ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?
ಐಆರ್‌ಸಿಟಿಸಿಯಲ್ಲಿ ಟ್ರೈನ್ ಟಿಕೆಟ್ ಕಾಯ್ದಿರಿಸುವುದು ಎಂದರೆ ತಲೆನೋವಿನ ಕೆಲಸ ಎಂಬುದು ಪ್ರಯಾಣಿಕರ ಭಾವನೆಯಾಗಿದೆ. ಒಮ್ಮೊಮ್ಮೆ ಈ ವೆಬ್‌ಸೈಟ್‌ಗಳು ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗುವುದರಿಂದ ಈ ಸೈಟ್‌ಗಳಲ್ಲಿ ಟಿಕೆಟ್ ಬುಕ್ ಮಾಡುವುದು ತಲೆನೋವಿನ ಕೆಲಸ ಎಂದೇ ಜನರು ಅಂದುಕೊಳ್ಳುತ್ತಾರೆ.
ಓದಿರಿ: ಸುಲಲಿತ ರೈಲ್ವೇ ಪ್ರಯಾಣಕ್ಕಾಗಿ ಬುಕ್ ಮೈ ಟ್ರೈನ್ ಅಪ್ಲಿಕೇಶನ್
ಆದರೆ ಕೆಲವೊಂದು ಯೋಜನೆಗಳನ್ನು ರೂಪಿಸುವುದರ ಮೂಲಕ ನಿಮ್ಮ ರೈಲ್ವೇ ಟಿಕೆಟ್ ಅನ್ನು ಕಾಯ್ದಿರಿಸುವುದರ ಜೊತೆಗೆ ಆರಾಮದಾಯಕ ಪ್ರಯಾಣವನ್ನು ಮಾಡಬಹುದಾಗಿದೆ.
ಲಭ್ಯವಿರುವ ಸಮಯದಲ್ಲಿ ಪ್ರಯಾಣಕ್ಕೆ ಅನುಗುಣವಾಗಿ ಸಮಯವನ್ನು ಯೋಜಿಸಿ. ಟಿಕೆಟ್ ಡೇಟಾ ಎಂಬ ವೆಬ್‌ಸೈಟ್ ಪೂರ್ವ ಬುಕ್ಕಿಂಗ್ ಅನ್ನು ಮಾಡಲು ಸಹಕಾರಿಯಾಗಿದೆ. ಟ್ರೈನ್‌ಮ್ಯಾನ್ ವೈಟ್‌ಲಿಸ್ಟ್ ಟಿಕೆಟ್‌ಗಳ ಆರಂಭ ಮತ್ತು ಕೊನೆಯ ಸ್ಥಿತಿಯನ್ನು ಟ್ರ್ಯಾಕ್ ಮಾಡುತ್ತದೆ. Indianrail.gov.in ಸೀಟು ಲಭ್ಯತೆ, ದರಗಳು, ವೇಳಾಪಟ್ಟಿಗಳು ಮತ್ತು ಮಾರ್ಗಗಳ ಮಾಹಿತಿ ನೀಡುತ್ತದೆ. ಆಟೊಫಿಲ್ ಬಟನ್ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಸರಳ ಉಪಕರಣವಾಗಿದೆ. ಬುಕ್ ಮೈ ಟ್ರೈನ್ ಅಪ್ಲಿಕೇಶನ್ ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದು ಭಾರತದಲ್ಲಿ 200 ನಗರಗಳಲ್ಲಿ ಪ್ರಯಾಣಿಕರ ಪೂರ್ವ ನಮೂದು ಬುಕ್ಕಿಂಗ್ ವಿವರಗಳನ್ನು ಒದಗಿಸುತ್ತದೆ. ನಿಯಮಿತ ಫ್ಲೈಟ್ ದರಕ್ಕಿಂತ ನಿಮ್ಮ ವೈಟ್ ಲಿಸ್ಟ್ ಆಗಿರುವ ಟ್ರೈನ್ ಟಿಕೆಟ್ ಅನ್ನು ಫ್ಲೈಟ್ ಟಿಕೆಟ್ ಆಗಿ ಮಾರ್ಪಡಿಸಬಹುದು. ನಿಮ್ಮ ಪ್ರಯಾಣದ ಮೂರು ದಿನಗಳಿಗಿಂತ ಮುಂಚೆ ಟಿಕೆಟ್ ಅನ್ನು ಬುಕ್ ಮಾಡಬೇಕಾಗುತ್ತದೆ. ಟ್ರೈನ್ ನಿಖರವಾಗಿ ಎಲ್ಲಿದೆ ಎಂಬುದನ್ನು ರೈಲ್‌ಯಾತ್ರಿ ನಿಮಗೆ ತಿಳಿಸುತ್ತದೆ. ಹೊರಡುವ ಗಡಿಬಿಡಿಯಲ್ಲಿ ಊಟ ಪ್ಯಾಕ್ ಮಾಡಲು ಮರೆತಿರುವಿರಾ? ಟ್ರಾವೆಲ್ ಕಾನಾ ನಿಮಗೆ ಕ್ಲಪ್ತ ಸಮಯಲ್ಲಿ ರೈಲಿನೊಳಗೆಯೇ ಶುಚಿರುಚಿಯಾದ ಆಹಾರವನ್ನು ಪೂರೈಸುತ್ತದೆ. 2000 ರೈಲುಗಳಿಗೆ ಇದು ಬೆಳಗ್ಗಿನ ತಿಂಡಿ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟವನ್ನು ಒದಗಿಸುತ್ತದೆ. ಕೆಲವೊಮ್ಮೆ ನಕ್ಷೆಯು ಅತ್ಯುತ್ತಮ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತದೆ. ರೈಲ್ವೇ ಮ್ಯಾಪ್ ನಿಮಗೆ ಹೆಚ್ಚು ಉಪಯೋಗಕಾರಿ ಎಂದೆನಿಸಿದ್ದು ಹತ್ತಿರದ ರೈಲ್ವೇ ಸ್ಟೇಶನ್ ಮಾಹಿತಿಯನ್ನು ಒದಗಿಸುತ್ತದೆ.
ಸಮಯಕ್ಕೆ ಅನುಗುಣವಾಗಿ ಪ್ರಯಾಣವನ್ನು ಯೋಜಿಸಿ

ವೈಟಿಂಗ್ ಲಿಸ್ಟ್‌ನಲ್ಲಿದ್ದೀರಾ

ಸ್ಟೇಶನ್ ಕೋಡ್ ಸಮಯ ಮತ್ತು ಮಾರ್ಗಗಳು

ಆಟೊಫಿಲ್ ಟೂಲ್

ಬುಕ್ ಮೈ ಟ್ರೈನ್

ನಿಮ್ಮ ಟ್ರೈನ್ ಟಿಕೆಟ್ ಅನ್ನು ಫ್ಲೈಟ್ ಟಿಕೆಟ್ ಆಗಿ ಮಾರ್ಪಡಿಸಿ

ರೈಲ್‌ಯಾತ್ರಿ ಬಳಸಿ

ಟ್ರಾವೆಲ್ ಕಾನಾ

ನಕ್ಷೆ ಬಳಸಿ


Click it and Unblock the Notifications








