ವೈ ಫೈ ರೂಟರ್ ಸಿಗ್ನಲ್ ಹೆಚ್ಚಿಸಲು ಈ ಟಿಪ್ಸ್‌ ನಿಮಗೆ ಉಪಯುಕ್ತ!

|

ಪ್ರಸ್ತುತ ಮನೆಯಲ್ಲಿನ ಹಲವು ಡಿವೈಸ್‌ಗಳಿಗೆ ಇಂಟರ್ನೆಟ್ ಸಂಪರ್ಕ ಅಗತ್ಯ ಆಗಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಡಿವೈಸ್‌ ಮತ್ತು ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಗ್ಯಾಜೆಟ್‌ಗಳು ಇಂಟರ್ನೆಟ್ ಆಧಾರಿತವಾಗಿ ಕಾರ್ಯನಿರ್ವಹಿಸುತಿದ್ದು, ಇಂಟರ್ನೆಟ್‌ ಇಲ್ಲದಿದ್ದರೇ ಅವುಗಳ ಕೆಲಸ ಏನಿಲ್ಲ. ಹೀಗಾಗಿ ಅನೇಕರು ವೈ-ಫೈ (Wi-Fi) ಸಂಪರ್ಕ ಪಡೆಯುತ್ತಾರೆ. ಈ ವೈ ಫೈ ಸಂಪರ್ಕದಲ್ಲಿ ಗ್ರಾಹಜರು ಮಲ್ಟಿಟಾಸ್ಕ್ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಇಂಟರ್ನೆಟ್

ಅತ್ಯುತ್ತಮ ಇಂಟರ್ನೆಟ್ ಸಂಪರ್ಕಕ್ಕಾಗಿ ವೈ-ಫೈ ರೂಟರ್ ಬಳಸುತ್ತಾರೆ. ಅದಾಗ್ಯೂ ಕೆಲವೊಮ್ಮೆ ಇಂಟರ್ನೆಟ್ ಸಂಪರ್ಕದಲ್ಲಿ ವ್ಯತ್ಯಯಗಳು / ಅಡಚಣೆಗಳು ಕಂಡು ಬರುತ್ತವೆ. ಅದಕ್ಕಾಗಿ ವೈ ಫೈ ರೂಟರ್ ಅನ್ನು ಸರಿಯಾದ ನೆಟ್ವರ್ಕ್ ಕವರೇಜ್ ಸ್ಥಳದಲ್ಲಿ ಇಡುವುದು ಉತ್ತಮ. ಸರಿಯಾದ ನೆಟ್‌ವರ್ಕ್ ಇಲ್ಲದ ಸ್ಥಳದಲ್ಲಿ ಇಟ್ಟರೇ ನೆಟ್ವರ್ಕ್/ಕವರೇಜ್ ಸಮಸ್ಯೆಗಳು ಎದುರಾಗಬಹುದು. ಹಾಗಾದರೇ ವೈ ಫೈ ರೂಟರ್ ಯಾವ ಸ್ಥಳದಲ್ಲಿ ಇಡಬೇಕು ಎನ್ನುವ ಬಗ್ಗೆ ಕೆಲವು ಟಿಪ್ಸ್‌ಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ವೈ-ಫೈ ಬ್ರೌಸರ್ ಅನ್ನು ಮುಖ್ಯ ಸ್ಥಳದಲ್ಲಿ ಇರಿಸಿ

ವೈ-ಫೈ ಬ್ರೌಸರ್ ಅನ್ನು ಮುಖ್ಯ ಸ್ಥಳದಲ್ಲಿ ಇರಿಸಿ

ವೈ-ಫೈ ರೂಟರ್ ಕೇವಲ ಒಂದು ದಿಕ್ಕಿನಲ್ಲಿ ಸಿಗ್ನಲ್‌ಗಳನ್ನು ಕಳುಹಿಸುವುದಿಲ್ಲ. ಬದಲಾಗಿ ಅದು ಸಿಗ್ನಲ್‌ಗಳನ್ನು ಮನೆಯ ಎಲ್ಲೆಡೆ ರವಾನಿಸುತ್ತದೆ. ಆದ್ದರಿಂದ, ವೈ-ಫೈ ರೂಟರ್‌ಗೆ ಸೂಕ್ತವಾದ ಸ್ಥಳ ಎಂದರೇ. ಮನೆಯ ಮುಖ್ಯ ಭಾಗ/ ಸಿಟಿಂಗ್ ಏರಿಯಾದಲ್ಲಿ (Hall) ಇಡಬಹುದು. ಇದರಿಂದ ಅದರ ಸಮಾನ ವ್ಯಾಪ್ತಿಯನ್ನು ಒದಗಿಸುತ್ತದೆ.

ಅಡೆತಡೆಗಳು ಇಲ್ಲದಂತೆ ನೋಡಿಕೊಳ್ಳಿ

ಅಡೆತಡೆಗಳು ಇಲ್ಲದಂತೆ ನೋಡಿಕೊಳ್ಳಿ

ವೈ-ಫೈ ರೂಟರ್ ಸಿಗ್ನಲ್‌ಗಳಿಗೆ ಅಡೆತಡೆಗಳು ಇಲ್ಲದಂತೆ ನೋಡಿಕೊಳ್ಳಿ. ಗೋಡೆಗಳು ಮತ್ತು ಕೆಲವು ಲೋಹದ ವಸ್ತುಗಳು ಸಿಗ್ನಲ್ ಅನ್ನು ಹೀರಿಕೊಳ್ಳುತ್ತವೆ. ದೊಡ್ಡ ಲೋಹದ ಪೈಪ್ ಅಥವಾ ಚಾವಣಿಯ ಉದ್ದಕ್ಕೂ ಇರುವ ನಾಳವು ಸಹ ಸಿಗ್ನಲ್ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸಾಧ್ಯವಾದಷ್ಟು ಲೋಹದ ವಸ್ತುಗಳು ಸಿಗ್ನಲ್‌ಗೆ ಅಡ್ಡಿಯಾಗದ ಸ್ಥಳದಲ್ಲಿ ವೈ-ಫೈ ರೂಟರ್ ಅನ್ನು ಇರಿಸಲು ಪ್ರಯತ್ನ ಮಾಡಿ.

ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಂದ ದೂರವಿಡಿ

ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಂದ ದೂರವಿಡಿ

ವೈ ಫೈ ರೂಟರ್ ಸಾಧನವನ್ನು ಟಿವಿಗಳು, ರೆಫ್ರಿಜರೇಟರ್‌ಗಳು ಮತ್ತು ಬೇಬಿ ಮಾನಿಟರ್ ಬ್ಲೂಟೂತ್ ಹೆಡ್‌ಸೆಟ್‌ ಗಳಂತಹ ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಂದ ದೂರವಿಡಿ. ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಸನಿಹ ಇರಿಸುವುದರಿಂದ ವೈ ಫೈ ಸಿಗ್ನಲ್‌ಗೆ ಅಡ್ಡಿ ಆಗುವ ಸಾಧ್ಯತೆಗಳು ಇರುತ್ತವೆ. ಇದು ವೈ-ಫೈ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.

ಫಿಶ್ ಟ್ಯಾಂಕ್ ಮತ್ತು ಕನ್ನಡಿ ಹತ್ತಿರ ಇಡಬೇಡಿ

ಫಿಶ್ ಟ್ಯಾಂಕ್ ಮತ್ತು ಕನ್ನಡಿ ಹತ್ತಿರ ಇಡಬೇಡಿ

ವೈ-ಫೈ ರೂಟರ್ ಅನ್ನು ಫಿಶ್ ಟ್ಯಾಂಕ್ ಅಥವಾ ಕನ್ನಡಿ ಹತ್ತಿರ ಇಡಬೇಡಿ. ನೀರು ವೈ-ಫೈ ಸಿಗ್ನಲ್‌ಗಳನ್ನು ಪ್ರತಿಬಂಧಿಸುತ್ತದೆ ಮತ್ತು ಪ್ರಸರಣವನ್ನು ನಿಧಾನಗೊಳಿಸುತ್ತದೆ. ಮತ್ತೊಂದೆಡೆ ಕನ್ನಡಿಗಳು ಸಂಕೇತಗಳನ್ನು ಪ್ರತಿಬಿಂಬಿಸುತ್ತವೆ. ಹೀಗಾಗಿ ಇದು ರೂಟರ್ನ ಕಾರ್ಯಕ್ಷಮತೆಗೆ ಅಡ್ಡಿ ಆಗುವ ಸಾಧ್ಯತೆಗಳಿರುತ್ತವೆ.

ವೈ-ಫೈ ಅನ್ನು ಎತ್ತರದ ಸ್ಥಳದಲ್ಲಿ ಇರಿಸುವುದು ಉತ್ತಮ

ವೈ-ಫೈ ಅನ್ನು ಎತ್ತರದ ಸ್ಥಳದಲ್ಲಿ ಇರಿಸುವುದು ಉತ್ತಮ

ವೈ ಫೈ ರೂಟರ್ ಸಿಗ್ನಲ್‌ಗಳನ್ನು ಕೆಳಕ್ಕೆ ಹರಡುತ್ತದೆ. ಅತ್ಯುತ್ತಮ ಸಿಗ್ನಲ್ ಪಡೆಯಲು ರೂಟರ್ ಅನ್ನು ಎತ್ತರದ ಸ್ಥಳದಲ್ಲಿ ಇರಿಸುವುದು ಸೂಕ್ತ. ಇದರಿಂದ ಯಾವುದೇ ಅಡೆ ತಡೆ ಇಲ್ಲದೇ ಉತ್ತಮ ಸಿಗ್ನಲ್‌ ದೊರೆಯುವ ಸಾಧ್ಯತೆ ಹೆಚ್ಚು.

ಇಂಟರ್ನೆಟ್‌

ಇಂದಿನ ಬಹುತೇಕ ಆಪ್‌ಗಳು ಮತ್ತು ಸೇವೆಗಳು ಅಧಿಕ ಡೇಟಾವನ್ನು ಬೇಡುತ್ತವೆ ಮತ್ತು ಅತೀಯಾದ ಇಂಟರ್ನೆಟ್‌ ಬಳಕೆಯಿಂದಾ ವೈ ಫೈ ಸಹ ಸ್ಲೋ ಎನ್ನುವಂತಾಗಿದೆ. ವೈ-ಫೈ ನೆಟವರ್ಕ್ ಸಿಗ್ನಲ್‌ಗಳಿಗೆ ಬಲ ತುಂಬಲು 'ವೈ ಫೈ ಬೂಸ್ಟರ್' ಬಳಕೆ ಮಾಡಲಾಗುತ್ತಿದ್ದು, ಈ ಡಿವೈಸ್‌ಗಳ ಬಳಕೆಯಿಂದ ವೈ ಫೈ ಇಂಟರ್ನೆಟಿನ ವೇಗ ಹೆಚ್ಚಿಸಿಕೊಳ್ಳಬಹುದಾಗಿದೆ. ಇಂಟರ್ನೆಟ್‌ ಬೆಂಬಲಿತ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ.

ಶಕ್ತಗೊಳಿಸಿ

ವೈ ಫೈ ಬೂಸ್ಟರ್ ಸಾಧನಗಳು ಕವರೇಜ್‌ ಹೆಚ್ಚು ವ್ಯಾಪ್ತಿಯ ವರೆಗೂ ವಿಸ್ತರಿಸಲಿದ್ದು, ವೈ ಫೈ ತರಂಗಾಂತರಗಳನ್ನು ಶಕ್ತಗೊಳಿಸಿ ವೇಗ ಅಧಿಕ ಮಾಡುತ್ತವೆ. ಹಾಗೆಯೇ ಇವುಗಳು ಸುರಕ್ಷತೆಯನ್ನು ಪಡೆದಿದ್ದು, ಮನೆಗಳಲ್ಲಿ, ಆಫೀಸ್‌ಗಳಲ್ಲಿ ಉಪಯೋಗಿಸಬಹುದಾಗಿದೆ. ಹಾಗಾದರೇ ವೈ-ಫೈ ಬೂಸ್ಟರ್‌ನ ಇನ್ನಿತರೆ ಉಪಯೋಗಗಳೇನು ಮತ್ತು ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಏನಿದು ವೈ-ಫೈ ಬೂಸ್ಟರ್‌

ಏನಿದು ವೈ-ಫೈ ಬೂಸ್ಟರ್‌

ಮನೆಗಳಲ್ಲಿ ಮತ್ತು ಆಫೀಸ್‌ಗಳಲ್ಲಿ ವೇಗದ ಇಂಟರ್ನೆಟ್ ಸೇವೆ ಪಡೆಯಲು ವೈ ಫೈ ನೆಟವರ್ಕ್‌ ಬಳಸುತ್ತಾರೆ. ಆ ವೈ ಫೈ ನೆಟವರ್ಕ್‌ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ವೈ ಫೈ ಸಿಗ್ನಲ್‌ಗಳಿಗೆ ಬಲ ಒದಗಿಸುವ ಕೆಲಸವನ್ನು ವೈ ಫೈ ಬೂಸ್ಟರ್ ಮಾಡಲಿದೆ. ಇರುವ ಇಂಟರ್ನೆಟ್‌ ನಲ್ಲೇ ಸೌಲಭ್ಯ ವನ್ನು ವೇಗವಾಗಿ ಪಡೆಯಲು ಇವು ನೆರವಾಗಲಿವೆ.

ಉಪಯುಕ್ತವಾಗಿದೆ

ವೈ-ಫೈ ಬೂಸ್ಟರ್ ಏಕೆ ಅಗತ್ಯ? ವೈ ಫೈ ಕವರೇಜ್‌ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ವೈ-ಫೈ ಬೂಸ್ಟರ್ ಸಾಧನ ಉಪಯುಕ್ತವಾಗಿದೆ. ಇಂಟರ್ನೆಟ್ ಕವರೇಜ್ ಹೆಚ್ಚಿಸುವುದಕ್ಕಾಗಿ ಎಕ್ಟ್ರಾ ಕೇಬಲ್‌, ಹಬ್‌ ಮತ್ತಿತ್ತರ ಡಿವೈಸ್‌ಗಳನ್ನು ಖರೀದಿಸುವುದನ್ನು ಉಳಿಸುತ್ತದೆ. ಹೆಚ್ಚು ಹೆಚ್ಚ ಡಿವೈಸ್‌ಗಳನ್ನು ಕನೆಕ್ಟ ಮಾಡಿದರೂ ವೈ ಫೈ ವೇಗದಲ್ಲಿ ಬದಲಾವಣೆ ಆಗುವುದಿಲ್ಲ.

ವೈ ಫೈ ಬೂಸ್ಟರ್, ಬಳಕೆ ಏಲ್ಲಿ ಮತ್ತು ಹೇಗೆ

ವೈ ಫೈ ಬೂಸ್ಟರ್, ಬಳಕೆ ಏಲ್ಲಿ ಮತ್ತು ಹೇಗೆ

ವೈ ಫೈ ಬೂಸ್ಟರ್ ಸಾಧನಗಳು ವಿವಿಧ ಆಕಾರಗಳಲ್ಲಿ ಲಭ್ಯವಿದ್ದು, ಅವುಗಳನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಗೋಡೆಗೆ ತೂಗು ಹಾಕಬಹುದು. ಈ ಡಿವೈಸ್‌ಗಳ ಸಂಪರ್ಕ್‌ ಮಾಡಲು ಯಾವುದೇ ಕೇಬಲ್‌ ಕನೆಕ್ಷನ್ ಮಾಡುವ ಅಗತ್ಯ ಇರುವುದಿಲ್ಲ. ವಾಯರ್‌ಲೆಸ್‌ ಟ್ರಾನ್ಸ್‌ಮಿಷನ್‌ ಮಾದರಿಯ ಡಿವೈಸ್‌ಗಳಾಗಿವೆ.

ಬೂಸ್ಟರ್ ಅಯಂಟೆನಾ

ಬೂಸ್ಟರ್ ಅಯಂಟೆನಾ

ವೈ-ಫೈ ಬೂಸ್ಟರ್ ಸಾಧನಗಳು ಎರಡು ಆಯಂಟೆನಾಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ ಒಂದು ಟ್ರಾನ್ಸ್‌ಮಿಟ್‌ ಮಾಡಲು ಮತ್ತು ಇನ್ನೊಂದು ಸಿಗ್ನಲ್‌ ಬ್ರಾಡ್‌ಕಾಸ್ಟ್ ಮಾಡುವ ಕಾರ್ಯ ಮಾಡುತ್ತವೆ. ಕೆಲವೊಂದು ವೈ ಫೈ ಬೂಸ್ಟರ್‌ಗಳು ಮೂರು ಆಯಂಟೆನಾ ಒಳಗೊಂಡಿರುತ್ತವೆ. ಆಗ ಮೂರನೇಯ ಆಯಂಟೆನಾ ವಾಯರ್‌ಲೆಸ್‌ ಟ್ರಾನ್ಸ್‌ಮಿಷನ್‌ ಕ್ಯಾಪ್ಚರ್‌ ಮಾಡುತ್ತದೆ.

ಟ್ರಾನ್ಸ್‌ಮಿಷನ್‌

ಯಾವುದೇ ಬ್ಯ್ರಾಂಡ್‌ನ ರೋಟರ್‌ ಮತ್ತು ಇಂಟರ್ನೆಟ ಸೇವೆಗಳಾದರೂ ಇದು ಕಾರ್ಯನಿರ್ವಹಿಸುತ್ತದೆ. ಟ್ರಾನ್ಸ್‌ಮಿಷನ್‌ ವೇಗವು ಸುಮಾರು 300Mbps ಆಗಿದ್ದು, ವಿದ್ಯುತ್ ಶಕ್ತಿ ಬಳಕೆಯಲ್ಲಿಯೂ ಮಿತವಾಗಿದೆ. ಇನ್‌ಸ್ಟಾಲ್‌ ಮಾಡಲು ಬೇರೆ ಯಾವುದೇ ಹೆಚ್ಚುವರಿ ಪರಿಕರಗಳು ಬೇಕಾಗಿರುವುದಿಲ್ಲ.

Best Mobiles in India

English summary
Want To Boost Your Wi-Fi Router Signal: Follow These Tips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X