Home
ಟೆಕ್ ನೌಕರಿ

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಅನುಸರಿಸಬೇಕಾದ ಮುಖ್ಯ ಟಿಪ್ಸ್

By Shwetha

ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಿ ಹಾಗಿದ್ದಾಗ ಅದನ್ನು ಜಾಗರೂಕರಾಗಿ ಕಾಪಾಡಿಕೊಳ್ಳುವುದೂ ನಿಮ್ಮ ಕರ್ತವ್ಯವಾಗಿದೆ. ಫೋನ್ ಖರೀದಿಸಿ ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ನಂತರ ಉಂಟಾಗುವ ಹಾನಿಯನ್ನು ನೆನೆದು ತಲೆಬಿಸಿ ಮಾಡದಿರಿ. ಹಾಗಿದ್ದರೆ ನಿಮ್ಮ ಹೊಸ ಫೋನ್‌ನ ಸಂರಕ್ಷಣೆಯನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಇಂದಿಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ಬಜೆಟ್ ಬೆಲೆಯಲ್ಲಿ ಟಾಪ್ ಫೀಚರ್ ಫೋನ್ಸ್

ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಫೋನ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗೆಗಿನ ಸಲಹೆಗಳನ್ನು ನೀಡುತ್ತಿದ್ದು ಇಲ್ಲಿದೆ ಆ ಮಾಹಿತಿಗಳು

ಡಿವೈಸ್ ಬ್ರ್ಯಾಂಡ್

ಡಿವೈಸ್ ಬ್ರ್ಯಾಂಡ್

ನೀವು ಖರೀದಿ ಮಾಡುತ್ತಿರುವ ಫೋನ್ ನಿಮಗೆ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ಮೊದಲು ಕಂಡುಕೊಳ್ಳಿ. ನೀವು ಖರೀದಿ ಮಾಡುತ್ತಿರುವ ಡಿವೈಸ್ ಅದರ ಬ್ರ್ಯಾಂಡ್ ನಿಮಗೆ ಇಷ್ಟವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ನು ಇದರ ವಿನ್ಯಾಸ ಮತ್ತು ಫೀಚರ್‌ಗೆ ಕೂಡ ಪ್ರಾಮುಖ್ಯ ನೀಡಿ.

ಕಲೆ ಅಥವಾ ಗೀರು

ಕಲೆ ಅಥವಾ ಗೀರು

ಖರೀದಿ ಫೋನ್‌ಗೆ ಯಾವುದೇ ಕಲೆ ಅಥವಾ ಗೀರು ಆಗದಂತೆ ಸೂಕ್ತ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸ್ಕ್ರೀನ್ ಪ್ರೊಟೆಕ್ಟರ್ ಮತ್ತು ಕೇಸ್ ಖರೀದಿಸಿ.

ಸುರಕ್ಷಿತ

ಸುರಕ್ಷಿತ

ನೀವು ಫೋನ್ ಅನ್ನು ಇರಿಸುವಂತಹ ಸ್ಥಳ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡೆಸ್ಕ್, ಬುಕ್‌ ಶೆಲ್ಫ್, ಕ್ಯಾಬಿನೆಟ್ ಉತ್ತಮ ಸ್ಥಳಗಳಾಗಿವೆ.

ನೀರಿನಿಂದ ಸಂರಕ್ಷಣೆ

ನೀರಿನಿಂದ ಸಂರಕ್ಷಣೆ

ಹೊರಗಡೆ ಮಳೆ ಬರುತ್ತಿದೆ ಎಂದಾದಲ್ಲಿ ಅದನ್ನು ಹೊರಕ್ಕೆ ತೆಗೆದುಕೊಂಡು ಹೋಗಬೇಡಿ. ಫೋನ್ ಸಮೀಪ ಕುಡಿಯುವುದು ತಿನ್ನುವುದನ್ನು ಮಾಡಬೇಡಿ. ಅಂತೆಯೇ ನೀರಿನ ಬಳಿ ಅದನ್ನು ತೆಗೆದುಕೊಂಡು ಹೋಗದಿರಿ.

ಡ್ರೈ ಟಿಶ್ಯೂ ಪೇಪರ್

ಡ್ರೈ ಟಿಶ್ಯೂ ಪೇಪರ್

ಡ್ರೈ ಟಿಶ್ಯೂ ಪೇಪರ್ ಅಥವಾ ಆಲ್ಕೊಹಾಲ್ ವೈಪ್ಸ್ ಬಳಸಿ ನಿಯಮಿತವಾಗಿ ಫೋನ್ ಸ್ಕ್ರೀನ್ ಅನ್ನು ಸ್ವಚ್ಛ ಮಾಡಿ. ನೀರು, ಬೇಬಿ ವೈಪ್ಸ್, ಅಥವಾ ಇತರ ಕ್ಲೀನರ್‌ಗಳನ್ನು ಫೋನ್ ಸ್ವಚ್ಛಮಾಡಲು ಬಳಸಬೇಡಿ.

ಚಾರ್ಜ್

ಚಾರ್ಜ್

ಕೆಲವೊಂದು ಫೋನ್‌ಗಳು ವಾರಗಟ್ಟಲೆ ಚಾರ್ಜ್ ಅನ್ನು ಉಳಿಸಿಕೊಂಡರೆ ಇನ್ನು ಕೆಲವು ದಿನವೊಂದಕ್ಕೆ ತನ್ನ ಚಾರ್ಜ್ ಅನ್ನು ಕಳೆದುಕೊಳ್ಳುತ್ತದೆ. ಬ್ಯಾಟರಿ ದೀರ್ಘತೆಗಾಗಿ ಯಾವಾಗಲೂ ಫೋನ್ ಚಾರ್ಜ್ 40 ರಿಂದ 80 ಶೇಕಡಾದವರೆಗೆ ಇರುವಂತೆ ನೋಡಿಕೊಳ್ಳಿ.

ವೈಬ್ರೇಟ್

ವೈಬ್ರೇಟ್

ನೀವು ಕ್ಲಾಸ್ ರೂಮ್‌ನಲ್ಲಿದ್ದರೆ ಅಥವಾ ಯಾವುದೇ ಸಮಾರಂಭಗಳಲ್ಲಿ ಇದ್ದಲ್ಲಿ ಫೋನ್ ರಿಂಗರ್ ಅನ್ನು ಆಫ್ ಮಾಡಿಟ್ಟುಕೊಳ್ಳಿ. ರಿಂಗರ್ ಅನ್ನು ವೈಬ್ರೇಟ್ ಆಫ್ ಆಗಿರುವಂತೆ ನೋಡಿಕೊಳ್ಳಿ.

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you on Taking care of your new smartphone here are the methods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+