Home
ಟೆಕ್ ನೌಕರಿ

ವಾಟ್ಸಾಪ್‌ನಲ್ಲಿ ಪ್ರೇಮಿಗಳ ದಿನದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?..ಅಚ್ಚರಿಯ ಸ್ಟಿಕ್ಕರ್ ಇವೆ!

ಇಂದು ಪ್ರೇಮಿಗಳಿಗೆ ವಿಶೇಷ ದಿನ. ಹಲವಾರು ಯುವಕ-ಯುವತಿಯರು ಇಷ್ಟಪಟ್ಟವರಿಗೆ ಪ್ರೇಮ ನಿವೇದನೆ ಮಾಡುವ ಸುಸಮಯ. ಈ ಸಮಯದಲ್ಲಿ ಹಲವಾರು ಪ್ರೇಮಿಗಳು ವಿವಿಧ ರೀತಿಯಲ್ಲಿ ಪ್ರೇಮ ನಿವೇದನೆ ಮಾಡುತ್ತಾರೆ. ಅದರಲ್ಲೂ ಕೆಲವೊಂದಷ್ಟು ಜನರು ಯಾವಾಗಲು ನೆನಪಿನಲ್ಲಿ ಇಟ್ಟುಕೊಳ್ಳುವ ಗಿಫ್ಟ್‌ಗಳನ್ನು ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಇದರ ನಡುವೆ ವಾಟ್ಸಾಪ್‌ ಸಹ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಲು ಅನುವು ಮಾಡಿಕೊಟ್ಟಿದೆ.

ವಾಟ್ಸಾಪ್‌ನಲ್ಲಿ ಪ್ರೇಮಿಗಳ ದಿನದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ಹೌದು, ವಾಟ್ಸಾಪ್‌ ಯಾವುದೇ ವಿಶೇಷ ದಿನಗಳಿಗೂ ಸಹ ಬಳಕೆದಾರರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ಮಾಡುತ್ತದೆ. ಅದರಂತೆ ಇಂದಿನ ಪ್ರೇಮಿಗಳ ದಿನಕ್ಕೂ ಸಹ ವಾಟ್ಸಾಪ್‌ ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ್ದು, ಈ ಮೂಲಕ ಇಷ್ಟಪಟ್ಟವರ ಜೊತೆ ಇವುಗಳನ್ನು ಶೇರ್‌ ಮಾಡಿಕೊಂಡು ಈ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ, ಸ್ಟಿಕ್ಕರ್ ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ? ಹಾಗೂ ನಿಮ್ಮದೇ ಆದ ಸ್ಟಿಕ್ಕರ್‌ ರಚಿಸುವುದು ಹೇಗೆ ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.


ವಾಟ್ಸಾಪ್‌ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1
ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಆಪ್‌ ಓಪನ್‌ ಮಾಡಿ ನಂತರ ನೀವು ಯಾರಿಗೆ ಪ್ರೇಮಿಗಳ ದಿನದ ಶುಭಾಶಯ ಕೋರಲು ಮುಂದಾಗುವಿರೋ ಅವರ ಚಾಟ್‌ ಅನ್ನು ಓಪನ್‌ ಮಾಡಿ.

ಹಂತ 2
ಇದಾದ ನಂತರ ಟೆಕ್ಸ್ಟ್ ಬಾರ್‌ನಲ್ಲಿರುವ ಸ್ಮೈಲಿ ಐಕಾನ್ ಮೇಲೆ ಟ್ಯಾಪ್ ಮಾಡಿ ಹಾಗೆಯೇ GIF ಬಟನ್‌ನ ಪಕ್ಕದಲ್ಲಿರುವ ಸ್ಟಿಕ್ಕರ್‌ಗಳ ಐಕಾನ್‌ ವಿಭಾಗದಲ್ಲಿ ಸರ್ಚ್‌ ಮಾಡಿ. ನಂತರ ಉಳಿಸಿದ ಅಥವಾ ಅಸ್ತಿತ್ವದಲ್ಲಿರುವ ಸ್ಟಿಕ್ಕರ್ಸ್‌ ನೋಡಲು ಸ್ಟಿಕ್ಕರ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಬಹುದು.

ವಾಟ್ಸಾಪ್‌ನಲ್ಲಿ ಪ್ರೇಮಿಗಳ ದಿನದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ಹಂತ 3
ಈ ಆಯ್ಕೆಯಲ್ಲಿ ಹೆಚ್ಚಿನ ಸ್ಟಿಕ್ಕರ್‌ಗಳನ್ನು ಸೇರಿಸಲು ವಾಟ್ಸಾಪ್‌ ಅನುವು ಮಾಡಿಕೊಡುತ್ತದೆ. ಅಂದರೆ, ಹೆಚ್ಚುವರಿ ಸ್ಟಿಕ್ಕರ್‌ಗಳನ್ನು ಅನ್ವೇಷಿಸಲು ಕೆಳಗೆ ಸ್ಕ್ರಾಲ್ ಮಾಡಿ ಹಾಗೆಯೇ ಅಲ್ಲಿ ಗೆಟ್‌ ಮೋಟ್‌ ಸ್ಟಿಕ್ಕರ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 4
ಈ ಆಯ್ಕೆಯಲ್ಲಿ ನಿಮ್ಮನ್ನು ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ಗೆ ವಾಟ್ಸಾಪ್‌ ಮರುನಿರ್ದೇಶಿಸಲಾಗುತ್ತದೆ. ಈ ಮೂಲಕ ನೀವು ಆಪ್ ಸ್ಟೋರ್‌ನಲ್ಲಿ ನಿಮ್ಮ ಆಯ್ಕೆಯ ಯಾವುದೇ ವ್ಯಾಲೆಂಟೈನ್ಸ್ ಡೇ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಹಂತ 5
ಇದಷ್ಟೇ ಅಲ್ಲದೆ, ನೀವು ಆಪ್‌ ಸ್ಟೋರ್‌ನಿಂದ ಸ್ಟಿಕ್ಕರ್.ly, ಸ್ಟಿಕ್ಕರ್ ಮೇಕರ್‌ + ಸ್ಟಿಕ್ಕರ್ಸ್‌, ಸ್ಟಿಕಲ್ಸ್ ಮತ್ತು Wsticker ಎಂಬ ಥರ್ಡ್‌ ಪಾರ್ಟಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಅಗಾದವಾದ ಸ್ಟಿಕ್ಕರ್‌ ಪ್ಯಾಕೇಜ್‌ಗಳನ್ನು ಬಳಕೆ ಮಾಡಬಹುದಾಗಿದೆ.

ಹಂತ 6
ಇನ್ನು ಸ್ಟಿಕ್ಕರ್ ಪ್ಯಾಕ್ ಇನ್‌ಸ್ಟಾಲ್‌ ಪೂರ್ಣಗೊಂಡ ನಂತರ ಆಪ್ ಓಪನ್‌ ಮಾಡಿ ಅದರಲ್ಲಿ ಆಡ್‌ ಟು ವಾಟ್ಸಾಪ್‌ ಆಯ್ಕೆಮಾಡಿ. ಒಮ್ಮೆ ನಿಮ್ಮ ವಾಟ್ಸಾಪ್‌ ಸ್ಟಿಕ್ಕರ್ ಪ್ಯಾಲೆಟ್‌ಗೆ ಸ್ಟಿಕ್ಕರ್‌ಗಳನ್ನು ಆಡ್‌ ಮಾಡಿದ ನಂತರ ಬೇಕಾದವರಿಗೆ ಇವುಗಳನ್ನು ಸೆಂಡ್‌ ಮಾಡಬಹುದು.

ವಾಟ್ಸಾಪ್‌ನಲ್ಲಿ ಪ್ರೇಮಿಗಳ ದಿನದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ನಿಮ್ಮದೇ ಸ್ವಂತ ಸ್ಟಿಕ್ಕರ್‌ ರಚಿಸುವುದು ಹೇಗೆ?

ಇನ್ನು ಥರ್ಡ್‌ ಪಾರ್ಟಿ ಆಪ್‌ ಹಾಗೂ ಗೂಗಲ್‌ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ ಸ್ಟಿಕ್ಕರ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಬದಲಾಗಿ ನಿಮ್ಮದೇ ಆದ ರೀತಿಯ ಸ್ಟಿಕ್ಕರ್‌ಗಳನ್ನು ರಚಿಸಿ ಅವುಗಳನ್ನು ಈ ಸಮಯದಲ್ಲಿ ಶುಭಾಶಯ ಕೋರಲು ಬಳಕೆ ಮಾಡಿದರೆ ಈ ದಿನ ಇನ್ನಷ್ಟು ರಂಜನೀಯವಾಗಿರಲಿದೆ.

ಹಂತ 1
ಮೊದಲು ನೀವು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಬಯಸುವ ಚಿತ್ರಗಳ ಸೆಟ್ ಅನ್ನು PNG ಅಥವಾ WebP ಸ್ವರೂಪದಲ್ಲಿ ಸಂಪಾದಿಸಿ ಇಟ್ಟುಕೊಂಡಿರಿ. ಪ್ರತಿ ಚಿತ್ರವು ಟ್ರಾನ್ಸ್ಪರೆಂಟ್ ಹಿನ್ನೆಲೆಯನ್ನು ಹೊಂದಿರಬೇಕು ಎಂಬುದು ನಿಮ್ಮ ಗಮನಕ್ಕಿರಲಿದೆ.

ಹಂತ 2
ಇದಾದ ನಂತರ ಸ್ಟಿಕ್ಕರ್ ಮೇಕರ್, ಸ್ಟಿಕ್ಕಿಫೈ ಅಥವಾ ವೈಯಕ್ತಿಕ ಸ್ಟಿಕ್ಕರ್‌ಗಳಂತಹ ಥರ್ಡ್‌ ಪಾರ್ಟಿ ಆಪ್‌ ಅನ್ನು ಇನ್‌ಸ್ಟಾಲ್ ಮಾಡಿ. ಇದಾದ ಬಳಿಕ ಇನ್‌ಸ್ಟಾಲ್‌ ಮಾಡಲಾದ ಆಪ್‌ ಅನ್ನು ಓಪನ್‌ ಮಾಡುವ ಮೂಲಕ ಅಲ್ಲಿ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ರಚಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ಹಂತ 3
ಈ ವಿಭಾಗದಲ್ಲಿ ನೀವು ಪ್ಯಾಕ್‌ಗೆ ಸ್ಟಿಕ್ಕರ್‌ಗಳಾಗಿ ಬಳಸಲು ಬಯಸುವ ಚಿತ್ರಗಳನ್ನು ಆಡ್‌ ಮಾಡಬಹುದು. ಈಗ ನಿಮ್ಮ ಸ್ಟಿಕ್ಕರ್ ಪ್ಯಾಕ್‌ಗೆ ಹೆಸರು ನೀಡಿ ಹಾಗೆಯೇ ಅದನ್ನು ಪಬ್ಲಿಶ್ ಮಾಡಿ ನಂತರ ವಾಟ್ಸಾಪ್‌ಗೆ ಆಡ್‌ ಮಾಡಿ. ಈ ಮೂಲಕ ನಿಮ್ಮದೇ ಸ್ಟಿಕ್ಕರ್‌ಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಸೆಂಡ್‌ ಮಾಡುವ ಮೂಲಕ ಶುಭಾಶಯ ಕೋರಬಹುದಾಗಿದೆ.

Best Mobiles in India

English summary
WhatsApp has released some new Valentine's day stickers. Users can check out love or Valentine's special greeting stickers on their Android or iOS smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+