ಸ್ಮಾರ್ಟ್‌ಫೋನ್ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ!

By Shwetha
|

ನಮ್ಮ ಸ್ಮಾರ್ಟ್‌ಫೋನ್ ಇಲ್ಲದೆ ನಾವು ಕಳೆಯುವುದನ್ನು ಭಾವಿಸಲೂ ಸಾಧ್ಯವಿಲ್ಲ. ಹೆಚ್ಚಿನವರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಅವಶ್ಯಕತೆಯಾಗಿ ಬಳಸಿಕೊಳ್ಳುತ್ತಲೇ ಇರುತ್ತಾರೆ. ಅವರಿಗೆ ಫೋನ್ ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆಂದೇ ಹೇಳಬಹುದು ಅಷ್ಟೊಂದು ಫೋನ್‌ಗೆ ಅಟ್ಯಾಚ್‌ಮೆಂಟ್ ಅನ್ನು ಹೊಂದಿರುತ್ತಾರೆ. ಒಂದು ರೀತಿಯಲ್ಲಿ ಇದು ವ್ಯಸನವಾಗಿದೆ. ಫೋನ್ ಅನ್ನು ಬಿಟ್ಟು ಇರಲಾಗದೇ ಇರುವಂತಹ ಕಾಯಿಲೆಯಾಗಿದೆ.

ಓದಿರಿ: ಅತಿಯಾದರೆ ಅಮೃತ ಕೂಡ ವಿಷ: ಸ್ಮಾರ್ಟ್‌ಫೋನ್ ಬೇಕೇ ಬೇಡವೇ?

ಹಾಗಿದ್ದರೆ ಈ ಕಾಯಿಲೆಯನ್ನು ಹೋಗಲಾಡಿಸಲು ನೀವು ಸರಿಯಾದ ಔಷಧವನ್ನು ತೆಗೆದುಕೊಳ್ಳಲೇಬೇಕು. ಸ್ಮಾರ್ಟ್‌ಫೋನ್‌ನಿಂದ ಚಿತ್ತವನ್ನು ಬೇರೆಡೆಗೆ ಹರಿಸುವ ಸುಸಂದರ್ಭ ಇದಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಈ ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ಸ್ಮಾರ್ಟ್‌ಫೋನ್‌ನಲ್ಲಿ ಅಧಿಸೂಚನೆಗಳನ್ನು ಕಸ್ಟಮೈಸ್ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಅಧಿಸೂಚನೆಗಳನ್ನು ಕಸ್ಟಮೈಸ್ ಮಾಡಿ

ಕಡಿಮೆ ನೋಟಿಫಿಕೇಶನ್ ಬಂದಷ್ಟು ನೀವು ಸ್ಮಾರ್ಟ್‌ಫೋನ್ ಪರಿಶೀಲನೆಯನ್ನು ಕಡಿಮೆ ಮಾಡುತ್ತೀರಿ. ಅಧಿಸೂಚನೆಗಳನ್ನು ತಿರಸ್ಕರಿಸಲೆಂದೇ ಫೋನ್ ಅನ್ನು ನೀವು ಹೆಚ್ಚು ಬಳಸುತ್ತೀರಿ ಎಂದಾದಲ್ಲಿ ಅವುಗಳನ್ನು ಆದಷ್ಟು ಸೀಮಿತಗೊಳಿಸಿ.

ಸ್ಮಾರ್ಟ್‌ಫೋನ್ ಬಳಕೆ ಕಡಿಮೆ ಮಾಡಿ

ಸ್ಮಾರ್ಟ್‌ಫೋನ್ ಬಳಕೆ ಕಡಿಮೆ ಮಾಡಿ

ಒಂದು ಅಧ್ಯಯನದ ಪ್ರಕಾರ ಫೋನ್ ಬಳಕೆದಾರರು 20 ಕ್ಕಿಂತ ಕಡಿಮೆ ಬಾರಿ ಡಿವೈಸ್ ಅನ್ನು ಪರಿಶೀಲಿಸುವುದಿಲ್ಲ ಎಂದಾಗಿದೆ. ಆದಷ್ಟು ಈ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಕಡಿಮೆ ಮಾಡಿ ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಿ

ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಿ

ಫೇಸ್‌ಬುಕ್ ಟ್ವಿಟ್ಟರ್ ಮೊದಲಾದ ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಫೋನ್‌ನಲ್ಲಿ ಬೇಕಾಗಿಲ್ಲ. ಇಂತಹುದೇ ನಿತ್ಯದ ಬಳಕೆಯಲ್ಲಿ ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ಫೋನ್‌ನಿಂದ ದೂರಾಗಿಸಿ.

ಮಲಗುವ ಮುನ್ನ ಫೋನ್‌ಗೆ ವಿದಾಯ ಹೇಳಿ

ಮಲಗುವ ಮುನ್ನ ಫೋನ್‌ಗೆ ವಿದಾಯ ಹೇಳಿ

ನೀವು ನಿದ್ರಿಸುವ ಮುನ್ನ ಫೋನ್‌ಗೆ ವಿದಾಯ ಹೇಳುವುದು ಹೆಚ್ಚು ಮುಖ್ಯವಾದುದು. ನಿಮ್ಮ ಕಣ್ಣುಗಳಿಗೆ ಮನಸ್ಸಿಗೆ ಶಾಂತಿ ಬೇಕು ಎಂದಾದಲ್ಲಿ ಫೋನ್ ಅನ್ನು ಆಫ್ ಮಾಡಿಟ್ಟುಕೊಂಡು ಸುಖವಾಗಿ ನಿದ್ರಿಸಿ.

ಅಪ್ಲಿಕೇಶನ್‌ಗಳ ನೆರವು ಪಡೆಯಿರಿ

ಅಪ್ಲಿಕೇಶನ್‌ಗಳ ನೆರವು ಪಡೆಯಿರಿ

ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯನ್ನು ಸೀಮಿತಗೊಳಿಸುವ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯ ಬಗ್ಗೆ ಇವುಗಳು ಸೂಚನೆಯನ್ನು ನಿಮಗೆ ನೀಡುತ್ತಿರುತ್ತವೆ.

ಫೋನ್‌ನಲ್ಲಿ ಸಮಯ ವೀಕ್ಷಣೆ ಮಾಡಬೇಡಿ

ಫೋನ್‌ನಲ್ಲಿ ಸಮಯ ವೀಕ್ಷಣೆ ಮಾಡಬೇಡಿ

ಸಮಯ ಎಷ್ಟಾಯಿತು ಎಂಬುದನ್ನು ನೋಡಲು ನಾವು ಸ್ಮಾರ್ಟ್‌ಫೋನ್ ಅನ್ನು ಬಳಸುತ್ತೇವೆ. ಆದರೆ ಅದನ್ನು ಮಾತ್ರ ಮಾಡದೇ ವಾಟ್ಸಾಪ್ ಪರಿಶೀಲಿಸುವವರೆಗೆ ನಾವು ಫೋನ್ ಗಮನಿಸುವುದರಲ್ಲಿ ಮಗ್ನರಾಗಿ ಬಿಡುತ್ತೇವೆ. ಆದ್ದರಿಂದ ಸಮಯ ನೋಡಲು ಎಂಬ ನೆಪ ಹೇಳಿ ಫೋನ್ ಪರಿಶೀಲನೆ ಮಾಡದಿರಿ.

ಫೀಚರ್ ಫೋನ್‌ಗಳತ್ತ ದೃಷ್ಟಿ ಹರಿಸಿ

ಫೀಚರ್ ಫೋನ್‌ಗಳತ್ತ ದೃಷ್ಟಿ ಹರಿಸಿ

ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯನ್ನು ನೀವು ಕಡಿಮೆ ಮಾಡಬೇಕು ಎಂದಾದಲ್ಲಿ ಸೌಲಭ್ಯ ಕಡಿಮೆ ಇರುವ ಫೀಚರ್ ಫೋನ್‌ಗಳನ್ನು ಬಳಸಿರಿ.

Best Mobiles in India

English summary
we present you some ways by which you can get rid of your smartphone addiction.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X