Home
ಟೆಕ್ ನೌಕರಿ

ನಿಮ್ಮ ವಾಟ್ಸಾಪ್‌ ವಿಡಿಯೋ ಕ್ವಾಲಿಟಿ ಹೆಚ್ಚಾಗಬೇಕೆ?..ಹಾಗಿದ್ರೆ, ಈ ಕೆಲಸ ಮಾಡಿ!

ಸದ್ಯ ವಿಡಿಯೋ ಕರೆ ಬಹು ಉಪಯುಕ್ತ ಸೇವೆ ಆಗಿದ್ದು, ಹೆಚ್ಚು ಬಳಕೆಯಲ್ಲಿದೆ. ಜನಪ್ರಿಯ ವಾಟ್ಸಾಪ್‌ ಮೆಸೆಜ್‌ ಆಪ್‌ ಸಹ ವೀಡಿಯೊ ಕರೆ ಫೀಚರ್‌ ಅನ್ನು ತನ್ನ ಬಳಕೆದಾರರಿಗೆ ಲಭ್ಯ ಮಾಡಿದ್ದು, ಹಲವು ಅನುಕೂಲಕರ ಫೀಚರ್ಸ್‌ ಸೇರ್ಪಡೆ ಮಾಡಿದೆ. ಇನ್ನು ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿದಾಗ ವಿಡಿಯೋ ಕ್ವಾಲಿಟಿ ಅತ್ಯುತ್ತಮವಾಗಿ ಇರಬೇಕೆ? ಹಾಗಿದ್ರೆ ನೀವು ಈ ಕೆಲಸ ಮಾಡುವುದು ಉತ್ತಮ.

ಹೌದು, ವಾಟ್ಸಾಪ್‌ ಆಪ್‌ ವಿಡಿಯೋ ಕರೆ ಆಯ್ಕೆ ಹೆಚ್ಚು ಜನಪ್ರಿಯ ಆಗಿದ್ದು, ಹೆಚ್ಚಿಗಿ ಬಳಕೆಯಲ್ಲಿಯೂ ಇದೆ. ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ವಿಡಿಯೋ ಕರೆಗಳಿಗೂ ಸುರಕ್ಷತೆ ಹೊಂದಿದ್ದು, ಆಡಿಯೋ ಗುಣಮಟ್ಟವು ಉತ್ತಮವಾಗಿದೆ. ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡುವ ಪ್ರಕ್ರಿಯೆ ಸಹ ಬಲು ಸುಲಭವಾಗಿದೆ.

ನಿಮ್ಮ ವಾಟ್ಸಾಪ್‌ ವಿಡಿಯೋ ಕ್ವಾಲಿಟಿ ಹೆಚ್ಚಾಗಬೇಕೆ?..ಹಾಗಿದ್ರೆ, ಈ ಕೆಲಸ ಮಾಡಿ!

ಹಾಗೆಯೇ ಗ್ರೂಪ್ ವಿಡಿಯೋ ಕರೆ ಮಾಡಲು ಅವಕಾಶ ಇದ್ದು, ಏಕಕಾಲದಲ್ಲಿ ಒಟ್ಟು 32 ಸದಸ್ಯರನ್ನು ವಿಡಿಯೋ ಕರೆಗೆ ಸೇರ್ಪಡೆ ಮಾಡಬಹುದಾಗಿದೆ. ಇನ್ನು ವಾಟ್ಸಾಪ್‌ ವಿಡಿಯೋ ಕರೆ ಗುಣಮಟ್ಟ ಅತ್ಯುತ್ತಮವಾಗಿ ಇರಬೇಕಿದ್ದರೆ, ಯಾವೆಲ್ಲ ಅಂಶಗಳು ಅಗತ್ಯ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಿ: ಬಳಕೆದಾರರೇ, ನಿಮ್ಮ ವಾಟ್ಸಾಪ್‌ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಿರಿ. ಅಪ್‌ಡೇಟ್ ಮಾಡುವುದರಿಂದ ವಾಟ್ಸಾಪ್‌ನ ನೂತನ ಸೇವೆಗಳು ಹಾಗೂ ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿವೆ. ಅಲ್ಲದೇ ಸ್ಥಿರ ಮತ್ತು ಉತ್ತಮ ಸೇವೆ ಪಡೆಯಲು ಇದು ನೆರವಾಗಲಿದೆ. ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ ಮೂಲಕ ವಾಟ್ಸಾಪ್‌ ಆಪ್‌ ಅನ್ನು ಅಪ್‌ಡೇಟ್‌ ಮಾಡಬಹುದು.

ವಾಟ್ಸಾಪ್‌ Cache ಡೇಟಾ ಕ್ಲಿಯರ್‌ ಮಾಡಿ: ನಿಮ್ಮ ವಾಟ್ಸಾಪ್‌ ಆಪ್‌ ಸರಿಯಾಗಿ ಕಾರ್ಯನಿರ್ವಹಿಸಲು, Cache ಡೇಟಾ ಕ್ಲಿಯರ್‌ ಮಾಡುವುದು ಉತ್ತಮ ಆಯ್ಕೆ. ಇದ್ರಿಂದ ಬಳಕೆದಾರರು ಸುಲಭ/ ಸರಳ ಸೇವೆ ಪಡೆಯಬಹುದಾಗಿದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೆನು ಕಾಣಿಸುವ ವರೆಗೆ ವಾಟ್ಸಾಪ್‌ ಆಪ್‌ ಐಕಾನ್ ಅನ್ನು ಒತ್ತಿ ಮತ್ತು ಹಿಡಿಯಿರಿ.
* ಆಪ್‌ ಮಾಹಿತಿ ಬಟನ್ ಮೇಲೆ ಕ್ಲಿಕ್ ಮಾಡಿ
* ಸ್ಟೋರೇಜ್‌ ಬಳಕೆಗೆ ಹೋಗಿ
* ಕ್ಲಿಯರ್ Cache ಮೇಲೆ ಕ್ಲಿಕ್ ಮಾಡಿ.

ಮೊಬೈಲ್‌ ಡೇಟಾ ಸೇವರ್‌ ಮೋಡ್‌ ಆಫ್‌ ಮಾಡುವುದು ಉತ್ತಮ : ವಾಟ್ಸಾಪ್‌ ಬಳಕೆದಾರರೇ, ಅತ್ಯುತ್ತಮ ಗುಣಮಟ್ಟದ ವಿಡಿಯೋ ಕರೆ ಸೌಲಭ್ಯಕ್ಕಾಗಿ ನಿಮ್ಮ ಮೊಬೈಲ್‌ ಡೇಟಾ ಸೇವರ್ ಮೋಡ್ ಅನ್ನು ಆಫ್ ಮಾಡುವುದು ಸೂಕ್ತ. ಡೇಟಾ ಸೇವರ್ ಆಫ್ ಮಾಡಲು ಈ ಕ್ರಮ ಫಾಲೋ ಮಾಡಿ. ಸಿಮ್‌ ಕಾರ್ಡ್ ಮತ್ತು ಮೊಬೈಲ್ ಡೇಟಾ > ಡೇಟಾ ಬಳಕೆಗೆ ಭೇಟಿ ನೀಡಿ > ಡೇಟಾ ಸೇವಿಂಗ್ ಮೇಲೆ ಕ್ಲಿಕ್ ಮಾಡಿ > ಡೇಟಾ ಸೇವರ್ ಮೋಡ್‌ಗಾಗಿ ಟಾಗಲ್ ಅನ್ನು ಆಫ್ ಮಾಡಿರಿ.

ಮೊಬೈಲ್‌ ಬ್ಯಾಟರಿ ಸೇವರ್ ಮೋಡ್ ಆಫ್‌ ಮಾಡಿರಿ : ವಾಟ್ಸಾಪ್‌ ವಿಡಿಯೋ ಕರೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಕ್ವಾಲಿಟಿ ಸೇವೆಗಾಗಿ ನಿಮ್ಮ ಮೊಬೈಲ್‌ನಲ್ಲಿ ಬ್ಯಾಟರಿ ಸೇವರ್ ಮೋಡ್ ಆಯ್ಕೆ ಅನ್ನು ಆಫ್‌ ಮಾಡುವುದು ಉತ್ತಮ ಆಯ್ಕೆ ಆಗಿದೆ. ಬ್ಯಾಟರಿ ಸೇವರ್ ಮೋಡ್ ಅಧಿಕ ಇಂಟರ್ನೆಟ್ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊಬೈಲ್‌ ಬ್ಯಾಟರಿ ಸೇವರ್ ಮೋಡ್ ಆಯ್ಕೆಯನ್ನು ಆಫ್ ಮಾಡುವುದು ಉತ್ತಮ.

Best Mobiles in India

English summary
how to increase video quality on WhatsApp: follow these useful tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+