ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

|

ದೇಶಿಯ ಟೆಲಿಕಾಂ ಮಾರುಕಟ್ಟೆಯ ಚಹರೆಯನ್ನು ಬದಲಾಯಿಸಿದ ರಿಲಯನ್ಸ್ ಮಾಲೀಕ ಅಂಬಾನಿ, ಹೊಸ ಸಾಧ್ಯತೆಗಳನ್ನು ಮಾರುಕಟ್ಟೆಯಲ್ಲಿ ತೋರಿಸಿಕೊಟ್ಟರು. ಟೆಲಿಕಾಂ ಲೋಕದಲ್ಲಿ ಅಸಾಧ್ಯವಾದ ಸಾಧನೆಗಳನ್ನು ಮಾಡುವುದರೊಂದಿಗೆ ಅನೇಕ ಯಶಸ್ವಿ ಪ್ರಯತ್ನಗಳನ್ನು ಮಾಡಿ ಗೆಲುವು ಸಾಧಿಸಿದವರು. ಇವರ ಗೆಲುವಿಗೆ ಸಾಕ್ಷಿಯಾಗಿದ್ದೇ ಜಿಯೋ ಫೋನ್.

ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

ಹೌದು ಇಡೀ ದೇಶವೇ ಸ್ಮಾರ್ಟ್‌ಫೋನ್‌ಗಳ ಹಿಂದೆ ಬಿದ್ದಿರುವ ಸಂದರ್ಭದಲ್ಲಿ ಸಾಮಾನ್ಯ ಜನರು 4G ಫೀಚರ್ ಫೋನ್ ಬಳಸಲಿ ಎಂದು ಬಿಡುಗಡೆ ಮಾಡಿದ್ದ ಜಿಯೋ ಫೋನ್, ಇಂದು ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ ಓನ್ ಪಟ್ಟವನ್ನು ಅಲಂಕರಿಸಿದೆ. ಜಿಯೋ ಫೋನ್ ಮೂಲಕ ತನ್ನ ಜಿಯೋ ಕುಟುಂಬವನ್ನು ವಿಸ್ತರಿಸಿಕೊಂಡ ಅಂಬಾನಿ ಈ ಮೂಲಕ ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಯಾರು ಕೆಡವಲಾಗದ ಸಾಮ್ರಾಜ್ಯವನ್ನು ಗಟ್ಟಿಯಾಗಿಯೇ ಕಟ್ಟುತ್ತಿದ್ದಾರೆ.

ಓದಿರಿ: ಫೇಸ್‌ಬುಕ್ ಸೆಕ್ಯೂರ್ ಮಾಡುವುದು ಹೇಗೆ..? FB ಬಳಕೆದಾರರ ಗಮನಕ್ಕೆ

ಮಾರುಕಟ್ಟೆಯಲ್ಲಿ ಶೇ.27 ರಷ್ಟು ಪಾಲು:

ಮಾರುಕಟ್ಟೆಯಲ್ಲಿ ಶೇ.27 ರಷ್ಟು ಪಾಲು:

ರೂ.1500ರ ಹಿಂತಿರುಗಿಸುವ ಠೇವಣಿಯನ್ನು ಪಡೆದು ಉಚಿತವಾಗಿ ನೀಡುತ್ತರುವ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಸನಿಹಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಶೇ.27% ಮಂದಿ ಜಿಯೋ ಫೋನ್ ಕೊಂಡು ಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಫೋನ್ ನಂಬರ್ 1 ಸ್ಥಾನ ಅಲಂಕರಿಸಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ದಾಖಲೆಯ ಪ್ರೀ ಆರ್ಡರ್:

ದಾಖಲೆಯ ಪ್ರೀ ಆರ್ಡರ್:

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಯಾವ ಫೋನಿಗೂ ಇಷ್ಟು ದೊಡ್ಡ ಮಟ್ಟದ ಪ್ರೀ ಆರ್ಡರ್ ದೊರೆತಿರಲಿಲ್ಲ ಎನ್ನಲಾಗಿದೆ. ಸುಮಾರು ಆರು ಮಿಲಿಯನ್ ಫೋನ್‌ಗಳು ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಆಗಿತ್ತು ಎನ್ನಲಾಗಿದೆ. ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳ ದಾಖಲೆಯನ್ನು ಮುರಿದಿತ್ತು.

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಗೂಗಲ್ ಅಸಿಸ್ಟೆಂಟ್:

ಗೂಗಲ್ ಅಸಿಸ್ಟೆಂಟ್:

ಈ ಮೂಲಕ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ. ಈಗಾಗಲೇ ಜಿಯೋ ಫೋನಿನಲ್ಲಿ ವಾಯ್ಡ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಆ ಸ್ಥಾನಕ್ಕೆ ಗೂಗಲ್ ಅಸಿಸ್ಟೆಂಟ್ ಬರಲಿದೆ.

Best Mobiles in India

English summary
Jio Phone becomes no 1 feature phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X