಟು ಐಡಿಯಾ ಉಚಿತ ಕರೆ ಮಾಡುವ ಅವಕಾಶದೊಂದಿಗೆ ಪ್ರತಿ ನಿತ್ಯ 1GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.

3G/4G ಗ್ರಾಹಕರಿಗೆ:

3G/4G ಗ್ರಾಹಕರಿಗೆ:

ಈ ಆಫರ್ 3G/4G ಗ್ರಾಹಕರಿಬ್ಬರಿಗೂ ಲಭ್ಯವಿದ್ದು, 4G ಹಾಂಡ್ ಸೆಟ್ ಇದ್ದವರಿಗೆ 4G ಇಂಟರ್ನೆಟ್ ಸೇವೆಯೂ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಗ್ರಾಹಕರಿಗಂತೂ ಹಬ್ಬ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ-ಏರ್‌ಟೆಲ್-ವೊಡಾಫೋನ್ ಹೊಡೆತ

ಜಿಯೋ-ಏರ್‌ಟೆಲ್-ವೊಡಾಫೋನ್ ಹೊಡೆತ

ಜಿಯೋ-ಏರ್‌ಟೆಲ್-ವೊಡಾಫೋನ್ ಕಂಪನಿಗಳು ಹೆಚ್ಚು 4G ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದರೇ, ಐಡಿಯಾ 3G/4G ಗ್ರಾಹಕರಿಬ್ಬರಿಗೂ ಗಾಳ ಹಾಕಿದೆ. ಈ ಹಿನ್ನಲೆಯಲ್ಲಿ ಈ ಮೂರು ಕಂಪನಿಗಳಿಗೂ ಇದು ಮಾರಕವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The new plans are on par with Reliance Jio’s Dhan Dhana Dhan offer. The company is already offering these plans in some other circles. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot