Just In
Don't Miss
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Automobiles
ಇನ್ಮುಂದೆ ಬಂಕ್ಗಳಲ್ಲಿ ಬಾಟಲ್ಗಳಿಗೆ ಪೆಟ್ರೋಲ್ ಹಾಕಲ್ಲ..!
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
'ಪಬ್ಲಿಕ್ ವೈಫೈ' ಉಪಯೋಗಿಸುವವರು ಇದನ್ನೊಮ್ಮೆ ಓದಿ!
ಡಾಟಾ ಪ್ರೈವೆಸಿ ವಿಚಾರದಲ್ಲಿ, ಸೆಕ್ಯುರಿಟಿ ತೊಂದರೆಗಳ ವಿಚಾರದಲ್ಲಿ ನಮ್ಮ ಡಿವೈಸ್ ಯಾವಾಗಲೂ ಅಭದ್ರವಾಗಿಯೇ ಇರುತ್ತದೆ. ನಮ್ಮ ಪ್ರಮುಖ ಮಾಹಿತಿಗಳು ಮತ್ತು ಹಿಂದಿನ ಡಾಟಾವನ್ನು ಸುಲಭದಲ್ಲಿ ನಾವು ಕಳೆದುಕೊಳ್ಳಬೇಕಾಗುತ್ತದೆ. ಸಮಸ್ಯೆ ಆದ ಮೇಲೆ ಚಿಂತಿಸುವುದಕ್ಕಿಂತ ಸಮಸ್ಯೆ ಬರುವ ಮುನ್ನವೇ ಕೆಲವು ಸೂಕ್ತ ಮಾರ್ಗೋಪಾಯವನ್ನು ಅನುಸರಿಸುವುದು ಒಳ್ಳೆಯದು.
ಇದಕ್ಕೆ ಮೊದಲ ಸೂಕ್ತ ಮಾರ್ಗೋಪಾಯ ಎಂದರೆ 'ಪಬ್ಲಿಕ್ ವೈಫೈ' ಅನ್ನು ಬಳಕೆ ಮಾಡದೇ ಇರುವುದು ಕೂಡ ಒಂದು. ಹೌದು ವೈಫೈಯಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅದರಿಂದ ಹ್ಯಾಕಿಂಗ್ ನಂತಹ ಕೆಟ್ಟ ಪರಿಣಾಮವೂ ಕೂಡ ಆರಂಭವಾಗುತ್ತಿದೆ. ಅದರಲ್ಲೂ ಪಬ್ಲಿಕ್ ವೈಫ್ ಬಳಕೆ ಮಾಡುವುದರಿಂದಾಗಿ ನಿಮ್ಮ ಪಾಸ್ ವರ್ಡ್ ಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಾಮಾನ್ಯ ವೈಫೈ ನಿಂದ ಹೇಗೆ ವೈಫೈ ಪಾಸ್ ವರ್ಡ್ ಗಳನ್ನು ಕದಿಯಬಹುದು ಎಂಬುದನ್ನು ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು ತಿಳಿಸಿದಾಗ ,ವೈಫೈ ಈ ವಿಧಾನದಿಂದ ಪಾಸ್ ವರ್ಡ್ ಲಭ್ಯವಾಗುವ ಸಾಧ್ಯತೆಯು ಶೇಕಡಾ 81.7 ರಷ್ಟಿರುತ್ತದೆ ಎಂದಿದ್ದಾರೆ. ಹಾಗಾಗಿ, ನಿಮ್ಮ ಮೊಬೈಲ್ ನಲ್ಲಿರುವ ಪ್ರಮುಖ ಅಂಶಗಳು ಕಳ್ಳರ ಪಾಲಾಗದಂತೆ ನಿಮ್ಮ ವೈಫೈ ಬಳಕೆ ಹೀಗಿರಲಿ.
1.ಪಬ್ಲಿಕ್ ವೈಫೈ ಗೆ ಯಾವಾಗ ನೀವು ಕನೆಕ್ಟ್ ಆಗುತ್ತೀರೋ ಆಗೇಲ್ಲಾ VPN (Virtual private network) ಬಳಕೆ ಮಾಡಿ.
2.ನಿಮ್ಮ ಪಾಸ್ ವರ್ಡ್ ಗಳನ್ನು ಆಗಾಗ ಬದಲಾಯಿಸುತ್ತಾ ಇರಿ ಮತ್ತು ಅದು ಕಠಿಣವಾಗಿರುವ ಪಾಸ್ ವರ್ಡ್ ಗಳಾಗಿರಲಿ. ಯಾರೂ ಕೂಡ ಸುಲಭದಲ್ಲಿ ಗೆಸ್ ಮಾಡುವಂತಿರಬಾರದು.
3.ಅನಗತ್ಯವಾಗಿದ್ದಾಗ ಪಬ್ಲಿಕ್ ವೈಫೈ ಗಳನ್ನು ಬಳಸಬೇಡಿ. ತೀರಾ ಅನಿವಾರ್ಯ ಸಂದರ್ಭದಲ್ಲಿ ಸೆಕ್ಯುರಿಟಿಯ ಮೇಲೆ ಬಳಕೆ ಮಾಡಿ.
4 ಪಬ್ಲಿಕ್ ವೈಫೈಗೆ ಸ್ವಯಂಚಾಲಿತವಾಗಿ ನಿಮ್ಮ ಡಿವೈಸ್ ಕನೆಕ್ಟ್ ಆಗುವ ಆಯ್ಕೆಯನ್ನು ಡಿಸೇಬಲ್ ಮಾಡಿ.
5. ನಿಮ್ಮ ವೈಫೈ ನೆಟ್ ವರ್ಕ್ ಅನ್ನು ಇತರರು ಬಳಸದಂತೆ ಲಾಕ್ ಮಾಡಿ ಇಡಿ.
6. ಸರಿಯಾದ ಫೈಯರ್ ವಾಲ್ ಗಳನ್ನು ಬಳಕೆ ಮಾಡಿ ಮತ್ತು ನಿಮ್ಮ ಡಿವೈಸ್ ಗೆ ಆಂಟಿ ವೈರಸ್ ಸಾಫ್ಟ ವೇರ್ ಅನ್ನು ಬಳಸಿ.
ಆನ್‌ಲೈನ್ ಹಣ ವಹಿವಾಟು ನಡೆಸುವವರಿಗೆ ಭರ್ಜರಿ ಸಿಹಿಸುದ್ದಿ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090