ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

Posted By:

ಗೂಗಲ್‌ ನಿನ್ನೆ ತನ್ನ ನೆಕ್ಸಸ್‌ 5 ಸ್ಮಾರ್ಟ್‌ಫೋನನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಗೂಗಲ್‌ ಪ್ಲೇ ಸ್ಟೋರ್‌‌ನಿಂದ ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸಬಹುದು ಎಂದು ಹೇಳಿದೆ.ಹೀಗಾಗಿ ಬಹುತೇಕ ಜನರಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌ಗಳನ್ನು ಡೌನ್‌ಲೋಡ್‌‌ ಮಾಡಿ ಗೊತ್ತು. ಆದರೆ ಸ್ಮಾರ್ಟ್‌ಫೋನ್‌ ಖರೀದಿಸುವದರ ಬಗ್ಗೆ ಹಲವರಲ್ಲಿ ಗೊಂದಲವಿದೆ.

ಈ ಗೊಂದಲವನ್ನು ನಿವಾರಿಸುವುದಕ್ಕಾಗಿ ಇಲ್ಲಿ ಹೊಸದಾಗಿ ಸ್ಮಾರ್ಟ್‌ಫೋನ್‌ನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಖರೀದಿಸಿದರೆ ಏನು ಲಾಭ ಮತ್ತು ಯಾವ ರೀತಿ ಖರೀದಿಸಬಹುದು ಎನ್ನುವುದರ ಬಗ್ಗೆ ವಿವರವಿದೆ.ಪುಟ ತಿರುಗಿಸಿ ಓದಿಕೊಂಡು ಹೋಗಿ.

ನೆಕ್ಸಸ್‌ 5 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರೆಡಿಟ್ ಕಾರ್ಡ್‌/ಡೆಬಿಟ್‌ ಕಾರ್ಡ್:

ಕ್ರೆಡಿಟ್ ಕಾರ್ಡ್‌/ಡೆಬಿಟ್‌ ಕಾರ್ಡ್:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನನ್ನು ನಿನ್ನೆಯಿಂದ ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಿಂದ ಮಾರಲು ಆರಂಭಿಸಿದೆ. 16GB ಸ್ಮಾರ್ಟ್‌ಫೋನಿಗೆ 28,999, 32GB ಸ್ಮಾರ್ಟ್‌ಫೋನಿಗೆ 32,999 ಬೆಲೆಯನ್ನು ಗೂಗಲ್‌ ನಿಗದಿ ಪಡಿಸಿದ್ದು ನಿಮ್ಮಲ್ಲಿ ಕ್ರೆಡಿಟ್‌ ಕಾರ್ಡ್/ಡೆಬಿಟ್‌ ಕಾರ್ಡ್‌ ಇದ್ದರೆ ಸ್ಮಾರ್ಟ್‌ಫೋನ್‌ ಪ್ಲೇ ಸ್ಟೋರ್‌‌ನಿಂದ ಖರೀದಿಸಬಹುದು.

 ಇಎಂಐ:

ಇಎಂಐ:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇಎಂಐ ಆಧಾರದಲ್ಲಿ ಸ್ಮಾರ್ಟ್‌ಫೋನನ್ನು ಖರೀದಿಸಲು ಸಾಧ್ಯವಿಲ್ಲ.ಹೀಗಾಗಿ ಕ್ರೆಡಿಟ್‌ ಕಾರ್ಡ್‌ ನೀಡುವ ಬ್ಯಾಂಕಿನ ಜೊತೆ ಮಾತನಾಡಿ ಅದನ್ನು ಇಎಂಐಗೆ ಬದಲಾಯಿಸಿ ಎಂದು ಹೇಳುವ ಮೂಲಕ ಇಎಂಐಯಲ್ಲಿ ಖರೀದಿಸಬಹುದು.ರಿಟೇಲ್‌ ಅಂಗಡಿಯಲ್ಲಿ ಇಎಂಐ ಸ್ಕೀಮ್‌ನಲ್ಲಿ ಗೂಗಲ್ ಸ್ಮಾರ್ಟ್‌ಫೋನನ್ನು ಖರೀದಿಸಬಹುದು.

 32GB ಮಾಡೆಲ್‌:

32GB ಮಾಡೆಲ್‌:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


32GB ಆಂತರಿಕ ಮೆಮೊರಿ ಸ್ಮಾರ್ಟ್‌ಫೋನ್‌‌ ನೀವು ಖರೀದಿಸಬೇಕು ಎಂದು ಯೋಚಿಸಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರ್‌ನನಲ್ಲೇ ಖರೀದಿಸಬೇಕು. ರಿಟೇಲ್‌ ಅಂಗಡಿಯಲ್ಲಿ ಈ ಸ್ಮಾರ್ಟ್‌ಫೋನ್‌ ಈ ತಿಂಗಳ ಅಂತ್ಯಕ್ಕೆ ಬರಲಿದೆ.

 ಹೆಚ್ಚುವರಿ ಹಣ:

ಹೆಚ್ಚುವರಿ ಹಣ:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನೆಕ್ಸಸ್‌ 16GB ಸ್ಮಾರ್ಟ್‌ಫೋನಿಗೆ 28,999 ರೂಪಾಯಿ,32GB ಸ್ಮಾರ್ಟ್‌ಫೋನಿಗೆ 32,999 ಬೆಲೆಯನ್ನು ನಿಗದಿಪಡಿಸಿದೆ. ರಿಟೇಲ್ ಅಂಗಡಿಯಲ್ಲಿ ಈ ಸ್ಮಾರ್ಟ್‌ಫೋನಿಗೆ ಗೂಗಲ್‌ ನಿಗದಿ ಮಾಡಿರುವ ಬೆಲೆಗಿಂತ ಅಂದಾಜು ಒಂದು ಸಾವಿರ ರೂಪಾಯಿ ಹೆಚ್ಚು ನಿಗದಿಯಾಗಿರುತ್ತದೆ.

ಇಯರ್‌ಫೋನ್‌ ಇಲ್ಲ:

ಇಯರ್‌ಫೋನ್‌ ಇಲ್ಲ:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


ಗೂಗಲ್‌ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ಇಯರ್‌ಫೋನ್‌ ನೀಡುವುದಿಲ್ಲ.ಹೀಗಾಗಿ ಹೊಸ ಸ್ಮಾರ್ಟ್‌ಫೋನಿಗೆ ಇಯರ್‌ಫೋನ್‌ ಸಿಗುತ್ತದೆ ಎಂದು ಭಾವಿಸಿ ಈಗಾಗಲೇ ಬಳಸುತ್ತಿರುವ ಇಯರ್‌‌ಫೋನನ್ನು ಯಾರಿಗೆ ಕೊಡದಿರಿ.

 ಇತರೇ ಪರಿಕರಗಳು:

ಇತರೇ ಪರಿಕರಗಳು:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


ನೆಕ್ಸಸ್‌ 5 ಸ್ಮಾರ್ಟ್‌ಫೋನಿಗೆ ಸಂಬಂಧಿಸಿದಂತೆ ಗೂಗಲ್‌ ಬಂಪರ್‌ ಕೇಸ್‌,ಫ್ಲಿಪ್‌ಕವರ್‌‌ಗಳನ್ನು ಬಿಡುಗಡೆ ಮಾಡಿದ್ದು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.ಬಂಪರ್‌ ಕೇಸ್‌ಗೆ 2,499 ಬೆಲೆ ನಿಗದಿಯಾಗಿದ್ದು ಕಪ್ಪು,ಬಿಳಿ,ಬೂದು,ಹಳದಿ ಬಣ್ಣದಲ್ಲಿ ಲಭ್ಯವಿದೆ. ಇನ್ನು ಎಲ್‌ಜಿ ತಯಾರಿಸಿದ ಫ್ಲಿಪ್‌ ಕವರ್‌‌ಗೆ 3,299 ಬೆಲೆ ನಿಗದಿಯಾಗಿದ್ದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದೆ.

 ಔಟ್‌ ಆಫ್‌ ಸ್ಟಾಕ್‌:

ಔಟ್‌ ಆಫ್‌ ಸ್ಟಾಕ್‌:

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ


ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನಿನ್ನೆ ಸ್ಮಾರ್ಟ್‌ಫೋನ್ ದೊರೆಯುತ್ತದೆ ಎಂದು ತಿಳಿದದ್ದೇ ತಡ ಗ್ರಾಹಕರು ಬುಕ್ಕಿಂಗ್‌ ಮಾಡಲು ಆರಂಭಿಸಿದ್ದು ಒಂದೇ ಗಂಟೆಯಲ್ಲಿ ಗೂಗಲ್‌ ಔಟ್‌ ಆಫ್‌ ಸ್ಟಾಕ್‌ ಎಂದು ಪ್ರಕಟಿಸಿತ್ತು. ಆದರೆ ಈಗ ಪ್ಲೇ ಸ್ಟೋರ್‌ ಸ್ಮಾರ್ಟ್‌‌‌ಫೋನ್‌ ಲಭ್ಯವಿದೆ. ಜನರನ್ನು ತನ್ನತ್ತ ಸೆಳೆಯಲು ಗೂಗಲ್‌ ಈ ರೀತಿಯ ಪ್ಲ್ಯಾನ್‌ ಮಾಡಿತ್ತು ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot