ಸ್ನಾಪ್‌ಡೀಲ್‌ ನೀಡುತ್ತಿದೆ ಜಿಯೋ ಸಿಮ್ ಹೋಂ ಡೆಲಿವರಿ!! ಬುಕ್ ಮಾಡೋದು ಹೇಗೆ?

|

ಪ್ರಖ್ಯಾತ ಶಾಪಿಂಗ್ ಜಾಲತಾಣ ಸ್ನಾಪ್‌ಡೀಲ್ ಜಿಯೋ ಸಿಮ್ ಡೆಲಿವರಿ ನೀಡುವ ಸೇವೆಯನ್ನು ಆರಂಭಿಸುತ್ತಿದೆ.!! ಹೌದು, ಜಿಯೋ ತನ್ನ ಉಚಿತ ಸೇವೆಗಳನ್ನು ವಿಸ್ತರಣೆ ಮಾಡಿದ ನಂತರ ಜಿಯೋ ಸಿಮ್‌ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಹಾಗಾಗಿ ಮನೆಗೆ ಜಿಯೋ ಸಿಮ್ ಡೆಲಿವರಿ ಮಾಡಲು ಸ್ನಾಪ್‌ಡೀಲ್ ನಿರ್ಧರಿದೆ!

ಈ ಬಗ್ಗೆ ಸ್ನಾಪ್‌ಡೀಲ್‌ ತನ್ನ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದು, ಜನವರಿಯಿಂದ ಜಿಯೋ ಸಿಮ್ ಡೆಲಿವರಿ ಸೇವೆಯನ್ನು ನಿಡುವುದಾಗಿ ಸ್ನಾಪ್‌ಡೀಲ್ ಹೇಳಿಕೊಂಡಿದೆ. ಜಿಯೋ ಕಂಪೆನಿಯೇ ನೇರವಾಗಿ ಜಿಯೋ ಸಿಮ್ ಹೋಮ್ ಡೆಲಿವರಿ ಮಾಡುತ್ತಿದ್ದರೂ ಅದರ ಕಾರ್ಯನಿರ್ವಹಣೆ ನಿರೀಕ್ಷಿತಮಟ್ಟ ತಲುಪಿಲ್ಲ. ಹಾಗಾಗಿ ಸ್ನಾಪ್‌ಡೀಲ್ ಜಿಯೋ ಜೊತೆ ಮಾತುಕತೆ ನಡೆಸಿದ್ದು, ಸಿಮ್ ಡೆಲಿವರಿಯನ್ನು ನೀಡಲು ಜಿಯೋ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಸ್ನಾಪ್‌ಡೀಲ್‌ ನೀಡುತ್ತಿದೆ ಜಿಯೋ ಸಿಮ್ ಹೋಂ ಡೆಲಿವರಿ!! ಬುಕ್ ಮಾಡೋದು ಹೇಗೆ?

ಫ್ಲಿಪ್‌ಕಾರ್ಟ್‌ನಿಂದ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"! ಏನಿದು ಬಿಗ್ ಆಫರ್‌ ಗೊತ್ತಾ?

ಕಳೆದ ಕೆಲವು ತಿಂಗಳಿನಿಂದ ಹೇಳಲು ಹೆಸರಿಲ್ಲದಂತಾಗಿದ್ದ ಸ್ನಾಪ್‌ಡೀಲ್ ಇದೀಗ ಜಿಯೋ ಮೂಲಕ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹಾಗಾಗಿ ಜಿಯೋ ಹಿಂದೆ ಬಿದ್ದಿರುವ ಸ್ನಾಪ್‌ಡೀಲ್ LYF ಸ್ಮಾರ್ಟ್‌ಫೋನ್‌ಗಳ ಮೇಲೂ ಡಿಸ್ಕೌಂಟ್ ವ್ಯವಹಾರ ಮಾಡುವ ಯೋಚನೆಯಲ್ಲಿದೆ ಎನ್ನಲಾಗಿದೆ.

ಸ್ನಾಪ್‌ಡೀಲ್‌ ನೀಡುತ್ತಿದೆ ಜಿಯೋ ಸಿಮ್ ಹೋಂ ಡೆಲಿವರಿ!! ಬುಕ್ ಮಾಡೋದು ಹೇಗೆ?

ಸ್ನಾಪ್‌ಡೀಲ್‌ ಮುಖಾಂತರ ಜಿಯೋ ಸಿಮ್ ಬುಕ್ ಮಾಡಲು ನಿಮ್ಮ ಆಧಾರ್ ಕಾರ್ಡ್‌ ಅವಶ್ಯಕತೆ ಇದ್ದು, ನೀವು ರಿಜಿಸ್ಟರ್ ಮಾಡಿದರೆ ಜಿಯೋ ನಿಮ್ಮ ಮನೆಗೆ ತಲುಪುವ ದಿನಾಂಕ ಮತ್ತು ಸಮಯವನ್ನು ತಿಳಿಯಬಹುದು. ಇನ್ನು ಈ ಸೇವೆಗೆ ಸ್ನಾಪ್‌ಡೀಲ್ ಯಾವ ರೀತಿಯ ದರವನ್ನು ವಿಧಿಸುತ್ತಿದೆ ಎಂಬುದು ತಿಳಿದುಬಂದಿಲ್ಲ.

Best Mobiles in India

Read more about:
English summary
Snapdeal will soon start delivering Reliance Jio SIM cards to customers’ homes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X