Home
ಸುದ್ದಿಜಾಲ

10 ಲಕ್ಷ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಕಾರಿನ ವಿಡಿಯೋ ಚಿತ್ರೀಕರಣ!!

ಭೂಮಿಗಿಂತ ಸುಮಾರು 10 ಲಕ್ಷ ಕಿ.ಮೀ. ದೂರದಲ್ಲಿ ಪರಿಭ್ರಮಣೆ ಕೈಗೊಳ್ಳುತ್ತಿರುವ ಕಾರನ್ನು ಹವ್ಯಾಸಿ ಸೌರಮಂಡಲ ಫೋಟೋಗ್ರಾಫರ್ ಓರ್ವರು ವಿಡಿಯೋ ಚಿತ್ರೀಕರಣ ಮಾಡಿ ಗಮನಸೆಳೆದಿದ್ದಾರೆ.

By Bhaskar N J

ಭೂಮಿಗಿಂತ ಸುಮಾರು 10 ಲಕ್ಷ ಕಿ.ಮೀ. ದೂರದಲ್ಲಿ ಪರಿಭ್ರಮಣೆ ಕೈಗೊಳ್ಳುತ್ತಿರುವ ಕಾರನ್ನು ಹವ್ಯಾಸಿ ಸೌರಮಂಡಲ ಫೋಟೋಗ್ರಾಫರ್ ಓರ್ವರು ವಿಡಿಯೋ ಚಿತ್ರೀಕರಣ ಮಾಡಿ ಗಮನಸೆಳೆದಿದ್ದಾರೆ. ಎಲೊನ್ ಮಸ್ಕ್ ನೇತೃತ್ವದಲ್ಲಿ ಬಾಹ್ಯಾಕಾಶಕ್ಕೆ ತೆರಳಿರುವ ಮೊದಲ ಕಾರು ಫೋಟೋಗ್ರಾಫರ್ ರೊಗೆಲಿಯೊ ಬರ್ನಲ್ ಆಂಡ್ರಿಯೊ ಕ್ಯಾಮೆರಾಗೆ ಸಿಕ್ಕಿದೆ.!!

ಹೌದು, ಬಾಹ್ಯಾಕಾಶದಲ್ಲಿ ನಕ್ಷತ್ರಗಳ ಸಾಲಿನ ಮಧ್ಯೆ ಟೆಸ್ಲಾ ರೋಡ್​ಸ್ಟರ್ ಕಾರು ಸುತ್ತುತ್ತಿರುವ ಸುಮಾರು 2 ಗಂಟೆಗಳ ವಿಶೇಷ ವಿಡಿಯೋವನ್ನು ಹವ್ಯಾಸಿ ಸೌರಮಂಡಲ ಫೋಟೋಗ್ರಾಫರ್ ರೊಗೆಲಿಯೊ ಬರ್ನಲ್ ಆಂಡ್ರಿಯೊ ಚಿತ್ರಿಸಿದ್ದಾರೆ. ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬ್​ನ ವಿಶೇಷ ಟೆಲಿಸ್ಕೋಪ್ ಕ್ಯಾಮರಾ ಮೂಲಕ ಆಂಡ್ರಿಯೊ ಟೆಸ್ಲಾದ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ.

 10 ಲಕ್ಷ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಕಾರಿನ ವಿಡಿಯೋ ಚಿತ್ರೀಕರಣ!!

ಭೂಮಿಗೆ ಸಮೀಪದಲ್ಲಿ ಮತ್ತು ಸ್ಪಷ್ಟವಾಗಿ ಕಾರಿನ ಪರಿಭ್ರಮಣೆ ಸಮಯವನ್ನು ಅವರು ಲೆಕ್ಕಹಾಕಿ ರೊಗೆಲಿಯೊ ಬರ್ನಲ್ ಆಂಡ್ರಿಯೊ ಕಾರ್ಯ ಕೈಗೊಂಡಿದ್ದಾರೆ.! ಫೆಬ್ರವರಿ 8ನೇ ತಾರೀಖಿನ ರಾತ್ರಿಯಿಡೀ ಕಾದು ಕುಳಿತು ಬೆಳಗಿನ ಜಾವ ಸುಮಾರು 2 ಗಂಟೆಗೆ ಅವರಿಗೆ ಕಾರಿನ ಚಲನೆ ಗೋಚರವಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.!!

 10 ಲಕ್ಷ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಕಾರಿನ ವಿಡಿಯೋ ಚಿತ್ರೀಕರಣ!!

ಇನ್ನು ಟೆಸ್ಲಾ ರೋಡ್​ಸ್ಟರ್ ಕಾರು ಭೂಮಿಗೆ ಸಮೀಪದಲ್ಲಿ ಮತ್ತು ಅಷ್ಟೊಂದು ಸ್ಪಷ್ಟವಾಗಿ ಕಾರಿನ ಪರಿಭ್ರಮಣೆ ಮುಂದೆ ಮತ್ತೊಮ್ಮೆ 90 ವರ್ಷದ ನಂತರ ಗೋಚರಿಸಬಹುದು ಎಂದು ಅಂದಾಜಿಸಲಾಗಿದೆ. ಸೌರಮಂಡಲದಲ್ಲಿನ ಆಕಾಶಕಾಯಗಳ ಚಿತ್ರಗಳನ್ನು ಸೆರೆಹಿಡಿಯುವುದು ಅತ್ಯಂತ ಕಷ್ಟದ ಕೆಲಸವನ್ನು ಆಂಡ್ರಿಯೊ ಯಶಸ್ವಿಯಾಗಿ ಪೂರೈಸಿದ್ದಾರೆ.!!

ಅಮೆರಿಕದ ಆಟೋಮೊಬೈಲ್ ಕಂಪೆನಿ ಟೆಸ್ಲಾ ಮತ್ತು ಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಎಲೊನ್ ಮಸ್ಕ್ ನೇತೃತ್ವದಲ್ಲಿ ಸೌರಮಂಡಲ ಪರಿಭ್ರಮಣೆಗೆ ಟೆಸ್ಲಾ ರೋಡ್​ಸ್ಟರ್ ಮಾದರಿ ಕಾರನ್ನು ಫಾಲ್ಕನ್ ಹೆವಿ ರಾಕೆಟ್ ಮೂಲಕ ಕಳುಹಿಸಿದ್ದವು. ಈ ಯೋಜನೆ ಖಾಸಾಗಿ ವಲಯದಲ್ಲಿಯೇ ಅದ್ಬುತ ಎನ್ನಬಹುದಾದ ಯೋಜನೆಯಾಗಿ ವಿಶ್ವದ ಗಮನಸೆಳೆದಿತ್ತು.!!

ಓದಿರಿ: ಸ್ವಯಂಚಾಲಿತ ವಾಹನಕ್ಕಾಗಿಯೇ ಸೃಷ್ಟಿಯಾಗಿದೆ ಅದ್ಬುತ ಪ್ರೊಸೆಸರ್!!

Best Mobiles in India

English summary
Whatever your spin is on the SpaceX launch of the Falcon Heavy and the stunt of Starman and the Roadster, it put on our radar topics such as space and space missions, rockets, interplanetary travel or technological advances. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+