Home
ಟೆಕ್ ನೌಕರಿ

Tech tips: ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿರಲು ಈ ಸ್ಮಾರ್ಟ್‌ಗ್ಯಾಜೆಟ್‌ ಅಗತ್ಯ!

ಈಗಂತೂ ಸ್ಮಾರ್ಟ್‌ಫೋನ್‌ ತಯಾರಕರು ಎಷ್ಟೇ ಭದ್ರತಾ ಫೀಚರ್ಸ್‌ ಅನ್ನು ನೀಡಿದರೂ ಸಹ ಸ್ಕ್ಯಾಮರ್‌ಗಳು ಅದನ್ನೆಲ್ಲ ಛೇದಿಸಿಕೊಂಡು ತಮಗೆ ಬೇಕಾದದ್ದನ್ನು ಮಾಡುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಬಳಕೆದಾರರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುತ್ತಿರುವ ವರದಿಗಳು ಹೆಚ್ಚಾಗುತ್ತಲೇ ಇವೆ. ಈ ಕಾರಣದಿಂದ ನೀವು ಈ ಭದ್ರತಾ ಟೂಲ್ಸ್‌ ಹೊಂದುವ ಮೂಲಕ ಸೇಫ್ ಆಗಿರಬಹುದು.

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಸ್ಕ್ಯಾಮರ್‌ಗಳು ಸದಾ ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರೆ ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್‌ ಅನ್ನು ಭದ್ರವಾಗಿ ಇರಿಸಿಕೊಳ್ಳಬೇಕು. ಅಂದರೆ ನಿಮ್ಮ ಡೇಟಾವನ್ನು ಸ್ಕ್ಯಾಮರ್‌ಗಳು, ಹ್ಯಾಕರ್‌ಗಳಿಂದ ಸುರಕ್ಷಿತವಾಗಿಡಲು ಭದ್ರತಾ ಕೀಗಳು, ವಿಶೇಷ ಸ್ಕ್ರೀನ್ ಗಾರ್ಡ್ ಸೇರಿದಂತೆ ಅಗತ್ಯ ಟೂಲ್ಸ್‌ ಬಳಕೆ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿರಲು ಈ ಸ್ಮಾರ್ಟ್‌ಗ್ಯಾಜೆಟ್‌ ಅಗತ್ಯ!

ಫ್ಲಿಪ್ ಕವರ್ : ನೀವು ಬಳಕೆ ಮಾಡುವ ಫ್ಲಿಪ್ ಕವರ್ ಸಹ ಸ್ಮಾರ್ಟ್‌ಫೋನ್‌ನ ಮೂಲಭೂತ ಗೌಪ್ಯತೆಯ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಫ್ಲಿಪ್ ಕವರ್‌ಗಳು ಫೋನ್‌ನ ಡಿಸ್‌ಪ್ಲೇಯನ್ನು ಮುಚ್ಚಿಡುತ್ತವೆ ಮತ್ತು ಫೋನ್ ಅನ್‌ಲಾಕ್ ಆಗಿದ್ದರೂ ಸಹ ನಿಮ್ಮ ಫೋನ್‌ನಲ್ಲಿ ನೋಟಿಫಿಕೇಶನ್‌ ಅಧಿಸೂಚನೆ ಅಥವಾ ಇತರ ಯಾವುದೇ ಡೇಟಾವನ್ನು ಆಕಸ್ಮಿಕವಾಗಿ ನೋಡುವುದನ್ನು ಇದು ತಡೆಯುತ್ತದೆ.

ಕ್ಯಾಮೆರಾ ಕವರ್: ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗೆ ಮಾತ್ರವಲ್ಲದೆ ಕ್ಯಾಮೆರಾಗೂ ಸಹ ವಿಶೇಷ ಕವರ್‌ ತಯಾರು ಮಾಡಲಾಗಿದೆ. ಈ ಕ್ಯಾಮೆರಾ ಕವರ್ ಅನ್ನು ಬಳಕೆ ಮಾಡುವುದರಿಂದ ರಿಮೋಟ್‌ ಮೂಲಕ ಸ್ಕ್ಯಾಮರ್‌ಗಳು ಫೋನ್‌ನ ಕ್ಯಾಮೆರಾ ಕಂಟ್ರೋಲ್‌ ಮಾಡಲು ಸಾಧ್ಯ ಆಗುವುದಿಲ್ಲ. ಇನ್ನು ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಫೋನ್‌ಗಳನ್ನು ಹ್ಯಾಕ್ ಮಾಡಿದಾಗ ಅಗತ್ಯ ವಿಷಯಗಳನ್ನು ರೆಕಾರ್ಡ್ ಮಾಡಲು ಹಾಗೂ ಸುಲಿಗೆಗಾಗಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

USB ಡೇಟಾ ಬ್ಲಾಕರ್ ಬಳಕೆ ಮಾಡಿ: ಇದು ಖಂಡಿತಾ ಎಲ್ಲರೂ ಗಮನಹರಿಸಬೇಕಾದ ವಿಷಯ. ಇದನ್ನು ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಯುಎಸ್‌ಬಿ ಕಾಂಡೋಮ್‌ಗಳು ಎಂದೂ ಸಹ ಕರೆಯಲಾಗುತ್ತದೆ. ಇದು ಯುಎಸ್‌ಬಿ ಕೇಬಲ್‌ನಲ್ಲಿ ಡೇಟಾ ವರ್ಗಾವಣೆ ಪಿನ್‌ಗಳನ್ನು ನಿರ್ಬಂಧಿಸುವ ಸಣ್ಣ ಅಡಾಪ್ಟರ್‌ಗಳಾಗಿದ್ದು, ಪವರ್ ಪಿನ್‌ಗಳಿಗೆ ಮಾತ್ರ ಸಂಪರ್ಕವನ್ನು ನೀಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಎಲ್ಲಿಬೇಕಾದರೂ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಚಾರ್ಜಿಂಗ್‌ ಮಾಡಬಹುದು.

ಭೌತಿಕ ಭದ್ರತಾ ಕೀ: ಇನ್ನು ಭೌತಿಕ ಭದ್ರತಾ ಕೀಯನ್ನು ಬಳಕೆ ಮಾಡುವ ಮೂಲಕವೂ ನಿಮ್ಮ ಫೋನ್ ಅನ್ನು ರಕ್ಷಿಸಿಕೊಳ್ಳಬಹುದು. ಈ ಭೌತಿಕ ಭದ್ರತಾ ಕೀ ಯುಎಸ್‌ಬಿ-ತರಹದ ಹಾರ್ಡ್‌ವೇರ್ ಆಗಿದ್ದು, ಇದು ಸಂಪೂರ್ಣ ಎನ್‌ಕ್ರಿಪ್ಟ್ ಮಾಡಿದ ಪಾಸ್‌ವರ್ಡ್ ಮತ್ತು ಖಾತೆ, ಡಿವೈಸ್‌ ಮತ್ತು ಇತರ ಟೂಲ್ಸ್‌ಗಾಗಿ ಲಾಗಿನ್ ರುಜುವಾತುಗಳನ್ನು ಹೊಂದಿರುತ್ತದೆ. ಒಮ್ಮೆ ಇದನ್ನು ಹೊಂದಿಸಿದರೆ ಫೋನ್, ಆಪ್‌ ಅಥವಾ ಖಾತೆಯನ್ನು ಅನ್‌ಲಾಕ್ ಮಾಡಲು ಬಳಕೆದಾರರು ಭದ್ರತಾ ಕೀಯನ್ನು ಬಳಕೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಇದರ ಬಳಕೆ ಕಡಿಮೆ.

ವಿಶೇಷ ಸ್ಕ್ರೀನ್ ಪ್ರೊಟೆಕ್ಟರ್: ಇನ್ನೊಂದು ಪ್ರಮುಖ ಭದ್ರತಾ ಟೂಲ್ಸ್‌ ಎಂದರೆ ವಿಶೇಷ ಸ್ಕ್ರೀನ್ ಪ್ರೊಟೆಕ್ಟರ್. ಇದು ನಿಮ್ಮ ಸಾಮಾನ್ಯ ಸ್ಕ್ರೀನ್ ಗಾರ್ಡ್‌ನಂತಿದೆಯಾದರೂ ಸಹ ಇದು ಗೌಪ್ಯತೆ ಫಿಲ್ಟರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇತರರು ನಿಮ್ಮ ಫೋನ್ ಪರದೆಯನ್ನು ವಿವಿಧ ಕೋನದಿಂದ ನೋಡುವುದನ್ನು ತಡೆಯುತ್ತದೆ. ನಿಮ್ಮ ಸಾಧನವನ್ನು ನೀವು ಸಾರ್ವಜನಿಕವಾಗಿ ಬಳಸುತ್ತಿದ್ದರೆ ಅಥವಾ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲು ನೀವು ಬಯಸಿದರೆ ಇದು ಸಹಾಯಕವಾಗಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿರಲು ಈ ಸ್ಮಾರ್ಟ್‌ಗ್ಯಾಜೆಟ್‌ ಅಗತ್ಯ!

ಪೌಚ್ ಬಳಕೆ: ಫ್ಯಾರಡೆ ಬ್ಯಾಗ್ ಅಥವಾ ಪೌಚ್ ನಿಮ್ಮ ಸ್ಮಾರ್ಟ್‌ಫೋನ್‌ ಡೇಟಾ ಕಳ್ಳತನವನ್ನು ತಡೆಯಬಹುದು. ಫೋನ್‌ಗಳಿಗೆ ಫ್ಯಾರಡೆ ಬ್ಯಾಗ್ ರಕ್ಷಣಾತ್ಮಕ ಚೀಲವಾಗಿದ್ದು, ಕರೆಗಳು, ಟೆಕ್ಸ್‌ ಮೆಸೆಜ್‌ ಮತ್ತು ಜಿಪಿಎಸ್‌ ರೀತಿಯ ವಿದ್ಯುತ್ಕಾಂತೀಯ ಸಂಕೇತಗಳನ್ನು ಇದು ನಿರ್ಬಂಧಿಸುತ್ತದೆ. ಅಂದರೆ ಇದು ಫೋನ್ ಅನ್ನು ಬಾಹ್ಯ ಸಂವಹನದಿಂದ ಪರಿಣಾಮಕಾರಿಯಾಗಿ ಪ್ರತ್ಯೇಕಿಸುತ್ತದೆ. ಈ ಮೂಲಕ ಹ್ಯಾಕಿಂಗ್, ಟ್ರ್ಯಾಕಿಂಗ್ ಮತ್ತು ಡೇಟಾ ಕಳ್ಳತನ ಮಾಡಲು ಆಗುವುದಿಲ್ಲ.

RFID-ಬ್ಲಾಕಿಂಗ್ ಕಾರ್ಡ್‌ಗಳು: ಈ ಆಯ್ಕೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯ ಇದೆ. ಅಂದರೆ ಹೊಸ ಫೋನ್‌ಗಳು NFC ಆಯ್ಕೆ ಪಡೆದಿದ್ದು, ಇದು ಪಾವತಿಗಳನ್ನು ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ಇನ್ನು ಪಾವತಿಗಳನ್ನು ಮಾಡಲು ಬಳಕೆದಾರರು ಕಾರ್ಡ್‌ಗಳನ್ನು ಫೋನ್‌ಗೆ ಸೇರಿಸಬೇಕಾಗುತ್ತದೆ. ಅದರಂತೆ ಈ RFID ಬ್ಲಾಕಿಂಗ್ ಕಾರ್ಡ್ ಸಾರ್ವಜನಿಕ ಸ್ಥಳಗಳಲ್ಲಿ ಸ್ಕ್ಯಾಮರ್‌ಗಳು ಆ ಮಾಹಿತಿಯನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಅಂದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಂದ ಹಣವನ್ನು ಕದಿಯದಂತೆ ನಿಮ್ಮನ್ನು ರಕ್ಷಿಸುತ್ತದೆ.

Best Mobiles in India

English summary
Essential tools including security keys, special screen guard can be used to keep data safe from scammers and hackers on the smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+