ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿದೆಯೇ? ಸೆಕ್ಯೂರ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತಲೂ ಹೆಚ್ಚಾಗಿ ಅವುಗಳ ಸುರಕ್ಷತೆಗೆ ನಾವು ಶ್ರಮವಹಿಸಬೇಕು.! ಮೊದಲೆಲ್ಲಾ ಒಂದು ಮೊಬೈಲ್ ಇದ್ದರೆ ಅದರ ಬಗ್ಗೆ ಯಾವುದೇ ಚಿಂತೆ ಇರದೆ ಇದ್ದುಬಿಡುತ್ತಿದ್ದೆವು.!!

|

ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತಲೂ ಹೆಚ್ಚಾಗಿ ಅವುಗಳ ಸುರಕ್ಷತೆಗೆ ನಾವು ಶ್ರಮವಹಿಸಬೇಕು.! ಮೊದಲೆಲ್ಲಾ ಒಂದು ಮೊಬೈಲ್ ಇದ್ದರೆ ಅದರ ಬಗ್ಗೆ ಯಾವುದೇ ಚಿಂತೆ ಇರದೆ ಇದ್ದುಬಿಡುತ್ತಿದ್ದೆವು. ಆದರೆ ಇಂದಿನ ಸ್ಮಾರ್ಟ್‌ಪೋನ್ ಯುಗದಲ್ಲಿ ಸ್ಮಾರ್ಟ್‌ಫೋನ್ ಸುರಕ್ಷತೆಯೆ ಬಹಳ ಮುಖ್ಯ.!!

ಹೌದು, ಆನ್‌ಲೈನ್‌ ಶಾಪಿಂಗ್, ಬ್ಯುಸಿನೆಸ್ ಮತ್ತು ಬ್ಯಾಂಕ್ ವ್ಯವಹಾರದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ಕೂ ನಾವು ಸ್ಮಾರ್ಟ್‌ಫೊನ್ ಅನ್ನೇ ಅವಲಂಬಿಸಿದ್ದೇವೆ. ಒಮ್ಮೆ ಎಚ್ಚರ ತಪ್ಪಿದರೂ ಸಾಕು ನಾನಾತರದ ತೊಂದರೆಗೆ ನಾವು ಸಿಲುಕಿಬಿಡುತ್ತೇವೆ. ಹಾಗಾಗಿ, ಸ್ಮಾರ್ಟ್‌ಫೋನ್‌ ಸುರಕ್ಷತೆ ಬಹಳ ಮುಖ್ಯ.!!

ಓದಿರಿ: ಜಿಯೋ ಸಹಾಯಕ್ಕಾಗಿ ನಿಯಮಗಳನ್ನು ಬದಲಿಸಲು ಮುಂದಾದ ಟ್ರಾಯ್!?

ಹಾಗಾಗಿ, ನಮ್ಮದೇ ಕೆಲವು ತಪ್ಪುಗಳಿಂದ ಆಗಬಹುದಾದ ತೊಂದರೆಗಳಿಗೆ, ಈಗಲೇ ಯಾವ ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದು? ಇದರಿಂದ ಸ್ಮಾರ್ಟ್‌ಫೋನ್ ಎಷ್ಟು ಸೆಕ್ಯೂರ್ ಆಗುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

 ಆಂಡ್ರಾಯ್ಡ್ ಅಪ್ಲಿಕೇಶನ್‌ ಅಪ್‌ಡೇಟ್ ಮಾಡಿ!!

ಆಂಡ್ರಾಯ್ಡ್ ಅಪ್ಲಿಕೇಶನ್‌ ಅಪ್‌ಡೇಟ್ ಮಾಡಿ!!

ನೀವು ಏನೇ ಮಾಡದಿದ್ದರೂ ಪರವಾಗಿಲ್ಲ ನಿಮ್ಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನಿಯಮಿತವಾಗಿ ಅಪ್‌ಡೇಟ್ ಮಾಡಿಕೊಳ್ಳುತ್ತಿರಿ. ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಅತ್ಯಂತ ಸುರಕ್ಷಿತ ಕ್ರಮಗನಳಲ್ಲಿ ಮೊದಲ ಕ್ರಮ ಆಪ್ ಅಪ್‌ಡೇಟ್ ಮಾಡುವುದು. ಇದರಿಂದ ನಿಮ್ಮ ಫೋನ್ ಹೆಚ್ಚು ಸುರಕ್ಷಿತವಾಗುತ್ತದೆ.!!

ಆಂಟಿವೈರಸ್ ಅಪ್ಲಿಕೇಶನ್

ಆಂಟಿವೈರಸ್ ಅಪ್ಲಿಕೇಶನ್

ಫೋನ್‌ನಲ್ಲಿ ಉತ್ತಮ ಆಂಟಿವೈರಸ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವುದು ಫೋನ್‌ ಸುರಕ್ಷತೆಗೆ ಅತ್ಯುತ್ತಮ ಕ್ರಮಗಳಲ್ಲಿ ಒಂದು ಎನ್ನಬಹುದು. ಉತ್ತಮ ಆಂಟಿವೈರಸ್ ಅಪ್ಲಿಕೇಶನ್ ಇದ್ದರೆ ಹ್ಯಾಕರ್‌ಗಳ ಚಟುವಟಿಗೆಗಳಿಗೆ ಕಡಿವಾಣ ಹಾಕುತ್ತದೆ.!!

ಸಾರ್ವಜನಿಕ ವೈಫೈ ಬಳಕೆ ಬೇಡ!!

ಸಾರ್ವಜನಿಕ ವೈಫೈ ಬಳಕೆ ಬೇಡ!!

ಸಾಮಾನ್ಯವಾಗಿ ಉಚಿತ ಇಂಟರ್‌ನೆಟ್‌ ಸಿಗುತ್ತಿದೆ ಎಂದರೆ ಎಲ್ಲರೂ ಉಪಯೋಗಿಸುವುದಕ್ಕೆ ನೋಡುತ್ತೇವೆ. ಆದರೆ, ಇವುಗಳಿಂದ ಆಗಬಹುದಾದ ತೊಂದರೆಯನ್ನು ಮರೆತುಬಿಡುತ್ತೇವೆ. ನೀವು ಸಾರ್ವಜನಿಕ ವೈಫೈಗೆ ಸಂಪರ್ಕಿಸಿದರೆ ನಿಮ್ಮ ಮನೆಯ ಕೀಲಿಯನ್ನು ಕಳ್ಳನ ಕೈಗೆ ಕೊಟ್ಟಂತಾಗುತ್ತದೆ ಹಾಗಾಗಿ, ಸಾರ್ವಜನಿಕ ವೈಫೈ ಬಳಕೆ ಬೇಡ!!

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಇದೆಯಾ?

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಇದೆಯಾ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅನ್ನು ಸಕ್ರಿಯಗೊಳಿಸಿ. ಏಕೆಂದರೆ ಈ ಅಪ್ಲಿಕೇಶನ್ ಬಳಸಿ ನಿಮ್ಮ ಕಳೆದು ಹೋದ ಆಂಡ್ರಾಯ್ಡ್ ಫೋನ್ ಅನ್ನು ಹುಡುಕಿಕೊಳ್ಳಬಹುದಾಗಿದೆ. ಹಾಗಾಗಿ, ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಬಹಳ ಪ್ರಮುಖ ತಂತ್ರಾಂಶವಾಗಿದೆ.!!

ಪಾಸ್‌ವರ್ಡ್ ಅತ್ಯುತ್ತಮವಾಗಿರಲಿ.!!

ಪಾಸ್‌ವರ್ಡ್ ಅತ್ಯುತ್ತಮವಾಗಿರಲಿ.!!

ಸ್ಮಾರ್ಟ್‌ಫೋನ್ ಸೆಕ್ಯುರಿಟಿಗೆ ಮತ್ತೊಂದು ಪ್ರಮುಖ ಅಂಶ ಉತ್ತಮ ಪಾಸ್‌ವರ್ಡ್ ನೀಡುವುದು. ಸಿಂಪಲ್ ಆದಂತಹ ಪಾಸ್‌ವರ್ಡ್ ಬಳಕೆ ಬಿಟ್ಟು ಸಂಯುಕ್ತ ಕ್ಲಿಷ್ಟಕರ ಪಾಸ್‌ವರ್ಡ್‌ ಮುಲಕ ಭದ್ರತೆಯನ್ನು ಅಳವಡಿಸಲು ಮರೆಯದಿರಿ.!

Best Mobiles in India

English summary
Securing your Android phone or Android tablet is more involved than adding a PIN lock .to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X