ಜಿಯೋ ಸಹಾಯಕ್ಕಾಗಿ ನಿಯಮಗಳನ್ನು ಬದಲಿಸಲು ಮುಂದಾದ ಟ್ರಾಯ್!?

Written By:

ಬಳಕೆಯಲ್ಲಿಲ್ಲದ ಟೆಲಿಕಾಂ ನಿಯಮಗಳು ಮತ್ತು ನಿಬಂಧನೆಗಳು ಸೇರಿ, ಹೊಸದಾಗಿ ಮಾರುಕಟ್ಟೆಗ ಕಾಲಿಡುವ ಟೆಲಿಕಾಂ ಕಂಪೆನಿಗಳಿಗಿರುವ ಹಲವು ನಿಯಮಗಳನ್ನು ತೆಗೆದುಹಾಕಲು ಭಾರತ ಸರ್ಕಾದ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ (TRAI) ನಿರ್ಧರಿಸಿದೆ.!!

ಹೊಸ ಹೊಸ ತಂತ್ರಜ್ಞಾನಗಳು ಟೆಲಿಕಾಂ ಮಾರುಕಟ್ಟೆಗೆ ಬರುತ್ತಿದ್ದು, ನಾವು ಹಳೆಯ ನಿಯಮಗಳನ್ನು ಹೆಚ್ಚು ದಿನಗಳ ಕಾಲ ಪಾಲಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಸ್ತುತ ವರ್ಷದಲ್ಲಿ ಟೆಲಿಕಾಂನ ಬಹು ನಿಯಮಗಳನ್ನು ಬದಲಾಯಿಸುತ್ತಿದ್ದೇವೆ ಎಂದು ಟ್ರಾಯ್ ಅಧ್ಯಕ್ಷ ಆರ್‌ಎಸ್‌ ಶರ್ಮಾ ಹೇಳಿದ್ದಾರೆ.!

ಜಿಯೋ ತನ್ನ ಉಚಿತ ಸೇವೆಯನ್ನು ನಿಯಮ ಮೀರಿ ಮುಂದುವರೆಸುತ್ತಿದೆ ಎಂದು ಏರ್‌ಟೆಲ್ ಸೇರೆ ಟೆಲಿಕಾಂನ ಎಲ್ಲಾ ಕಂಪೆನಿಗಳು ಟ್ರಾಯ್‌ ಮೇಲೆ ಪ್ರಕರಣ ದಾಖಲಿಸಿದ್ದವು. ಹಾಗಾಗಿ, ಟ್ರಾಯ್ ತನ್ನ ನಿಯಮಗಳನ್ನು ಬದಲಿಸುತಿರಬಹುದದೇ ಎಂಬ ಸಂಶಯ ಮೂಡುತ್ತಿದೆ.!! ಹಾಗಾದರೆ, ಟ್ರಾಯ್‌ನ ಏನೆಲ್ಲಾ ಟೆಲಿಕಾಂ ನಿಯಮಗಳು ಬದಲಾಗಬುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಸ್ತುತ ಇರುವ ಶುಲ್ಕದ ನಿಯಮಗಳು!

ಪ್ರಸ್ತುತ ಇರುವ ಶುಲ್ಕದ ನಿಯಮಗಳು!

ಟೆಲಿಕಾಂ ಸಂಸ್ಥೆಗಳಿಗೆ ಟ್ರಾಯ್ ವಿಧಿಸುತ್ತಿರುವ ಶುಲ್ಕದ ನಿಯಮಗಳು ಪ್ರಸ್ತುತ ಸಮಯಕ್ಕೆ ಹಳತಾಗಿದ್ದು, ಹೊಸ ಶುಲ್ಕದ ನಿಯಮಗಳನ್ನು ಜಾರಿಗೆ ತರಲು ಟ್ರಾಯ್ ಚಿಂತಿಸಿದೆ. ಹಾಗಾಗಿ, ಇನ್ನು ಟೆಲಿಕಾಂ ಕಂಪೆನಿಗಳು ಹೆಚ್ಚು ಶುಲ್ಕವನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಬಹದು.!!

ಮೊಬೈಲ್ ನಂಬರ್ ವಿತರಣೆ

ಮೊಬೈಲ್ ನಂಬರ್ ವಿತರಣೆ

ಒಂದೊಂದು ಕಂಪೆನಿಗೆ ಒಂದೊಂದು ಸೀರಿಸ್ ನಂಬರ್‌ಗಳನ್ನು ನೀಡಿರುವ ಟ್ರಾಯ್ ಮೊಬೈಲ್ ನಂಬರ್ ವಿತರಣೆಯ ನಿಯಮಗಳನ್ನು ಬದಲಾಯಿಸಲು ಚಿಂತಿಸಿದೆ. ಒಂದು ಕಂಪೆನಿ ಮಾತ್ರ ಒಂದು ಸೀರಿಸ್‌ ನಂಬರ್‌ಗಳಿಗೆ ಸೀಮಿತವಾಗದಂತೆ ನೋಡಿಕೊಳ್ಳಲು ಟ್ರಾಯ್ ನಿರ್ಧರಿಸಿದೆ.!

90 ದಿವಸಗಳಿಗಿಂತ ಹೆಚ್ಚು ಉಚಿತ ಸೇವೆ?

90 ದಿವಸಗಳಿಗಿಂತ ಹೆಚ್ಚು ಉಚಿತ ಸೇವೆ?

ಟ್ರಾಯ್‌ನ ಟೆಲಿಕಾಂ ನಿಬಂಧನೆಗಳಗಳ ಪ್ರಕಾರ ಯಾವುದೇ ಟೆಲಿಕಾಂ 90 ದಿವಸಗಳಿಗಿಂತ ಹೆಚ್ಚು ಉಚಿತ ಸೇವೆ ನೀಡುವ ಹಾಗಿಲ್ಲ ಎಂಬುದಾಗಿತ್ತು, ಆದರೆ ಜಿಯೋ 90 ದಿನಗಳ ನಂತರವೂ ಉಚಿತ ಸೇವೆ ಮುಂದುವರಿಸಿದ್ದು, ಈ ನಿಯಮ ಬದಲಾಗುವ ಲಕ್ಷಣ ಕಾಣಿಸುತ್ತಿದೆ.!!

ಪರವಾನಗಿ ಚೌಕಟ್ಟು.!

ಪರವಾನಗಿ ಚೌಕಟ್ಟು.!

ಪ್ರಸ್ತುತ ಇರುವ ಪರವಾನಗಿ ಚೌಕಟ್ಟನ್ನು ಟ್ರಾಯ್ ಪುನಃ ಬದಲಾವಣೆ ಮಾಡಲು ನಿರ್ಧರಿಸಿದೆ. "ಟ್ರಾಯ್" ಅಧಿಕಾರಿಗಳು ಮತ್ತು ದೂರಸಂಪರ್ಕ ಕಂಪನಿಗಳ ಅಧಿಕಾರಿಗಳು ಒಳಗೊಂಡ ಸಮಿತಿ ಇದಕ್ಕಾಗಿ ರಚನೆಯಾಗಿದೆ.

ಜಿಯೋಗೆ ಸಹಾಯ?

ಜಿಯೋಗೆ ಸಹಾಯ?

ಮೇಲಿನ ಈ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದರೆ ಜಿಯೋಗೆ ಸಹಾಯ ನೀಡಲು ಟ್ರಾಯ್ ತನ್ನ ನಿಯಮಗಳನ್ನು ಬದಲಿಸುತಿರಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಇತರ ಟೆಲಿಕಾಂಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಟ್ರಾಯ್‌ನ ಮುಂದಿನ ನಡೆ ಕುತೋಹಲವಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The issue of specific framework for trial services had cropped-up last year after newcomer Reliance Jio's stormy entry into the telecom sector.to know more visit to kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot