ಇನ್ಮುಂದೆ ಕಡಿಮೆ ರೆಸಲ್ಯೂಷನ್ ಚಿತ್ರವನ್ನು ಹೆಚ್‌ಡಿ ಚಿತ್ರವಾಗಿ ಪರಿವರ್ತಿಸಬಹುದು!!
ಎಐ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಕಡಿಮೆ ರೆಸಲ್ಯೂಷನ್‌ನ ಇರುವ ಇಮೇಜ್ ಅನ್ನು ಹೈಡೆಫಿನಿಷನ್(ಎಚ್‌ಡಿ) ಇಮೇಜ್ ಆಗಿ ಪರಿವರ್ತಿಸಬಹುದು ಎಂದು ಹೇಳಾಗಿದೆ.!!
ಯಾವುದು ಅಸಾಧ್ಯ ಎಂದು ಈ ಪ್ರಪಂಚ ಭಾವಿಸಿರುತ್ತದೆಯೋ ಅದನ್ನು ಸಾಧ್ಯ ಮಾಡುವುದು ತಂತ್ರಜ್ಞಾನ ಎಂದರೆ ತಪ್ಪಾಗಲಾರದು.! ಹೌದು, ಕೆಲವೊಂದು ತಂತ್ರಜ್ಞಾನಗಳು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಕಡಿಮೆ ರೆಸಲ್ಯೂಷನ್‌ನ ಇರುವ ಇಮೇಜ್ ಅನ್ನು ಹೈಡೆಫಿನಿಷನ್ ಇಮೇಜ್ ಆಗಿ ಪರಿವರ್ತಿಸಬಹುದಾದ ತಂತ್ರಜ್ಞಾನ ಬರುತ್ತಿದೆ.!!
ಹಾಗಾಗಿ, ಕಡಿಮೆ ರೆಸಲ್ಯೂಷನ್‌ನ ಇರುವ ಇಮೇಜ್ ಅನ್ನು ಹೈಡೆಫಿನಿಷನ್ ಇಮೇಜ್ ಆಗಿ ಪರಿವರ್ತಿಸಲಾಗದು ಎಂದು ಇಲ್ಲಿಯವರೆಗೂ ನಂಬಿದ್ದು ಇನ್ಮುಂದೆ ಸುಳ್ಳಾಗಲಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಕಡಿಮೆ ರೆಸಲ್ಯೂಷನ್‌ನ ಇರುವ ಇಮೇಜ್ ಅನ್ನು ಹೈಡೆಫಿನಿಷನ್(ಎಚ್‌ಡಿ) ಇಮೇಜ್ ಆಗಿ ಪರಿವರ್ತಿಸಬಹುದು ಎಂದು ಹೇಳಾಗಿದೆ.!!

ಕಡಿಮೆ ರೆಲ್ಯೂಷನ್ ಚಿತ್ರಗಳನ್ನು ಹೈರೆಸಲ್ಯೂಷನ್ ಚಿತ್ರಗಳನ್ನಾಗಿ ಪರಿವರ್ತಿಸುವ ಸಂಬಂಧ ದಶಕಗಳಿಂದ ನಡೆಯುತ್ತಿದ್ದ ಸಂಶೋಧನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ(ಆರ್ಟಿಫಿಷಿಯಲ್ ಇಂಟಲಿಜೆನ್ಸ್-ಎಐ) ಮೂಲಕ ಯಶಸ್ಸು ಕಂಡುಕೊಳ್ಳಲಾಗಿದೆ. ಇದಕ್ಕೆ " ಸಿಂಗಲ್ ಇಮೇಜ್ ಸೂಪರ್ ರೆಸಲ್ಯೂಷನ್" (ಸಿಐಎಸ್‌ಆರ್) ತಂತ್ರಜ್ಞಾನ ಎಂದು ಹೆಸರಿಡಲಾಗಿದೆ.!!

ಜರ್ಮನಿಯ ಮ್ಯಾಕ್ಸ್ ಪ್ಲಾಂಕ ಇನ್ಸ್ಟಿಟ್ಯೂಟ್ ಆಫ್ ಇಂಟಲಿಜೆಂಟ್ ಸಿಸ್ಟಮ್‌ನ ಸಂಶೋಧಕರು ಈ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಕೈಗೊಂಡಿದ್ದಾರೆ. ಈಗ ದೊರೆತಿರುವ ಫಲಿತಾಂಶಗಳಿಂದ ಕಡಿಮೆ ರೆಸಲ್ಯೂಷನ್ ಇರುವ ಇಮೇಜ್‌ಗಳನ್ನು ಎಚ್‌ಡಿ ಕ್ವಾಲಿಟಿ ಹಂತದವರೆಗೂ ಬೃಹತ್ತಾಗಿ ಚಿತ್ರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಓದಿರಿ: "ಒಪ್ಪೊ ಎಫ್5" ಸೆಲ್ಫಿ ಕ್ಯಾಮೆರಾ ದಿಗ್ಗಜನಾಗಲು ಕಾರಣ AI ತಂತ್ರಜ್ಞಾನ!! ಏನಿದು ಗೊತ್ತಾ?


Click it and Unblock the Notifications








