ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗದಿರಲು ಈ ಟಿಪ್ಸ್ ಅನುಸರಿಸಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಇಲ್ಲದೇ ಯಾವ ಕೆಲಸಗಳು ನಡೆಯುವುದೇ ಇಲ್ಲ ಎನ್ನುವ ಸ್ಥಿತಿ ಸರ್ವೇ ಸಾಮಾನ್ಯವಾಗಿದೆ. ಎಲ್ಲ ವಯೋಮಾನದವರೂ ಇದೀಗ ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದು, ಮಕ್ಕಳು ಸಹ ಇದಕ್ಕೆ ಹೊರತಾಗಿಲ್ಲ. ಪುಟ್ಟ ಮಕ್ಕಳು ಸಹ ಸ್ಮಾರ್ಟ್‌ಫೋನ್ ಜೊತೆಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದನ್ನು ನೋಡಿದ್ದೆವೆ. ಸ್ಮಾರ್ಟ್‌ಫೋನ್ ಎಷ್ಟು ಉಪಯುಕ್ತವೋ ಅದರ ದುಷ್ಪರಿಣಾಮಗಳು ಸಹ ಅಷ್ಟೇ ಗಂಭೀರವಾಗಿವೆ.

ಸ್ಮಾರ್ಟ್‌ಫೋನ್ ಅತೀಯಾದ ಬಳಕೆಯಿಂದ ದುಷ್ಪರಿಣಾಮಗಳಿವೆ ಎಂದು ಗೊತ್ತಿದ್ದರೂ, ಎಷ್ಟೂ ಪಾಲಕರು ತಮ್ಮ ಮಕ್ಕಳು ಹಠ ಮಾಡದಿರಲಿ ಎಂದು ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಕೊಡುವುದನ್ನು ನೋಡಿದ್ದೆವೆ. ಹೀಗೆ ಒಂದಾಲ್ಲಾ ಒಂದು ರೀತಿ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಮತ್ತಷ್ಟು ಅಡಿಕ್ಟ್ ಆಗುತ್ತಿದ್ದಾರೆ. ಆದರೆ ಅತೀಯಾದ ಫೋನ್ ಬಳಕೆ ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ಅಧ್ಯಾಯನಗಳಲ್ಲಿ ನೋಡಿದ್ದೆವೆ ಅಲ್ಲವೇ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳೆಂದರೇ, ನಿದ್ರಾಹಿನತೆ ಸಮಸ್ಯೆ, ಖಿನ್ನತೆ, ಒಬೆಸಿಟಿ, ಕೇಳುವ ಮತ್ತು ಜಾಗೃತಾವಸ್ಥೆಯ ಸಮಸ್ಯೆ ಮತ್ತು ಮಕ್ಕಳ ವರ್ತನೆಯಲ್ಲಿ ಸಾಕಷ್ಟು ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಇಂದಿನ ಲೇಖನದಲ್ಲಿ ಕೇಲವು ಮಾಹಿತಿಗಳನ್ನು ನೀಡಿದ್ದೆವೆ. ಹಾಗಾದರೇ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗದಂತೆ ಯಾವೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ಮುಂದೆ ನೋಡೋಣ.

ಮಕ್ಕಳನ್ನು ಹವ್ಯಾಸದಲ್ಲಿ ತೊಡಗಿಸಿ
ಇತ್ತೀಚಿಗೆ ಮಕ್ಕಳಗೆ ಮನೆಯಲ್ಲಿ ಆಟವಾಡಲು ಗ್ಯಾಜೆಟ್‌ಗಳನ್ನು ನೀಡುತ್ತಾರೆ. ಅದರಲ್ಲೂ ಸ್ಮಾರ್ಟ್‌ಫೋನ್ ಮಕ್ಕಳ ಕೈಗೆ ನೀಡುತ್ತಾರೆ. ಇದರಿಂದ ಮಕ್ಕಳು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿಬಿಡುವ ಸಾಧ್ಯತೆಗಳಿರುತ್ತವೆ. ಸ್ಮಾರ್ಟ್‌ಫೋನ್ ಬದಲಿಗೆ ಮಕ್ಕಳಿಗೆ ಹವ್ಯಾಸಗಳಲ್ಲಿ ತೊಡಗುವಂತೆ ಪ್ರೇರೆಪಿಸಿ. ಓಡುವುದು, ಡ್ರಾಯಿಂಗ್, ಪೇಡಿಂಗ್, ಔಟ್‌ಡೋರ್ ಗೇಮ್ಸ್, ಕರಾಟೆ, ಹೀಗೆ ಚಟುವಟಿಕೆಯಲ್ಲಿ ತೊಡಗಿಸಿ. ಯಾವುದಾರು ಸ್ಪೋರ್ಟ್ಸ್ ಕೋರ್ಸ್‌ಗೆ ಸೇರಿಸಿದರೇ ಇನ್ನು ಒಳ್ಳೆಯದೆ.

ಸ್ಮಾರ್ಟ್‌ಫೋನ್ ನಿರ್ಬಂಧಿಸಿ
ಸ್ಮಾರ್ಟ್‌ಫೋನ್‌ಗಳು ಇಂದಿನ ಅಗತ್ಯವಾದ ಸಾಧನಗಳಾಗಿದ್ದು, ಇಂದಲ್ಲ ನಾಳೆ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಹೆಚ್ಚು ಬೇರೆತುಕೊಳ್ಳುತ್ತಾರೆ. ಆದರೆ ಮಕ್ಕಳಿದ್ದಾಗ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗದಂತೆ ಎಚ್ಚರವಹಿಸುವುದು ಉತ್ತಮ. ಊಟದ ಸಮಯ, ಓದುವಾಗ, ಮಲಗುವ ವೇಳೆ ಹೀಗೆ ಕೇಲವು ವೇಳೆಯಲ್ಲಿ ಫೋನ್ ಬಳಸದಂತೆ ತಿಳಿ ಹೇಳಿರಿ.

ದುಷ್ಪರಿಣಾಮಗಳ ಬಗ್ಗೆ ತಿಳಿಸಿ
ಮನರಂಜನೆಯ ಮಹಾಸಾಧನವಾಗಿರುವ ಸ್ಮಾರ್ಟ್‌ಫೋನ್‌ಗಳು ಮಕ್ಕಳಿಗೆ ಹೆಚ್ಚು ಆಕರ್ಷಿಸುತ್ತವೆ. ಹೀಗಾಗಿ ಮಕ್ಕಳು ಸ್ಮಾರ್ಟ್‌ಪೋನ್‌ಗೆ ಅಡಿಕ್ಟ್ ಆಗುತ್ತಾರೆ. ಆದರೆ ಮಕ್ಕಳಿಗೆ ಸ್ಮಾರ್ಟ್‌ಫೋನ್ ಅತೀಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಬೇಕು ಅಲ್ಲದೇ ಆ ಕುರಿತು ಯೂಟ್ಯೂಬ್‌ನಲ್ಲಿ ಲಭ್ಯವಿರುವ ವಿಡಿಯೊಗಳನ್ನು ತೋರಿಸುವ ಮೂಲಕ ಮಾಹಿತಿ ನೀಡಿರಿ.

ಸ್ಮಾರ್ಟ್‌ಫೋನ್‌ಗೆ ಪಾಸ್‌ವರ್ಡ್ ಇಡಿ
ಮಕ್ಕಳಿಗೆ ಸ್ಮಾರ್ಟ್‌ಪೋನ್ ಹೆಚ್ಚು ಬಳಕೆಮಾಡದಂತೆ ಪದೆ ಪದೆ ಹೇಳುವುದು ಕೇಲವೊಮ್ಮೆ ಅಸಾಧ್ಯ ಎನಿಸುತ್ತದೆ. ಮತ್ತು ಅದು ಅವರಿಗೂ ಕಿರಿಕಿರಿ ಎನಿಸುವುದು. ಅದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಪಾಸ್‌ವರ್ಡ್ ಇಡಿ ಮತ್ತು ಪಾಸ್‌ವರ್ಡ್ ಅನ್ನು ಗೊತ್ತು ಮಾಡಬೇಡಿ. ಇದರಿಂದ ಮಕ್ಕಳು ಸ್ಮಾರ್ಟ್‌ಫೋನ್ ತೆಗೆದುಕೊಂಡರು ಅದನ್ನು ಬಳಕೆ ಮಾಡಲು ಆಗದು.

ಒಳ್ಳೆಯ ಮಾದರಿಯಾಗಿರಿ
ಮಕ್ಕಳು ಏನೇ ಕಲಿದರು ನೋಡಿ ಕಲಿಯುವುದು ಹೆಚ್ಚು. ಅದರಲ್ಲೂ ಪಾಲಕರನ್ನು ಹೆಚ್ಚಾಗಿ ಇಷ್ಟ ಪಡುವ ಮಕ್ಕಳು ಪಾಲಕರನ್ನು ಅನುಸರಿಸುತ್ತಾರೆ. ಪಾಲಕರು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಕಾಲಕಳೆಯುವುದನ್ನು ನೋಡುವ ಮಕ್ಕಳ ಮನಸ್ಸು ಸ್ಮಾರ್ಟ್‌ಫೋನ್‌ನತ್ತ ಹರಿಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮಕ್ಕಳೆದುರಿಗೆ ಅನಗತ್ಯವಾಗಿ ಸ್ಮಾರ್ಟ್‌ಪೋನ್ ಬಳಸುತ್ತಾ ಕಾಲ ಕಳೆಯಬೇಡಿ. ನಿಮ್ಮ ಪ್ರಭಾವ ಮಕ್ಕಳ ಮೇಲೆ ಆಗಲಿದೆ.

ಕೊನೆಯ ಮಾತು
ಸ್ಮಾರ್ಟ್‌ಫೋನ್ ಎಂಬುದು ಬಿಟ್ಟೆನೆಂದರೂ ಬಿಡದ ಮಾಯೆ. ಆದರೆ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗದಂತೆ ತಡೆಯಬಹುದು ಅಲ್ಲವೇ. ಅದಕ್ಕೆ ಸೂಕ್ತ ವಾತಾವರಣ ರೂಪಿಸಿ. ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿರುವ ಸದಸ್ಯರನ್ನು ನೋಡಿ ಕಲೆಯುತ್ತಾರೆ. ಅದಕ್ಕಾಗಿ ಮಕ್ಕಳೊಡನೆ ಉತ್ತಮ ಬಾಂಧವ್ಯ ಬೆಳಸಿಕೊಳ್ಳಿ. ನಿಮ್ಮ ಉತ್ತಮ ಹವ್ಯಾಸಗಳನ್ನು ಮಕ್ಕಳು ರೂಢಿಸಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಆಟವಾಡಿ, ಅವರ ಇಷ್ಟದ ಹವ್ಯಾಸಗಳನ್ನು ಪ್ರೊತ್ಸಾಹಿಸಿ.


Click it and Unblock the Notifications








