ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೇ ಅಡಗಿರುವ ಆಚ್ಚರಿಯ ಸಂಗತಿಗಳು.!

Written By:

ನಿಮ್ಮ ಸ್ಮಾರ್ಟ್‌ಫೋನ್‌ಗಳು ಈ ಕೆಲಸವನ್ನು ಮಾಡಬಹುದು ಆದರೆ ನಿಮಗೆ ಈ ಬಗ್ಗೆ ಯಾವುದೇ ಮಾಹಿತಿಯಲ್ಲಿ. ಸ್ಮಾರ್ಟ್‌ಫೋನ್‌ ಎನ್ನುವುದು ಕೇವಲ ಗೇಮಿಂಗ್, ಚಾಟಿಂಗ್‌ಗೆ ಮಾತ್ರವಲ್ಲ. ಎಲ್ಲಾ ಮಾದರಿಯ ಕೆಲಸ ಕಾರ್ಯಗಳಿಗೆ ಇದು ಬಳಕೆಯಾಗಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಳಕೆ ಮಾಡಿಕೊಳ್ಳಬಹುದಾದ ವಿವಿಧ ಆಯ್ಕೆಗಳ ಕುರಿತು ಮಾಹಿತಿಯೂ ಇಲ್ಲಿದೆ.

ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೇ ಅಡಗಿರುವ ಆಚ್ಚರಿಯ ಸಂಗತಿಗಳು.!

ಸ್ಮಾರ್ಟ್‌ಫೋನಿನಲ್ಲಿಯೇ ತೂಕ ಹಾಕಬಹುದಾಗಿದೆ. ಅಲ್ಲದೇ ಒಂದು ಸ್ಮಾರ್ಟ್‌ಫೋನ್ ಅನ್ನು ಇನ್ನೊಂದು ಸ್ಮಾರ್ಟ್‌ಫೋನ್‌ನೊಂದಿಗೆ ನೇರಾವಾಗಿ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ ಹಲವು ಕಾರ್ಯಗಳನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮಾಡಬಹುದಾಗಿದೆ. ನಿಮ್ಮ ಕೈನಲ್ಲಿ ಇರುವ ಸ್ಮಾರ್ಟ್‌ಫೋನ್ ಯಾವ ಕೆಲಸ ಗಳನ್ನು ಮಾಡಲಿದೆ ಎನ್ನುವುದನ್ನು ಮುಂದಿನಂತೆ ನೋಡಿ..!

ಓದಿರಿ: ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಲ್ಲಿಯೇ ತೂಕ ಮಾಡಿ:

ಮೊಬೈಲ್‌ನಲ್ಲಿಯೇ ತೂಕ ಮಾಡಿ:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಡಿಜಿಟಲ್ ಸ್ಕೇಲ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ನಿಮ್ಮ ಫೋನಿನಲ್ಲಿಯೇ ತೂಕವನ್ನು ಮಾಡಬಹುದಾಗಿದೆ. ತೂಕದ ಯಂತ್ರವನ್ನು ಮೊಬೈಲ್‌ ಅನ್ನೇ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಆಪ್ ಹಾಕಿಕೊಳ್ಳಬಹುದಾಗಿದೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಡ್ಯುಯಲ್ ಸ್ಕ್ರಿನ್:

ಡ್ಯುಯಲ್ ಸ್ಕ್ರಿನ್:

ಒಂದೇ ಸಮಯದಲ್ಲಿ ಎರಡು ಆಪ್‌ಗಳನ್ನು ಬಳಕೆ ಮಾಡಿಕೊಂಡು ಕೆಲಸವನ್ನು ಮಾಡಬೇಕಾಗಿದಲ್ಲಿ ನೀವು ಮಲ್ಟಿ ವಿಂಡೋ ಆಯ್ಕೆ ಮಾಡಿಕೊಳ್ಳಿ. ಇದಕ್ಕಾಗಿ ಟಾಸ್ಕ್ ಲಿಸ್ಟ್‌ನಲ್ಲಿ ಹೋಮ್ ಬಟನ್ ಓಪನ್ ಮಾಡಿ ಮಲ್ಟಿ ವಿಂಡೋ ಮಾಡಿಕೊಳ್ಳಿ. ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಆಯ್ಕೆ ಇರುವುದಿಲ್ಲ.

ಆಫ್‌ಲೈನ್ ಮ್ಯಾಪ್‌ ಬಳಕೆ:

ಆಫ್‌ಲೈನ್ ಮ್ಯಾಪ್‌ ಬಳಕೆ:

ಮೊಬೈಲ್‌ನಲ್ಲಿ ನೀವು ಎಲೆಕ್ಟ್ರಾನಿಕ್ ಮ್ಯಾಪ್‌ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಆಫ್‌ಲೈನ್ ಮ್ಯಾಪ್ ಸಹಾಯ ಮಾಡಲಿದೆ. ಒಮ್ಮೆ ನೀವು ತಲುಪಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಹುಡಿಕಿದರೆ ಸಾಕು ಇದಾದ ನಂತರದಲ್ಲಿ ಡೇಟಾ ಆಫ್ ಮಾಡಿದರೂ ಸಹ ಆಫ್‌ಲೈನಿನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ತಲುಪಬಹುದು.

ಕ್ರೆಡಿಟ್-ಡೆಬಿಟ್ ಕಾರ್ಡ್ ಮಾದರಿಯಲ್ಲಿ ಬಳಕೆ:

ಕ್ರೆಡಿಟ್-ಡೆಬಿಟ್ ಕಾರ್ಡ್ ಮಾದರಿಯಲ್ಲಿ ಬಳಕೆ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ NFC ಆಯ್ಕೆಯೂ ಇದ್ದರೆ ನಿಮ್ಮ ಫೋನ್ ಅನ್ನು ಕ್ರೆಡಿಟ್-ಡೆಬಿಟ್ ಕಾರ್ಡ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಪೇಮೆಂಟ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಮಾದರಿಯಲ್ಲಿ ಫೋನ್‌ ಅನ್ನು ಸ್ವೈಪ್ ಮಾಡಬಹುದಾಗಿದೆ.

ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಿ:

ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಿ:

ಓನ್ ಟಚ್ ಗೋ OTG ಕನೆಷನ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಒಂದಾಗಿ ಕನೆಕ್ಟ್ ಮಾಡಬಹುದಾಗಿದೆ. ಇದರಿಂದಾಗಿ ಎರಡು ಸ್ಮಾರ್ಟ್‌ಫೋನ್‌ಗಳು ಕೇಬಲ್ ಸಹಾಯದಿಂದ ಕೆನೆಕ್ಟ್ ಆಗಲಿದೆ. ಇದರಿಂದಾಗಿ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯಲ್ಲಿ ಕಾಪಿ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smartphone Features Most Users Have No Idea About. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot