ವಾಯರ್‌ಲೆಸ್‌ ಹೆಡ್‌ಫೋನ್‌ ಖರೀದಿಸುವ ಮುನ್ನ ಈ ಟಿಪ್ಸ್ ಗಮನಸಿ!

|

ಪ್ರಸ್ತುತ ಸ್ಮಾರ್ಟ್‌ಫೋನಿನಂತೆ ಹೆಡ್‌ಫೋನ್‌ ಮತ್ತು ಇಯರ್‌ಫೋನ್‌ ಡಿವೈಸ್‌ಗಳು ಪ್ರಾಮುಖ್ಯತೆ ಪಡೆದಿದ್ದು, ಮ್ಯೂಸಿಕ್ ಆಲಿಸಲು ಜೊತೆಗೊಂದು ಹೆಡ್‌ಫೋನ್‌ ಇರಲಿ ಎಂದುಕೊಳ್ಳುವವರೇ ಅಧಿಕ. ಅದರಲ್ಲಿಯೂ ಇಂದು ಬ್ಲೂಟೂತ್ ಆಧಾರಿತ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಟ್ರೆಂಡ್‌ ಹುಟ್ಟುಹಾಕಿದ್ದು, ಈ ನಿಟ್ಟಿನಲ್ಲಿ ತರಹೇವಾರಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೆ ಇವೆ. ಆದರೆ ಅನೇಕರಿಗೆ ಯಾವ ತರಹದ ಹೆಡ್‌ಫೋನ್‌ ಖರೀದಿಸಬೇಕು ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿರುತ್ತದೆ.

ಹೆಡ್‌ಫೋನ್‌ಗಳು

ಹೌದು, ಸದ್ಯ ಆಫ್‌ಲೈನ್‌ ಮಾರುಕಟ್ಟೆ ಸೇರಿದಂತೆ ಆನ್‌ಲೈನ್‌ ತಾಣಗಳಲ್ಲಿ ಅನೇಕ ಕಂಪನಿಗಳ ವಿವಿಧ ಮಾದರಿಯ ಹೆಡ್‌ಫೋನ್‌ಗಳು ಸಿಗುತ್ತವೆ. ಜೊತೆಗೆ ಅಗ್ಗದ ದರದಿಂದ ದುಬಾರಿ ಬೆಲೆಗಳಲ್ಲಿಯೂ ಅತ್ಯುತ್ತಮ ಹೆಡ್‌ಫೋನ್‌ಗಳ ಶ್ರೇಣಿ ಲಭ್ಯವಾಗುತ್ತವೆ. ಆದರೆ ನೀವು ವಾಯರ್‌ಲೆಸ್‌ ಹೆಡ್‌ಫೋನ್ ಖರೀದಿಸುವಾಗ ಕೆಲವು ಅಗತ್ಯ ಸಂಗತಿಗಳನ್ನು ಗಮನಿಸಿ ಆನಂತರವೇ ಖರೀದಿಸಬೇಕು. ಅದಕ್ಕಾಗಿ ಇಂದಿನ ಈ ಲೇಖನದಲ್ಲಿ ಹೆಡ್‌ಫೋನ್‌ ಖರೀದಿಸುವ ಮುನ್ನ ಗಮನಿಸಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ಸೌಂಡ್‌ ಗುಣಮಟ್ಟ

ಸೌಂಡ್‌ ಗುಣಮಟ್ಟ

ಸೌಂಡ್‌ನ ಗುಣಮಟ್ಟ ತಿಳಿಯಲು ಗ್ರಾಹಕರು ಇಂಜನಿಯರ್ ಆಗಿರಬೇಕೆಂದೆನಿಲ್ಲ. ಸೌಂಡ್‌ಗೆ ಸಂಬಂಧಿಸಿದ ಕೆಲವು ಬೇಸಿಕ್ ಅಂಶಗಳಗನ್ನು ಪರಿಶೀಲಿಸುವುದು ಉತ್ತಮ. ಖರೀದಿಸುವ ಹೆಡ್‌ಫೋನ್‌ನಲ್ಲಿ ಆಡಿಯೊ ಡ್ರೈವರ್‌ಗಳ ಸಾಮರ್ಥ್ಯ ಎಷ್ಟಿದೆ. ಡೈನಾಮಿಕ್ ಬಾಸ್‌ ಸೌಂಡ್‌ ಇದೆಯಾ. ಹೆಚ್‌ಡಿ ಕ್ವಾಲಿಟಿ ಸೌಂಡ್‌ ಫೀಚರ್‌ ಅನ್ನು ಒಳಗೊಂಡಿದೆಯಾ ಇಂತಹ ಸಂಗತಿಗಳನ್ನು ಗಮನಿಸಿ. ಖರೀದಿಸುವ ಹೆಡ್‌ಫೋನಿನಲ್ಲಿ ಹೆಚ್‌ಡಿ ಸೌಂಡ್‌ ಮತ್ತು ಆಡಿಯೊ ಡ್ರೈವರ್ಸ್‌ ಸಾಮರ್ಥ್ಯ ಹೆಚ್ಚಿರಲಿ.

ಕಂಫರ್ಟ್‌ ಮತ್ತು ರಚನೆ

ಕಂಫರ್ಟ್‌ ಮತ್ತು ರಚನೆ

ಸದ್ಯ ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಹಲವು ಡಿಸೈನ್‌ನಲ್ಲಿ ಲಭ್ಯವಿದ್ದು, ಸೌಂಡ್‌ ಗುಣಮಟ್ಟ ಸಹ ಅತ್ಯುತ್ತವಾಗಿರುತ್ತದೆ. ಆದರೆ ಕೆಲವೊಂದು ಡಿವೈಸ್‌ ನಿಮಗೆ ಸೂಕ್ತವೆನಿಸುವುದಿಲ್ಲ ಮತ್ತು ಕಿವಿಗೆ ಕಂಫರ್ಟ್‌ ಅನಿಸುವುದಿಲ್ಲ. ಹೀಗಾಗಿ ಹೆಡ್‌ಫೋನ್‌ ಖರೀದಿಸುವಾಗ ಸೌಂಡ್‌ ಜೊತೆಗೆ ಕಂಫರ್ಟ್‌ ಮತ್ತು ಡಿಸೈನ್‌ ಬಗ್ಗೆಯು ಗಮನಿಸಿ. ಹೆಡ್‌ಫೋನ್‌ ರಚನೆ ಮ್ಯೂಸಿಕ್‌ ಕೇಳಲು ಹಿತವೆನಿಸುವಂತಿರಲಿ.

ಕನೆಕ್ಟಿವಿಟಿ ಸೌಲಭ್ಯ

ಕನೆಕ್ಟಿವಿಟಿ ಸೌಲಭ್ಯ

ಸೌಂಡ್‌ ಮತ್ತು ಕಂಫರ್ಟ್‌ ಜೊತೆಗೆ ಹೆಡ್‌ಫೋನ್‌ಗಳಲ್ಲಿ ಕನೆಕ್ಟಿವಿಟಿ ಸೌಲಭ್ಯವು ಅಷ್ಟೆ ಮುಖ್ಯ. ಹೆಡ್‌ಫೋನ್‌ಗಳು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಎರಡಕ್ಕೂ ಕನೆಕ್ಟ್‌ ಆಗುವ ಸೌಲಭ್ಯ ಪಡೆದಿರಲಿ. ಇತ್ತೀಚಿನ ಟ್ರೆಂಡ್‌ ಆಗಿರುವ ವಾಯರ್‌ಲೆಸ್‌ ಬ್ಲೂಟೂತ್‌ ಕನೆಕ್ಷನ್‌ ಆಯ್ಕೆ ನೀವು ಖರೀದಿಸುವ ಹೆಡ್‌ಫೋನಿನಲ್ಲಿ ಇದ್ದರೇ ಉತ್ತಮ. ಹೆಡ್‌ಫೋನ್‌ನಲ್ಲಿಯೇ ವ್ಯಾಲ್ಯೂಮ್ ಕಂಟ್ರೋಲ್ ಬಟನ್‌ಗಳ ಆಯ್ಕೆ ಇದ್ದರೇ ಒಳ್ಳೆಯದು.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ವಾಯರ್‌ಲೆಸ್‌ ಹೆಡ್‌ಫೋನ್‌ಗೆ ಜೀವ ಒದಗಿಸುವುದೇ ಬ್ಯಾಟರಿ ಆಗಿರುವುದರಿಂದ ನಿವು ಖರೀದಿಸುವ ವಾಯರ್‌ಲೆಸ್‌ ಹೆಡ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಅಧಿಕವಾಗಿರಲಿ. ಹೆಡ್‌ಫೋನ್‌ಗೆ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಪ್ಲೇ ಮೋಡ್‌ನಲ್ಲಿ ಕನಿಷ್ಠ ಸುಮಾರು 6-8 ಗಂಟೆಗಳ ಬಾಳಿಕೆ ಸಾಮರ್ಥ್ಯ ಇದ್ದರೇ ಉತ್ತಮ. ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿರದಿದ್ದರೇ ಹೆಡ್‌ಫೋನ್‌ ಇದ್ದು ಇಲ್ಲದಂತಾಗಿ ಬಿಡುತ್ತದೆ. ಚಾರ್ಜ್‌ ಮಾಡುವಾಗ ಲೈಟ್‌ ಇಂಡಿಕೇಟರಿನ ಸೌಲಭ್ಯಗಳು ಹೆಡ್‌ಫೋನ ಪಡೆದಿರಲಿ.

ಪ್ರೈಸ್‌ಟ್ಯಾಗ್‌

ಪ್ರೈಸ್‌ಟ್ಯಾಗ್‌

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಹೆಡ್‌ಫೋನ್‌ಗಳು ಇವೆ ಹಾಗೆಯೇ ಅಗ್ಗದ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ವಾಯರ್‌ಲೆಸ್‌ ಹೆಡ್‌ಫೋನ್‌ ಸಿಗುತ್ತವೆ. ಆದರೆ ಅವುಗಳು ಹೊಂದಿರುವ ಫೀಚರ್ಸ್‌, ಗುಣಮಟ್ಟ ಮತ್ತು ಸೌಲಭ್ಯಗಳ ಆಧಾರದ ಮೇಲೆ ದರದ ನಿಗದಿ ಮಾಡಿರುತ್ತಾರೆ. ನೀವು ವಾಯರ್‌ಲೆಸ್‌ ಹೆಡ್‌ಫೋನ್‌ ಖರೀದಿಸುವಾಗ ಬೆಲೆಯನ್ನು ಮಾತ್ರ ಪರಿಗಣಿಸದಿರಿ. ಡಿವೈಸ್‌ ಹೊಂದಿರುವ ಫೀಚರ್ಸ್‌ಗಳನ್ನು ಅವಲೋಕಿಸಿ ಕೊನೆದಾಗಿ ಯೋಗ್ಯ ಬೆಲೆಯಲ್ಲಿ ಅತ್ಯುತ್ತಮ ವಾಯರ್‌ಲೆಸ್‌ ಹೆಡ್‌ಫೋನ್‌ ಖರೀದಿಸುವುದು ಉತ್ತಮ.

Best Mobiles in India

English summary
The sound quality is one of the most important things that need to be considered. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X