ಅನ್‌ಲಿಮಿಟೆಡ್ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್‌ಗಾಗಿ ಈ ಹಂತಗಳನ್ನು ಪಾಲಿಸಿ
ರಿಲಾಯನ್ಸ್(Reliance) ಜಿಯೋ 4 ಸಿಮ್ ಖರೀದಿಯಲ್ಲಿ ಮೊದಲ ಹಂತವೆಂದರೆ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಮಾಡುವುದು. ಜಿಯೋದ ವೆಲ್ಕಮ್ ಆಫರ್ ಮುಗಿದು, ಪ್ರೀವೀವ್ ಆಫರ್ ಆರಂಭವಾದ ನಂತರ ಜಿಯೋ ಸಿಮ್ ಖರೀದಿ ಸ್ವಲ್ಪ ಕಷ್ಟದ ಕೆಲಸವಾಗಿದೆ. ಕಾರಣ ಹಲವು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳು ಸಿಮ್ ಕಾರ್ಡ್ ಅನ್ನು ಬಾರ್‌ಕೋಡ್ ನೀಡಿದ ನಂತರವಷ್ಟೇ ನೀಡುತ್ತಿವೆ.
ಅಂದಹಾಗೆ 4G ಸ್ಮಾರ್ಟ್‌ಫೋನ್ ಇಲ್ಲದಿದ್ದಲ್ಲಿ ಬಾರ್‌ಕೋಡ್ ಜೆನೆರೇಟ್ ಮಾಡುವುದು ಕಷ್ಟಕರ ಕೆಲಸವಾಗಿದೆ. ಆದ್ದರಿಂದ ರೂಟೆಡ್ ಆದ ಸ್ಮಾರ್ಟ್‌ಫೋನ್ ಇದ್ದಲ್ಲಿ ಅನ್‌ಲಿಮಿಟೆಡ್ ಬಾರ್‌ಕೋಡ್ ಅನ್ನು ಜೆನೆರೇಟ್ ಮಾಡುವುದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.
3G ಸ್ಮಾರ್ಟ್‌ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಬಾರ್‌ಕೋಡ್ ಜೆನೆರೇಟ್ ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ರೂಟೆಡ್ ಆಗಿದೆಯೇ ಖಚಿತ ಮಾಡಿಕೊಳ್ಳಿ
ಅನ್‌ಲಿಮಿಟೆಡ್ ಬಾರ್‌ಕೋಡ್ ಜೆನೆರೇಟ್ ಮಾಡಲು, ನಿಮ್ಮ ಸ್ಮಾರ್ಟ್‌ಫೋನ್ ರೂಟೆಡ್ ಆಗಿರಬೇಕು. ರೂಟೆಡ್ ಸ್ಟೇಟಸ್ ಚೆಕ್ ಮಾಡಲು 'SuperSu' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

'ಮೈಜಿಯೋ' ಮತ್ತು 'ಟೂಲ್‌ಹಿರೋ' ಆಪ್ ಡೌನ್‌ಲೋಡ್ ಮಾಡಿ
ಸ್ಮಾರ್ಟ್‌ಫೋನ್ ರೂಟೆಡ್ ಸ್ಟೇಟಸ್ ಚೆಕ್ ಮಾಡಿದ ನಂತರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿರುವ ರಿಲಾಯನ್ಸ್ ಅಧಿಕೃತ ಆಪ್ 'ಮೈಜಿಯೋ' ಮತ್ತು ಅನ್‌ಲಿಮಿಡೆಟ್ ಬಾರ್‌ಕೋಡ್ ಜೆನೆರೇಟ್ ಮಾಡುವ 'ಟೂಲ್‌ಹಿರೋ' ಆಪ್ ಡೌನ್‌ಲೋಡ್ ಮಾಡಿ.

IMEI ನಂಬರ್ ಚೇಂಜ್ ಮಾಡಿ
ಮೇಲೆ ತಿಳಿಸಿದ ಎರಡು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಫೋನ್ ಅನ್ನು ರೀಬೂಟ್ ಮಾಡಿ, ಟೂಲ್‌ಹಿರೋ ಆಪ್ ಸಹಾಯದಿಂದ 4G ಸ್ಮಾರ್ಟ್‌ಫೋನ್ IMEI ನಂಬರ್ ಅನ್ನು ಬದಲಿಸಿ. IMEI ನಂಬರ್ ಅನ್ನು ಈ ಆಪ್‌ನಿಂದ ಪಡೆಯಬಹುದು. ನೀವು 4G ಸ್ಮಾರ್ಟ್‌ಫೋನ್ ಹೊಂದಿಲ್ಲದೇ ಇದ್ದಲ್ಲಿ, IMEI ನಂಬರ್‌ನ ಕೊನೆಯ ನಾಲ್ಕು ನಂಬರ್‌ಗಳನ್ನು ಮಾತ್ರ ಚೇಂಜ್ ಮಾಡಿ. ಆದರೆ IMEI ನಂಬರ್ ಚೇಂಜ್ ಮಾಡಿದ ನಂತರ ಫೋನ್ ರೀಬೂಟ್ ಮಾಡುವುದನ್ನು ಮರೆಯದಿರಿ.
IMEI ನಂಬರ್: 35742307091****
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಜಿಯೋ ಆಪ್ ಓಪನ್ ಮಾಡಿ
ಈ ಹಂತದಲ್ಲಿ ಮೈಜಿಯೋ'ದ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್ ಮಾಡಿ. ಆಪ್‌ಗಳನ್ನು ಡೌನ್‌ಲೋಡ್ ಮಾಡದಿದ್ದಲ್ಲಿ, ಬಾರ್‌ಕೋಡ್ ಜೆನೆರೇಟ್ ಮಾಡಲು ಸಾಧ್ಯವಿಲ್ಲ.
ಆಪ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ಮೊತ್ತೊಮ್ಮೆ ಫೋನ್ ರೀಬೂಟ್ ಮಾಡಿ. ನಂತರ ನೀವು 'Get Jio SIM' ಎಂಬ ಆಪ್ಶನ್ ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ವೆರಿಫೈ ಮಾಡಿ, ಬಾರ್‌ಕೋಡ್ ಜೆನೆರೇಟ್ ಮಾಡಿ.

ಹಂತಗಳನ್ನು ಪುನರಾವರ್ತಿಸಿ
ಅನ್‌ಲಿಮಿಟೆಡ್ ಬಾರ್‌ಕೋಡ್‌ಗಳನ್ನು ಜೆನೆರೇಟ್ ಮಾಡಲು, IMEI ನಂಬರ್‌ನಲ್ಲಿ ಕೊನೆಯ ನಾಲ್ಕು ಸಂಖ್ಯೆಗಳನ್ನು ಚೇಂಜ್ ಮಾಡಿ ಹಂತಗಳನ್ನು ಪುನರಾವರ್ತಿಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








