Netflix ಬಳಕೆದಾರರಿಗೆ ಗುಡ್‌ನ್ಯೂಸ್; ಕೂಡಲೇ ಹೀಗೆ ಮಾಡಿ ನೋಡಿ!
ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ದಿಗ್ಗಜ ಎನಿಸಿಕೊಂಡಿರುವ ನೆಟ್‌ಫ್ಲಿಕ್ಸ್ (Netflix) ತನ್ನ ಭಿನ್ನ ಕಾರ್ಯಕ್ರಮಗಳ ಮೂಲಕ ದೊಡ್ಡ ಗ್ರಾಹಕರ ಬಳಕವನ್ನು ಹೊಂದಿದೆ. ಹಾಗೆಯೇ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಅನುಕೂಲಕರ ಫೀಚರ್ಸ್, ಆಯ್ಕೆಗಳನ್ನು ಲಭ್ಯ ಮಾಡಿದೆ. ಆದರೆ ಸದ್ಯ ಖುಷಿ ಸಂಗತಿ ಏನೆಂದರೆ, ಬಳಕೆದಾರರು ನಿರೀಕ್ಷಿಸಿದ್ದ ಅನುಕೂಲಕರ ಆಯ್ಕೆಯನ್ನು ಇದೀಗ ನೆಟ್‌ಫ್ಲಿಕ್ಸ್ ಲಭ್ಯ ಮಾಡಿದ್ದು, ಬಳಕೆದಾರರ ಖುಷಿಯನ್ನು ಡಬಲ್ ಮಾಡಿದೆ.
ಹೌದು, ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್ ಇದೀಗ ನೆಟ್‌ಫ್ಲಿಕ್ಸ್ ಮೊಮೆಂಟ್ಸ್ (Netflix Moments) ಮೊಬೈಲ್ ಆಯ್ಕೆಯನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಫೋನ್‌ನಿಂದಲೇ ಸಿನಿಮಾ ಮತ್ತು ತಮ್ಮಿಷ್ಟದ ಶೋಗಳ ದೃಶ್ಯಗಳನ್ನು ಸ್ಕ್ರೀನ್‌ಶಾರ್ಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಅವುಗಳನ್ನು ಸೇವ್ ಮಾಡಬಹುದು ಜೊತೆಗೆ ಶೇರ್ ಸಹ ಮಾಡಬಹುದಾಗಿದೆ. ಅಂದಹಾಗೆ ಈ ಮೊದಲು ನೆಟ್‌ಫ್ಲಿಕ್ಸ್ ತಾಣವು ಬಳಕೆದಾರರು ತಮ್ಮ ಮೊಬೈಲ್‌ಗಳಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳದಂತೆ ನಿರ್ಬಂಧಿಸಿತ್ತು.

ಅಂದಹಾಗೆ ನೆಟ್‌ಫ್ಲಿಕ್ಸ್‌ನ Tudum ವೆಬ್‌ಸೈಟ್ ಪ್ರಸ್ತುತವಾಗಿ iOS ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಮೊಮೆಂಟ್ಸ್ ( Netflix Moments ) ಫೀಚರ್ ಅನ್ನು ಪರಿಚಯಿಸಿದೆ. ಅಲ್ಲದೇ ಮುಂದಿನ ಕೆಲವು ವಾರಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ಈ ಸೇವೆ ಲಭ್ಯ ಇರಲಿದೆ ಎಂದು ವರದಿಯಾಗಿದೆ. ಈ ನೂತನ ಫೀಚರ್ ಭಾರತದ ಲಭ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಗಳಿವೆ.
ಏನಿದು ನೆಟ್‌ಫ್ಲಿಕ್ಸ್ ಮೊಮೆಂಟ್ಸ್ ಫೀಚರ್
ನೆಟ್‌ಫ್ಲಿಕ್ಸ್ ಮೊಮೆಂಟ್ಸ್ (Netflix Moments) ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸುತ್ತಿರುವ ವೆಬ್ ಸರಣಿಗಳು ಅಥವಾ ಸಿನಿಮಾಗಳಲ್ಲಿನ ಇಷ್ಟದ ದೃಶ್ಯಗಳನ್ನು ಸೇವ್ ಮಾಡಲು ಅನುಮತಿಸುವ ನೂತನ ಆಯ್ಕೆ ಆಗಿದೆ. ಹಾಗೆಯೇ ಬಳಕೆದಾರರು ಇಷ್ಟದ ದೃಶ್ಯಗಳನ್ನು ಸೇವ್ ಮಾಡುವ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ವಾಟ್ಸಾಪ್, ಇನ್‌ಸ್ಟಾಗ್ರಾಮ್ ನಂತಹ ಇನ್‌ಸ್ಟಂಟ್ ತಾಣಗಳಲ್ಲಿಯೂ ಶೇರ್ ಮಾಡಬಹುದು. ನೆಟ್‌ಫ್ಲಿಕ್ಸ್ ಸೇರಿಸುವ ಈ ನೂತನ ಫೀಚರ್ ಆಕ್ಸಸ್ ಮಾಡಲು ಬಳಕೆದಾರರು ತಮ್ಮ ಮೊಬೈಲ್‌ನ ನೆಟ್‌ಫ್ಲಿಕ್ಸ್ ಆಪ್ ಅನ್ನು ಇತ್ತೀಚಿನ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು.
ಈ ಆಯ್ಕೆ ಬಳಕೆ ಹೇಗೆ
ನೆಟ್‌ಫ್ಲಿಕ್ಸ್ ಬಳಕೆದಾರರೇ, ನೀವು ನಿಮ್ಮಿಷ್ಟದ ವೆಬ್ ಸಿರೀಸ್ ವೀಕ್ಷಿಸುತ್ತಿದ್ದಿರೀ ಎಂದುಕೊಳ್ಳಿ. ಆ ಕಾರ್ಯಕ್ರಮದಲ್ಲಿನ ಒಂದು ದೃಶ್ಯ ನಿಮಗೆ ಇಷ್ಟ ಎನಿಸಿದರೆ ಅದನ್ನು ಮತ್ತೆ ನೋಡಬೇಕು ಎನಿಸಿದರೆ, ಆಗ ನೀವು ನೆಟ್‌ಫ್ಲಿಕ್ಸ್ ಮೊಮೆಂಟ್ಸ್ (Netflix Moments) ಆಯ್ಕೆ ಮೂಲಕ ಅದರ ಸ್ಕ್ರೀನ್‌ಶಾರ್ಟ್ (ಸೇವ್) ತೆಗೆದುಕೊಳ್ಳಬಹುದು.
ಅಂದಹಾಗೆ ನೂತನ ನೆಟ್‌ಫ್ಲಿಕ್ಸ್ ಮೊಮೆಂಟ್ಸ್ ಆಯ್ಕೆಯು ಸ್ಕ್ರೀನಿನ ಕೆಳಭಾಗದಲ್ಲಿ ಕಾಣಬಹುದಾಗಿದೆ. ಹೀಗೆ ಸೇವ್ ಮಾಡಿರುವ ದೃಶ್ಯವನ್ನು ನೇರವಾಗಿ Instagram, Facebook ಅಥವಾ ಇತರೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ನಲ್ಲಿ ಶೇರ್ ಮಾಡಬಹುದಾಗಿದೆ.
ನೆಟ್‌ಫ್ಲಿಕ್ಸ್ ಓಟಿಟಿ ಚಂದಾದಾರಿಕೆ
ಲೀಡಿಂಗ್ ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್ ಭಾರತದಲ್ಲಿ ಭಿನ್ನ ಚಂದಾದಾರಿಕೆ ಆಯ್ಕೆಗಳನ್ನು ಒದಗಿಸಿದೆ. ಮೊಬೈಲ್ ಮಾತ್ರ ಆವೃತ್ತಿಯ ತಿಂಗಳ ಶುಲ್ಕ 149ರೂ. ಆಗಿದೆ. ಈ ಪ್ಲ್ಯಾನ್ ಚಂದಾದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ. ಮೊಬೈಲ್ ಮೂಲಕ ಸ್ಟ್ರೀಮ್ ಮಾಡ ಬಯಸುವ ಬಳಕೆದಾರರಿಗೆ ಇದು ಸೂಕ್ತ ಚಂದಾದಾರಿಕೆಯ ಪ್ಲ್ಯಾನ್ ಎನಿಸಿದೆ.
ಇನ್ನು ಈ ಚಂದಾದಾರಿಕೆಯಲ್ಲಿ 480p ರೆಸಲ್ಯೂಶನ್‌ನ ಎಸ್‌ಡಿ ಗುಣಮಟ್ಟದಲ್ಲಿ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನ ಎಲ್ಲಾ ಕಂಟೆಂಟ್‌ಗಳಿಗೆ ಆಕ್ಸಸ್ ಲಭ್ಯ ಇರುತ್ತದೆ. ಅಲ್ಲದೇ ಚಂದಾದಾರರು ಆಂಡ್ರಾಯ್ಡ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಐಫೋನ್‌ಗಳು ಮತ್ತು ಐಪ್ಯಾಡ್ ಡಿವೈಸ್‌ಗಳಲ್ಲಿಯೂ ಕೂಡಾ ಪ್ರವೇಶಿಸಬಹುದು.


Click it and Unblock the Notifications








