ಫೇಸ್‌ಬುಕ್‌ ಮೆಸೇಂಜರ್'ನಲ್ಲಿಯೇ ಕ್ಯಾಬ್ ಬುಕ್‌ ಮಾಡುವುದು ಹೇಗೆ?

ಫೇಸ್‌ಬುಕ್‌ ಮೆಸೇಂಜರ್‌ ಬಳಕೆದಾರರು ಸ್ನೇಹಿತರೊಂದಿಗೆ ಚಾಟ್‌ ಮಾಡುತ್ತಲೇ ಕ್ಯಾಬ್ ಬುಕ್‌ ಮಾಡಬಹುದು.

By Suneel
|

ಫೇಸ್‌ಬುಕ್ ಇತ್ತೀಚೆಗೆ ತನ್ನ ಮೆಸೇಂಜರ್‌ ಆಪ್‌ಗೆ ಹಲವು ಫೀಚರ್‌ಗಳನ್ನು ಪರಿಚಯಿಸಿತು. ಹೊಸದಾಗಿ ಪರಿಚಯಿಸಿದ ಫೀಚರ್‌ಗಳಲ್ಲಿ ಬ್ಯಾಗ್ರೌಂಡ್‌ ಕಲರ್, ರಹಸ್ಯ ಸಂಭಾಷಣೆ ಮೊದಲಾದವು. ಆದರೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಬಹುಸಂಖ್ಯಾತ ಫೀಚರ್‌ಗಳು ಹೊಸ ಫೀಚರ್‌ಗಳೇನು ಅಲ್ಲ. ಆದರೆ ಅವುಗಳನ್ನು ಹಲವರು ಬಳಸುತ್ತಿಲ್ಲ. ಹಾಗೆ ಬಳಸಲು ತಿಳಿಯದೇ ಇರಬಹುದು.

ಹೌದು, ಫೇಸ್‌ಬುಕ್‌(Facebook) ತನ್ನ ಮೆಸೇಂಜರ್ ಬಳಕೆದಾರರಿಗೆ, ಮೆಸೇಂಜರ್‌ನಿಂದಲೇ ಕ್ಯಾಬ್‌ ಬುಕ್‌ ಮಾಡುವ ಅವಕಾಶ ನೀಡಿದೆ. ಸ್ನೇಹಿತರೊಂದಿಗೆ ಚಾಟ್‌ ಮಾಡುತ್ತಲೇ ಮೆಸೇಂಜರ್‌ನಲ್ಲಿ ಕ್ಯಾಬ್ ಬುಕ್‌ ಮಾಡಬಹುದು ಅದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿಯಿರಿ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಮೆಸೇಂಜರ್ ಆಪ್ ಓಪನ್‌ ಮಾಡಿ, ಯಾವುದಾದರೂ ಸಂಭಾಷಣೆ  ಓಪನ್‌ ಮಾಡಿ

ಮೆಸೇಂಜರ್ ಆಪ್ ಓಪನ್‌ ಮಾಡಿ, ಯಾವುದಾದರೂ ಸಂಭಾಷಣೆ ಓಪನ್‌ ಮಾಡಿ

ಮೊದಲಿಗೆ ಎಲ್ಲಾ ಮೆಸೇಂಜರ್ ಬಳಕೆದಾರರು ಲೇಟೆಸ್ಟ್ ವರ್ಸನ್ ಮೆಸೇಂಜರ್‌ ಅಪ್‌ಡೇಟ್‌ ಮಾಡಿ, ನಂತರ ಯಾವುದಾದರೂ ಸಂಭಾಷಣೆ ಪೇಜ್‌ ಓಪನ್‌ ಮಾಡಿ. (ಸ್ನೇಹಿತರೊಂದಿಗೆ ಚಾಟ್‌ ಮಾಡಿದ ಪೇಜ್‌)

ಬುಕ್‌ ಮಾಡಲು ಬಯಸುವ ಕ್ಯಾಬ್‌ ಮೇಲೆ ಕ್ಲಿಕ್‌ ಮಾಡಿ

ಬುಕ್‌ ಮಾಡಲು ಬಯಸುವ ಕ್ಯಾಬ್‌ ಮೇಲೆ ಕ್ಲಿಕ್‌ ಮಾಡಿ

ಸಂಭಾಷಣೆ ಪೇಜ್‌ ಓಪನ್ ಮಾಡಿದ ನಂತರ, ಮೆಸೇಂಜರ್ ಸ್ಕ್ರೀನ್ ಪೇಜ್‌ನ ಕೆಳಭಾಗದಲ್ಲಿ ಕ್ಯಾಬ್‌ ಸಿಂಬಲ್ ಮೇಲೆ ಕ್ಲಿಕ್‌ ಮಾಡಿ.

ರಿಜಿಸ್ಟ್ರೇಶನ್ ಮುಖ್ಯ

ರಿಜಿಸ್ಟ್ರೇಶನ್ ಮುಖ್ಯ

ಊಬರ್‌ ಕ್ಯಾಬ್ ಬುಕ್‌ ಮಾಡಿದಲ್ಲಿ, ಊಬರ್ ಆಪ್‌ನಲ್ಲಿ ರಿಜಿಸ್ಟ್ರೇಶನ್‌ ಮುಖ್ಯ. ರಿಜಿಸ್ಟರ್‌ ಮಾಡದೇ ಬುಕ್‌ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಊಬರ್ ಆಪ್‌ನಲ್ಲಿ ರಿಜಿಸ್ಟ್ರೇಶನ್ ಮಾಡಿದ್ದಲ್ಲಿ, ನಂತರ ಯಾವಾಗ ಬೇಕಾದರೂ ಮೆಸೇಂಜರ್‌ನಲ್ಲಿ ಕ್ಯಾಬ್ ಬುಕ್‌ ಮಾಡಬಹುದು.

ಪಿಕಪ್ ಮತ್ತು ಡ್ರಾಪ್‌ ಸ್ಥಳವನ್ನು ಹೆಸರಿಸಿ

ಪಿಕಪ್ ಮತ್ತು ಡ್ರಾಪ್‌ ಸ್ಥಳವನ್ನು ಹೆಸರಿಸಿ

ರಿಜಿಸ್ಟರ್ ಮಾಡಿದ ನಂತರ, ನಿಮ್ಮನ್ನು ಎಲ್ಲಿಂದ ಪಿಕಪ್‌ ಮಾಡಿ, ಎಲ್ಲಿ ಡ್ರಾಪ್‌ ಮಾಡಬೇಕು ಎಂಬ ಸ್ಥಳಗಳನ್ನು ಹೆಸರಿಸಿ. ಕ್ಯಾಬ್ ಬುಕ್‌ ಮಾಡಿ. ನಂತರ ನೀವು ಕ್ಯಾಬ್‌ನಲ್ಲಿ ಹೋಗಬಹುದು.

ಫೇಸ್‌ಬುಕ್‌ ಫೀಚರ್‌ನ ಪರಿಮಿತಿಗಳು

ಫೇಸ್‌ಬುಕ್‌ ಫೀಚರ್‌ನ ಪರಿಮಿತಿಗಳು

* ಭಾರತದಲ್ಲಿ ಮೆಸೇಂಜರ್‌ ಮೂಲಕ ಪ್ರಸ್ತುತದಲ್ಲಿ ಕೇವಲ ಮೆರು ಕ್ಯಾಬ್‌ಗಳನ್ನು ಬುಕ್‌ ಮಾಡಬಹುದು.

* ಫೇಸ್‌ಬುಕ್‌ ಮೆಸೇಂಜರ್ ಅಧಿಕೃತ ಆಪ್‌ನಲ್ಲಿ ಇಂದಿಗೂ ಸಹ ಈ ಫೀಚರ್ ಲಭ್ಯವಿಲ್ಲ. ಆದರೆ ಮೆಸೇಂಜರ್‌ ಆಪ್‌ಗೆ ಫೇಸ್‌ಬುಕ್‌ ಬೋಟ್ ಅನ್ನು ನಿರ್ಮಿಸಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's How to Book a Cab Via Facebook Messenger. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X