ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗಿದೆಯಾ?.ಈ ಕ್ರಮ ಅನುಸರಿಸಿ ಆಮೇಲೆ ನೋಡಿ!

|

ಪ್ರಸ್ತುತ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್‌ ಅತೀ ಅಗಶ್ಯವಾಗಿರುವ ಡಿವೈಸ್‌ ಆಗಿದ್ದು, ಪೇಮೆಂಟ್‌, ಸ್ಮಾರ್ಟ್‌ ಡಿವೈಸ್‌ ಕಂಟ್ರೋಲ್‌ ಸೇರಿದಂತೆ ಅಗತ್ಯ ಕೆಲಸಗಳು ಸ್ಮಾರ್ಟ್‌ಫೋನಿನ ಮೂಲಕವೇ ನಡೆಯುತ್ತವೆ. ಅತ್ಯುತ್ತಮ RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಇದ್ದರೂ ಕಾರ್ಯವೈಖರಿಯಲ್ಲಿ ನಿಧಾನಗತಿ ಕಂಡುಬಂದರೇ ಬಳಕೆದಾರರು ಹಲವು ಪ್ರಯತ್ನಗಳ ಮೂಲಕ ಬೂಸ್ಟ್‌ ಮಾಡಲು ಯೋಚಿಸುತ್ತಿರುತ್ತಾರೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಅನೇಕ ಕಾರಣಗಳಿಂದಾಗಿ ತನ್ನ ಕಾರ್ಯ ನಿರ್ವಹಣೆ ನಿಧಾನಗತಿಯ ಸ್ವರೂಪ ಪಡೆಯುತ್ತದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್ ಸ್ಲೋ ಆಗಲು ಫೋನ್ ಮೆಮೊರಿ, ಹೇವಿ ಅಪ್ಲಿಕೇಶನ್‌ಗಳು, ಅಧಿಕ ಡೇಟಾ ಗೇಮ್ಸ್‌ಗಳು ಹೆಚ್ಚು ಪರಿಣಾಮ ಬೀರುತ್ತವೆ. ಆದರೆ ಬಳಕೆದಾರರು ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಸ್ಲೋ ಆಗಿರುವ ಸ್ಮಾರ್ಟ್‌ಫೋನಿನ ಸ್ಪೀಡ್‌ ಅನ್ನು ಹೆಚ್ಚಿಸಬಹುದಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಹೆಚ್ಚಿಸಲು ಬಳಕೆದಾರರು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹೈ-ಸ್ಪೀಡ್‌ ಎಸ್‌ಡಿ ಕಾರ್ಡ್

ಹೈ-ಸ್ಪೀಡ್‌ ಎಸ್‌ಡಿ ಕಾರ್ಡ್

ಇತ್ತೀಚಿನ ಹೊಸ ಸ್ಮಾರ್ಟ್‌ಫೋನಗಳು ಅಧಿಕ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಅದ್ಯಾಗೂ ಕೆಲವು ಬಳಕೆದಾರರು ಹೆಚ್ಚಿನ ಮೆಮೊರಿಗಾಗಿ ಬಾಹ್ಯವಾಗಿ ಎಸ್‌ಡಿ ಕಾರ್ಡ್ ಬಳಕೆ ಮಾಡುತ್ತಾರೆ. ಕಡಿಮೆ ಸ್ಪೀಡಿನ ಎಸ್‌ಡಿ ಕಾರ್ಡ್‌ ಬಳಕೆಯು ಫೋನಿನ ಕಾರ್ಯವೈಖರಿಗೆ ದಕ್ಕೆ ಉಂಡುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಸ್‌ಡಿ ಕಾರ್ಡ್‌ ಹೈ ಸ್ಪೀಡ್‌ ಸಾಮರ್ಥ್ಯ ಪಡೆದಿರಲಿ.

ಅಪ್‌ಡೇಟ್‌ ಇರಲಿ

ಅಪ್‌ಡೇಟ್‌ ಇರಲಿ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್‌ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್-Sync

ಆಟೋ ಸಿಂಕ್-Sync

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ.

Best Mobiles in India

English summary
This tips and tricks that will help in making your smartphone performance faster. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X