ಏರುತ್ತಿರುವ ಮೊಬೈಲ್ ಬಿಲ್ ಕಡಿವಾಣ ಹೇಗೆ?

By Shwetha
|

ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಬಿಲ್ ಕಡಿಮೆ ಮಾಡಬೇಕು ಎನ್ನುವ ಇರಾದೆ ನಿಮ್ಮದಾಗಿದೆ ಎಂದಾದಲ್ಲಿ ಇಂದಿನ ನಮ್ಮ ಲೇಖನ ಖಂಡಿತ ನಿಮಗೆ ಸಹಕಾರಿಯಾಗಲಿದೆ. ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಯೋಜನೆ ಪ್ರೀಪೈಡೇ ಇರಲಿ ಪೋಸ್ಟ್ ಪೇಡೇ ಇರಲಿ ಈ ಯೋಜನೆಗಳನ್ನು ಅನುಷ್ಟಾನಗೊಳಿಸಿ ನೀವು ಕಾರ್ಯನಿರ್ವಹಿಸುತ್ತಿರುವವರು ಎಂದಾದಲ್ಲಿ ಇಲ್ಲಿದೆ ನೀವು ಅನುಸರಿಸಬೇಕಾದ ಕೆಲವೊಂದು ಯೋಜನೆಗಳು.

ಓದಿರಿ: ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ಇಂದಿನ ನಮ್ಮ ಲೇಖನದಲ್ಲಿ ಮೊಬೈಲ್ ಬಿಲ್ ಅನ್ನು ನಿಯಂತ್ರಿಸುವ ಕೆಲವೊಂದು ಸರಳ ಯೋಜನೆಗಳ ಬಳಿಗೆ ನಿಮ್ಮನ್ನು ನಾವು ಕೊಂಡೊಯ್ಯುತ್ತಿದ್ದು ಅವುಗಳಿಂದ ನೀವು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಶೇರ್‌ಡ್ ಸರ್ವೀಸ್/ಕುಟುಂಬ ಯೋಜನೆ

ಶೇರ್‌ಡ್ ಸರ್ವೀಸ್/ಕುಟುಂಬ ಯೋಜನೆ

ನಿಮ್ಮ ಮೊಬೈಲ್ ಸೇವಾ ಯೋಜನೆಯನ್ನು ಬಳಸುತ್ತಿರುವವರು ನೀವು ಒಬ್ಬರೇ ಎಂದಾದಲ್ಲಿ ನಿಮ್ಮ ಮಾಸಿಕ ಬಿಲ್ ದುಬಾರಿಯಾಗುವುದು ಖಂಡಿತ. ಅದಕ್ಕಾಗಿಯೇ ಹಂಚಿಕೆ ಸರ್ವೀಸ್ ಯೋಜನೆಯನ್ನು ಬಳಸಿ ಅಂದರೆ ಇದರಲ್ಲಿ ನಿಮಗೆ ಅನಿಯಮಿತ ಪಠ್ಯ ಮತ್ತು ಕರೆ ಮಾಡುವ ಸೌಲಭ್ಯ ಇರುತ್ತದೆ.

ಧ್ವನಿ ಕರೆ ಪರ್ಯಾಯ ವ್ಯವಸ್ಥೆಗಳು

ಧ್ವನಿ ಕರೆ ಪರ್ಯಾಯ ವ್ಯವಸ್ಥೆಗಳು

ಹೆಚ್ಚಿನ ಹೊಸ ಸ್ಮಾರ್ಟ್‌ಫೋನ್ ಯೋಜನೆಗಳು ಅನಿಯಮಿತ ಅಂತರಾಷ್ಟ್ರೀಯ ಕರೆಗಳ ಸೇವೆಗಳನ್ನು ನಿಮಗೆ ಒದಗಿಸುತ್ತದೆ. ಸ್ಕೈಪ್ ಸೇವೆಯನ್ನು ನೀವು ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ ಬಳಸಬಹುದಾಗಿದ್ದು ಇದರಿಂದ ಹೊರದೇಶಗಳಿಗೂ ನೀವು ಕರೆಮಾಡಬಹುದಾಗಿದೆ.

ವಿದ್ಯಾಭ್ಯಾಸ ಮತ್ತು ವ್ಯವಹಾರ ವಿನಾಯಿತಿಗಳು

ವಿದ್ಯಾಭ್ಯಾಸ ಮತ್ತು ವ್ಯವಹಾರ ವಿನಾಯಿತಿಗಳು

ಇನ್ನು ಕೆಲವೊಂದು ವಿದ್ಯಾಭ್ಯಾಸ ಮತ್ತು ವ್ಯವಹಾರ ಸಂಸ್ಥೆಗಳು ವಿದ್ಯಾರ್ಥಿಗಳು ಹಾಗೂ ವ್ಯವಹಾರಸ್ಥರಿಗೆ ಕೆಲವೊಂದು ಅತ್ಯುತ್ತಮ ಮೊಬೈಲ್ ಯೋಜನೆಗಳನ್ನು ಒದಗಿಸುತ್ತಿದ್ದು ಇದರ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಯಾವಾಗಲೂ ವೈಫೈ ಸಂಪರ್ಕದಲ್ಲಿರುವುದು

ಯಾವಾಗಲೂ ವೈಫೈ ಸಂಪರ್ಕದಲ್ಲಿರುವುದು

ನಿಮಗೆ ಎಷ್ಟು ಅಗತ್ಯವೋ ಅಷ್ಟು ವೈಫೈಯನ್ನು ಬಳಸಿ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಿ. ವೈಫೈ ಸೇವೆಯನ್ನು ವಿಪರೀತ ಬಳಸುವುದು ನಿಮ್ಮ ಫೋನ್ ಬಿಲ್ ಅನ್ನು ಹೆಚ್ಚಿಸುತ್ತದೆ ಎಂಬುದು ನಿಮ್ಮ ಮನದಲ್ಲಿರಲಿ.

ಪಠ್ಯ ಪರ್ಯಾಯ ಬಳಕೆ

ಪಠ್ಯ ಪರ್ಯಾಯ ಬಳಕೆ

ಇನ್ನು ಫೋನ್‌ನಲ್ಲಿ ಎಸ್‌ಎಮ್‌ಎಸ್‌ಗಳನ್ನು ಬಳಸುವ ಬದಲಿಗೆ ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್, ಹೈಕ್ ಮೊದಲಾದ ಸೇವೆಗಳನ್ನು ಬಳಸಿ.

ಫೇಸ್‌ಬುಕ್ ಆಟೊಪ್ಲೇ ಆಫ್ ಮಾಡಿ

ಫೇಸ್‌ಬುಕ್ ಆಟೊಪ್ಲೇ ಆಫ್ ಮಾಡಿ

ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಆಟೊಪ್ಲೇ ಆಯ್ಕೆಯನ್ನು ಆನ್ ಮಾಡಿಟ್ಟುಕೊಳ್ಳುವುದೂ ಕೂಡ ಹೆಚ್ಚುವರಿ ಅಂತರ್ಜಾಲವನ್ನು ಕಬಳಿಸಿ ನಿಮಗೆ ಫೋನ್ ದರವನ್ನು ಹೆಚ್ಚಿಸುತ್ತದೆ. ಇದನ್ನು ಡೀಫಾಲ್ಟ್ ಮೂಲಕ ಆಫ್ ಮಾಡಿ.

ಹೊರದೇಶಕ್ಕೆ ಪ್ರಯಾಣಿಸುವಾಗ ಸ್ಥಳೀಯ ಸಿಮ್ ಬಳಸಿ

ಹೊರದೇಶಕ್ಕೆ ಪ್ರಯಾಣಿಸುವಾಗ ಸ್ಥಳೀಯ ಸಿಮ್ ಬಳಸಿ

ನೀವು ಹೊರದೇಶಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಆದಷ್ಟು ಸ್ಥಳೀಯ ಸಿಮ್ ಅನ್ನು ಬಳಸಿ. ಸ್ಥಳೀಯ ಪ್ರಿಪೈಡ್ ಸಿಮ್ ಅನ್ನು ಬಳಸುವುದರಿಂದ ನೀವು ಹೆಚ್ಚುವರಿ ದುಡ್ಡನ್ನು ಉಳಿಸಬಹುದಾಗಿದೆ. ವಿದೇಶಿ ಸಿಮ್ ಕಾರ್ಡ್‌ನೊಂದಿಗೆ ಅದನ್ನು ನೀವು ಬಳಸುತ್ತೀರಿ ಎಂದಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡುವುದು ಅತ್ಯಗತ್ಯವಾಗಿದೆ.

ಕಡಿಮೆ ದರವನ್ನು ನಿಮ್ಮದಾಗಿಸಿಕೊಳ್ಳಿ

ಕಡಿಮೆ ದರವನ್ನು ನಿಮ್ಮದಾಗಿಸಿಕೊಳ್ಳಿ

ನಿಮ್ಮ ಮಾಸಿಕ ಫೋನ್ ಬಿಲ್‌ನಲ್ಲಿ ಕಡಿಮೆ ದರ ನಿಮ್ಮ ಆಯ್ಕೆಯಾಗಿರಲಿ. ನಿಮ್ಮ ಫೋನ್‌ ಬಿಲ್‌ಗೆ ಯಾವುದಾದರೂ ಡಿಸ್ಕೌಂಟ್ ಆಫರ್‌ಗಳು ಇದೇಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

Best Mobiles in India

English summary
In buzy world putting the end on growing mobile bill is not possible. But You can manage your mobile bill by following some good tips. We are giving assurance that you can put a break to your growing bills.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X