Loksabha Election 2024: ಚುನಾವಣೆಯಲ್ಲಿ ಮತಹಾಕಲು ನೀವು ಅರ್ಹರೇ... ಒಮ್ಮೆ ಚೆಕ್ ಮಾಡಿಕೊಳ್ಳಿ!
ಭಾರತದಲ್ಲಿ ಕೊನೆಗೂ ಲೋಕಸಭಾ ಚುನಾವಣೆ (LokSabha Elections) ಘೋಷಣೆ ಆಗಿದೆ. ಅದರಲ್ಲೂ ರಾಜ್ಯದಲ್ಲಂತೂ ಲೋಕಸಭಾ ಚುನಾವಣೆ ಟಿಕೆಟ್ ಸಂಬಂಧ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಮತದಾರರಲ್ಲಿ ಕೊಂಚ ಗೊಂದಲವೂ ಉಂಟಾಗಿದೆ. ಈ ನಡುವೆ ನೀವು ಈ ಚುನಾವಣೆಯಲ್ಲಿ ಮತಹಾಕಲು ಅರ್ಹರಿದ್ದೀರಾ ಅನ್ನೋದನ್ನು ಚೆಕ್ ಮಾಡಿಕೊಳ್ಳುವ ಅಗತ್ಯ ಇದೆ.
ಹೌದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಳೆದ ವಾರ ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಮತದಾನ ಪ್ರಕ್ರಿಯೆಯು ಏಪ್ರಿಲ್ 19, 2024 ರಂದು ಆರಂಭ ಆಗಲಿದ್ದು, ಜೂನ್ 1, 2024 ಕ್ಕೆ ಕೊನೆಗೊಳ್ಳುತ್ತದೆ. ಇದರ ಫಲಿತಾಂಶ ಜೂನ್ 4 ರಂದು ಘೋಷಣೆ ಆಗುತ್ತದೆ. ಹಾಗಿದ್ರೆ, ಮತದಾನ ಪ್ರಾರಂಭವಾಗುವ ಮೊದಲು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ ಅನ್ನೋದನ್ನು ತಿಳಿಯೋಣ ಬನ್ನಿ.

ಆನ್‌ಲೈನ್‌ನಲ್ಲಿ ಮತದಾರರ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ https://electoralsearch.eci.gov.in/ ಗೆ ಭೇಟಿ ನೀಡಿ. ನಂತರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ನೀವು ಮೂರು ಮಾರ್ಗಗಳನ್ನು ಗಮನಿಸಬಹುದು. ಇದರಲ್ಲಿ ವಿವರಗಳ ಮೂಲಕ ಸರ್ಚ್ ಮಾಡುವುದು, EPIC ಮೂಲಕ ಹುಡುಕುವುದು, ಮೊಬೈಲ್ ಸಂಖ್ಯೆ (Search by Details, Search by EPIC, Search by Mobile) ಮೂಲಕ ಹುಡುಕುವುದು.
ಹಂತ 2 : ಮೊದಲ ಪ್ರಕ್ರಿಯೆಯಲ್ಲಿ ನೀವು ಹಲವಾರು ವಿವರಗಳನ್ನು ಹಾಕಬೇಕಾಗುತ್ತದೆ. ಎರಡನೆಯ ವಿಧಾನವು ಸ್ವಲ್ಪ ಸುಲಭವಾಗಿದೆ ಮತ್ತು ಕೊನೆಯದು ಇನ್ನೂ ಸುಲಭವಾಗಿದೆ. ವಿವರಗಳ ಮೂಲಕ ಸರ್ಚ್ ಮಾಡಲು ಮುಂದಾದರೆ ನಿಮ್ಮ ರಾಜ್ಯ ಮತ್ತು ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 3: ಈ ವೇಳೆ ನಿಮ್ಮ ವೈಯಕ್ತಿಕ ವಿವರಗಳಾದ ಹೆಸರು, ಮಧ್ಯದ ಹೆಸರು ಮತ್ತು ಉಪನಾಮ, ಹುಟ್ಟಿದ ದಿನಾಂಕ, ವಯಸ್ಸು, ಲಿಂಗ, ಸಂಬಂಧಿಕರ ಹೆಸರು, ಕೊನೆಯ ಹೆಸರು ಎಲ್ಲವನ್ನೂ ಭರ್ತಿ ಮಾಡಬೇಕಾಗುತ್ತದೆ. ಜೊತೆಗೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಎಂಟ್ರಿ ಮಾಡಬೇಕಾಗುತ್ತದೆ. ಬಳಿಕ ಕ್ಯಾಪ್ಚಾ ಎಂಟ್ರಿ ಮಾಡಿ ಮತ್ತು ಸರ್ಚ್ ಬಟನ್ ಮೇಲೆ ಒತ್ತಿದರೆ ನಿಮ್ಮ ಹೆಸರು ಕಾಣಿಸಿಕೊಳ್ಳಲಿದೆ.
ಹಂತ 4: EPIC ಮೂಲಕ ಹುಡುಕುವುದು ಸುಲಭವಾಗಿದೆ. ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ EPIC ಸಂಖ್ಯೆ ಮತ್ತು ರಾಜ್ಯವನ್ನು ಎಂಟ್ರಿ ಮಾಡಿರಿ. ಇದಾದ ನಂತರದಲ್ಲಿ ಅಲ್ಲೇ ನೀಡಲಾದ ಕ್ಯಾಪ್ಚಾ ಎಂಟ್ರಿ ಮಾಡಿ ಸರ್ಚ್ ಬಟನ್ ಮೇಲ್ ಕ್ಲಿಕ್ ಮಾಡಿದ್ರೆ ನಿಮ್ಮ ಮಾಹಿತಿ ತೆರೆದುಕೊಳ್ಳಲಿದೆ.

ಹಂತ 5: ಮತ್ತೊಂದು ಹಂತವಾದ ಫೋನ್ ನಂಬರ್ ಮೂಲಕ ಸರ್ಚ್ ಮಾಡಲು ಮುಂದಾದರೆ ನಿಮ್ಮ ರಾಜ್ಯ ಮತ್ತು ಭಾಷೆಯನ್ನು ಆಯ್ಕೆ ಮಾಡಿ ಬಳಿಕ ಕೇಳಲಾದ ಜಾಗದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಬಳಿಕ ಕ್ಯಾಪ್ಚಾ ಎಂಟ್ರಿ ಮಾಡಿದ್ರೆ ಸ್ಮಾರ್ಟ್‌ಫೋನ್‌ಗೆ ಓಟಿಪಿ ಬರಲಿದೆ ಅದನ್ನು ಟೈಪಿಸಿ. ನಂತರದಲ್ಲಿ ನಿಮ್ಮ ವೋಟರ್ ಐಡಿ ಮಾಹಿತಿ ಕಾಣಿಸಿಕೊಳ್ಳಲಿದೆ.
ನಿಮ್ಮ ಹೆಸರು ಇಲ್ಲಿ ಕಾಣಿಸಲಿಲ್ಲ ಎಂದರೆ ಏನು ಮಾಡಬೇ
ಕು?: ನಿಮ್ಮ ಹೆಸರು ಕಾಣಿಸಲಿಲ್ಲ ಎಂದರೆ ಚಿಂತೆ ಬೇಡ. ನಿಮ್ಮ ವೈಯಕ್ತಿಕ ವಿವರಗಳು, ಮತದಾನ ಕೇಂದ್ರ, ಮತದಾನದ ದಿನಾಂಕ ಮತ್ತು ಚುನಾವಣಾ ಅಧಿಕಾರಿಗಳ ವಿವರಗಳನ್ನು ಸಹ ನೀವು ಅಲ್ಲಿ ಕಾಣಬಹುದು. ಆದ್ದರಿಂದ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ನೇರವಾಗಿ ಚುನಾವಣಾ ನೋಂದಣಿ ಅಧಿಕಾರಿ (ERO) ಅಥವಾ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಬಹುದು.


Click it and Unblock the Notifications








