ಬಳಕೆದಾರರಿಗೆ ತಿಳಿಯದಂತೆ ಅವರ ವಾಟ್ಸಾಪ್‌ ಸ್ಟೇಟಸ್‌ ವೀಕ್ಷಿಸಬಹುದು!.ಹೇಗೆ ಗೊತ್ತಾ?

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರನ್ನು ಆಕರ್ಷಿಸಿದೆ. ಬಳಕೆದಾರರ ಖಾಸಗಿ ತನದ ಸುರಕ್ಷತೆಗಾಗಿ ವಾಟ್ಸಾಪ್‌ ಹಲವು ಉಪಯುಕ್ತ ಆಯ್ಕೆಗಳನ್ನು ನೀಡಿದೆ. ಹಾಗೆಯೇ ಬಳಕೆದಾರರು ತಮ್ಮ ಕಾಂಟ್ಯಾಕ್ಟ್‌ನಲ್ಲಿರುವ ಬಳಕೆದಾರರ ವಾಟ್ಸಾಪ್‌ ಸ್ಟೇಟಸ್‌ ಅನ್ನು ಅವರಿಗೆ ತಿಳಿಯದಂತೆ ವೀಕ್ಷಿಸಬಹುದಾಗಿದೆ. ಅದು ಹೇಗೆ ಅಂತೀರಾ.!

ವಾಟ್ಸಾಪ್‌ನಲ್ಲಿ

ಹೌದು, ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರು ಹಾಕುವ ಸ್ಟೇಟಸ್‌ ಅನ್ನು ವೀಕ್ಷಿಸಿದಾಗ, ಅವರಿಗೆ ಯಾರೆಲ್ಲಾ ಸ್ಟೇಟಸ್‌ ನೋಡಿದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ. ಆದರೆ ವಾಟ್ಸಾಪ್‌ನಲ್ಲಿನ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡುವ ಮೂಲಕ ಸ್ಟೇಟಸ್‌ ನೋಡಿದರೂ, ನೋಡಿರುವ ಬಗ್ಗೆ ಮಾಹಿತಿ ಗೊತ್ತಾಗದಂತೆ ಮಾಡಬಹುದಾಗಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್‌ ಸ್ಟೇಟಸ್‌

ವಾಟ್ಸಾಪ್‌ ಸ್ಟೇಟಸ್‌

ವಾಟ್ಸಾಪ್‌ ಸ್ಟೇಟಸ್‌ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದು, ಬಹುತೇಕ ಬಳಕೆದಾರರು ಈ ಆಯ್ಕೆಯನ್ನು ಮಿಸ್‌ ಮಾಡದೇ ಬಳಸುತ್ತಾರೆ ಎನ್ನಬಹುದಾಗಿದೆ. ವಾಟ್ಸಾಪ್‌ ಸ್ಟೇಟಸ್‌ 24 ಗಂಟೆಗಳ ಅವಧಿ ಕಾಲಮಿತಿ ಹೊಂದಿದ್ದು, ಆ ನಂತರ ಆಟೋಮ್ಯಾಟಿಕ್ ಆಗಿ ಸ್ಟೇಟಸ್‌ ಡಿಲೀಟ್‌ ಆಗಿಬಿಡುತ್ತದೆ. ಯಾರೆಲ್ಲಾ ಸ್ಟೇಟಸ್‌ ವೀಕ್ಷಿಸಿದ್ದಾರೇ ಎನ್ನುವ ಮಾಹಿತಿ ಬಳಕೆದಾರರಿಗೆ ಸಿಗುತ್ತದೆ. ಆದರೆ ಸ್ಟೇಟಸ್‌ ನೋಡಿದರೂ ಅದು ಬಳಕೆದಾರರಿಗೆ ತಿಳಿಯದಂತೆ ಸೆಟ್‌ ಮಾಡಬಹುದಾಗಿದೆ.

ಬಳಕೆದಾರರಿಗೆ ತಿಳಿಯದಂತೆ ವಾಟ್ಸಾಪ್ ಸ್ಟೇಟಸ್‌ ವೀಕ್ಷಿಸುವುದು ಹೇಗೆ

ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿನ ವಾಟ್ಸಾಪ್ ಅಪ್ಲಿಕೇಶನ್‌ಗೆ ಹೋಗಿ.

ಹಂತ 2: ನಂತರ ಮುಂದುವರಿಯಿರಿ ಮತ್ತು ಸೆಟ್ಟಿಂಗ್‌ಗಳ ಮೆನು ತೆರೆಯಿರಿ.

ಹಂತ 3: ಆನಂತರ ಪ್ರೈವಸಿ ಸೆಟ್ಟಿಂಗ್‌ಗೆ ಕೆಳಗೆ ಸ್ಕ್ರಾಲ್ ಮಾಡಿ.

ಹಂತ 4: ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್‌ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ವೀಕ್ಷಿಸಿದ್ದಿರಾ

ಅದನ್ನು ಸಕ್ರಿಯಗೊಳಿಸಿದ ನಂತರ, ನೀವು ಬಳಕೆದಾರರ(ನಿಮ್ಮ ಕಾಂಟ್ಯಾಕ್ಟ್‌) ವಾಟ್ಸಾಪ್ ಸ್ಟೇಟಸ್‌ ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಸಂಪರ್ಕಕ್ಕೆ ತಿಳಿಯಲು ಸಾಧ್ಯವಾಗುವುದಿಲ್ಲ. ನೆನಪಿಸಿಕೊಳ್ಳಬೇಕಾದರೆ, ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಕೆಲವು ವರ್ಷಗಳ ಹಿಂದೆ ವಾಟ್ಸಾಪ್ ಸ್ಟೇಟಸ್‌ ಅನ್ನು ಪರಿಚಯಿಸಿತು. ಇದು ಇನ್‌ಸ್ಟಾಗ್ರಾಮ್‌ನ ಸ್ಟೇಟಸ್‌ ನಿಂದ ಸ್ಫೂರ್ತಿ ಪಡೆದಿದೆ.

Most Read Articles
Best Mobiles in India

English summary
Over the years WhatsApp has introduced several new features with the aim to offer an enhanced messaging experience to users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X