ನೀವು ಅರಿತಿರಲೇಬೇಕಾದ ಫೋನ್ ಚಾರ್ಜಿಂಗ್ ಟಿಪ್ಸ್

By Shwetha
|

ಇತ್ತೀಚಿನ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿದೆ. ಎಷ್ಟೇ ದುಬಾರಿ ಫೋನ್ ಆಗಿದ್ದರೂ ಫೋನ್‌ನ ಚಾರ್ಜಿಂಗ್ ಸಮಸ್ಯೆ ಬಿಟ್ಟೂ ಬಿಡದೆ ಕಾಡುವ ಅಳಲಾಗಿ ಮಾರ್ಪಟ್ಟಿದೆ. ಪ್ರಯಾಣ ವೇಳೆಯಲ್ಲೂ ಫೋನ್ ಚಾರ್ಜ್ ಮುಗಿದಾಗ ನಾವು ಅನುಭವಿಸುವ ಕಷ್ಟಗಳು ಅದನ್ನು ಹೇಳಿಕೊಳ್ಳಲು ಸಾಧ್ಯವಾಗದು. ಹಾಗಿದ್ದರೆ ತೀರದ ಕಷ್ಟವಾಗಿ ಮಾರ್ಪಟ್ಟಿರುವ ಚಾರ್ಜಿಂಗ್ ಸಮಸ್ಯೆಯನ್ನು ನೀಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ.

ಓದಿರಿ: ದೇಹದ ಉಷ್ಣತೆ ಬಳಸಿ ಫೋನ್ ಚಾರ್ಜ್ ಮಾಡಿ

ಅದಕ್ಕೆಂದೇ ಇಂದು ಕೆಲವೊಂದು ಚಾರ್ಜಿಂಗ್ ಟಿಪ್ಸ್‌ಗಳೊಂದಿಗೆ ನಾವು ಬಂದಿದ್ದು ಇವುಗಳು ಖಂಡಿತ ನಿಮಗೆ ಸಹಕಾರಿಯಾಗಲಿವೆ. ಬನ್ನಿ ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಸ್ಪೇರ್ ಚಾರ್ಜರ್

ಸ್ಪೇರ್ ಚಾರ್ಜರ್

ಯಾವತ್ತಿಗೂ ಸ್ಪೇರ್ ಚಾರ್ಜರ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಉತ್ತಮ ಉಪಾಯವಾಗಿದೆ. ನಿಮ್ಮ ಡಿವೈಸ್‌ಗೆ ಅನುಮೋದನೆ ನೀಡಲಾದ ವಾಲ್ ಚಾರ್ಜರ್ ಅನ್ನು ಬಳಸಿ. ಮೊಫಿ@ ಪವರ್ ಸ್ಟೇಶನ್ ಟಿಎಮ್ ಮತ್ತು ಮೊಫಿ ಕೇಸ್ ಮೊದಲಾದ ಆಕ್ಸೆಸರೀಸ್ ಚಾರ್ಜ್ ಮಾಡಬಲ್ಲವು.

ಬ್ಯಾಟರಿ ಸುರಕ್ಷತೆ

ಬ್ಯಾಟರಿ ಸುರಕ್ಷತೆ

ಬ್ಯಾಟರಿ ಪ್ಲಗ್‌ಗಳನ್ನು ಸ್ವಚ್ಛವಾಗಿರಿಸಿ. 95 ಡಿಗ್ರಿ ಫ್ಯಾರನ್ ಹೀಟ್‌ಗಿಂತ ಮೇಲೆ ಡಿವೈಸ್ ಬಿಸಿಯಾಗಲು ಬಿಡಬೇಡಿ. ತಂಪಿನ ವಾತಾವರಣದಲ್ಲಿ ಫೋನ್ ಬಳಕೆಯನ್ನು ಆದಷ್ಟು ಸೀಮಿತಗೊಳಿಸಿ.

ಡಿವೈಸ್ ಅಪ್‌ಗ್ರೇಡ್ ಮಾಡಿ

ಡಿವೈಸ್ ಅಪ್‌ಗ್ರೇಡ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳೆಂದು ಪರಿಗಣಿಸಲ್ಪಟ್ಟಿರುವ ಡ್ರಾಯ್ಡ್ ಟರ್ಬೊ 2 ಮೋಟೋರೋಲಾ ಇತರ ಫೋನ್‌ಗಳಿಗಿಂತ ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ಪರಿಗಣಿತವಾಗಿದೆ. ಬಳಕೆಯನ್ನು ಆಧರಿಸಿ, 48 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ತಾಕತ್ತನ್ನು ಹೊಂದಿದೆ.

ಮಿತವ್ಯಯ

ಮಿತವ್ಯಯ

ಬಳಕೆಯಲ್ಲಿಲ್ಲದಾಗ ವೈಫೈಯನ್ನು ಆಫ್ ಮಾಡಿ. ಹೆಚ್ಚು ಸಿಗ್ನಲ್ ಶಕ್ತಿ ಇರುವಲ್ಲಿ 4ಜಿ ಎಲ್‌ಟಿಇಯನ್ನು ಆನ್ ಮಾಡಿಕೊಳ್ಳಿ. ಸ್ಕ್ರೀನ್ ಅನ್ನು ಆದಷ್ಟು ಡಿಮ್ ಮಾಡಿಟ್ಟುಕೊಳ್ಳಿ. ಅಪ್ಲಿಕೇಶನ್ ಅನ್ನು ಆಫ್ ಮಾಡಿ.

ಪುಶ್ ನೋಟಿಫಿಕೇಶನ್ ಆಫ್ ಮಾಡಿ

ಪುಶ್ ನೋಟಿಫಿಕೇಶನ್ ಆಫ್ ಮಾಡಿ

ಫೇಸ್‌ಬುಕ್‌ ವಾಲ್‌ನಲ್ಲಿ ಗೋಚರಿಸುವ ಅಧಿಸೂಚನೆಗಳು ಹೆಚ್ಚು ಮಾಹಿತಿಯುಕ್ತವಾಗಿದ್ದಿರಬಹುದು ಆದರೆ ಇದು ಹೆಚ್ಚು ಪವರ್ ಅನ್ನು ಬಳಸಿಕೊಳ್ಳುತ್ತವೆ. ನೀವು ಬಳಸುತ್ತಿಲ್ಲ ಎಂದಾದಲ್ಲಿ ಆದಷ್ಟು ಅವುಗಳನ್ನು ಆಫ್ ಮಾಡಿಟ್ಟುಕೊಳ್ಳಿ.

ಸೆಟ್ಟಿಂಗ್ಸ್ ಬದಲಾಯಿಸಿ

ಸೆಟ್ಟಿಂಗ್ಸ್ ಬದಲಾಯಿಸಿ

ಫೋನ್‌ನ ಡಿಸ್‌ಪ್ಲೇ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ. ಬ್ಲ್ಯೂಟೂತ್ ಆಫ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಜಿಪಿಎಸ್ ಆಪ್ಶನ್ ಕೂಡ ಹಿತಮಿತವಾಗಿ ಬಳಸಿ. ಲೈವ್ ವಾಲ್‌ಪೇಪರ್ ಅಪ್ಲಿಕೇಶನ್‌ಗಳು ಕೂಡ ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಪರಿಣಾಮವನ್ನು ಬೀರಬಲ್ಲವು.

 ಬ್ಯಾಟರಿ ಬಳಕೆಯ ಅಪ್ಲಿಕೇಶನ್‌ಗಳು

ಬ್ಯಾಟರಿ ಬಳಕೆಯ ಅಪ್ಲಿಕೇಶನ್‌ಗಳು

ಐಅಪ್ಟಿಮೈಜರ್ ಅಥವಾ ಬ್ಯಾಟರಿ ಗ್ರಾಫ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಬ್ಯಾಟರಿ ಬಳಕೆಯನ್ನು ನಿಯಂತ್ರಿಸಿ.

ಆಫ್ ಮಾಡದಿರಿ

ಆಫ್ ಮಾಡದಿರಿ

ನಿಮ್ಮ ಟ್ಯಾಬ್ಲೆಟ್ ಅಥವಾ ಫೋನ್ ಹೆಚ್ಚುವರಿ ಬ್ಯಾಟರಿ ಶಕ್ತಿಯನ್ನು ಬಳಸಿಕೊಳ್ಳಬಹುದು. ಪವರ್ ಸೈಕ್ಲಿಂಗ್ ಡಿವೈಸ್‌ ಅನ್ನು ರೀಬೂಟ್ ಮಾಡುತ್ತದೆ.

ಬದಲಾಯಿಸಿ

ಬದಲಾಯಿಸಿ

ನಿಮ್ಮ ಬ್ಯಾಟರಿಯನ್ನು ರೀಬೂಟ್ ಮಾಡಿಕೊಳ್ಳಿ. 100% ದಷ್ಟು ಬ್ಯಾಟರಿ ಚಾರ್ಜ್ ಮಾಡಿ. ಹೊಸ ಡಿವೈಸ್‌ಗಳಿಗೆ ಓವರ್ ಚಾಜ್ ಮಾಡಲು ಹೋಗಬೇಡಿ

ಟ್ಯಾಬ್ಲೆಟ್ ಇದ್ದಲ್ಲಿ ಬ್ಯಾಟರಿ ಡ್ರೈನ್ ಮಾಡಿ

ಟ್ಯಾಬ್ಲೆಟ್ ಇದ್ದಲ್ಲಿ ಬ್ಯಾಟರಿ ಡ್ರೈನ್ ಮಾಡಿ

ನಿಮ್ಮ ಟ್ಯಾಬ್ಲೆಟ್‌ನ ಬ್ಯಾಟರಿ ಪೂರ್ತಿ ಖಾಲಿಯಾದ ನಂತರವೇ ಅದನ್ನು ಚಾರ್ಜ್ ಮಾಡಿ.

Best Mobiles in India

English summary
Here are our top 10 battery tips you can do before you leave home, as well as when you are away and don’t have a charger.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X