ನಿಮ್ಮ ಡಿವೈಸ್‌ಗಳ ಸಮಸ್ಯೆ ನೀವೇ ಬಗೆಹರಿಸುವುದು ಹೇಗೆ?

Written By:

ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳು ಇಂದು ಎಲ್ಲರ ನೆಚ್ಚಿನ ಗ್ಯಾಜೆಟ್‌ಗಳು. ಅವಶ್ಯಕವಾದ ಡಿವೈಸ್‌ಗಳು ಸಹ ಅಗಿವೆ. ಅವುಗಳ ಉಪಯೋಗ ಪಡೆಯುವ ನಾವು ನಿರಂತರವಾಗಿ ವೇಗವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಅನಿವಾರ್ಯ.

ಓದಿರಿ :ಶೀಘ್ರದಲ್ಲಿ ನಿಮ್ಮ ವಾಟ್ಸಾಪ್‌ ಡೇಟಾ ಫೇಸ್‌ಬುಕ್‌ನಲ್ಲಿ ಶೇರ್‌

ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳು ಹಾಗೂ ಇತರೆ ಇಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಆಕಸ್ಮಿಕವಾಗಿ ಕೆಲವೊಮ್ಮೆ ಅನಾಹುತಕ್ಕೆ ಒಳಗಾಗಬಹುದು. ಅಂತಹ ಸಂದರ್ಭದಲ್ಲಿ ಎಲ್ಲೋ ದೂರದಲ್ಲಿರುವ ಟೆಕ್‌ ತಜ್ಞರನ್ನು ಹುಡುಕಿ ಅವುಗಳನ್ನು ಸರಿಪಡಿಸಲು ಕಾದು ಕುಳಿತರೆ ಇನ್ನು ನಿಮ್ಮ ಡಿವೈಸ್‌ಗಳು ಸತ್ತಂತೆ ಸರಿ. ಇಂತಹ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು ಗ್ಯಾಜೆಟ್‌ಗಳನ್ನು ನೀ ವೇ ರಕ್ಷಿಸುವ ಕೆಲವು ಸರಳ ವಿಧಾನಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲ್ಯಾಪ್‌ಟಾಪ್‌ ಕೀ ಬೋರ್ಡ್‌ ಸ್ವಚ್ಛತೆ ಹೇಗೆ ?

ಲ್ಯಾಪ್‌ಟಾಪ್‌ ಕೀ ಬೋರ್ಡ್‌ ಸ್ವಚ್ಛತೆ ಹೇಗೆ ?

ದೂಳಿನ ಕಣ ಸೇರಿ ಕೀ ಬೋರ್ಡ್‌ ಕೆಡುವ ಮುನ್ನ ಅದನ್ನು ಆಗಾಗ ಪೋಸ್ಟ್‌ ಕವರ್‌ನ ಬಳಕೆಮಾಡಿ ಸ್ವಚ್ಛತೆ ಮಾಡಿ.

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಗೀಚುಗಳನ್ನು ತೆಗೆಯುವುದು ಹೇಗೆ ?

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಗೀಚುಗಳನ್ನು ತೆಗೆಯುವುದು ಹೇಗೆ ?

ಸ್ಮಾರ್ಟ್‌ಫೋನ್ ಸ್ಕ್ರೀನ್‌ ಮೇಲಿನ ಗೀಚುಗಳನ್ನು ತೆಗೆಯಲು ಟೂತ್‌ಪೇಸ್ಟ್‌ ಅನ್ನು ಹಾಕಿ ಕಾಟನ್‌ ಬಟ್ಟೆಯಲ್ಲಿ ಉಜ್ಜಿ.

 ಒದ್ದೆಯಾದ ಫೋನ್‌ನಲ್ಲಿ ನೀರು ತೆಗೆಯುವುದು ಹೇಗೆ ?

ಒದ್ದೆಯಾದ ಫೋನ್‌ನಲ್ಲಿ ನೀರು ತೆಗೆಯುವುದು ಹೇಗೆ ?

ಆಕಸ್ಮಿಕವಾಗಿ ನೀರಿಗೆ ಬಿದ್ದ ಫೋನ್‌ನ ಬ್ಯಾಟರಿಯನ್ನು ಬೇಗ ತೆಗೆದು ನೀರನ್ನು ಕಾಟನ್‌ ಬಟ್ಟೆಯಲ್ಲಿ ಒರೆಸಿ. ಹಾಗೂ ಇನ್ನುಳಿದ ನೀರನ್ನು ತೆಗೆಯಲು ಬ್ಯಾಟರಿ ತೆಗೆದ ಫೋನ್‌ ಅನ್ನು ಅಕ್ಕಿ ಚೀಲದ ಒಳಗೆ ಇಡಿ. ಇದರಿಂದ ನೀರಿನ ಅಂಶ ಸಂಪೂರ್ಣವಾಗಿ ಹೋಗುತ್ತದೆ.

ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವುದು

ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವುದು

ನಿಮ್ಮ ಡಿವೈಸ್‌ಗಳ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲು ಸಂಪೂರ್ಣವಾಗಿ ಚಾರ್ಜ್‌ ಮಾಡಿರಿ. ತಿಂಗಳಿಗೆ ಒಮ್ಮೆ ಡಿವೈಸ್‌ ಅನ್ನು ಸಂಪೂರ್ಣವಾಗಿ ಪವರ್ ಇಲ್ಲದಂತೆ ಮಾಡಿ.

ಇಯರ್‌ಫೋನ್‌ ಕಾಪಾಡಿಕೊಳ್ಳುವುದು ಹೇಗೆ ?

ಇಯರ್‌ಫೋನ್‌ ಕಾಪಾಡಿಕೊಳ್ಳುವುದು ಹೇಗೆ ?

ಇಯರ್‌ಫೋನ್‌ ಅನ್ನು ಕೆಲವರು ಸುತ್ತಿ ಇಡಬೇಕಾದರೆ ಅವ್ಯವಸ್ಥಿತಗೊಳಿಸುತ್ತಾರೆ. ಆದರೆ ಅದನ್ನು ನಿಮ್ಮ ಬೆರಳುಗಳಲ್ಲಿ ಸುತ್ತಿ ನಂತರದಲ್ಲಿ ಮಡಿಚಿರಿ.

 ಡಿಎಸ್‌ಎಲ್‌ಆರ್‌ ಕ್ಯಾಮೆರಾ ಡ್ರೈ ಮತ್ತು ಆರ್ದ್ರತೆ

ಡಿಎಸ್‌ಎಲ್‌ಆರ್‌ ಕ್ಯಾಮೆರಾ ಡ್ರೈ ಮತ್ತು ಆರ್ದ್ರತೆ

ನಿಮ್ಮ ಡಿಎಸ್‌ಎಲ್‌ಆರ್‌ ಅನ್ನು ಡ್ರೈ ಮತ್ತು ಆರ್ದ್ರತೆಯಿಂದ ಇಡಲು ಕ್ಯಾಮೆರಾ ಬ್ಯಾಗ್‌ನಲ್ಲಿ ಸಿಲಿಕಾ ಜೆಲ್‌ ಪ್ಯಾಕೆಟ್‌ ಅನ್ನು ಸದಾಕಾಲ ಇರಿಸಿರಿ.

ಲ್ಯಾಪ್‌ಟಾಪ್‌ ಕೂಲ್‌ ಆಗಿ ಇಡುವುದು ಹೇಗೆ?

ಲ್ಯಾಪ್‌ಟಾಪ್‌ ಕೂಲ್‌ ಆಗಿ ಇಡುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್‌ ಅನ್ನು ಕೂಲ್‌ ಆಗಿ ಇಡಲು ಮೊಟ್ಟೆಯ ರಟ್ಟಿನ ಪೆಟ್ಟಿಗೆ ಮೇಲಿಡಿ.

ಪ್ರಿಂಟರ್‌ನ ಕಾರ್ಟ್ರಿಜ್ಗಳನ್ನು ತೇವಾಂಶವಾಗಿಸುವುದು ಹೇಗೆ ?

ಪ್ರಿಂಟರ್‌ನ ಕಾರ್ಟ್ರಿಜ್ಗಳನ್ನು ತೇವಾಂಶವಾಗಿಸುವುದು ಹೇಗೆ ?

ಕಾರ್ಟ್ರಿಜ್‌ ಅನ್ನು ಪ್ಲಾಸ್ಟಿಕ್‌ನ ಹೀಟ್‌ ಪ್ರೂಫ್‌ ಬ್ಯಾಗ್‌ಗೆ ಹಾಕಿ ಅದನ್ನು ಬಿಸಿನೀರಿನ ಒಳಗೆ ಇಡಿ.

ವೈಫೈ ರೂಟರ್‌ನಿಂದ ಅಧಿಕ ಸಿಗ್ನಲ್‌ ಪಡೆಯುವುದು ಹೇಗೆ ?

ವೈಫೈ ರೂಟರ್‌ನಿಂದ ಅಧಿಕ ಸಿಗ್ನಲ್‌ ಪಡೆಯುವುದು ಹೇಗೆ ?

ನಿಮ್ಮ ಮನೆಯಲ್ಲಿರುವ ವೈಫೈ ರೂಟರ್‌ನಿಂದ ಅಧಿಕವಾಗಿ ನೆಟ್‌ವರ್ಕ್‌ ಸಿಗ್ನಲ್‌ ಪಡೆಯಲು ಅದರ ಮುಂದೆ ಅಲ್ಯೂಮಿನಿಯಮ್‌ ತಗಡನ್ನು ಅಥವಾ ಸೋಡಾ ಕ್ಯಾನ್‌ ಅನ್ನು ವೈಫೈ ರೂಟರ್‌ ಪಕ್ಕ ಇರಿಸಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Quick Fixes For Your Gadgets That You Need to Learn. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot