Home
ಟೆಕ್ ನೌಕರಿ

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲ ವೇಗಗೊಳಿಸಲು ಐದು ತಂತ್ರಗಳು.

ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲದ ವೇಗ ಕುಂಠಿತಗೊಂಡಿದೆಯೇ? ಅದನ್ನು ಸರಿಪಡಿಸಲು ಇಲ್ಲಿವೆ ಕೆಲವು ತಂತ್ರಗಳು.

By Ashok

ಅಂತರ್ಜಾಲ ನಮ್ಮ ಜೀವನದ ಭಾಗವಾಗಿಬಿಟ್ಟಿರುವ ದಿನಗಳಿವು. ಅಂತರ್ಜಾಲದ ಸಂಪರ್ಕದಲ್ಲಿ ಏರುಪೇರಾದರೆ ಕಿರಿಕಿರಿಯಾಗದೇ ಇದ್ದೀತೆ?

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲ ವೇಗಗೊಳಿಸಲು ಐದು ತಂತ್ರಗಳು.

'ನಿಮ್ಮ ಅಂತರ್ಜಾಲ ಸಂಪರ್ಕವನ್ನು ಪರಿಶೀಲಿಸಿ' (ಚೆಕ್ ಯುವರ್ ಇಂಟರ್ನೆಟ್ ಕನೆಕ್ಷನ್) ಅನ್ನುವ ಸಂದೇಶ ಕಿರಿಕಿರಿ ಉಂಟುಮಾಟುತ್ತದೆ. ರಿಚಾರ್ಜ್ ಮಾಡಿದಾಗ ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಅಂತರ್ಜಾಲ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದೆ ಎನ್ನಿಸುತ್ತದೆ ಆದರೆ ತಿಂಗಳ ಕೊನೆಯಲ್ಲಿ ಅಂತರ್ಜಾಲದ ವೇಗ ಕಡಿಮೆಯಾಗಿಬಿಡುತ್ತದೆ, ಇದು ಹಲವರಿಗೆ ದುಸ್ವಪ್ನದಂತೆ ಕಾಡುವುದರಲ್ಲಿ ಅಚ್ಚರಿಯಿಲ್ಲ.

ಓದಿರಿ: ಫೇಸ್‌ಬುಕ್‌ ಮೆಸೇಂಜರ್'ನಲ್ಲಿಯೇ ಕ್ಯಾಬ್ ಬುಕ್‌ ಮಾಡುವುದು ಹೇಗೆ?

ಚಿತ್ರ ನೋಡುತ್ತಿರುವಾಗಲೋ, ಕಛೇರಿಯ ಕೆಲಸದಲ್ಲಿ ತೊಡಗಿದ್ದಾಗಲೋ ನಿಮ್ಮ ಅಂತರ್ಜಾಲ ಕಡಿಮೆಯಾಗಿಬಿಟ್ಟರೆ ಹೇಗಿರುತ್ತದೆ ಊಹಿಸಿ? ಬಹಳ ಸಮಯದಿಂದ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯಿದು.
ನಿಮ್ಮ ಫೋನಿನ ಅಂತರ್ಜಾಲವನ್ನು ವೇಗಗೊಳಿಸಲು ಇಲ್ಲಿದೆ ಐದು ತಂತ್ರಗಳು. ಒಮ್ಮೆ ಗಮನಿಸಿ.

ಕ್ಯಾಚೆಯನ್ನು ತೆಗೆದುಹಾಕಿ.

ಕ್ಯಾಚೆಯನ್ನು ತೆಗೆದುಹಾಕಿ.

ನಿಮ್ಮ ಫೋನಿನ ಕ್ಯಾಚೆ ಮೆಮೊರಿ ತುಂಬಿ ಹೋದಾಗ ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ನ ವೇಗ ಕಡಿಮೆಯಾಗಿಬಿಡುತ್ತದೆ. ಕ್ಯಾಚೆಯನ್ನು ತೆಗೆದುಹಾಕುವುದರಿಂದ ಅಂತರ್ಜಾಲದ ವೇಗ ಹೆಚ್ಚುತ್ತದೆ.

ಬೇಡದ ತಂತ್ರಾಂಶಗಳನ್ನು ತೆಗೆದುಹಾಕಿ.

ಬೇಡದ ತಂತ್ರಾಂಶಗಳನ್ನು ತೆಗೆದುಹಾಕಿ.

ಒಂದೇ ಬಾರಿ ಅನೇಕ ತಂತ್ರಾಂಶಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ನಮ್ಮಲ್ಲನೇಕರ ಪ್ರವೃತ್ತಿ, ಇದರಿಂದಾಗಿ ಅಂತರ್ಜಾಲದ ವೇಗ ಕುಂಠಿತವಾಗುತ್ತದೆ. ಬೇಡದ ತಂತ್ರಾಂಶಗಳನ್ನು ತೆಗೆದುಹಾಕುವುದರಿಂದ ಅಂತರ್ಜಾಲದ ವೇಗವನ್ನು ಹೆಚ್ಚಿಸಬಹುದು. ಇದು ಬಹು ಮುಖ್ಯವಾದ ತಂತ್ರ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂತರ್ಜಾಲದ ವೇಗವನ್ನು ಹೆಚ್ಚಿಸಲು ಇರುವ ತಂತ್ರಾಂಶಗಳನ್ನು ಬಳಸಿ.

ಅಂತರ್ಜಾಲದ ವೇಗವನ್ನು ಹೆಚ್ಚಿಸಲು ಇರುವ ತಂತ್ರಾಂಶಗಳನ್ನು ಬಳಸಿ.

ನಿಮ್ಮ ಫೋನಿನ ಅಂತರ್ಜಾಲದ ವೇಗವನ್ನು ಹೆಚ್ಚಿಸಲು ಹಲವು ಆ್ಯಂಡ್ರಾಯ್ಡ್ ತಂತ್ರಾಂಶಗಳಿವೆ. ಇಂಟರ್ನೆಟ್ ಬೂಸ್ಟರ್ ಮತ್ತು ಆಪ್ಟಿಮೈಜರ್, ಫಾಸ್ಟರ್ ಇಂಟರ್ನೆಟ್ 2ಎಕ್ಸ್ ನಂತಹ ತಂತ್ರಾಂಶಗಳನ್ನು ಡೌನ್ ಲೋಡ್ ಮಾಡಿಕೊಂಡು ಅಂತರ್ಜಾಲದ ವೇಗವನ್ನು ಹೆಚ್ಚಿಸಿಕೊಳ್ಳಿ.

ಗರಿಷ್ಟ ಲೋಡಿಂಗ್ ಡೇಟಾ ಆಯ್ಕೆಯನ್ನು ಆಯ್ದುಕೊಳ್ಳಿ.

ಗರಿಷ್ಟ ಲೋಡಿಂಗ್ ಡೇಟಾ ಆಯ್ಕೆಯನ್ನು ಆಯ್ದುಕೊಳ್ಳಿ.

ಸೆಟ್ಟಿಂಗ್ಸ್ ಅನ್ನು ಬದಲಿಸುವುದು ಕೂಡ ಅಂತರ್ಜಾಲದ ವೇಗವನ್ನು ಹೆಚ್ಚಿಸಬಲ್ಲದು. ವೈರ್ ಲೆಸ್ ಮತ್ತು ನೆಟ್ ವರ್ಕ್ ಸೆಟ್ಟಿಂಗ್ಸ್ ಗೆ ಹೋಗಿ, ಜಿ.ಪಿ.ಆರ್.ಎಸ್ ಆಯ್ಕೆಯನ್ನು ಡೇಟಾ ಪ್ರಿಫರೆನ್ಸ್ ಗೆ ಹಾಕಿರಿ, ಅಂತರ್ಜಾಲದ ವೇಗ ಹೆಚ್ಚುತ್ತದೆ.

ಅಂತರ್ಜಾಲದ ಸಂಪರ್ಕವನ್ನು ಆಫ್ - ಆನ್ ಮಾಡಿ.

ಅಂತರ್ಜಾಲದ ಸಂಪರ್ಕವನ್ನು ಆಫ್ - ಆನ್ ಮಾಡಿ.

ಇವೆಲ್ಲಕ್ಕಿಂತಲೂ ಸುಲಭದ್ದೆಂದರೆ ಡೇಟಾ ಸಂಪರ್ಕವನ್ನು ಆಫ್ ಮಾಡಿ ನಂತರ ಹೊಸದಾಗಿ ಆನ್ ಮಾಡುವುದು. ಇದರಿಂದಾಗಿ ಸಂಪರ್ಕದಲ್ಲಿರುವ ಸಮಸ್ಯೆಗಳು ಸರಿಯಾಗುತ್ತವೆ ಮತ್ತು ಅಂತರ್ಜಾಲದ ವೇಗವೂ ಹೆಚ್ಚುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Tired and irritated with the slow internet connection on your android smartphone? Here's how to boost your internet speed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+