ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

By Ashwath
|

ಜಲಾಶಯದಲ್ಲಿ ನೀರಿನಿಂದ, ಸೋಲಾರ್‌ನಿಂದ ವಿದ್ಯುತ್‌ ಉತ್ಪಾದನೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇನ್ನು ಮುಂದೆ ಒಂದು ತೊಟ್ಟು ನೀರು ಅಥವಾ ಕೆಸರು ನೀರಿನಿಂದ ವಿದ್ಯುತ್‌ ಉತ್ಪಾದನೆ ಮಾಡಬಹುದು! ಸ್ವೀಡನ್‌ ಸಂಶೋಧಕರು ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದು, ಈ ಹೊಸ ತಂತ್ರಜ್ಞಾನದಿಂದ ವಿದ್ಯುತ್‌ ಉತ್ಪಾದನೆ ಮಾಡಿ ಮೊಬೈಲ್‌ ಸ್ಮಾರ್ಟ್‌ಫೋನ್‌ ಚಾರ್ಚ್ ಮಾಡಬಹುದಾಗಿದೆ.

ಈ ಹೊಸ ತಂತ್ರಜ್ಞಾನವನ್ನು ಯಾರು ಕಂಡು ಹಿಡಿದವರು ಯಾರು ಮತ್ತು ವಿದ್ಯುತ್‌ ಹೇಗೆ ತಯಾರಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಮತ್ತು ಈ ಚಾರ್ಜರ್‌ ವಿದ್ಯುತ್‌ ಉತ್ಪಾದನೆ ಮಾಡುವ ವೀಡಿಯೋವಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಮಾಃಇತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಕೈಯಲ್ಲಿ ಹಿಡಿಯಬಹುದಾದ ಈ ಸಾಧನದಲ್ಲಿ ನೀರು ತುಂಬಿಸಲು ಒಂದು ಕಿರು ಜಾಗವಿದೆ. ಅಲ್ಲಿಗೆ ಒಂದು ಚಮಚ ನೀರು ಹಾಕಿ ಮುಚ್ಚಳ ಮುಚ್ಚಬೇಕು. ಪವರ್‌ ಟ್ರೆಕ್‌ಗೆ ನೀರು ಹಾಕಿದ ಕೂಡಲೇ ಒಳಗಿರುವ ಲೋಹದ ಡಿಸ್ಕ್‌ ರಸಾಯನಿಕ ಕ್ರಿಯೆ ನಡೆಸಿ ಜಲಜನಕದ ಗ್ಯಾಸ್‌ ಬಿಡುಗಡೆ ಮಾಡುತ್ತದೆ. ನಂತರ ಈ ಜಲಜನಕ ಗ್ಯಾಸ್‌ ಆಮ್ಲಜನಕದೊಂದಿಗೆ ಸೇರಿಕೊಂಡು ರಾಸಾಯನಿಕ ಶಕ್ತಿಯನ್ನು ವಿದ್ಯುತ್‌ಶಕ್ತಿಯನ್ನಾಗಿ ಬದಲಾಯಿಸುವ ಮೂಲಕ ವಿದ್ಯುತ್‌ ಉತ್ಪಾದಿಸುತ್ತದೆ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಈ ರಾಸಾಯನಿಕ ಕ್ರಿಯೆಯಿಂದ ಬಿಡುಗಡೆಯಾದ ವಿದ್ಯುತ್‌ನ್ನು ಒಂದು ಯುಎಸ್‌ಬಿ ಕೇಬಲ್‌ ಮೂಲಕ ನಿಮ್ಮ ಮೊಬೈಲೋ, ಸ್ಮಾರ್ಟ್‌ಫೋನಿಗೆ ಸಂಪರ್ಕಿಸಿದರೆ ತಕ್ಷಣ ನಿಮ್ಮ ಮೊಬೈಲ್‌ ಚಾರ್ಜಾಗುತ್ತದೆ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಈ ಹೊಸ ತಂತ್ರಜ್ಞಾನಕ್ಕೆ ಪವರ್‌ ಟ್ರಕ್‌ ಚಾರ್ಜರ್‌ ಎಂದು ಹೆಸರಿಟ್ಟಿದ್ದು, ಸ್ವೀಡನ್ನಿನ ಕೆಟಿಎಚ್‌ ರಾಯಲ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ಪವರ್‌ ಟ್ರೆಕ್‌ ಚಾರ್ಜರನ್ನು ರೂಪಿಸಿದ್ದು, ಎಂವೈಎಫ್ಸಿ (myfuelcell) ಇದನ್ನು ಉತ್ಪಾದಿಸಿದೆ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಈ ಪುಟ್ಟ ಚಾರ್ಜರ್ ಬೆಲೆ 199 ಯೂರೋ.ಭಾರತದ ರೂಪಾಯಿಯಲ್ಲಾದ್ರೆ ಅಂದಾಜು ಸುಮಾರು 14 ಸಾವಿರ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಮಂದ ಬೆಳಕು ಅಥವಾ ಹೆಚ್ಚು ಮಳೆ ಇದ್ದರೆ ಸೋಲಾರ್‌ನಿಂದ ವಿದ್ಯುತ್‌ ಉತ್ಪಾದನೆ ಕಷ್ಟ. ಈ ಹಿನ್ನೆಲೆಯಲ್ಲಿ ನೀರು ಎಲ್ಲಾ ಕಡೆ ಸಿಗುವುದರಿದ ಈ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಜಗತ್ತಿನ ಯಾವ ಮೂಲೆಯಲ್ಲೇ ಇರಿ, ಎಷ್ಟೊತ್ತು ಬೇಕಾದರೂ ಆಗಿರಲಿ ಒಂದು ಚಮಚದಷ್ಟು ನೀರಿನಿಂದ ನೀವು ವಿದ್ಯುತ್‌ ಉಪಕರಣಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು. ಮರುಭೂಮಿಯಲ್ಲಾದ್ರೆ ಕೆಸರು ನೀರಿನಿಂದ ಅಥವಾ ಸಮುದ್ರದಲ್ಲಾದ್ರೆ ಉಪ್ಪು ನೀರಿನಿಂದ ವಿದ್ಯುತ್‌ ಉತ್ಪಾದಿಸಿ ನಿಮ್ಮ ಮೊಬೈಲನ್ನು ಚಾರ್ಜ್‌ ಮಾಡಿಕೊಳ್ಳಬಹುದು.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಜಗತ್ತಿನ ಯಾವುದೋ ಮೂಲೆಯಲ್ಲಿರುವ ಯೋಧರು, ಅತ್ಯಂತ ದೂರದ ಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟ ಉದ್ಯೋಗಿಗಳಿಗೆ, ಪ್ರವಾಸ, ಟ್ರಕ್ಕಿಂಗ್‌ ವೇಳೆ ಈ ಪವರ್‌ ಟ್ರಕ್‌ ಚಾರ್ಜರ್‌ ಉಪಯೋಗಕ್ಕೆ ಬರುತ್ತದೆ.

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

ಸದ್ಯಕ್ಕೆ ಇದನ್ನು ಮೊಬೈಲ್‌, ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಂತಹ ಉಪಕರಣಗಳನ್ನೂ ಚಾರ್ಜ್‌ ಮಾಡುವ ಮಟ್ಟಕ್ಕೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಈ ಸಂಸ್ಥೆ ಚಿಂತನೆ ನಡೆಸಿದೆ .

ಚಮಚ ನೀರಿನಲ್ಲಿ ವಿದ್ಯುತ್‌ ಉತ್ಪಾದಿಸಿ.ಮೊಬೈಲ್‌ ಚಾರ್ಜ್ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X