Home
ಟೆಕ್ ನೌಕರಿ

ಒಡೆದ ಫೋನ್ ಪರದೆಗೆ ಪ್ರಥಮ ಚಿಕಿತ್ಸೆಯ ಉಪಚಾರಗಳು

By Shwetha

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅತ್ಯಲ್ಪ ಕಡಿಮೆ ದರದಲ್ಲಿ ಲಭ್ಯವಾಗುತ್ತಿದ್ದು ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡು ಬಳಕೆದಾರರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ದುಬಾರಿ ಫೋನ್‌ಗಳಲ್ಲಿ ಕಂಡುಬರುವ ಅದೇ ಫೀಚರ್‌ಗಳು ಇತ್ತೀಚಿಗೆ ಬಜೆಟ್ ಫೋನ್‌ಗಳಲ್ಲೂ ಲಭ್ಯವಾಗುತ್ತಿದ್ದು ಇದರಿಂದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಬಹುದು.

ಓದಿರಿ: ಆಂಡ್ರಾಯ್ಡ್ ಫೋನ್‌ಗಾಗಿ ಸೂಪರ್ ಸಲಹೆಗಳು

ಆದರೆ ಸ್ಮಾರ್ಟ್‌ಫೋನ್‌ಗಳ ಬಳಕೆ ಎಷ್ಟು ಪ್ರಯೋಜನಕಾರಿಯೋ ಅಂತೆಯೇ ಅದನ್ನು ಜೋಪಾನವಾಗಿರಿಸಿಕೊಳ್ಳುವುದೂ ತಲೆನೋವಿನ ಕೆಲಸವೇ. ನೀವು ಬಳಸುತ್ತಿರುವಾಗ ಒಮ್ಮೆ ನಿಮ್ಮ ಫೋನ್ ಕೆಳಗೆ ಬಿದ್ದಿತು ಎಂದಾದಲ್ಲಿ ಅದನ್ನು ಸರಿಪಡಿಸಲು ನೀವು ಅತ್ಯುತ್ತಮ ಫೋನ್ ರಿಪೇರಿ ಅಂಗಡಿಗೆ ಅಲೆದಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ನಿಮ್ಮ ಫೋನ್‌ನ ಸಮಸ್ಯೆಯನ್ನು ನೀವೇ ನಿಮ್ಮಷ್ಟಕ್ಕೆ ಸರಿಪಡಿಸಿಕೊಳ್ಳಬಹುದು ಎಂದಾದಲ್ಲಿ ಇಂದಿನ ಲೇಖನ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆ ಹಂತಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಬಿಳಿ ಬಣ್ಣದ ಪೇಸ್ಟ್

ಬಿಳಿ ಬಣ್ಣದ ಪೇಸ್ಟ್

ನಿಮ್ಮ ಸ್ಕ್ರೀನ್‌ನಲ್ಲಿ ಸಣ್ಣಗಿನ ಕ್ರಾಕ್ ಆಗಿದೆ ಎಂದಾದಲ್ಲಿ ಟೂತ್‌ಪೇಸ್ಟ್ ಬಳಸಿ ಇದನ್ನು ಮರೆಮಾಡಬಹುದಾಗಿದೆ. ನೀವು ಬಿಳಿ ಬಣ್ಣದ ಪೇಸ್ಟ್ ಅನ್ನು ಇದಕ್ಕಾಗಿ ಬಳಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಜೆಲ್‌ ಪೇಸ್ಟ್ ಬಳಸದೇ

ಜೆಲ್‌ ಪೇಸ್ಟ್ ಬಳಸದೇ

ಜೆಲ್‌ ಪೇಸ್ಟ್ ಅನ್ನು ಬಳಸದೇ ಬಿಳಿ ಬಣ್ಣದ ಪೇಸ್ಟ್ ಅನ್ನು ಪರದೆಯ ಕ್ರ್ಯಾಕ್ ತೊಡೆಯಲು ಉಪಯೋಗಿಸಿ ಪೇಸ್ಟ್ ಅನ್ನು ಪರದೆಗೆ ಉಜ್ಜಿ ಮತ್ತು ಮೃದು ಬಟ್ಟೆಯನ್ನು ಬಳಸಿಕೊಂಡು ಸ್ಕ್ರೀನ್ ಒರೆಸಿ.

ದಪ್ಪನೆಯ ದ್ರಾವಣ

ದಪ್ಪನೆಯ ದ್ರಾವಣ

ಬೇಕಿಂಗ್ ಸೋಡಾವನ್ನು ಬಳಸಿ ದಪ್ಪನೆಯ ದ್ರಾವಣವನ್ನು ತಯಾರಿಸಿ. ಒಂದು ಭಾಗ ಬೇಕಿಂಗ್ ಸೋಡಾ ಮತ್ತು ಇನ್ನೊಂದು ಭಾಗ ನೀರು ಈ ರೀತಿಯ ಮಿಶ್ರಣವನ್ನು ಸಿದ್ಧಮಾಡಿಟ್ಟುಕೊಳ್ಳಿ. ದಪ್ಪನೆಯ ಪೇಸ್ಟ್ ತಯಾರುಗೊಳ್ಳುವವರೆಗೆ ಕಲಸಿ.

ಮೈಕ್ರೋಫೈಬರ್ ಬಟ್ಟೆ

ಮೈಕ್ರೋಫೈಬರ್ ಬಟ್ಟೆ

ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಈ ಪೇಸ್ಟ್ ಅನ್ನು ಸ್ಕ್ರೀನ್‌ಗೆ ಬಳಸಿ ಮತ್ತು ಸ್ಕ್ರೀನ್‌ನ ಹಾನಿಯಾದ ಭಾಗಕ್ಕೆ ವೃತ್ತಾಕಾರವಾಗಿ ಉಜ್ಜಿರಿ.

ಸ್ಯಾಂಡ್‌ಪೇಪರ್

ಸ್ಯಾಂಡ್‌ಪೇಪರ್

ಸ್ಯಾಂಡ್‌ಪೇಪರ್ ಬಳಸಿ ಪರದೆಯ ಸ್ಕ್ರಾಚ್‌ಗಳನ್ನು ನಿವಾರಿಸಬಹುದಾಗಿದೆ. ಒರಟು ಸ್ಯಾಂಡ್‌ಪೇಪರ್ ಅನ್ನು ಬಳಸಿ ಪರದೆಗೆ ಒತ್ತಿಹಿಡಿಯಿರಿ

ಜಾದೂ ಮಾಡುವ ಉತ್ಪನ್ನ

ಜಾದೂ ಮಾಡುವ ಉತ್ಪನ್ನ

ಸುಗ್ರು ಒಂದು ಜಾದೂ ಮಾಡುವ ಉತ್ಪನ್ನವಾಗಿದೆ. ನಿಮ್ಮ ಪೋನ್‌ನ ರಿಪೇರಿಯಲ್ಲಿ ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಕೂಡ. ನಿಮ್ಮ ಫೋನ್ ಬಟನ್‌ಗಳು ಒಡೆದುಹೋಗಿದೆ ಎಂದಾದಲ್ಲಿ ಸುಗ್ರು ಪರಿಹಾರ ವಿಧಾನವಾಗಿದೆ.

ನೀರಿನಿಂದ ಫೋನ್ ಹಾನಿಯಾಗಿದ್ದಲ್ಲಿ ಅಕ್ಕಿಯ ಉಪಚಾರ

ನೀರಿನಿಂದ ಫೋನ್ ಹಾನಿಯಾಗಿದ್ದಲ್ಲಿ ಅಕ್ಕಿಯ ಉಪಚಾರ

ನಿಮ್ಮ ಫೋನ್ ಒದ್ದೆಯಾಗಿದೆಯೇ? ಫೋನ್ ಅನ್ನು ಅಕ್ಕಿಯ ಡಬ್ಬದಲ್ಲಿ ಹಾಕಿಡಿ. ಇದು ಸ್ವಲ್ಪ ವಿಭಿನ್ನ ಯೋಜನೆಯಾದರೂ ಉತ್ತಮವಾಗಿ ಕೆಲಸ ಮಾಡುತ್ತದೆ.

7 ದಿನ

7 ದಿನ

ಫೋನ್ ಅನ್ನು ಅಕ್ಕಿಯ ಡಬ್ಬದಲ್ಲಿ ನೀವು 7 ದಿನಗಳ ಕಾಲ ಹಾಕಿಡಬೇಕಾಗುತ್ತದೆ.

ಬಡ್ಸ್‌ಗಳು

ಬಡ್ಸ್‌ಗಳು

ಹೆಡ್‌ಫೋನ್ ಸಮಸ್ಯೆಯನ್ನು ದೂರಮಾಡಲು ಹತ್ತಿಯ ಬಡ್ಸ್‌ಗಳು ಅತ್ಯುತ್ತಮವಾಗಿದೆ. ಹೆಡ್‌ಫೋನ್‌ನ ಒಳಭಾಗಕ್ಕೆ ಕಾಟನ್ ಬಡ್‌ಗಳನ್ನು ಬಳಸಿ ಸ್ವಚ್ಛಮಾಡಿ.

ಪರದೆಯಲ್ಲಿ ಮ್ಯಾಜಿಕ್

ಪರದೆಯಲ್ಲಿ ಮ್ಯಾಜಿಕ್

ಫ್ಯಾಂಟಮ್ ಗ್ಲಾಸ್ ಕೂಡ ನಿಮ್ಮ ಫೋನ್ ಪರದೆಯಲ್ಲಿ ಮ್ಯಾಜಿಕ್ ಅನ್ನು ಉಂಟುಮಾಡುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.

ಕಾರ್ ಸ್ಕ್ರಾಚ್ ಕ್ರೀಮ್‌ಗಳು

ಕಾರ್ ಸ್ಕ್ರಾಚ್ ಕ್ರೀಮ್‌ಗಳು

ಕಾರಿನ ಸ್ಕ್ರಾಚ್ ಅನ್ನು ತೆಗೆಯುವಂತಹ ಟರ್ಟಲ್ ವ್ಯಾಕ್ಸ್, ಸ್ವಿರಿಲ್ ರಿಮೂವರ್ ನಿಮ್ಮ ಫೋನ್‌ನಲ್ಲಿರುವ ಸ್ಕ್ರಾಚ್ ಅನ್ನು ನಿವಾರಿಸುತ್ತದೆ. ಕ್ರೀಮ್ ಅನ್ನು ಪರದೆಯ ಮೇಲೆ ಸರಳವಾಗಿ ಹಚ್ಚಿ ಮತ್ತು ಬಟ್ಟೆಯಿಂದ ಫೋನ್ ಪರದೆಯನ್ನು ಚೆನ್ನಾಗಿ ಒರೆಸಿ.

ಸ್ಯಾಂಡ್‌ಪೇಪರ್ ಅಥವಾ ಡ್ರಿಲ್ ಗ್ರೈಂಡರ್ಸ್

ಸ್ಯಾಂಡ್‌ಪೇಪರ್ ಅಥವಾ ಡ್ರಿಲ್ ಗ್ರೈಂಡರ್ಸ್

ಸ್ಯಾಂಡ್ ಪೇಪರ್ ಅನ್ನು ಬಳಸುವಾಗ, ಇದನ್ನು ಸ್ವಲ್ಪ ಮಟ್ಟಿಗೆ ಮಾತ್ರವೇ ನಿಮ್ಮ ಫೋನ್‌ಗೆ ಬಳಸಬೇಕಾಗುತ್ತದೆ. ನೀವು ಫೋನ್ ಸ್ಕ್ರಾಚ್ ಅನ್ನು ತೆಗೆಯುವ ಭರದಲ್ಲಿ ನಿಮ್ಮ ಫೋನ್‌ಗೆ ಯಾವುದೇ ಹಾನಿ ಉಂಟಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಎರಡು ಭಾಗದಷ್ಟು ಬೇಕಿಂಗ್ ಸೋಡಾ ಮತ್ತು ಒಂದು ಭಾಗ ನೀರನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದು ದಪ್ಪನೆಯ ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದನ್ನು ಫೋನ್‌ನ ಸ್ಕ್ರಾಚ್ ಆಗಿರುವ ಭಾಗಕ್ಕೆ ಹಚ್ಚಿ ಮತ್ತು ಹತ್ತಿಯ ಮೃದುವಾದ ಬಟ್ಟೆಯನ್ನು ಬಳಸಿಕೊಂಡು ಉಜ್ಜಿ. ನಂತರ ಒಣಗಿದ ಬಟ್ಟೆಯಿಂದ ಫೋನ್ ಪರದೆಯನ್ನು ಒರೆಸಿ.

ಬೇಬಿ ಪೌಡರ್

ಬೇಬಿ ಪೌಡರ್

ಪೌಡರ್‌ಗೆ ಸ್ವಲ್ಪ ನೀರನ್ನು ಹಾಕಿಕೊಂಡು ಅದನ್ನು ಮಿಶ್ರ ಮಾಡಿಕೊಳ್ಳಿ ಮತ್ತು ಸ್ಕ್ರಾಚ್ ಆಗಿರುವ ನಿಮ್ಮ ಫೋನ್ ಪರದೆಗೆ ಈ ಮಿಶ್ರಣವನ್ನು ಹಚ್ಚಿರಿ.

ವೆಜಿಟೇಬಲ್ ಆಯಿಲ್

ವೆಜಿಟೇಬಲ್ ಆಯಿಲ್

ಸಣ್ಣದಾದ ಅಥವಾ ಕಾಣಿಸದಿರುವ ಸ್ಕ್ರಾಚ್‌ಗಳಿಗಾಗಿ, ವೆಜಿಟೇಬಲ್ ಆಯಿಲ್ ಅನ್ನು ಬಳಸಿಕೊಳ್ಳಬಹುದಾಗಿದೆ. ಇದು ನಿಮ್ಮ ಫೋನ್‌ನ ಸ್ಕ್ರಾಚ್ ಭಾಗವನ್ನು ಚೆನ್ನಾಗಿ ರಿಪೇರಿ ಮಾಡುತ್ತದೆ.

ಮೊಟ್ಟೆ ಮತ್ತು ಪೊಟ್ಯಾಶಿಯಮ್ ಅಲ್ಯುಮಿನಿಯಮ್ ಸಲ್ಫೇಟ್

ಮೊಟ್ಟೆ ಮತ್ತು ಪೊಟ್ಯಾಶಿಯಮ್ ಅಲ್ಯುಮಿನಿಯಮ್ ಸಲ್ಫೇಟ್

ಮೊಟ್ಟೆಯ ಬಿಳಿ ಭಾಗ ಮತ್ತು ಪೊಟ್ಯಾಶಿಯಮ್ ಅಲ್ಯುಮಿನಿಯಮ್ ಸಲ್ಫೇಟ್ ಅನ್ನು ಮಿಶ್ರ ಮಾಡಿ ಸ್ಕ್ರಾಚ್ ಇರುವ ಭಾಗಕ್ಕೆ ಇದನ್ನು ಹಚ್ಚಬೇಕು.

ಬ್ರಾಸೋ, ಸಿಲ್ವೋ ಅಥವಾ ಇತರ ಪಾಲಿಶ್‌ಗಳು

ಬ್ರಾಸೋ, ಸಿಲ್ವೋ ಅಥವಾ ಇತರ ಪಾಲಿಶ್‌ಗಳು

ಪಾತ್ರೆಗೆ ಸ್ವಲ್ಪ ಪಾಲಿಶ್ ಅನ್ನು ಹಾಕಿಕೊಳ್ಳಿ. ಪಾತ್ರೆಗೆ ಪಾಲಿಶ್ ಅನ್ನು ಹಾಕಿಕೊಳ್ಳುವ ಮುಂಚೆ ಕೆಳಭಾಗದಲ್ಲಿ ಒಂದು ಬಟ್ಟೆಯನ್ನು ಹಾಸಿ. ಮೃದುವಾದ ಬಟ್ಟೆಯನ್ನು ಪಾಲಿಶ್‌ಗೆ ಮುಳುಗಿಸಿ. ಸ್ಕ್ರಾಚ್ ಉಂಟಾಗಿರುವ ಭಾಗಕ್ಕೆ ಮೇಲಿನಿಂದ ಕೆಳಕ್ಕೆ ವೃತ್ತಾಕಾರದಲ್ಲಿ ಇದನ್ನು ಉಜ್ಜಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಉಳಿದ ಪಾಲಿಶ್ ಅನ್ನು ಫೋನ್‌ನ ಪರದೆಯಿಂದ ತೆಗೆಯಿರಿ.

Best Mobiles in India

English summary
Here we are giving Quick Fixes That May Just Save Your Broken Phone easily. Through these easy steps we can heal the smartphone screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+