ಕೂಡಲೇ ನಿಮ್ಮ ಫೈರ್‌ಫಾಕ್ಸ್ ಬ್ರೌಸರ್ ಅಪ್‌ಡೇಟ್ ಮಾಡಿ ಸೇಫ್ ಆಗಿ!!

|

ನೀವು ಮೊಜಿಲ್ಲಾ ಫೈರ್‌ಫಾಕ್ಸ್ ಬ್ರೌಸರ್ ಬಳಕೆ ಮಾಡುತ್ತಿದ್ದರೆ ಈ ಕೂಡಲೇ ನಿಮ್ಮ ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ಫೈರ್‌ಫಾಕ್ಸ್ 67.0 ನಂತರ ಇದೀಗ ಮೊಜಿಲ್ಲಾ ಫೈರ್‌ಫಾಕ್ಸ್ 67.0.3 ಅಪ್‌ಡೇಟ್ ತಂದಿದ್ದು, ಇದು ಬ್ರೌಸರ್ನ ಪ್ರಮುಖ ಭದ್ರತಾ ದೋಷವನ್ನು ಪರಿಹರಿಸುತ್ತದೆ. ಈ ಅಪ್‌ಡೇಟ್ ನಿಮ್ಮನ್ನು ಹ್ಯಾಕ್ ಆಗುವುದರಿಮದ ತಪ್ಪಿಸುತ್ತದೆ ಎಂದು ತಿಳಿದುಬಂದಿದೆ.

ಹೌದು, ಮೊಜಿಲ್ಲಾ ಸೆಕ್ಯುರಿಟಿ ಬೋರ್ಡ್ ಪ್ರಕಾರ, ಫೈರ್‌ಫಾಕ್ಸ್ 67.0 ರ ಅನ್‌ಪ್ಯಾಚ್ ಮಾಡದ ಆವೃತ್ತಿ ಚಾಲನೆಯಲ್ಲಿರುವ ಕಂಪ್ಯೂಟರ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಹ್ಯಾಕರ್‌ಗಳು ಬಳಸುತ್ತಿದ್ದಾರೆಂದು ವರದಿಯಾಗಿದೆ. ಹಾಗಾಗಿ, ಕೂಡಲೇ ಎಲ್ಲಾ ಫೈರ್‌ಫಾಕ್ಸ್ ಬಳಕೆದಾರರು ತಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಣವೇ ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು ಎಂದು ತಿಳಿಸಿದೆ.

ಕೂಡಲೇ ನಿಮ್ಮ ಫೈರ್‌ಫಾಕ್ಸ್ ಬ್ರೌಸರ್ ಅಪ್‌ಡೇಟ್ ಮಾಡಿ ಸೇಫ್ ಆಗಿ!!

ಫೈರ್‌ಫಾಕ್ಸ್‌ನ ದೋಷಪೂರಿತ ಕೋಡ್ ಬಳಸಿಕೊಂಡು, ಹ್ಯಾಕರ್‌ಗಳು ಕಂಪ್ಯೂಟರ್‌ಗಳಲ್ಲಿ ನಿಯೋಜಿಸುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಂತೆ ಬಳಕೆದಾರರನ್ನು ಮೋಸಗೊಳಿಸಬಹುದು. ಕುಶಲತೆಯಿಂದ ಕೂಡಿದ ಜಾವಾಸ್ಕ್ರಿಪ್ಟ್ ಕೋಡ್ ಅನ್ನು ಅವರು ಬಳಸಲು ಬ್ರೌಸರ್ ಅನುಮತಿಸುತ್ತದೆ. ಹಾಗಾಗಿ, ಫೈರ್‌ಫಾಕ್ಸ್ 67.0.3ಗೆ ಅಪ್‌ಡೇಟ್ ಮಾಡಲೇಬೇಕಿದೆ ಎಂದು ತಿಳಿಸಿದೆ.

ಇಸು ಗಂಭೀರ ದುರ್ಬಲತೆಯಾಗಿದೆ ಮತ್ತು ನವೀಕರಣಗಳನ್ನು ತಕ್ಷಣವೇ ಸ್ಥಾಪಿಸುವಂತೆ ಮೊಜಿಲ್ಲಾ ಸೆಕ್ಯುರಿಟಿ ಬೋರ್ಡ್ ಎಲ್ಲಾ ಬಳಕೆದಾರರನ್ನು ಒತ್ತಾಯಿಸುತ್ತಿದ್ದು, ಬ್ರೌಸರ್‌ನ ಇತ್ತೀಚಿನ ಆವೃತ್ತಿಯನ್ನು ಮೊಜಿಲ್ಲಾದಿಂದ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ಹ್ಯಾಂಬರ್ಗರ್ ಐಕಾನ್ ಕ್ಲಿಕ್ ಮಾಡಿದ ನಂತರ ಫೈರ್‌ಫಾಕ್ಸ್ ಅನ್ನು ಅಪ್‌ಡೇಟ್ ಮಾಡಬಹುದು.

ಕೂಡಲೇ ನಿಮ್ಮ ಫೈರ್‌ಫಾಕ್ಸ್ ಬ್ರೌಸರ್ ಅಪ್‌ಡೇಟ್ ಮಾಡಿ ಸೇಫ್ ಆಗಿ!!

ಓದಿರಿ: ಬೆಂಗಳೂರಿನಲ್ಲಿ 'ಬ್ಯಾಂಕ್ ಖಾತೆಗೆ' ಕನ್ನ ಹಾಕಿರುವ ಈ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!!

ಸುರಕ್ಷತೆ ಮತ್ತು ಗೌಪ್ಯತೆ ಬಳಕೆದಾರರಿಗೆ ಫೈರ್‌ಫಾಕ್ಸ್ ಅತ್ಯುತ್ತಮ ವೆಬ್ ಬ್ರೌಸರ್‌ಗಳಲ್ಲಿ ಒಂದಾಗಿದೆ. ಆದರೆ, ಬ್ರೌಸರ್‌ನಲ್ಲಿನ ಒಂದು ಬಗ್ ಕೂಡ ಬಳಕೆದಾರರು ಹ್ಯಾಕರ್‌ಗಳಿಂದ ಶೋಷಣೆಗಳಿಗೆ ಸಹ ಕಾರಣವಾಗಬಹುದು. ಹಾಗಾಗಿ, ನಿಮ್ಮ ಫೈರ್‌ಫಾಕ್ಸ್ ಅನ್ನು ಅಪ್‌ಡೇಟ್ ಮಾಡಿ ಮತ್ತು ನಿಮ್ಮ ಹತ್ತಿರದವರ ಫೈರ್‌ಫಾಕ್ಸ್ ಕೂಡ ಅಪ್‌ಡೇಟ್ ಮಾಡಲು ತಿಳಿಸಿ.

Best Mobiles in India

English summary
On the heels of the Firefox 67.0 release, Mozilla has rolled out Firefox 67.0.3, which fixes a major security bug. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X