Subscribe to Gizbot

ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

Written By:

ಕಂಪ್ಯೂಟರ್, ಮೊಬೈಲ್‌, ಟ್ಯಾಬ್‌ ಯಾವುದೇ ಇರಲಿ ಎಲ್ಲಾ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್‌ ಆಗುವುದು ಸಹಜ.! ಹೀಗೆ ಯಾವುದೇ ಡಿವೈಸ್ ಹ್ಯಾಂಗ್ ಆದರೆ ನಮಗೆ ಮೊದಲು ನೆನಪಾಗುವ ರಿಪೇರಿ ಎಂದರೆ ಅದು ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ವಿಚ್ ಮಾಡುವುದು. ಇದನ್ನೇ ತಂತ್ರಜ್ಞಾನ ಪರಿಭಾಷೆಯಲ್ಲಿ ರೀಸ್ಟಾರ್ಟ್ ಪರಿಹಾರ.!!

ಅಯ್ಯೋ ಇದರಲ್ಲೇನು ವಿಶೇಷವಿದೆ ಎಂದು ನೀವು ಕೇಳಬಹುದು. ಆದರೆ, ನಿಮಗಿದು ವಿಶೇಷವಲ್ಲದಿದ್ದರೂ ಗ್ಯಾಜೆಟ್ ಪ್ರಪಂಚಕ್ಕೆ ರೀಸ್ಟಾರ್ಟ್ ಪರಿಹಾರವೇ ಮುಖ್ಯ.! ಮನುಷ್ಯ ಮಲಗಿ ಎದ್ದು ಫ್ರೆಶ್ ಆಗಿ ಕಾರ್ಯನಿರ್ವಹಿಸುವಂತೆ ಸ್ಮಾರ್ಟ್‌ಫೋನ್‌ಗಳು ಕೂಡ ಸ್ವಿಚ್ ಆಫ್ ಮಾಡಿ ಆನ್ ಮಾಡಿದ ನಂತರ ಉತ್ತಮ ಕಾರ್ಯನೀಡುವಂತೆ ಮಾಡುತ್ತದೆ ಈ ರೀಸ್ಟಾರ್ಟ್ ಆಯ್ಕೆ.!!

ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

ಯಾವುದೇ ಮೊಬೈಲ್ ಡಿವೈಸ್  ಕಾರ್ಯಾಚರಣೆ ನೀಡದಿದ್ದರೂ ಬಹುತೇಕ ಪರಿಹಾರವನ್ನು ಒದಗಿಸುವ ಏಕೈಕ ರಹದಾರಿಯಾದ ಈ ರೀಸ್ಟಾರ್ಟ್ ಆಯ್ಕೆ ಬಹುತೇಕ ಎಲ್ಲರಿಗೂ ತಿಳಿದಿದ್ದರೂ, ಡಿವೈಸ್ ಹ್ಯಾಂಗ್ ಆದಾಗ ರೀಸ್ಟಾರ್ಟ್ ಆಯ್ಕೆಯನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಬೇಕು. ಇಲ್ಲದಿದ್ದರೆ ಕೆಲವೊಮ್ಮೆ ಸಮಸ್ಯೆ ಎದುರಿಸಬೇಕಾಗಬಹುದು.!!

ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

ಮೊಬೈಲ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ ಹೀಗೆ ಯಾವುದೇ ಡಿವೈಸ್ ಹ್ಯಾಂಗ್‌ ಆಗುತ್ತಿದೆ ಎಂದು ಗೊತ್ತಾದಾಗ ಕೆಲಸ ಮಾಡುತ್ತಿರುವ ಫೈಲ್‌ಗಳನ್ನು ಮೊದಲು ಸೇವ್ ಮಾಡಿಕೊಳ್ಳಿ. ಬಳಿಕ ರೀಸ್ಟಾರ್ಟ್ ಮಾಡಿ. ಈ ಸಮಯದಲ್ಲಿ ಮೊಬೈಲ್ ಅನ್ನು ಪಟಪಟನೆ ಬಡಿಯುವುದು ಹಾಗೂ ಪವರ್‌ ಬಟನ್ ಅನ್ನು ಮತ್ತೆ ಮತ್ತೆ ಒತ್ತುವುದು ಮಾಡಲೇಬೇಡಿ.!!

ಮೊಬೈಲ್ ಹ್ಯಾಂಗ್ ಆಗುತ್ತಿದ್ದರೆ ರೀಸ್ಟಾರ್ಟ್ ಪರಿಹಾರ ಹೀಗಿರಲಿ.!!

ಒಂದು ವೇಳೆ ಯಾವುದೇ ಆಯ್ಕೆಗಳಿಗೆ ನಿಮ್ಮ ಕಂಪ್ಯೂಟರ್ ಸ್ಪಂದಿಸುತ್ತಿಲ್ಲ ಎಂದಾದರೆ ಅದು ಆಫ್‌ ಆಗುವವರೆಗೂ ಪವರ್‌ ಬಟನ್‌ ಅನ್ನು ಒತ್ತಿ ಹಿಡಿಯಿರಿ. ಸ್ವಲ್ಪ ಸಮಯ ಬಿಟ್ಟು ಮತ್ತೆ ಪವರ್ ಬಟನ್ ಒತ್ತಿದರೆ ಡಿವೈಸ್ ಆನ್ ಆಗುತ್ತದೆ. ರೀಸ್ಟಾರ್ಟ್ ಎಂಬುದು ಒಂದು ತಾತ್ಕಾಲಿಕ ಪರಿಹಾರವಷ್ಟೆ ಎಂಬುದನ್ನು ತಿಳಿಯಿರಿ.ಡಿವೈಸ್‌ಗಳು ಯಾವಾಗಲೂ ಹ್ಯಾಂಗ್‌ ಆಗುತ್ತಿದ್ದರೆ ಸರ್ವಿಸ್‌ ಮಾಡಿಸುವುದು ಅಗತ್ಯ.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: 10 ಲಕ್ಷ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಕಾರಿನ ವಿಡಿಯೋ ಚಿತ್ರೀಕರಣ!!

English summary
Hold the power button down until you see the boot menu then hit Power off. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot