Home
ಟೆಕ್ ನೌಕರಿ

ಶರವೇಗದಲ್ಲಿ ಫೋನ್‌ ಚಾರ್ಜಿಂಗ್ ಮಾಡಬೇಕೇ? ಇಲ್ಲಿದೆ ಟಿಪ್ಸ್

By Shwetha

ಫೋನ್ ಚಾರ್ಜ್ ಮಾಡುತ್ತಿರುವ ಸಂದರ್ಭದಲ್ಲೇ ನಿಮ್ಮ ಫೋನ್ ಕೈಕೊಡುತ್ತಿದೆಯೇ? ಚಾರ್ಜ್ ಆಗುತ್ತಿದೆ, ಆದರೆ ನಿಧಾನ ಗತಿಯಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆಯೇ? ಚಿಂತೆ ಬಿಡಿ ನಿಮ್ಮ ಈ ಕಷ್ಟ ಸಮಯದಲ್ಲೇ ಸಹಾಯವೊನ್ನದಗಿಸುವುದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗಿರುವೆವು. ಹೊಚ್ಚ ಹೊಸ ಚಾರ್ಜರ್ ಅನ್ನು ಖರೀದಿಸುವುದರ ಬದಲಿಗೆ ನಿಮ್ಮಲ್ಲಿ ಇರುವ ಚಾರ್ಜರ್‌ನಲ್ಲೇ ನಿಮ್ಮ ಫೋನ್‌ಗೆ ವೇಗದಲ್ಲಿ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಓದಿರಿ: ಏರ್‌ಸೆಲ್‌ ಗ್ರಾಹಕರಿಗೆ ಉಚಿತ ಇಂಟರ್‌ನೆಟ್‌

ಸ್ವಚ್ಛತೆಯನ್ನು ನಿರ್ವಹಿಸಿ

ಸ್ವಚ್ಛತೆಯನ್ನು ನಿರ್ವಹಿಸಿ

ನಿಮ್ಮ ಫೋನ್‌ನ ಯುಎಸ್‌ಬಿ ಪೋರ್ಟ್ ಅನ್ನು ಪರಿಶೀಲಿಸಿ ಮತ್ತು ಚಾರ್ಜಿಂಗ್ ಕೇಬಲ್ ಅನ್ನು ನೋಡಿಕೊಳ್ಳಿ. ಇನ್ನು ಸಂಪರ್ಕದಲ್ಲಿ ಏನಾದರೂ ತೊಂದರೆ ಇದೆಯೇ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಪೋರ್ಟ್ ಅನ್ನು ನಿಯಮಿತವಾಗಿ ಸ್ವಚ್ಛಮಾಡಿ.

ಸರಿಯಾದ ಓಎಸ್ ಪಡೆದುಕೊಳ್ಳಿ

ಸರಿಯಾದ ಓಎಸ್ ಪಡೆದುಕೊಳ್ಳಿ

ನಿಮ್ಮ ಡಿವೈಸ್ ಅನ್ನು ಇನ್ನೊಂದು ಓಎಸ್‌ಗೆ ಬದಲಾಯಿಸಿಕೊಳ್ಳುವುದು ಇನ್ನೊಂದು ಸಲಹೆಯಾಗಿದೆ. ಇದು ನಿಮ್ಮ ಬ್ಯಾಟರಿಯನ್ನು ವೇಗಗೊಳಿಸಲು ಸಹಕಾರಿಯಾಗಿದೆ. ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಅಪ್ಟಿಮೈಸ್ ಮಾಡಬಹುದಾದ ಹೊಸ ಓಎಸ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ನಿಜಕ್ಕೂ ಉತ್ತಮ ವಿಚಾರವಾಗಿದೆ.

ನಿಮ್ಮ ಡಿಐವೈ ಯುಎಸ್‌ಬಿ ಭದ್ರಪಡಿಸಿಕೊಳ್ಳಿ

ನಿಮ್ಮ ಡಿಐವೈ ಯುಎಸ್‌ಬಿ ಭದ್ರಪಡಿಸಿಕೊಳ್ಳಿ

ನಿಮ್ಮ ಯುಎಸ್‌ಬಿ ಪೋರ್ಟ್ ಮತ್ತು ಮೈಕ್ರೊ ಯುಎಸ್‌ಬಿ ಚಾರ್ಜರ್ ನಡುವಿನ ಸಂಪರ್ಕ ಉತ್ತಮವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದನ್ನು ನಿವಾರಿಸಿಕೊಳ್ಳಬಹುದಾಗಿದೆ.

ಬ್ಯಾಟರಿ ಬದಲಾಯಿಸಿ

ಬ್ಯಾಟರಿ ಬದಲಾಯಿಸಿ

ನಿಮ್ಮ ಬ್ಯಾಟರಿ ಸಮಸ್ಯೆಯನ್ನು ಒಡ್ಡುತ್ತಿದೆ ಎಂದಾದಲ್ಲಿ, ಏನೋ ತಪ್ಪಾಗಿದೆ ಎಂಬುದನ್ನು ಕಂಡುಕೊಳ್ಳಿ. ಬ್ಯಾಟರಿ ಬದಲಾಯಿಸಿಕೊಂಡು ನಿಮ್ಮ ಫೋನ್‌ನ ವೇಗದ ಚಾರ್ಜಿಂಗ್‌ಗೆ ಅವಕಾಶವನ್ನು ಒದಗಿಸಿ.

ಚಾರ್ಜಿಂಗ್ ಟೈಮ್ ಔಟ್

ಚಾರ್ಜಿಂಗ್ ಟೈಮ್ ಔಟ್

ಇನ್ನು ಚಾರ್ಜ್ ಸಮಯದಲ್ಲಿ ಹೆಚ್ಚಿನ ಒತ್ತಡವನ್ನು ಹಾಕುವುದು ನಿಧಾನ ಗತಿಯ ಚಾರ್ಜಿಂಗ್‌ಗೆ ಸಮಸ್ಯೆಯನ್ನು ತಂದೊಡ್ಡಬಹುದು. ಇನ್ನು ಚಾರ್ಜ್ ಮಾಡುವ ಸಮಯದಲ್ಲಿ ಬ್ಲ್ಯೂಟೂತ್ ಹಾಗೂ ವೈಫೈಯನ್ನು ಆಫ್ ಮಾಡಿಟ್ಟುಕೊಳ್ಳಿ.

ಹೆಚ್ಚುವರಿ ಸಲಹೆಗಳು

ಹೆಚ್ಚುವರಿ ಸಲಹೆಗಳು

ಇನ್ನು ಫೋನ್ ಚಾರ್ಜ್ ಮಾಡುವಾಗ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಅರಿತುಕೊಳ್ಳಿ.

ಸರಿಯಾದ ಚಾರ್ಜರ್ ಬಳಸಿ

ಸರಿಯಾದ ಚಾರ್ಜರ್ ಬಳಸಿ

ನೀವು ಫೋನ್ ಚಾರ್ಜ್‌ಗೆ ಬಳಸುತ್ತಿರುವ ಚಾರ್ಜರ್ ಯಾವುದೇ ದೋಷವನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಹಬ್ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಹಬ್ ಬಳಸಿ ಫೋನ್ ಚಾರ್ಜ್ ಮಾಡುವುದು 50 ಶೇಕಡದಷ್ಟು ಚಾರ್ಜಿಂಗ್ ಪ್ರಮಾಣವನ್ನು ಕುಗ್ಗಿಸುತ್ತದೆ.

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಡೆಸ್ಕ್‌ಟಾಪ್ ಬಳಸಿ ಚಾರ್ಜ್ ಮಾಡಿ

ಲ್ಯಾಪ್‌ಟಾಪ್‌ಗಳಿಗಿಂತಲೂ ಡೆಸ್ಕ್‌ಟಾಪ್ ಹೆಚ್ಚಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಆದ್ದರಿಂದ ಡೆಸ್ಕ್‌ಟಾಪ್‌ನಲ್ಲಿ ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಫೋನ್ ಚಾರ್ಜ್ ಮಾಡಿ.

ಡಾಕಿಂಗ್ ಸ್ಟೇಶನ್ ಬಳಸಿ

ಡಾಕಿಂಗ್ ಸ್ಟೇಶನ್ ಬಳಸಿ

ವಾಲ್ ಚಾರ್ಜರ್‌ಗಿಂತಲೂ ಡಾಕಿಂಗ್ ಸ್ಟೇಶನ್ ವೇಗವಾಗಿ ಫೋನ್ ಚಾರ್ಜ್ ಮಾಡುತ್ತದೆ.

Best Mobiles in India

English summary
In this article we are giving you some pointers you can try out before going to buy a new charger which could be a waste of money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+