ಫೇಸ್‌ಬುಕ್ ನಲ್ಲಿ ವೈರಲ್ ಆಗಿರುವ ಸರಹಾ ಆಪ್ ಬಗ್ಗೆ ನಿಮಗೆಷ್ಟು ಗೊತ್ತು? ಬಳಸುವುದು ಹೇಗೆ?

ಈ ಆಪ್ ಶೇರ್ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸರಹಾ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ, ಈ ಆಪ್ ವಿಶೇಷಯತೆಗಳೇನು ಎಂಬುದನ್ನು ನಿಮಗೆ ಪರಿಚಯಿಸುವ ಪ್ರಯತ್ನ ಇದಾಗಿದೆ.

|

ಕಳೆದ ಎರಡು ದಿನಗಳಿಂದ ಆನ್‌ಲೈನಿನಲ್ಲಿ ಆಪ್ ವೊಂದು ಭಾರೀ ವೈರಲ್ ಆಗಿದೆ. ಅದುವೇ ಸರಹಾ ಆಪ್, ಫೇಸ್‌ಬುಕ್-ಟ್ವೀಟರ್ ನಲ್ಲಿ ಈ ಆಪ್ ಶೇರ್ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸರಹಾ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ, ಈ ಆಪ್ ವಿಶೇಷತೆಗಳೇನು ಎಂಬುದನ್ನು ನಿಮಗೆ ಪರಿಚಯಿಸುವ ಪ್ರಯತ್ನ ಇದಾಗಿದೆ.

ಓದಿರಿ: ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಫೇಸ್‌ಬುಕ್ ನಲ್ಲಿ ವೈರಲ್ ಆಗಿರುವ ಸರಹಾ ಆಪ್ ಬಗ್ಗೆ ನಿಮಗೆಷ್ಟು ಗೊತ್ತು?

ಇದೊಂದು ಸೋಶಿಯಲ್ ಮೆಸೆಂಜಿಂಗ್ ಆಪ್ ಆಗಿದ್ದು, ಇದೊಂದು ವಿಚಿತ್ರ ಆಪ್ ಎಂದರೂ ತಪ್ಪಾಗುವುದಿಲ್ಲ. ಇಲ್ಲಿ ನೀವು ಕಳುಹಿಸುವ ಮೇಸೆಜ್ ಸ್ವೀಕರಿಸುವರಿಗೆ ನಿವ್ಯಾರು ಎಂದು ತಿಳಿಯುವುದಿಲ್ಲ ಮತ್ತು ನೀವು ಯಾರಿಗೆ ಬೇಕಾದರು ಮೇಸೆಜ್ ಕಳುಹಿಸಬಹುದು.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಆಂಡ್ರಾಯ್ಡ್ ಮತ್ತು iOS ಆಪ್ ಲಭ್ಯ:

ಆಂಡ್ರಾಯ್ಡ್ ಮತ್ತು iOS ಆಪ್ ಲಭ್ಯ:

ಮೊದಲಿಗೆ ವೆಬ್ ಮಾತ್ರವೇ ಲಭ್ಯವಿದ್ದ ಈ ಆಪ್, ಸದ್ಯ ಆಂಡ್ರಾಯ್ಡ್ ಮತ್ತು iOS ಆಪ್ ನಲ್ಲಿ ಕಾಣಿಸಿಕೊಂಡಿದ್ದು, ಆಪ್ ಬಿಡುಗಡೆಯಾದ ಮೇಲೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದನ್ನು ಸೌದಿ ಅರೆಬಿಯಾ ಡೆವಲಪರ್ ಅಬಿದಿನ್ ತವ್ಫಿಕ್ ಎನ್ನುವವರು ಅಭಿವೃದ್ದಿ ಪಡಿಸಿದ್ದಾರೆ.

ಈ ಆಪ್ ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟ:

ಈ ಆಪ್ ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟ:

ಇತರೆ ಮೆಸೆಂಜಿಂಗ್ ಆಪ್ ಗಳಿಗೆ ಹೋಲಿಸಿದರೆ ಈ ಆಪ್ ಬಳಕೆ ಮಾಡುವುದು ಕೊಂಚ ಕಷ್ಟ ಮತ್ತು ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೆ ಕಷ್ಟವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ಆಯ್ಕೆಗಳು ಬಳಕೆದಾರರನ್ನು ಗಲಿಬಿಲಿಗೊಳಿಸಲಿದೆ.

ಬಳಕೆ ಮಾಡುವುದು ಹೇಗೆ.?

ಬಳಕೆ ಮಾಡುವುದು ಹೇಗೆ.?

ಈ ಆಪ್ ಅನ್ನು ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ಅನಾಮಧೇಯರಾಗಿ ಮೇಸೆಜ್ ಮಾಡಬಹುದಾಗಿದೆ, ಅಲ್ಲದೇ ಅದನ್ನು ಯಾರಿಗೇ ಬೇಕಾದರು ಕಳುಹಿಸಬಹುದು. ಕಳುಹಿಸಿದರವ ಯಾವ ವಿವರ ಅಲ್ಲಿ ಇರುವುದಿಲ್ಲ. ಮತ್ತು ಈ ಮೇಸೆಜ್ ಗೆ ರೀಪ್ಲೇಯನ್ನು ಮಾಡಲು ಸಾಧ್ಯವಿಲ್ಲ. ಮುಂದೆ ರೀಪ್ಲೇ ಮಾಡುವ ಆಯ್ಕೆಯೂ ಬರಬಹುದು.

ರಿಜಿಸ್ಟರ್ ಆಗಬೇಕು:

ರಿಜಿಸ್ಟರ್ ಆಗಬೇಕು:

ಆಪ್ ಡೌನ್‌ಲೋಡ್ ಮಾಡಿಕೊಂಡು ಈಮೇಲ್ ಐಡಿ, ಪಾಸ್‌ವರ್ಡ್ ಮತ್ತು ಹೆಸರನ್ನು ನೀಡಿ ರಿಜಿಸ್ಟರ್ ಆಗಬೇಕು, ನಂತರ ಫೇಸ್‌ಬುಕ್ ಇಲ್ಲವೇ ಟ್ವೀಟರ್ ಮೂಲಕ ನೀವು ರಿಜಿಸ್ಟರ್ ಆಗಿರುವುದನ್ನು ನಾಲ್ಕು ಜನರಿಗೆ ತಿಳಿಸಬೇಕು. ಆಗ ಮಾತ್ರವೇ ನಿಮ್ಮ ಯೂಸರ್ ಐಡಿಯಲ್ಲಿ ನಿಮ್ಮನ್ನು ಹುಡುಕಿ ಮೇಸೆಜ್ ಮಾಡಬಹುದು.

ಆದರೆ ಎಚ್ಚರ:

ಆದರೆ ಎಚ್ಚರ:

ಈಗಾಗಲೇ ಈ ಆಪ್ ಬಳಕೆಯ ಬಗ್ಗೆ ಅಪಸ್ವರಗಳು ಎದ್ದಿವೆ, ಇದನ್ನು ಬ್ಲಾಕ್ ಮೇಲ್ ಮಾಡಲು, ಹೆದರಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ರೀಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲು ಹೋಗಿ ಜೈಲು ಪಾಲಾಗಬೇಕಾಗುತ್ತದೆ, ಕೇವಲ ಫನ್ ಗಾಗಿ ಇದನ್ನು ಬಳಕೆ ಮಾಡಿಕೊಂಡರೆ ಸೂಕ್ತ,.

Best Mobiles in India

Read more about:
English summary
millions of web users have as they see the Sarahah app popping up on their Facebook feeds. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X