ಪವರ್ ಟ್ರೆಕ್ ಎಂದು ಹೆಸರಿಡಲಾಗಿರುವ ಈ ವಿಶಿಷ್ಟ ಚಾರ್ಜರ್‌ನಲ್ಲಿ ಒಂದು ಯುಎಸ್‌ಬಿ ಕನೆಕ್ಟರ್ ನೀಡಲಾಗಿದ್ದು ಈ ಮೂಲಕ ನಿಮ್ಮ ಮೊಬೈಲ್ ಫೋನ್ ಕನೆಕ್ಟ್ ಮಾಡಿಕೊಳ್ಳ ಬಹುದಾಗಿದೆ. ಪವರ್‌ಟ್ರೆಕ್‌ನಲ್ಲಿ ಪೈಸಿವ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಮದಹಾಗೆ ಈ ಪವರ್‌ಟ್ರೆಕ್ ಬಳಸಲು ಎರಡು ಪ್ರಮುಖ ವಸ್ತುಗಳು ಬೇಕಾಗುತ್ತವೆ, ಅದೇನೆಂದರೆ ನೀರು ಹಾಗೂ ಮುಕ್ತ ಗಾಳಿ. ಅಂದಹಾಗೆ ಈ ಚಾರ್ಜರ್ ಬಳಸುವುದಕ್ಕೆ ಹೆಚ್ಚು ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಕೂಡಾ ಆಗಿದೆ.