Home
ಟೆಕ್ ನೌಕರಿ

PF ಖಾತೆಗೆ ಆಧಾರ್ ಲಿಂಕ್: ಇದೇ ಆಗಸ್ಟ್ 31 ಕಡೆಯ ದಿನ, ಲಿಂಕ್ ಮಾಡುವುದು ಹೇಗೆ?

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪಿಎಫ್ ಕೊಡುಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ (UAN) ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಸೆಪ್ಟೆಂಬರ್ 1, 2021 ರಿಂದ ಡಿಫಾಲ್ಟರ್‌ಗಳು ಪಿಎಫ್ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು EPFO ಹೇಳಿದೆ. UAN ನೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಆಗಸ್ಟ್ 31, 2021 ರೊಳಗೆ ಮಾಡಬೇಕಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

UAN ನಂಬರ್

UAN ನಂಬರ್

UAN-ಯುಎಎನ್ ಸಂಖ್ಯೆಯು ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಠೇವಣಿಗಳನ್ನು ಮಾಡುವ ಪ್ರತಿ ಉದ್ಯೋಗಿಗೆ ನಿಗದಿಪಡಿಸಿದ 12-ಅಂಕಿಯ ಖಾತೆ ಸಂಖ್ಯೆಯಾಗಿದೆ. ಸಾರ್ವತ್ರಿಕ ಖಾತೆ ಸಂಖ್ಯೆಯು ನೌಕರರಿಗೆ ಪಿಎಫ್ ಖಾತೆ ಸೇವೆಗಳನ್ನು ನಿರ್ವಹಿಸಲು ನೆರವಾಗಲಿದೆ. ಹಣ ಹಿಂಪಡೆಯುವುದು, ಪಿಎಫ್ ಸಾಲಗಳನ್ನು ಪಡೆಯುವುದು ಅಥವಾ ಇಪಿಎಫ್ ಬ್ಯಾಲೆನ್ಸ್‌ ಪರಿಶೀಲಿಸುವುದು ಖಾತೆದಾರರಿಗೆ ಸುಲಭ ಮತ್ತು ಅನುಕೂಲಕರವಾಗಿಸುತ್ತದೆ.

ನಿಮ್ಮ PF ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯಾ ಎಂದು ತಿಳಿಯಲು ಹೀಗೆ ಮಾಡಿ:

ನಿಮ್ಮ PF ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯಾ ಎಂದು ತಿಳಿಯಲು ಹೀಗೆ ಮಾಡಿ:

ಹಂತ 1: https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ
ಹಂತ 2: ಲಾಗಿನ್ ಮಾಡಲು ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ
ಹಂತ 3: ಈಗ, ಮೆಂಬರ್ ಮುಖಪುಟ ತೆರೆಯುತ್ತದೆ. ಪುಟದಲ್ಲಿ ಉಲ್ಲೇಖಿಸಲಾದ ವಿವರಗಳಿಂದ ಆಧಾರ್ ಅನ್ನು ಹುಡುಕಿ.
ಹಂತ 4: ನಿಮ್ಮ ಆಧಾರ್ ಸಂಖ್ಯೆ Verified ( DEMOGRAPHIC) ಎಂದು ಕಾಣಿಸಿದರೇ, ನಿಮ್ಮ ಆಧಾರ್ ನಿಮ್ಮ ಇಪಿಎಫ್ ಖಾತೆಗೆ ಲಿಂಕ್ ಆಗಿದೆ ಮತ್ತು ಯುಐಡಿಎಐ ಪರಿಶೀಲಿಸಿದೆ ಎಂದರ್ಥ.

ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲು ಈ ಕ್ರಮ ಫಾಲೋ ಮಾಡಿರಿ:

ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲು ಈ ಕ್ರಮ ಫಾಲೋ ಮಾಡಿರಿ:

ಹಂತ 1. EPF ವೆಬ್‌ಸೈಟ್ https://unifiedportal-mem.epfindia.gov.in/memberinterface/ ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2. ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗಿನ್ ಮಾಡಿ.

ಹಂತ 3. Manage ವಿಭಾಗದಲ್ಲಿ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಆಧಾರ್

ಹಂತ 4. ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿಂದ ನಿಮ್ಮ EPF ಖಾತೆಯೊಂದಿಗೆ ಲಿಂಕ್ ಮಾಡಲು Aadhaar ಆಯ್ಕೆ ಮಾಡಬಹುದು.

ಹಂತ 5. ಈಗ, Aadhaar ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ರಕಾರ ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಮೂದಿಸಿ ಮತ್ತು ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 6. ನಿಮ್ಮ ಆಧಾರ್ ವಿವರಗಳನ್ನು ನೀವು ಒಮ್ಮೆ ಉಳಿಸಿದ ನಂತರ, ನಿಮ್ಮ ಆಧಾರ್ ಅನ್ನು ಯುಐಡಿಎಐ ಡೇಟಾದಿಂದ ಪರಿಶೀಲಿಸಲಾಗುತ್ತದೆ.

ಖಾತೆಯೊಂದಿಗೆ

ಹಂತ 7. ನಿಮ್ಮ ಕೆವೈಸಿ ಡಾಕ್ಯುಮೆಂಟ್‌ನ ಯಶಸ್ವಿ ಅನುಮೋದನೆಯ ಮೇರೆಗೆ, ನೀವು ಯಶಸ್ವಿಯಾಗಿ ಆಧಾರ್ ಅನ್ನು EPF ಖಾತೆಯೊಂದಿಗೆ ಲಿಂಕ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆಧಾರ್ Verified ಆಗಿರುವುದನ್ನು ಕಾಣಬಹುದು.

Best Mobiles in India

English summary
PF And Aadhaar Linking Dealine Aug 31: Follow These Steps To Link Your Aadhaar And PF.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+