ನಿಯಮಿತ ಕಂಪ್ಯೂಟರ್ ಬಳಕೆದಾರರೇ ಈ ಟಿಪ್ಸ್ ನಿಮಗಾಗಿ

Written By:

ಇಂದಿನ ದಿನಗಳಲ್ಲಿ ಕಂಪ್ಯೂಟರ್ ಅನ್ನು ಬಳಸದವರು ಯಾರಿದ್ದಾರೆ ಹೇಳಿ. ಕಚೇರಿಯಲ್ಲಿ, ನಿವಾಸದಲ್ಲಿ ಹೀಗೆ ಪ್ರತಿಯೊಂದೆಡೆಯಲ್ಲೂ ಕಂಪ್ಯೂಟರ್ ಅತ್ಯಗತ್ಯ ಎಂದೆನಿಸಿದೆ. ನಿಯಮಿತವಾಗಿ ಕಂಪ್ಯೂಟರ್ ಅನ್ನು ಬಳಸುವುದು ಕಣ್ಣಿಗೆ ಅಪಾಯವನ್ನು ತಂದೊಡ್ಡಲಿದೆ ಮತ್ತು ಕೆಲವೊಂದು ದೈಹಿಕ ನ್ಯೂನತೆಗಳನ್ನು ನಿಮ್ಮಲ್ಲಿ ಉಂಟುಮಾಡಲಿದೆ.

ಓದಿರಿ: ಇಂಟರ್‌ನೆಟ್‌ನಲ್ಲಿ ಈ ವೀಡಿಯೋಗಳನ್ನು ಪತ್ತೆಹಚ್ಚುವುದೇ ಕಷ್ಟ

ಹಾಗಿದ್ದರೆ ನಿಮ್ಮ ಈ ಸಮಸ್ಯೆಯನ್ನು ದೂರಮಾಡಲೆಂದೇ ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ನೀಡುತ್ತಿದ್ದು ಇದನ್ನು ಬಳಸಿಕೊಂಡು ಕಂಪ್ಯೂಟರ್ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಮಗೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿರಾಮವನ್ನು ತೆಗೆದುಕೊಳ್ಳಿ

ವಿರಾಮವನ್ನು ತೆಗೆದುಕೊಳ್ಳಿ

ಬ್ರೇಕ್ ತೆಗೆದುಕೊಳ್ಳಿ

ಹೆಚ್ಚಿನ ಸಮಯಗಳವರೆಗೆ ಪರದೆಯ ಎದುರು ನೀವು ಕುಳಿತುಕೊಳ್ಳಬೇಕು ಎಂದಾದಲ್ಲಿ, ನಡುವೆ ವಿರಾಮವನ್ನು ತೆಗೆದುಕೊಳ್ಳಿ. ಇನ್ನು ಕೆಲಸ ಮಾಡುವಾಗ ಆಂಟಿ ಗ್ಲೇರ್‌ಗಳನ್ನು ಬಳಸಿ. ಇದು ನಿಮ್ಮ ಕಣ್ಣುಗಳನ್ನು ಕಂಪ್ಯೂಟರ್ ಪರದೆಗಳಿಂದ ರಕ್ಷಿಸುತ್ತದೆ.

ಸಮಾನವಾಗಿ ಇರಿಸಿಕೊಳ್ಳಿ

ಸಮಾನವಾಗಿ ಇರಿಸಿಕೊಳ್ಳಿ

ಕಣ್ಣಿನ ಮಟ್ಟವನ್ನು ಸಮಾನವಾಗಿ ಇರಿಸಿಕೊಳ್ಳಿ

ನಿಮ್ಮ ಕಣ್ಣಿನ ನೇರಕ್ಕೆ ಕಂಪ್ಯೂಟರ್ ಸ್ಕ್ರೀನ್ ಅನ್ನು ಸಮಾನಾಂತರವಾಗಿ ಇರಿಸಿಕೊಳ್ಳಿ. ತುಂಬಾ ಕೆಳಗೆ ಅಥವಾ ಮೇಲಕ್ಕೆ ಪರದೆಯನ್ನು ದಿಟ್ಟಿಸಿ ನೋಡುವುದು ನಿಮ್ಮ ಕಣ್ಣುಗಳಿಗೆ ಆಯಾಸವನ್ನುಂಟು ಮಾಡಬಹುದು.

ಫಾಂಟ್ ಬಣ್ಣ

ಫಾಂಟ್ ಬಣ್ಣ

ಕಾಂಟ್ರಾಸ್ಟ್

ಫಾಂಟ್ ಬಣ್ಣ ಯಾವಾಗಲೂ ಗಾಢವಾಗಿರಲಿ ಮತ್ತು ಹಿನ್ನಲೆ ಮಂದವಾಗಿರಲಿ. ಆ ಬಣ್ಣಗಳಲ್ಲಿ ಪಠ್ಯಗಳನ್ನು ಓದುವುದು ಕಣ್ಣಿಗೆ ಆಯಾಸವನ್ನುಂಟು ಮಾಡುವುದಿಲ್ಲ.

ಅತಿ ಕಡಿಮೆ ಬೆಳಕು

ಅತಿ ಕಡಿಮೆ ಬೆಳಕು

ಬೆಳಕಿನ ಹೊಂದಿಸುವಿಕೆ

ಅತಿ ಕಡಿಮೆ ಬೆಳಕು ಮತ್ತು ಅತಿ ಹೆಚ್ಚು ಬೆಳಕಿನಲ್ಲಿ ಎಂದಿಗೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡದಿರಿ.

ಬ್ರೈಟ್‌ನೆಸ್ ಕಡಿಮೆ ಮಾಡಿ

ಬ್ರೈಟ್‌ನೆಸ್ ಕಡಿಮೆ ಮಾಡಿ

ಕಂಪ್ಯೂಟರ್ ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ

ನಿಮ್ಮ ಕಂಪ್ಯೂಟರ್ ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ.

ಹಸಿರಾಗಿರಲಿ

ಹಸಿರಾಗಿರಲಿ

ವಾಲ್‌ಪೇಪರ್ ಹಸಿರಾಗಿರಲಿ

ನಿಮ್ಮ ವಾಲ್‌ಪೇಪರ್ ಯಾವಾಗಲೂ ಹಸಿರಾಗಿರಲಿ. ಹೀಗೆ ಮಾಡುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗುತ್ತದೆ.

ವೇಗ

ವೇಗ

ಶಾರ್ಟ್‌ಕಟ್‌ಗಳನ್ನು ಬಳಸಿ

ಮನುಷ್ಯರಿಗಿಂತಲೂ ವೇಗವಾಗಿ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸಬಲ್ಲುದು. ಆದಷ್ಟು ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಶಾರ್ಟ್‌ಕಟ್‌ಗಳನ್ನು ಬಳಸಿ ಇದರಿಂದ ಸಮಯವೂ ಉಳಿತಾಯವಾಗುವುದರ ಜೊತೆಗೆ ನಿಮ್ಮ ಕೆಲಸವೂ ಆದಷ್ಟು ಬೇಗ ಮುಗಿಯುತ್ತದೆ.

ನಿಮ್ಮನ್ನು ರಕ್ಷಿಸಿಕೊಳ್ಳಿ

ನಿಮ್ಮನ್ನು ರಕ್ಷಿಸಿಕೊಳ್ಳಿ

ವೈರಸ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಉತ್ತಮವಾಗಿರುವ ಉಚಿತ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ದೋಷಪೂರಿತವೆಂದು ಕಾಣುವ ಲಿಂಕ್‌ಗಳನ್ನು ತೆರೆಯಬೇಡಿ. ನಂಬಲನರ್ಹವಾದ ಮೂಲಗಳಿಂದ ಪ್ರೊಗ್ರಾಮ್‌ಗಳನ್ನು ಇನ್‌ಸ್ಟಾಲ್ ಮಾಡದಿರಿ.

ಸಮಸ್ಯೆಗಳನ್ನು ನೀಗಿಸು

ಸಮಸ್ಯೆಗಳನ್ನು ನೀಗಿಸು

ನೆಟ್‌ವರ್ಕ್ ಹೊಂದಿಸಿ

ರೂಟರ್‌ಗಳನ್ನು, ಮಾಡೆಮ್‌ಗಳನ್ನು ಮತ್ತು ಇತರ ಅಂಶಗಳನ್ನು ಅರಿತುಕೊಳ್ಳುವುದು ನಿಮಗೆ ಕಷ್ಟವನ್ನುಂಟು ಮಾಡಬಹುದು ಆದರೆ ಇದು ನಿಮ್ಮ ಕಂಪ್ಯೂಟರ್ ಕುರಿತ ಬಹಳಷ್ಟು ಸಮಸ್ಯೆಗಳನ್ನು ನೀಗಿಸುವಲ್ಲಿ ಸಹಾಯ ಮಾಡಬಲ್ಲುದು.

ಡ್ರಾಪ್‌ಬಾಕ್ಸ್‌

ಡ್ರಾಪ್‌ಬಾಕ್ಸ್‌

ಮನೆಯ ಕಂಪ್ಯೂಟರ್ ಅನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ

ಡ್ರಾಪ್‌ಬಾಕ್ಸ್‌ನಂತಹ ಸೇವೆಯನ್ನು ಬಳಸಿ ನಿಮ್ಮ ಕಂಪ್ಯೂಟರ್ ಫೈಲ್‌ಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here at Lifehacker, we take a lot of the simpler stuff for granted: how to avoid viruses, use keyboard shortcuts, or even keep your data backed up. Even if you’ve mastered all of these tricks (and there’s a good chance you haven’t), you may want to send this along to some of your less computer-savvy friends.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot