ಫೋನ್ ಸರಿಯಾಗಿ ಚಾರ್ಜ್ ಆಗದ ಸಮಸ್ಯೆಗೆ 9 ಸಲಹೆಗಳು ಹಾಗೂ ತಂತ್ರಗಳು

By Prateeksha
|

ಮೊಬೈಲ್ ಸರಿಯಾಗಿ ಚಾರ್ಜ್ ಆಗದ ಸಮಸ್ಯೆಯನ್ನು ನೀವು ಎದುರಿಸಿರುವುದು. ಆ ಕೂಡಲೆ ನೀವು ನಿಮ್ಮ ಚಾರ್ಜರ್ ಅಥವಾ ಬ್ಯಾಟರಿ ಹಾಳಾಗಿರಬಹುದೆಂದು ನಿರ್ಧಾರಕ್ಕೆ ಬಂದಿರಬಹುದು.

ಫೋನ್ ಸರಿಯಾಗಿ ಚಾರ್ಜ್ ಆಗದ ಸಮಸ್ಯೆಗೆ 9  ಸಲಹೆಗಳು ಹಾಗೂ ತಂತ್ರಗಳು
ಆದರೆ, ಆದರೆ ಈ ಸಮಸ್ಯೆಗೆ ನೀವು ತಿಳಿದುಕೊಂಡಿರುವುದಕ್ಕಿಂತ ಸರಳವಾದ ಕಾರಣವಿರಬಹುದು. ಒಂದು ವೇಳೆ ನಿಮ್ಮ ಫೋನ್ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ಚಾರ್ಜ್ ಆಗುತ್ತಿಲ್ಲಾ ಅಥವಾ ಚಾರ್ಜ್ ಆಗುತ್ತಲೇ ಇಲ್ಲಾ ಎಂದಾದಲ್ಲಿ ನೀವು ಬೇರೆ ದೃಷ್ಟಿ ಕೋನದಲ್ಲಿ ಇದನ್ನು ನೋಡಬೇಕಾಗಬಹುದು.

ಓದಿರಿ:ಸ್ಮಾರ್ಟ್‌ಫೋನ್ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ!

ಸಮಸ್ಯೆ ಹಲವಾರು ರೀತಿಯಿಂದ ಇರಬಹುದು. ಪ್ಲಗ್ ಮಾಡಿದ ಮೇಲೆ ಚಾರ್ಜ್ ಆಗುತ್ತಲೆ ಇಲ್ಲಾ ಅಥವಾ ಚಾರ್ಜ್ ನಿಧಾನವಾಗಿ ಆಗುತ್ತಿದ್ದು ಶೀಘ್ರವಾಗಿ ಅಥವಾ ವೇಗವಾಗಿ ಚಾರ್ಜ್ ಆಗುವ ಗುಣ ಬೇಕಾಗಿರಬಹುದು. ಇಲ್ಲಿವೆ ಕೆಲ ಪರಿಹಾರಗಳು ಈ ಸಮಸ್ಯೆಯನ್ನು ಬಗೆಹರಿಸಲು
ಮತ್ತಷ್ಟು ಮಾಹಿತಿಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಬಟ್ಟೆ ಚೂರು/ಧೂಳನು ್ನ ಒರೆಸಿ

ಬಟ್ಟೆ ಚೂರು/ಧೂಳನು ್ನ ಒರೆಸಿ

ನಿಮಗೆ ನಿಮ್ಮ ಜೀನ್ಸ್ ನ ಜೇಬಿನಲ್ಲಿ ಫೋನ್ ಇಡುವ ಅಭ್ಯಾಸ ಹೊಂದಿದ್ದರೆ ಜೀನ್ಸ್ ನ ಬಟ್ಟೆಯ ಚೂರು/ಕಸ ಕಾರಣವಿರಬಹುದು. ಜೇಬಿನೊಳಗಿನ ಬಟ್ಟೆಯ ಚಿಕ್ಕ ಚೂರುಗಳು ಯುಎಸ್‍ಬಿ ಚಾರ್ಜಿಂಗ್ ಪೊರ್ಟ್ ನ ಕಾರ್ಯಕ್ಷಮತೆ ಕಡಿಮೆಮಾಡಬಹುದು. ಪೊರ್ಟ್ ನಲ್ಲಿ ಅಡಗಿದ ಧೂಳು ಕೂಡ ಸರಿಯಾಗಿ ಕೆಲಸ ಮಾಡದಂತೆ ಮಾಡಬಹುದು. ಗಾಳಿ ಊದಿ ಅಡಗಿದ ಕಸ ತೆಗೆದÀು ಯುಎಸ್‍ಬಿ ಪೊರ್ಟ್ ಸರಿಯಾಗಿ ಕೆಲಸ ಮಾಡುವಂತೆ ಮಾಡಬಹುದು.

ಕೇಬಲ್ ವಾಯರ್ ಬದಲಿಸಿ

ಕೇಬಲ್ ವಾಯರ್ ಬದಲಿಸಿ

ಕೇಬಲ್ ವಾಯರ್ ಅನ್ನು ಎಳಿಯುವುದು, ತಿರುಚುವುದೆಲ್ಲಾ ಮಾಡುವುದರಿಂದ ಅದು ಹಾಳಾಗುವ ಸಾಧ್ಯತೆ ಹೆಚ್ಚು. ಒಳ್ಳೆ ಚಾರ್ಜಿಂಗ್ ಅನುಭವ ಪಡೆಯಲು ನಿಮ್ಮ ಫೋನ್ ನೊಂದಿಗೆ ಬಂದಿರುವ ಕೇಬಲ್ ಬದಲಿಗೆ ಬೇರಾವುದಾದರು ಕೇಬಲ್ ವಾಯರ್ ಜೋಡಿ. ಇದು ನಿಮ್ಮ ಫೋನ್ ಹಾಗೂ ಅಡಾಪ್ಟರ್ ನ ಬದಲಿಗೆ ಕೇಬಲ್ ನಲ್ಲಿ ಸಮಸ್ಯೆಯಿದೆ ಎಂದು ತಿಳಿಯಲು ಅತ್ಯಂತ ಸುಲಭವಾದ ದಾರಿ.

ಅಡಾಪ್ಟರ್ ನ ಉಪಾಯ

ಅಡಾಪ್ಟರ್ ನ ಉಪಾಯ

ಸಮಸ್ಯೆ ಕೇಬಲ್ ನಲ್ಲಿ ಇಲ್ಲವೆಂದಾದಲ್ಲಿ, ಗೋಡೆಯ ಸೊಕೆಟ್ ಗೆ ಹಾಕಿರುವ ಅಡಾಪ್ಟರ್ ಅನ್ನು ಪರೀಕ್ಷಿಸಬೇಕು.
ಮುಖ್ಯವಾಗಿ ಚಾರ್ಜಿಂಗ್ ಕೇಬಲ್ ತೆಗೆಯಬಹುದಾದ ಚಾರ್ಜರ್ ಗಳಲ್ಲಿ. ಕೇಬಲ್ ಅನ್ನು ಹಲವಾರು ಬಾರಿ ಹಾಕಿ ತೆಗೆಯುವುದರಿಂದ ಯುಎಸ್‍ಬಿ ಕೇಬಲ್ ಮತ್ತು ಅಡಾಪ್ಟರ್ ನ ಸಂಪರ್ಕದಲ್ಲಿ ಸಮಸ್ಯೆ ಇರಬಹುದು. ಅದಕ್ಕಾಗಿ, ಒಮ್ಮೆ ಸಂಪರ್ಕವನ್ನು ಪರೀಕ್ಷಿಸಿ. ಒಂದು ವೇಳೆ ಕೇಬಲ್ ಬೇರೆ ಅಡಾಪ್ಟರ್ ನೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಸಮಸ್ಯೆ ಅಡಾಪ್ಟರ್ ನಲ್ಲಿದೆ ಎಂದರ್ಥ.

ಬ್ಯಾಟರಿ ಬದಲಿಸಿ

ಬ್ಯಾಟರಿ ಬದಲಿಸಿ

ನಿಮ್ಮ ಸ್ಮಾರ್ಟ್‍ಫೋನ್ ನೊಂದಿಗೆ ಬರುವ ಬ್ಯಾಟರಿ ಕೊನೆಯವರೆಗು ಬರುವುದಿಲ್ಲಾ. ಒಂದು ವರ್ಷದ ಮಟ್ಟಿಗೆ
ಚಾರ್ಜ್ ಉಳಿಸಲು ಅದು ಶ್ರಮಿಸಬಹುದು. ನೀವು ಎಷ್ಟು ಬಾರಿ ಚಾರ್ಜ್ ಮಾಡಲು ಇಡುತ್ತೀರಿ ತೆಗೆಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ದೋಷಯುಕ್ತ ಬ್ಯಾಟರಿಗಳನ್ನು ಸುಲಭವಾಗಿ ಗುರುತಿಸಬಹುದು. ಬ್ಯಾಟರಿ ಉಬ್ಬಿದರೆ ಅಥವಾ ಸೋರಿದರೆ ಬೇಗನೆ ಅದನ್ನು ಬೇಗನೆ ಬದಲಿಸಬೇಕು.

ಸರಿಯಾದ ಚಾರ್ಜಿಂಗ್ ಮೂಲ ಉಪಯೋಗಿಸಿ

ಸರಿಯಾದ ಚಾರ್ಜಿಂಗ್ ಮೂಲ ಉಪಯೋಗಿಸಿ

ಯುಎಸ್‍ಬಿ ಮತ್ತು ವೈರ್‍ಲೆಸ್ ಚಾರ್ಜಿಂಗ್ ಬದಲಿಗೆ ಗೋಡೆಯ ಸೊಕೆಟ್ ಉಪಯೋಗಿಸುವುದು ಅತೀ ಉತ್ತಮ ಏಕೆಂದರೆ ಗೋಡೆಯ ಸೊಕೆಟ್ ಬೇರೆ ಥರದ ಚಾರ್ಜಿಂಗ್ ಗಿಂತ ದ್ವಿಗುಣ ವಿದ್ಯುತ್ ನೀಡುತ್ತದೆ. ನೀವು ವೇಗದ ಚಾರ್ಜಿಂಗ್ ಅಡಾಪ್ಟರ್ ಉಪಯೋಗಿಸಿದರೆ ನಿಮಗೆ ಐದು ಪಟ್ಟು ಹೆಚ್ಚು ವಿದ್ಯುತ್ ಶಕ್ತಿ ದೊರೆಯುತ್ತದೆ.

ಬ್ಯಾಟರಿ ಮಾಪಿಸಿ

ಬ್ಯಾಟರಿ ಮಾಪಿಸಿ

ಕೆಲವೊಂದು ಸಂದರ್ಭಗಳಲ್ಲಿ ವಸ್ತುವಿನ ಬ್ಯಾಟರಿಯ ಮಟ್ಟ ತಪ್ಪಾಗಿರುತ್ತದೆ. ಅದು ಕಾರ್ಯಕ್ಷಮತೆಯನ್ನು ಮಿತಿಗೊಳಿಸಬಹುದು ಹಾಗೂ ಶೇಕಡ 2 ರಷ್ಟು ಚಾರ್ಜಿಗಾಗಿ ಒಂದು ಘಂಟೆ ತೆಗೆದುಕೊಳ್ಳಬಹುದು. ಅದಕ್ಕಾಗಿ ಬ್ಯಾಟರಿ ಯನ್ನು ಮಾಪಿಸಿ ನೋಡಿ.

ನೀರಿನಿಂದ ಹಾನಿ

ನೀರಿನಿಂದ ಹಾನಿ

ನೀರಿನಲ್ಲಿ ಬಿದ್ದ ನಂತರ ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲಾ ವೆಂದಾದಲ್ಲಿ ನಿಮಗೆ ಪರೀಕ್ಷಿಸಲು ಹೆಚ್ಚು ಆಯ್ಕೆಗಳು ಬೇಕೆಂದಿಲ್ಲಾ. ನೀವು ಬ್ಯಾಟರಿ ಮಾತ್ರ ಬದಲಾಯಿಸಬೇಕಾಗಬಹುದು. ಸುರಕ್ಷಿತವಾಗಿರಲು ನೀರಿನಿಂದ ಹಾನಿಯಾಗದಂತೆ ಎಚ್ಚರವಹಿಸುವುದು ಉತ್ತಮ.

ಉಪಕರಣವನ್ನು ಸ್ವಿಚ್ ಆಫ್ ಮಾಡಿ

ಉಪಕರಣವನ್ನು ಸ್ವಿಚ್ ಆಫ್ ಮಾಡಿ

ಫೋನ್ ಚಾರ್ಜ್ ಮಾಡುವಾಗ ಬ್ಯಾಟರಿಯನ್ನು ತುಂಬಾ ಉಪಯೋಗಿಸುವ ಆಪ್ಸ್ ಗಳನ್ನು ಬಳಸಬಾರದು. ಚಾರ್ಜ್ ಮಾಡುವಾಗ ಶೇಕಡ 100 ರಷ್ಟು ಪ್ರಕಾಶಮಾನವಾಗಿರುವ ವೀಡಿಯೊ ನೋಡುತ್ತಿದ್ದಿರೆಂದು ಕಲ್ಪಿಸಿಕೊಳ್ಳಿ. ಆಗ ಚಾರ್ಜ್ ಆಗಲು ಸಾಧಾರಣಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಅದಕ್ಕಾಗಿ, ಚಾರ್ಜ್ ಮಾಡುವಾಗ ಸ್ವಿಚ್ ಆಫ್ ಇಡಲು ಅಥವಾ ಕನಿಷ್ಟ ಪಕ್ಷ ಕನೆಕ್ಟಿವಿಟಿ ಆಯ್ಕೆಯನ್ನು ಬಂದ್ ಮಾಡಲು ಇಲ್ಲವೆ ಪರದೆಯ ಪ್ರಕಾಶತೆಯನ್ನು ಕಡಿಮೆಮಾಡಲು ಸಲಹೆ ನೀಡುವುದು.

ರೋಲ್ ಬ್ಯಾಕ್ ಆಯ್ಕೆ

ರೋಲ್ ಬ್ಯಾಕ್ ಆಯ್ಕೆ

ಹೊಸ ಆಂಡ್ರೊಯಿಡ್ ವರ್ಷನ್ ಅಥವಾ ಹೊಸ ತಂತ್ರಾಶ ಬ್ಯಾಟರಿಯ ಬಾಳಿಕೆಯ ಮೇಲೆ ಸಮಸ್ಯೆಯನ್ನು ತರಬಹುದು. ವಿಶೇಷವಾಗಿ ಹಳೇಯ ಉಪಕರಣಗಳು ಹೊಸ ತಂತ್ರಾಶದ ಪ್ರಯೋಜನ ಪಡೆಯುವಷ್ಟು ಉತ್ತಮವಿರುವುದಿಲ್ಲಾ. ಆಗ ನೀವು ಸಮಸ್ಯೆ ನೀಗಿಸಲು ಉಪಕರಣವನ್ನು ಹಳೆಯ ತಂತ್ರಾಶಕ್ಕೆ ಮರಳಿಸಬಹುದು ಇದಕ್ಕೆ ರೋಲ್ ಬ್ಯಾಕ್ ಎನ್ನುತ್ತಾರೆ. ಆದರೆ ಇದರಲ್ಲಿ ಕೆಲ ಸುರಕ್ಷತೆಗೆ ಸಂಬಂಧಿಸಿದ ಅಪಾಯ ಕೂಡ ಇರುತ್ತದೆ.

Best Mobiles in India

English summary
Your smartphone might not be charging properly due to many reasons. Take a look at the steps that you need to take to figure out the issue and the solutions that are needed as well from this content.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X