ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

Written By:

ಇಂದು ಸೋಶಿಯಲ್‌ ನೆಟ್‌ವರ್ಕ್‌ ತಾಣಗಳಾದ ಫೇಸ್‌ಬುಕ್‌,ಟ್ವೀಟರ್‌ನಲ್ಲಿ ವಿವಿಧ ಕಂಪೆನಿಗಳು ತಮ್ಮ ಅಧಿಕೃತ ಅಕೌಂಟ್‌‌‌ನ್ನು ತೆರೆಯಲಾರಂಭಿಸಿದೆ. ವಿಶ್ವದ ಬಳಕೆದಾರರಿಗೆ ಮಾಹಿತಿಗಳು ಬೇಗ ತಲುಪುತ್ತವೆ ಎನ್ನುವ ಕಾರಣಕ್ಕಾಗಿ ಮಾತ್ರ ಕಂಪೆನಿಗಳು ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ಖಾತೆ ತೆರೆಯುದಿಲ್ಲ. ಬದಲಾಗಿ ಈ ಸೋಶಿಯಲ್‌ ನೆಟ್‌ವರ್ಕ್‌ಗಳಿಂದ ಕಂಪೆನಿಗಳಿಗೆ ತುಂಬಾ ಲಾಭವಿದೆ.

ಹೀಗಾಗಿ ಯಾವೆಲ್ಲ ಕಾರಣಕ್ಕೆ ಕಂಪೆನಿಗಳು ಸೋಶಿಯಲ್‌ ನೆಟ್‌ವರ್ಕ್‌ ತಾಣದಲ್ಲಿ ಖಾತೆ ತೆರೆಯುತ್ತವೆ?ಇವುಗಳಿಂದ ಕಂಪೆನಿಗಳಿಗೆ ಏನು ಲಾಭ? ಮತ್ತಿತ್ತರ ವಿಚಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಉದ್ಯೋಗಿಗಳ ಪತ್ತೆ ಸುಲಭ!

ಹೊಸ ಉದ್ಯೋಗಿಗಳ ಪತ್ತೆ ಸುಲಭ!

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

ಕಂಪೆನಿಗಳ ಪೋಸ್ಟ್‌‌ಗಳಿಗೆ ಬಹಳಷ್ಟು ಮಂದಿ ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರತಿಕ್ರಿಯೆ ನೀಡುವ ಜನರಲ್ಲಿ ಚೆನ್ನಾಗಿ ಪ್ರತಿಕ್ರಿಯೆ ನೀಡುವ ಜನರನ್ನು ಉದ್ಯೋಗಿಗಳಾಗಿ ಮಾಡಲು, ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ವೀಕ್ಷಿಸಲು ಸೋಶಿಯಲ್‌ ಮೀಡಿಯಾ ಸಹಕಾರಿಯಾಗುತ್ತದೆ.

 ಸುಲಭ ನೇಮಕಾತಿ!

ಸುಲಭ ನೇಮಕಾತಿ!

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

ಈ ಹಿಂದೆ ಕಂಪೆನಿಗಳು ನಡೆಸುವ ನೇಮಕಾತಿ ಪ್ರಕ್ರಿಯೆಗಳಿಗಿಂತ ಈ ಆನ್‌ಲೈನ್‌ ನೇಮಕಾತಿ ಪ್ರಕ್ರಿಯೆ ಸುಲಭ. ಅಭ್ಯರ್ಥಿ‌ಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಕಡಿಮೆ ದಿನದಲ್ಲಿ ಸಂದರ್ಶನ ನಡೆಸಿ ಉದ್ಯೋಗ ನೀಡಲು ಈ ಸೋಶಿಯಲ್‌ ಮೀಡಿಯಾಗಳಿಂದ ಸಾಧ್ಯವಿದೆ.

ಕಂಪೆನಿ ಹೇಗಿದೆ ಗೊತ್ತಾ?

ಕಂಪೆನಿ ಹೇಗಿದೆ ಗೊತ್ತಾ?

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

ಇಂದು ಯಾವುದೇ ಕಂಪೆನಿ ಹೇಗಿದೆ ಎಂದು ತಿಳಿಯಲು ಆ ಕಂಪೆನಿಯ ಅಧಿಕೃತ ಲೈಕ್‌ ಪೇಜ್‌,ಟ್ವೀಟರ್‌ ಅಕೌಂಟ್‌ನ್ನು ಅಭಿಮಾನಿಗಳ ಸಂಖ್ಯೆ ನೋಡಿದರೆ ತಿಳಿಯುತ್ತದೆ. ಹೀಗಾಗಿ ಎಲ್ಲಾ ಕಂಪೆನಿಗಳು ತಮ್ಮ ಪ್ರತಿಷ್ಟೆಯನ್ನು ಉಳಿಸಿಕೊಳ್ಳುವುದಕ್ಕೆ ತಮ್ಮ ಕಂಪೆನಿಯ ಅಧಿಕೃತ ಸೋಶಿಯಲ್‌ ಮೀಡಿಯಾ ಅಕೌಂಟ್‌ಗೆ ಹೆಚ್ಚು ಜನರನ್ನು ಸೆಳೆಯಲು ಪ್ರಯತ್ನಿಸುತ್ತವೆ.

ಯುವ ಪ್ರತಿಭಾವಂತರಿಗೆ ಸಹಕಾರಿ!

ಯುವ ಪ್ರತಿಭಾವಂತರಿಗೆ ಸಹಕಾರಿ!

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

ಯುವ ಪ್ರತಿಭಾವಂತರನ್ನು ಹುಡುಕಲು ಸೋಶಿಯಲ್‌ ಮೀಡಿಯಾ ತುಂಬಾ ಸಹಕಾರಿ. ವಿಶೇಷವಾಗಿ ಟೆಕ್‌ ಕಂಪೆನಿಗಳು ಈ ಎಲ್ಲಾ ಅಂಶಗಳನ್ನು ನೋಡಿ ಉದ್ಯೋಗ ನೀಡುವ ಹೊಸ ಸಂಪ್ರದಾಯವನ್ನು ಕೆಲವು ಕಂಪೆನಿಗಳು ಆರಂಭಿಸಿವೆ.

ಸೇತುವೆಯಂತೆ ಕೆಲಸ

ಸೇತುವೆಯಂತೆ ಕೆಲಸ

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?


ಜನರ ಅಭಿಪ್ರಾಯದಿಂದ ಕಂಪೆನಿಯ ಉತ್ಪನ್ನ ಚೆನ್ನಾಗಿದೆಯೋ ಇಲ್ಲವೊ ಎನ್ನುವ ಅಂಶ ತೀರ್ಮಾ‌ನವಾಗುತ್ತದೆ.ಹೀಗಾಗಿ ಕಂಪೆನಿ ಮತ್ತು ಜನರ ಮಧ್ಯೆ ಈ ಸೋಶಿಯಲ್‌ ಮೀಡಿಯಾ ಸೇತುವೆಯಾಗಿ ಕೆಲಸ ಮಾಡುತ್ತದೆ.

ಕ್ಷಣ ಮಾತ್ರದಲ್ಲಿ ಪಬ್ಲಿಸಿಟಿ

ಕ್ಷಣ ಮಾತ್ರದಲ್ಲಿ ಪಬ್ಲಿಸಿಟಿ

ಸೋಶಿಯಲ್‌ ಮೀಡಿಯಾದಿಂದ ಕಂಪೆನಿಗಳಿಗೆ ಏನು ಲಾಭ?

ಕಂಪೆನಿಯ ಹೊಸ ಪ್ರೊಡೆಕ್ಟ್‌ ಸಂಪೂರ್ಣ‌ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ವಿಶ್ವದ ಜನರಿಗೆ ತಲುಪಿಸಲು ಸೋಶಿಯಲ್‌ ಮೀಡಿಯಾ ಸಹಕಾರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot