ನಿಮ್ಮ ಫೋನಿನಲ್ಲಿ ಈ ಆಪ್ ಇದ್ದರೇ ಮೊದಲು ತೆಗೆದು ಬಿಡಿ..!!
ನೀವು ಬಳಸುತ್ತಿರುವ ಆಪ್‌ಗಳು ಕಾರಣವಾಗಿರಬಹುದು, ಈ ಹಿನ್ನಲೆಯಲ್ಲಿ ಅವುಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚಿಸಿಕೊಳ್ಳಬಹುದು. ಅವುಗಳ ಕುರಿತ ಮಾಹಿತಿ ಇಲ್ಲಿದೆ.
ನಿಮ್ಮ ಪೋನ್ ಬ್ಯಾಟರಿ ಬಹು ಬೇಗನೇ ಖಾಲಿಯಾಗಲಿದೆಯೇ? ಇದಕ್ಕೆ ಕಾರಣ ನೀವು ಕೊಂಡಿರುವ ಸ್ಮಾರ್ಟ್‌ಫೋನ್ ಮಾತ್ರವಲ್ಲ, ನೀವು ಅದರಲ್ಲಿ ಬಳಸುತ್ತಿರುವ ಆಪ್‌ಗಳು ಕಾರಣವಾಗಿರಬಹುದು, ಈ ಹಿನ್ನಲೆಯಲ್ಲಿ ಅವುಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚಿಸಿಕೊಳ್ಳಬಹುದು. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಓದಿರಿ: ಫೇಸ್‌ಬುಕ್ ನಲ್ಲಿ ವೈರಲ್ ಆಗಿರುವ ಸರಹಾ ಆಪ್ ಬಗ್ಗೆ ನಿಮಗೆಷ್ಟು ಗೊತ್ತು? ಬಳಸುವುದು ಹೇಗೆ?
ಇಂದಿನ ದಿನದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಮಗೆ ಬೇಕಾದ-ಬೇಡವಾದ ಎಲ್ಲಾ ಆಪ್‌ಗಳನ್ನು ತುಂಬಿಸಿಕೊಂಡಿದ್ದೇವೆ. ಇವುಗಳು ಬ್ಯಾಟರಿ ಲೈಫ್ ಅನ್ನು ಕಡಿಮೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಅನ್‌ಇನ್ಟಾಲ್ ಮಾಡುವುದು ಸೂಕ್ತ.

ಸ್ಯಾಮ್‌ಸಂಗ್ ಆಲ್ ಶೇರ್:
ಸ್ಯಾಮ್ ಸಂಗ್ ಮೊಬೈಲ್‌ಗಳ ಬ್ಯಾಟರಿ ಲೈಫ್ ಕಡಿಮೆ ಮಾಡುವ ಆಪ್‌ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಸ್ಯಾಮ್‌ಸಂಗ್ ಆಲ್ ಶೇರ್ ಈ ಆಪ್ ತೆಗೆದು ಹಾಕುವುದು ಉತ್ತಮ.

ಸ್ಮಾಮ್‌ಸಂಗ್ ಸೆಕ್ಯೂರಿಟಿ ಪಾಲಿಸಿ ಆಪ್‌ಡೇಟ್:
ಸ್ಯಾಮ್ ಸಂಗ್ ಮೊಬೈಲ್‌ಗಳ ಕಂಡುಬರುವಂತಹ ಈ ಆಪ್ ಸಹ ಬ್ಯಾಟರಿ ಬೇಗನೇ ಖಾಲಿಯಾಗಲು ಕಾರಣವಾಗಿದೆ. ಇದು ಬಳಕೆಗೆ ಸೂಕ್ತವಲ್ಲ.

ಬಿಮಿಂಗ್ ಸರ್ವಿಸ್ ಫಾರ್ ಸ್ಮಾಮ್‌ಸಂಗ್:
ಈ ಬಿಮಿಂಗ್ ಸರ್ವಿಸ್ ಫಾರ್ ಸ್ಮಾಮ್‌ಸಂಗ್ ಆಪ್ ಸಹ ಬ್ಯಾಟರಿ ಬಾಳಿಕೆಯನ್ನು ಕುಗ್ಗಿಸುತ್ತದೆ. ಇದನ್ನು ಅನ್‌ಇನ್ಟಾಲ್ ಮಾಡುವುದು ಸೂಕ್ತ.

ಚಾಟ್‌ಆನ್ ವಾಯ್ಸ್ & ವಿಡಿಯೋ ಚಾಟ್:
ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಮಾಡುವ ಅಪ್‌ಗಳ ಸಾಲೀನಲ್ಲಿ ಮೊದಲ ನಾಲ್ಕು ಸ್ಥಾನ ಸ್ಯಾಮ್‌ಸಂಗ್ ಆಪ್‌ಗಳು ಕಾಣಿಸಿಕೊಂಡಿವೆ. ಚಾಟ್‌ಆನ್ ವಾಯ್ಸ್ & ವಿಡಿಯೋ ಚಾಟ್ ಸಹ ಬೇರೆ ಆಪ್‌ಗಳಿಂತ ಹೆಚ್ಚಿನ ಬ್ಯಾಟರಿ ಹೀರುತ್ತದೆ.

ಗೂಗಲ್ ಮ್ಯಾಪ್:
ಈ ಆಪ್ ಸಹ ಸದಾ ಕಾರ್ಯಚರಣೆ ನಡೆಸುವುದರಿಂದ ಹೆಚ್ಚಿನ ಬ್ಯಾಟರಿಯನ್ನು ಬೇಡುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಬ್ಯಾಕಪ್ ಕಡಿಮೆಯಾಗಲಿದೆ. ಇದರಿಂದಾಗಿ ಇದನ್ನು ಕಡಿಮೆ ಬಳಕೆ ಮಾಡಿಕೊಳ್ಳಿ.

ವಾಟ್ಸ್‌ಆಪ್:
ಬಿಟ್ಟರಲು ಸಾಧ್ಯವಾಗದಂತಹ ಆಪ್ ವಾಟ್ಸ್‌ಆಪ್ ಸಹ ಹೆಚ್ಚಿನ ಬ್ಯಾಟರಿಯನ್ನು ಬೇಡುತ್ತದೆ. ಕಾರಣ ಹೊಸ ಹೊಸ ಆಪ್‌ಡೇಟ್‌ಗಳು ಇದಕ್ಕೆ ಕಾರಣವಾಗುತ್ತಿದೆ. ಇದರ ಬಳಕೆಯನ್ನು ಕಡಿಮೆ ಮಾಡಿದೆ.

ಫೇಸ್‌ಬುಕ್:
ಬೇಕೇ ಬೇಕು ಎನ್ನುವ ಆಪ್ ಫೇಸ್‌ಬುಕ್ ಸಹ ಬ್ಯಾಟರಿ ಬಾಳಿಕೆಯನ್ನು ಕುಗ್ಗಿಸುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಕಡಿಮೆಯಾಗುತ್ತದೆ. ಇದರ ಬದಲು ಲೈಟ್ ಆಪ್ ಬಳಕೆ ಮಾಡಿಕೊಳ್ಳಬಹುದು.

ವಿ ಚಾಟ್:
ಸೋಶಿಯಲ್ ಮೆಸೆಜಿಂಗ್ ತಾಣದಲ್ಲಿ ಸ್ಥಾನ ಪಡೆದಿರುವ ವಿ ಚಾಟ್ ಸಹ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಕಡಿಮೆ ಮಾಡಲಿದೆ. ಇದರಿಂದ ಇದನ್ನು ತೆಗೆದುಹಾಕುವುದು ಸೂಕ್ತ.

ಆಪ್ ಲಾಕ್:
ಆಪ್ ಗಳನ್ನು ಸೆಕ್ಯೂರ್ ಮಾಡುವ ಸಲುವಾಗಿ ಬಳಕೆ ಮಾಡುವ ಆಪ್ ಲಾಕ್ ಸಹ ನಿಮ್ಮ ಬ್ಯಾಟರಿಯನ್ನು ಬಹುಬೇಗನೇ ಹಿರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್ ಬೇಗನೇ ಬ್ಯಾರಿ ಡೌನ್ ಆಗಲಿದೆ.

DU ಬ್ಯಾಟರಿ ಸೇವರ್:
ಹೆಸರು ಮಾತ್ರವೇ ಬ್ಯಾಟರಿ ಸೇವರ್, ಈ ಆಪ್ ಹಾಕಿಕೊಂಡರೆ ನಿಮ್ಮ ಮೊಬೈಲ್ ಬ್ಯಾಟರಿ ಇನ್ನು ವೇಗವಾಗಿ ಖಾಲಿಯಾಗಲಿದೆ. ಈ ಆಪ್ ರನ್ ಆಗಲೇ ಹೆಚ್ಚಿನ ಬ್ಯಾಟರಿಯ ಅವಶ್ಯಕತೆ ಇದೆ.


Click it and Unblock the Notifications








