ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಐಫೋನ್ X ಆಗಿಸುವುದು ಹೇಗೆ..?
ಈ ಹಿನ್ನಲೆಯ ಐಫೋನ್ X ಜೇಬಿಗೆ ಹೊರೆಯಾಗಲಿದೆ. ನಿಮ್ಮ ಆಂಡ್ರಾಯ್ಡ್ ಪೋನ್ ಅನ್ನೇ ಐಪೋನ್ X ಆಗಿ ಬದಲಾಯಿಸಿಕೊಳ್ಳಬಹುದಾಗಿದೆ. ಐಪೋನ್ ಮಾದರಿಯಲ್ಲೇ ಬಳಸಬಹುದಾಗಿದೆ ಇದು ಹೇಗೆ?
ಆಪಲ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಲಾಂಚ್ ಮಾಡಿದ್ದ ಐಫೋನ್ X ಸದ್ಯ ಜಾಗತಿಕವಾಗಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಹೊಸತನಗಳಿಂದ ಕೂಡಿರುವ ಐಫೋನ್ X ಆಪಲ್ ಪ್ರಿಯರಿಗೆ ತುಂಬ ಇಷ್ಟಾವಾಗಿದೆ ಆದರೆ ಇದರ ಬೆಲೆ ಕೇಳಿ ಕೊಳ್ಳುವ ಮನಸ್ಸು ಮಾಡುತ್ತಿಲ್ಲ.

ಓದಿರಿ: WPS ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಲಕ್ಷಕ್ಕಿಂತಲೂ ಅಧಿಕವಾಗಲಿದ್ದು, ಈ ಹಿನ್ನಲೆಯ ಐಫೋನ್ X ಜೇಬಿಗೆ ಹೊರೆಯಾಗಲಿದೆ. ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಪೋನ್ ಅನ್ನೇ ಐಪೋನ್ X ಆಗಿ ಬದಲಾಯಿಸಿಕೊಳ್ಳಬಹುದಾಗಿದೆ. ಐಪೋನ್ ಮಾದರಿಯಲ್ಲೇ ಬಳಸ ಬಹುದಾಗಿದೆ ಇದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ.

ಆಂಡ್ರಾಯ್ಡ್ ಫೋನ್ ಅನ್ನು ಐಪೋನ್ ಆಗಿಸಿ:
ಆಂಡ್ರಾಯ್ಡ್ ಫೋನ್ ಅನ್ನೇ ಐಪೋನ್ ಮಾದರಿಯಾಗಿಸುವ ಆಪ್ ವೊಂದು ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿದ್ದು, ನೀವು ಬಳಸುತ್ತಿರುವ ಆಂಡ್ರಾಯ್ಡ್ ಫೋನ್ ಇಂಟರ್ ಫೇಸ್ ಸೇರಿದಂತೆ ಎಲ್ಲಾ ಕಾರ್ಯ ಚಟುವಟಿಕೆಯನ್ನು ನೀವು ಬದಲಾಯಿಸಿಕೊಳ್ಳಬಹುದಾಗಿದೆ.

XOutOf10 ಡೌನ್‌ಲೋಡ್ ಮಾಡಿ:
ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿರುದ XOutOf10 ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದೊಂದು ಉಚಿತ ಆಪ್ ಆಗಿದ್ದು, ಆಂಡ್ರಾಯ್ಡ್ M ಗಿಂತಲೂ ಹೆಚ್ಚಿನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಇನ್‌ಸ್ಟಾಲ್ ಮಾಡಿಕೊಳ್ಳಿ:
ಈ ಆಪ್ ಅನ್ನು ಡೌನ್‌ಲೋಡ್ ಮಾಡಿದ ನಂತರದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ ಇದನ್ನು ಮತ್ತು ಅದು ಕೇಳುವ ಪರ್ಮಿಷನ್ ಗಳನ್ನು ನೀಡಿರಿ. ಇದಾದ ನಂತರದಲ್ಲಿ ನಿಮ್ಮ ಫೋನ್ ಐಫೋನ್ X ಮಾದರಿಯಲ್ಲಿ ಇರಲಿದೆ.


Click it and Unblock the Notifications








