ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಈ ದಾಖಲಾತಿಗಳು ಅಗತ್ಯ!

|

ಪ್ರಸ್ತುತ ದೇಶದಾದ್ಯಂತ ಮೋಟಾರ್ ತಿದ್ದುಪಡಿ ಕಾಯ್ದೆ ನಿಯಮಗಳು ಜಾರಿಯಾಗಿದ್ದು, ಟ್ರಾಫಿಕ್ ದಂಡದ ದರ ಪಟ್ಟಿಯು ಹೆಚ್ಚಾಗಿದೆ. ವಾಹನ ಸವಾರರು ಸ್ವಂತ ಅವರ ಬೈಕುಗಳನ್ನೇ ರಸ್ತೆಗಿಳಿಸಲು ಹಿಂದು ಮುಂದು ನೋಡುವಂತಾಗಿದೆ. ಆದರೆ ಹಾಗಂತ ಬೈಕ್‌ ಅನ್ನು ರಸ್ತೆಗಿಳಿಸದೆ ಇರಲು ಸಾಧ್ಯವಾ?..ಸರಿಯಾದ ದಾಖಲೆಗಳನ್ನು ಹೊಂದಿದರೇ ಯಾವುದೇ ಆತಂಕವಿಲ್ಲದೇ ವಾಹನ ಚಲಾಯಿಸಬಹುದು.

ಅಗತ್ಯ ದಾಖಲೆ

ಹೌದು, ವಾಹನ ಸವಾರರು ಅಗತ್ಯ ದಾಖಲೆಗಳನ್ನು ಹೊಂದಿದ್ದರೇ ಯಾವುದೇ ಅಂಜಿಕೆ ಇಲ್ಲದೇ ಬೈಕ್ ಓಡಿಸಬಹುದು. ಅದಕ್ಕಾಗಿ ಅಗತ್ಯ ಇರುವ ಡ್ರೈವಿಂಗ್ ಲೈಸೆನ್ಸ್‌, ವಾಹನದ ಆರ್‌ಸಿ, ವಾಹನದ ಇನ್ಶೂರೆನ್ಸ್, ಎಮಿಶನ್‌ ಟೆಸ್ಟ್ ಕಾಪಿ, ದಾಖಲೆಗಳೊಂದಿಗೆ ಮರೆಯದೇ ಹೆಲ್ಮೆಟ್‌ ಹಾಕಿಕೊಳ್ಳಿ. 18 ವರ್ಷ ತುಂಬಿಯೂ ನೀವಿನ್ನೂ ಡ್ರೈವಿಂಗ್ ಲೈಸೆನ್ಸ್‌ ಹೊಂದಿಲ್ಲದಿದ್ದರೇ ಆನ್‌ಲೈನ್‌ನಲ್ಲಯೇ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಿಬಿಡಿ. ಹಾಗಾದರೇ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ಮಾಡಿಸಲು ಬೇಕಾದ ಅಗತ್ಯ ದಾಖಲಾತಿಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR

ಕಲಿಕಾ ಚಾಲನಾ ಅನುಜ್ಞಾ ಪತ್ರ-LLR

ಡ್ರೈವಿಂಗ್ ಲೈಸನ್ಸ್‌ ಪಡೆಯಲು ಮೊದಲು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆದುಕೊಳ್ಳಬೇಕು. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟಿರಬೇಕು. ಅಂತಹ ಅರ್ಜಿದಾರರು ಮಾತ್ರ ಅರ್ಹರಾಗಿರುತ್ತಾರೆ.

ವಯಸ್ಸಿನ ಪ್ರಮಾಣ ಪತ್ರ

ವಯಸ್ಸಿನ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ವಯಸ್ಸಿನ ಪ್ರಮಾಣ ಪತ್ರ ನೀಡಬೇಕಿರುತ್ತದೆ. ಅಂದರೇ ಡ್ರೈವಿಂಗ್ ಲೈಸನ್ಸ್‌ ಪಡೆಯಲು ಅರ್ಜಿದಾರರು 18 ವರ್ಷ ಪೂರೈಸಿರುವುದನ್ನು ದೃಢಿಕರಿಸಲು ವಯಸ್ಸಿನ ಪ್ರಮಾಣ ಪತ್ರ ಅಗತ್ಯ. ಅರ್ಜಿದಾರರು ವಯಸ್ಸಿನ ದೃಢಿಕರಣಕ್ಕಾಗಿ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿಗಳು ಅಥವಾ ಪಾನ್ ಕಾರ್ಡ್‌ ನೀಡಬಹುದಾಗಿದೆ.

ವಿಳಾಸ ಪುರಾವೆ

ವಿಳಾಸ ಪುರಾವೆ

ಅರ್ಜಿದಾರರು ತಮ್ಮ ವಿಳಾಸ ಪುರಾವೆಯ ದಾಖಲೆಯನ್ನು ಸಲ್ಲಿಸಬೇಕಿರುತ್ತದೆ. ಅದಕ್ಕಾಗಿ ಪಡಿತರ ಚೀಟಿ, ಪಾಸ್‌ಪೋರ್ಟ್, ಜೀವ ವಿಮೆ ಪಾಲಿಸಿ, ಚುನಾವಣಾ ಗುರುತಿನ ಚೀಟಿ, ದೂರವಾಣಿ ಬಿಲ್, ನೀರಿನ ಬಿಲ್ ಅಥವಾ ದಂಡಾಧಿಕಾರಿಗಳ ಅಥವಾ ನೋಟರಿಯವರ ಮುಂದೆ ದೃಢೀಕರಿಸಿದ ವಯಸ್ಸು ಮತ್ತು ವಿಳಾಸದ ಪ್ರಮಾಣ ಪತ್ರವನ್ನು ಸಹ ಅರ್ಜಿಯೊಂದಿಗೆ ಲಗತ್ತಿಸಬಹುದಾಗಿದೆ.

ಅರ್ಜಿ ನಮೂನೆ -2 (CMVR-2)

ಅರ್ಜಿ ನಮೂನೆ -2 (CMVR-2)

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಆನ್‌ಲೈನ್‌ನಲ್ಲಿ ನಮೂನೆ -2 (CMVR-2) ಅನ್ನು ತುಂಬಿದಬೇಕು. ಈ ಅರ್ಜಿಯಲ್ಲಿ ಯಾವ ವಾಹನದ ಮಾದರಿಯ(LMV/Motor Cycle without gear/Motor Cycle with gear ) ಲೈಸನ್ಸ್ ಪಡೆಯಲು ಅರ್ಜಿಸಲಿಸುತ್ತಿರಿ ಎನ್ನುವ ಅಂಶಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿರಿ. ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.

ವೈದ್ಯಕೀಯ ಪ್ರಮಾಣ ಪತ್ರ

ವೈದ್ಯಕೀಯ ಪ್ರಮಾಣ ಪತ್ರ

ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ 40 ವರ್ಷ ವಯಸ್ಸು ಪೂರ್ಣಗೊಂಡಿರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯಾಧಿಕಾರಿರವರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಬೇಕು. (ಇದು ಸಾರಿಗೇತರ ವಾಹನಗಳಿಗೆ ಸಂಬಂಧಿಸಿರುತ್ತದೆ). ಹಾಗೂ ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

<strong>ಓದಿರಿ : ಫೋನಿನಲ್ಲಿ 'ಗೂಗಲ್‌ ಸರ್ಚ್' ಬಳಸಲು ಇಂಟರ್ನೆಟ್‌ ಬೇಕಾಗಿಯೇ ಇಲ್ಲ!</strong> ಓದಿರಿ : ಫೋನಿನಲ್ಲಿ 'ಗೂಗಲ್‌ ಸರ್ಚ್' ಬಳಸಲು ಇಂಟರ್ನೆಟ್‌ ಬೇಕಾಗಿಯೇ ಇಲ್ಲ!

ಸಾರಿಗೆ ವಾಹನಗಳಿಗೆ

ಸಾರಿಗೆ ವಾಹನಗಳಿಗೆ

ಯಲ್ಲೊ ಬೋರ್ಡ್‌ ವಾಹನಗಳು ಎಂದು ಹೇಳಲಾಗುವ ಮೋಟಾರ್ ಕ್ಯಾಬ್, ಆಟೋ ರಿಕ್ಷಾ ಕ್ಯಾಬ್ ಸಾರ್ವಜಿನಿಕ ಸೇವಾ ವಾಹನಗಳು (ಪಿ. ಎಸ್. ವಿ), ಭಾರಿ ಸಾರಿಗೆ ವಾಹನಗಳು (ಹೆಚ್.ಟಿ. ವಿ) ಮತ್ತು ಇತರ ನಿರ್ದಿಷ್ಟ ವಾಹನಗಳ ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಿದ್ದರೇ, ಅರ್ಜಿದಾರರ ವಯಸ್ಸು 20 ವರ್ಷ ತುಂಬಿರಬೇಕು ಅಥವಾ 20 ವರ್ಷ ಮೇಲ್ಪಟ್ಟಿರಬೇಕು.

ಓದಿರಿ : ಡಿಸ್ಕೌಂಟ್‌ನಲ್ಲಿ ಗ್ಯಾಜೆಟ್ಸ್‌ ಖರೀದಿಸಬೇಕೆ?.ಹಾಗಿದ್ರೆ ಇದೇ ಸೆ.29ರ ವರೆಗೂ ಕಾಯಿರಿ!ಓದಿರಿ : ಡಿಸ್ಕೌಂಟ್‌ನಲ್ಲಿ ಗ್ಯಾಜೆಟ್ಸ್‌ ಖರೀದಿಸಬೇಕೆ?.ಹಾಗಿದ್ರೆ ಇದೇ ಸೆ.29ರ ವರೆಗೂ ಕಾಯಿರಿ!

Best Mobiles in India

English summary
To drive two-wheeler or four-wheeler legally on the roads, an Indian driving licence is mandatory. Here Are The Required Documents for Driver License(LLR). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X