ಇಂಟರ್‌ನೆಟ್‌ನಲ್ಲಿ ಈ ವೀಡಿಯೋಗಳನ್ನು ಪತ್ತೆಹಚ್ಚುವುದೇ ಕಷ್ಟ

  By Suneel
  |

  ಆಧುನಿಕ ಜಗತ್ತಿನಲ್ಲಿ ಟೆಕ್ನಾಲಜಿ ಆವಿಷ್ಕಾರಗಳಿಂದ ಇಂದು ಜನರ ಆಸಕ್ತಿಗಳು ಬದಲಾಗಿವೆ. ಅಂದು ಕ್ಯಾಮೆರಾ ಒಬ್ಬರ ಕೈನಲ್ಲಿದ್ದು ಪೋಜ್‌ ಕೊಡುವವರು ಬೇರೆಯವರಾಗಿದ್ದರು . ಇಂದು ನಮ್ಮ ಕ್ಯಾಮೆರಾಗಳಿಗೆ ನಾವೇ ಪೋಜ್‌ ಕೊಡುತ್ತಾ ಸೆಲ್ಫಿ ಪೋಟೊ ತೆಗೆದುಕೊಳ್ಳುವವರೆಗೆ ಬಂದು ನಿಂತಿದ್ದೇವೆ. ಹಾಗೂ ಹಿಂದೆ ಎಂದೂ ತೆಗೆಯದಂತಹ ವೀಡಿಯೋಗಳನ್ನು ಸಹ ರೆಕಾರ್ಡ್‌ ಮಾಡುತ್ತಿದ್ದೇವೆ. ಹೌದು ಅಂತಹ ವೀಡಿಯೋಗಳು ಸಾರ್ವಜನಿಕರಿಂದಲೂ ಹಲವಾರು ಕಾರಣಗಳಿಂದ ರೆಕಾರ್ಡ್ ಆಗುತ್ತಿವೆ.

  ಫೋನ್ ಚಾರ್ಜಿಂಗ್ ಸಮಸ್ಯೆಯೇ ಇಲ್ಲಿದೆ ಪರಿಹಾರಗಳು

  ಅಂತಹ ವೀಡಿಯೊಗಳ ಬಗ್ಗೆ ನಾವು ಇಂದಿನ ಲೇಖನದಲ್ಲಿ ತಿಳಿಸಿಕೊಡಲ್ಲಿದ್ದೇವೆ. ಆ ವೀಡಿಯೋಗಳು ಸಹಜವಲ್ಲದಿದ್ದರೂ ಅಂತರ್ಜಾಲದಲ್ಲಿ ಹುಡುಕಲು ಬಹಳ ಕಷ್ಟಕರವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬ್ರಸೆಲ್ಸ್ ವಿಮಾನ ನಿಲ್ದಾಣದ ಡೈಮಂಡ್ ಕಳ್ಳತನದ ವೀಡಿಯೊ

  ಮಾಸ್ಕ್‌ ಹಾಕಿಕೊಂಡ 8 ಜನರ ಗುಂಪು 2013 ರ ಫೆಬ್ರವರಿ 18 ರಂದು ಬ್ರಸಲ್ಸ್‌ ವಿಮಾನ ನಿಲ್ದಾಣದಲ್ಲಿ ಸುಮಾರು $ 50 ಮಿಲಿಯನ್‌ ಬೆಲೆ ಬಾಳುವ ಡೈಮೆಂಡನ್ನು ಕಳ್ಳತನ ಮಾಡಿದರೂ. ಇವರು ಪೋಲೀಸರಂತೆ ವಸ್ತ್ರಧರಿಸಿ ವಿಮಾಣ ನಿಲ್ದಾಣ ಕಾಂಪೌಂಡ್‌ ಮಾರ್ಗದಲ್ಲಿ ರಂಧ್ರ ಮಾಡಿ ತಮ್ಮ ಕಳ್ಳತನಕ್ಕೆ ಅನುವು ಮಾಡಿಕೊಂಡಿದ್ದರು. ಈ ಕಳ್ಳರನ್ನು ಹಿಡಿಯಲು ಮಿಲಿಟರಿ ಪಡೆ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಈ ಘಟನೆಯನ್ನು ಸಾರ್ವಜನಿಕರು ವೀಡಿಯೊ ಮಾಡಿದ್ದರು.

  ಸೆಸೇಮ್ ಸ್ಟ್ರೀಟ್ ಸಂಚಿಕೆ 847

  ಇದು ಮಕ್ಕಳು ಹೆಚ್ಚು ನೋಡುತ್ತಿದ್ದ ಒಂದು ಟಿವಿ ಶೋ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೆಚ್ಚು ಪ್ರಿಯವಾಗುವಂತೆ ಶೋ ನೀಡಲಾಗುತ್ತಿತ್ತು. ಈ ಶೋ ನ ಒಂದು ಸಂಚಿಕೆಯಲ್ಲಿ ಮಾಟಗಾತಿಯರ ಪಾತ್ರ ಮಕ್ಕಳಿಗೆ ಗಾಬಿರಿ ಯಾಗುವಂತ ಹಾಗೂ ನಿದ್ರೆಯಲ್ಲು ಬೆಚ್ಚಿಬೀಳುವಂತೆ ಮಾಡಿದ್ದರಿಂದ ಪೋಷಕರು ದೂರು ನೀಡಿದ್ದರು. ಈ ಶೋ ನ ಸಂಚಿಕೆ 847 ರ ವೀಡಿಯೋ ಇಂದಿಗೂ ಹುಡುಕಲು ಸಾಧ್ಯವಾಗಿಲ್ಲ.

  ತಿಮೋತಿ ಟ್ರೇಡ್‌ ವೆಲ್‌ ಡೆತ್‌ ಟೇಪ್‌

  ತಿಮೋತಿ ಟ್ರೇಡ್‌ವೆಲ್‌ಒಬ್ಬ ಕರಡಿ ವೀಕ್ಷಣೆ ಉತ್ಸಾಹಿ. ಈತ ಒಮ್ಮೆ ಕಟ್‌ಮೈ ನ್ಯಾಷನಲ್‌ ಪಾರ್ಕ್‌ನ ಎಮಿ ಹ್ಯುಗರ್‌ನಾರ್ಡ್‌ ಬಳಿ ತನ್ನ ಗೆಳತಿಯೊಂದಿಗೆ ಕರಡಿ ದಾಳಿಗೆ ಬಲಿಯಾದನು. ಈತ 2003 ರ ಸೆಪ್ಟೆಂಬರ್‌ 5 ರಲ್ಲಿ ಸಾವಿಗೀಡಾದನು. ಈತ ದಾಳಿಗೆ ಒಳಗಾದಾಗ ಈತನ ಕ್ಯಾಮೆರಾ ಆನ್‌ ಆಗಿ ಧ್ವನಿ ರೆಕಾರ್ಡ್‌ ಆಗಿತ್ತು ಈ ವೀಡಿಯೊ ಈಗ ಬ್ಯಾಂಕ್‌ ಲಾಕರ್‌ ನಲ್ಲಿದೆ.

  ಕಾರ್ಲಾ ಹೊಮೊಲ್ಕಾ ಟೇಪ್ಸ್‌

  ಪಾಲ್‌ ಬರ್ನಾರ್ಡೊ ಈತ 198೦-1990ಸ್ಕಾರ್ಬರೋ ಸಮುದಾಯವನ್ನು ಭಯಹುಟ್ಟಿಸುತ್ತಿದ್ದವನು. ಹಾಗೂ ಈತ ಒಬ್ಬ ರೇಪಿಸ್ಟ್ ಆಗಿದ್ದನು. ಈತ ಮಾಡಿದ ಪ್ರತಿಯೊಂದು ಕೃತ್ಯಗಳು ವೀಡಿಯೋ ಆಗಿದ್ದು ತನ್ನ ಹೆಂಡತಿ ಕಾರ್ಲಾ ಹೊಮೊಲ್ಕಾಗೆ ಸಿಕ್ಕಿ ನೋಡಿದ್ದಳು. ಈ ವೀಡಿಯೋಗಳು ಸಾರ್ವಜನಿಕರಿಂದ ಸೆರೆಹಿಡಿಯಲ್ಪಟ್ಟಿದ್ದವು.

  ಕ್ರಿಸ್ಟಿನ್ ಚುಬ್ಬಕ್ ಆತ್ಮಹತ್ಯೆಯ ಟೇಪ್

  ಕ್ರಿಸ್ಟಿನ್‌ ಈಕೆ ಟಾಕ್‌ ಶೋ ಕಾರ್ಯಕ್ರಮ ನಿರೂಪಕಿ. ಈಕೆ 1974 ಜುಲೈ 15 ರಲ್ಲಿ ಲೈವ್‌ ಶೋನಲ್ಲಿ ಆತ್ಯಹತ್ಯೆ ಮಾಡಿಕೊಂಡಳು ಈ ವೀಡಿಯೋವನ್ನು ಆಕೆಯ ಪ್ಯಾಮಿಲಿಗೆ ಕೊಡಲಾಯಿತು. ಆದರೆ ಪ್ರಸಾರ ಮಾಡಲಿಲ್ಲ.

  Dzhokhar Tsarnaev ಬಾಂಬ್ ದಾಳಿಯ

  2013 ರ ಏಪ್ರಿಲ್‌ 15 ರಲ್ಲಿ ಬೊಸ್ಟನ್‌ ಮ್ಯಾರಥಾನ್‌ನಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಂಡವು. ಈ ಬಾಂಬ್ ಸ್ಪೋಟವನ್ನು ಸಾರ್ವಜನಿಕರು ವೀಡಿಯೋ ಮಾಡಿದ್ದರು. ಈ ವೀಡಿಯೋ ಮುಖಾಂತರ Dzhokhar ಮತ್ತು Tsarnaev ಇಬ್ಬರನ್ನು ಬಂಧಿಸಲು ಸಾಧ್ಯವಾಗಿತ್ತು. ಹಾಗೂ ಸಾರ್ವಜನಿಕರು ಸಹ ಈ ವೀಡಿಯೊಗಳನ್ನು ನೋಡಿದ್ದರು.

  ಅಮೆರಿಕಾದ ಏರ್ಲೈನ್ 77 ವಿಮಾನದ ವೀಡಿಯೊಗಳು

  2001 ಸೆಪ್ಟೆಂಬರ್ 11 ಅಮೇರಿಕಾದ ವರ್ಲ್ಡ್ ಟ್ರೇಡ್‌ ಸೆಂಟರ್‌ ಜೊತೆಗೆ ಏರ್ಲೈನ್‌ 77 ವಿಮಾನವನ್ನು ಹೈಜಾಕ್‌ ಮಾಡಲಾಗಿ ಇದರಲ್ಲಿ 59 ಜನರು ಸಾವಿಗೀಡಾದರು ಇದನ್ನು ಸಾರ್ವಜನಿಕರು ವೀಡಿಯೋ ಮಾಡಿದ್ದರು . ಆದರೆ ಇದನ್ನು ಆ ಸಾರ್ವಜನಿಕರಿಂದ ಸಂಗ್ರಹಿಸಿ ವೀಕ್ಷಣೆಗೆ ಬಿಡಲಿಲ್ಲ.

  ಸ್ಟೀವ್ ಇರ್ವಿನ್ ಡೆತ್ ವಿಡಿಯೋ

  ಸ್ಟೀವ್‌ ಇರ್ವಿನ್‌ ತನ್ನ ಜೀವನವನ್ನು ಪ್ರಾಣಿಗಳ ಸಹಾಯಕ್ಕೆ ಮುಡಿಪಾಗಿರಿಸಿದ್ದ. ಒಮ್ಮೆ ಕಿರುಚಿತ್ರಕ್ಕಾಗಿ ಆಳದ ನೀರಿಗೆ ಇಳಿದು ಚಿತ್ರ ಸೆರೆ ಹಿಡಿಯುವಾಗ ಮೊಸಳೆಯಿಂದ ದಾಳಿಗೊಳಗಾಗಿ ಒಮ್ಮೆ ಅದರಿಂದ ಬಚಾಯಿಸಿಕೊಂಡನಾದರೂ ನಂತರ ಆತ ಮರಣ ಹೊಂದಿದನು.ಈ ಘಟನೆ ವೀಡಿಯೊವನ್ನು ಆತನ ಕುಟುಂಬದವರು ನಾಶ ಪಡಿಸಿದರು.

  ಸ್ಯಾಂಡಿ ಹುಕ್ ಕಣ್ಗಾವಲು ವೀಡಿಯೊ

  ಅದಂ ಲಾಂಜ 2012 ಡಿಸೆಂಬರ್‌ 14 ರಂದು ಸುಮಾರು 9:35 ಸಮಯದಲ್ಲಿ ಬುಸ್‌ಮಾಸ್ಟರ್‌ XM15-E2S ರೈಫಲ್ ಬಳಸಿ ಸ್ಯಾಂಡಿ ಹುಕ್‌ ಪ್ರಾಥಮಿಕ ಶಾಲೆಯ ಹತ್ತಿರ 26 ಜನರನ್ನು ಕೊಂದನು. ಈ ಘಟನೆಯನ್ನು ಶಾಲೆಯ ಕ್ಯಾಮೆರಾಗಳು ಸೆರೆ ಹಿಡಿದಿದ್ದು ಸಾರ್ವಜನಿಕರು ನೋಡಿದ್ದರು. ತದನಂತರದಲ್ಲಿ ಈ ವೀಡಿಯೋ ಸಿಗದಂತೆ ಮಾಡಲಾಯಿತು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In the modern era, surveillance cameras have recorded many of the incidents that could never be recorded before. Of course, many of these videos are kept from the general public’s eye due to several reasons.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more