Just In
Don't Miss
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಲೈಕ್ ಪಡೆಯಬೇಕೆ?..ಹೀಗೆ ಮಾಡಿ!
ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ಗಳಲ್ಲಿಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಅಪ್ಲಿಕೇಶನ್‌ಗಳು ಇದ್ದೆ ಇರುತ್ತವೆ. ಈ ಆಪ್ಸ್‌ಗಳು ಮನರಂಜನೆ ತಾಣಗಳಷ್ಟೆ ಅಲ್ಲದೇ, ಪ್ರಸ್ತುತ ಮಾಹಿತಿಗಳ ಹೂರಣವಾಗಿವೆ. ಈ ಫೈಕಿ ಫೇಸ್‌ಬುಕ್ ಮಾಲೀಕತ್ವದ 'ಇನ್‌ಸ್ಟಾಗ್ರಾಂ' ಸಹ ಸಾಕಷ್ಟು ಜನಪ್ರಿಯವಾಗಿದ್ದು, ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಅವರಲ್ಲಿ ಬಹುತೇಕರು ತಮ್ಮ ಇನ್‌ಸ್ಟಾಗ್ರಾಂ ಫೋಟೊಗಳಿಗೆ ಲೈಕ್ಸ್ ಬರುವುದೇ ಇಲ್ಲವಲ್ಲ ಎನ್ನುವ ಪ್ರಶ್ನೇಯನ್ನು ಹೊಂದಿದ್ದಾರೆ.

ಹೌದು, ಇನ್‌ಸ್ಟಾಗ್ರಾಂ ಅತ್ಯುತ್ತಮ ಸೋಶಿಯಲ್ ಆಪ್ ಆಗಿದ್ದು, ಈ ಆಪ್‌ನಲ್ಲಿ ಬಳಕೆದಾರರು ಹೆಚ್ಚಿನ ಲೈಕ್‌ಗಳನ್ನು ಪಡೆಯಲು ಇಚ್ಚಿಸುತ್ತಿರುತ್ತಾರೆ. ಆದರೆ ಅವರ ಪೋಟೊಗಳಿಗೆ ನಿರೀಕ್ಷಿಸಿದಷ್ಟು ಲೈಕ್‌ಗಳು ಬರುವುದೇ ಇಲ್ಲ. ಆದ್ರೆ ಕೆಲವು ಸರಳ ಕ್ರಮಗಳನ್ನು ಅನುಸರಿಸುವುದರ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಫೋಟೊಗಳಿಗೆ ಹೆಚ್ಚಿನ ಲೈಕ್ ಪಡೆಯಲು ಸಾಧ್ಯವಿದೆ. ಹಾಗಾದರೇ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಿನ ಲೈಕ್‌ಗಳನ್ನು ಪಡೆಯಲು ನೆರವಾಗುವ ಟಿಪ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಖಾತೆಯನ್ನು ಪಬ್ಲಿಕ್ ಮಾಡಿ
ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಿರುತ್ತಿರಿ. ನಿಮ್ಮ ಅಕೌಂಟ್‌ನಲ್ಲಿ ಪೋಸ್ಟ್ ಮಾಡುವ ಫೋಟೊಗಳಿಗೆ ಲೈಕ್ ಬರುವುದಿಲ್ಲ ಅಲ್ಲವೇ?. ಹಾಗಿದ್ರೆ ಇನ್‌ಸ್ಟಾಗ್ರಾಂ ಆಪ್‌ನ ಸೆಟ್ಟಿಂಗ್‌ನಲ್ಲಿ ನಿಮ್ಮ ಅಕೌಂಟ್‌ಅನ್ನು ಪಬ್ಲಿಕ್ ಮಾಡಿರಿ. ಖಾತೆ ಪಬ್ಲಿಕ್ ಆಗುವುದರಿಂದ ನಿಮ್ಮ ಅಕೌಂಟ್‌ಗೆ ಪ್ರಮೋಷನ್ ದೊರೆತಂತೆ ಆಗುತ್ತದೆ ಹೆಚ್ಚಿನ ಜನರಿಗೆ ಫೋಟೊ ತಲುಪುತ್ತವೆ ಮತ್ತು ಲೈಕ್ ಬರುವ ಅವಕಾಶಗಳು ಇರುತ್ತವೆ.

ಸೂಕ್ತ ಕ್ಯಾಪ್ಶನ್ ಬಳಸಿ
ಪ್ರವಾಸಕ್ಕೆ ಹೋಗಿರುತ್ತಿರಿ ಅಲ್ಲಿ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿದಿರುತ್ತಿರಿ ಆ ಫೋಟೊಗಳನ್ನು ಇನ್‌ಸ್ಟಾಗ್ರಾಂ ಆಪ್‌ಗೆ ಅಪ್‌ಲೋಡ್ ಮಾಡುತ್ತಿರಿ. ಹೀಗೆ ಫೋಟೊಗಳನ್ನು ಅಪ್‌ಲೋಡ್ ಮಾಡುವಾಗ ಫೋಟೊಗೆ ಸೂಕ್ತ ಕ್ಯಾಪ್ಶನ್ ನೀಡಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಟ್ಯಾಗ್ ಮಾಡಿರಿ ಇದರಿಂದ ಫೋಟೊ ಹೆಚ್ಚಿನ ಜನರನ್ನು ತಲುಪುತ್ತದೆ. ಹಾಗೆಯೇ ನಿಮ್ಮ ಫೋಟೊಗಳಿಗೂ ಲೈಕ್ ಸೀಗುತ್ತವೆ.

ಹ್ಯಾಶ್‌ಟ್ಯಾಗ್ ಬಳಸಿ
ಯಾವುದೇ ಫೋಟೊವನ್ನು ಇನ್‌ಸ್ಟಾಗ್ರಾಂ ಆಪ್‌ಗೆ ಫೋಟೋ ಪೋಸ್ಟ್ ಮಾಡುವಾಗ ಅಗತ್ಯವಾಗ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರಿ. ಹ್ಯಾಶ್‌ಟ್ಯಾಗ್ ಬಳಸುವುದರಿಂದ ಟಾರ್ಗೆಟ್ ಆಡಿಯನ್ಸ್‌ಗೆ ತಲುಪಬಹುದಾಗಿದೆ. ನಿಮ್ಮ ಸ್ನೇಹಿತರಷ್ಟೆ ಅಲ್ಲದೇ ಹೊಸ ಗೆಳೆಯರನ್ನು ರಿಚ್ ಮಾಡಲು ಸಹ ಹ್ಯಾಶ್‌ಟ್ಯಾಗ್‌ಗಳು ನೆರವಾಗುತ್ತವೆ. ಇದರಿಂದ ನಿಮ್ಮ ಫೋಟೊಗಳೂ ಲೈಕ್ ಪಡೆಯುತ್ತವೆ.

ಸ್ನೇಹಿತರನ್ನು ಫಾಲೋ ಮಾಡಿ
ಇನ್‌ಸ್ಟಾಗ್ರಾಂನಲ್ಲಿ ನಿಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೀವು ನಿಮ್ಮ ಸ್ನೇಹಿತರ ಅಕೌಂಟ್‌ಗಳನ್ನು ಫಾಲೋ ಮಾಡಬೇಕು ಮತ್ತು ಅವರ ಫೋಟೋಗಳನ್ನು ಲೈಕ್, ಕಮೆಂಟ್, ಮಾಡಬೇಕು. ಇದಕ್ಕೆ ಪ್ರತಿಯಾಗಿ ನಿಮ್ಮ ಫೋಟೋಗಳಿಗೂ ಅವರು ಲೈಕ್, ಕಮೆಂಟ್‌ಗಳನ್ನು ಮಾಡುತ್ತಾರೆ. ಮತ್ತು ಅವರ ಗೆಳೆಯರು ನಿಮ್ಮ ಫೋಟೊಗಳನ್ನು ಲೈಕ್ ಮಾಡುವ ಚಾನ್ಸ್ ಇರುತ್ತವೆ.

ಟ್ಯಾಗ್ ಲೊಕೇಶನ್
ನಿಮ್ಮ ಖಾತೆಯನ್ನು ಹೊಸ ಸ್ನೇಹಿತರಿಗೆ ಪರಿಚಯಿಸಲು ಈ ಆಯ್ಕೆಯು ಸಹ ಉತ್ತಮವಾಗಿದ್ದು, ಲೊಕೇಶನ್ ಟ್ಯಾಗ್ ಮಾಡುವುದರಿಂದ ಆ ನಿರ್ದಿಷ್ಟ ಲೊಕೇಶನ್‌ನಲ್ಲಿರುವ ಹೊಸ ಸ್ನೇಹಿರಿಗೆ ನೀವು ಪೋಸ್ಟ್ ಮಾಡುವ ಫೋಟೊ ತಲುಪುತ್ತದೆ. ಫೋಟೋಗಳು ಅತ್ಯುತ್ತಮವಾಗಿದ್ದರೇ, ಖಂಡಿತಾ ಲೈಕ್ ಪಡೆಯುತ್ತವೆ. ಹಾಗೆಯೇ ನಿಮ್ಮನ್ನು ಫಾಲೊ ಮಾಡಲು ಸಹ ಆರಂಭಿಸುತ್ತಾರೆ. ಹೀಗಾಗಿ ಲೊಕೇಶನ್ ಟ್ಯಾಗ್ ಮಾಡಿರಿ.

ಮುದ್ದು ಪ್ರಾಣಿಗಳೊಂದಿಗಿನ ಫೋಟೊ
ಸಾಮಾನ್ಯವಾಗಿ ಸಾಕು ಪ್ರಾಣಿಗಳನ್ನು ಎಲ್ಲರು ಇಷ್ಟಪಡುತ್ತಾರೆ. ಹೀಗಾಗಿ ನಿಮ್ಮ ಮುದ್ದು ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳ ಫೋಟೊಗಳನ್ನು ಅಪ್‌ಲೋಡ್ ಮಾಡಿರಿ ಅವುಗಳು ಲೈಕ್ ಪಡೆದುಕೊಳ್ಳುತ್ತವೆ. ಜೊತೆಗೆ ಅವುಗಳೊಂದಿಗೆ ಸೆಲ್ಫೀ ಸೆರೆಹಿಡಿಯಿರಿ ಮತ್ತು ಆ ಸಾಕುಪ್ರಾಣಿಗಳ ಚಿಕ್ಕ ಪುಟ್ಟ ಫನ್ನಿ ದೃಶ್ಯಗಳನ್ನು ಸೆರೆಹಿಡಿದು ವಿಡಿಯೊಗಳನ್ನು ಸಹ ಅಪ್‌ಲೋಡ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470