ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

Posted By:

ಎಂಜಿನಿಯರಿಂಗ್‌ ಕ್ಷೇತ್ರವನ್ನು ಆರಿಸಿಕೊಳ್ಳುವ ವಿದ್ಯಾರ್ಥಿ‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಳ್ಳಿಯಲ್ಲಿ ಶಿಕ್ಷಣ ಪಡೆದವರು ಸಹ ಇಂದು ಎಂಜಿನಿಯರಿಂಗ್‌ ಆಗುವ ಕನಸನ್ನು ಹೊಂದುತ್ತಿದ್ದಾರೆ. ಆದರೆ ಬಹಳಷ್ಟು ವಿದ್ಯಾರ್ಥಿ‌ಗಳ ಕನಸು ನನಸಾಗುತ್ತಿಲ್ಲ. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ನೇಮಕವಾದ ವಿದ್ಯಾರ್ಥಿ‌ಗಳಿಗೆ ಉದ್ಯೋಗ ಸಿಕ್ಕಿತು ಎಂದು ಸಂತೋಷ ಪಡುವ ಹಾಗಿಲ್ಲ. ಕೆಲವೊಂದು ಕಂಪೆನಿಗಳು ಕ್ಯಾಂಪಸ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿ‌ಗಳಿಗೆ ಮತ್ತೆ ಪುನ:ಟ್ರೈನಿಂಗ್‌ ನೀಡುತ್ತವೆ. ಆ ಟ್ರೈನಿಂಗ್‌ ಅವಧಿಯಲ್ಲಿ ಉತ್ತಮವಾದ ಫಲಿತಾಂಶ ಪಡೆದರ ಮಾತ್ರ ಅವರಿಗೆ ಉತ್ತಮ ಸಂಬಳ,ಕೆಲಸ ಸಿಗುತ್ತವೆ.

ಆದರೆ ಅತ್ತ ಕ್ಯಾಂಪಸ್‌ನಲ್ಲೂ ಸೆಲೆಕ್ಷನ್‌ ಆಗದೇ,ಇತ್ತ ಕೆಲಸವು ಸಿಗದೇ,ಬೇರೆ ಕೆಲಸವನ್ನು ಮಾಡಲಾಗದ ಬಹಳಷ್ಟು ಎಂಜಿನಿಯರ್‌ ವಿದ್ಯಾರ್ಥಿ‌ಗಳು ನಮ್ಮ ದೇಶದಲ್ಲಿದ್ದಾರೆ. ಕೊನೆಗೆ ಒಂದು ಸಣ್ಣ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ರೂ ಸಾಕು ಎಂದು ಕೆಲಸ ಹುಡುಕುವವರು ಇದ್ದಾರೆ. ಹೀಗಾಗಿ ಭಾರತೀಯ ಎಂಜಿನಿಯರ್‌ ವಿದ್ಯಾರ್ಥಿ‌ಗಳು ಎಡವುತಿರುವುದು ಎಲ್ಲಿ?ಕೆಲಸ ಪಡೆಯಲು ಯಾಕೆ ಬಹಳ ಕಷ್ಟ ಪಡುತ್ತಾರೆ ಎನ್ನುವ ಕುರಿತ ವಿವರ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಟೆಕ್ಕಿಗಳ ಸಂಬಳ ಎಷ್ಟು ಗೊತ್ತೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಲೇಜು ಮತ್ತು ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಳ:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

2006-07ರ ನಂತರ ಆಲ್ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಶನ್‌ (AICTE) ಅನುಮೋದನೆಗೆ ಒಳಪಟ್ಟ 1,511 ಎಂಜಿನಿಯರಿಂಗ್‌ ಕಾಲೇಜುಗಳಿಂದ 5.50 ಲಕ್ಷ ವಿದ್ಯಾರ್ಥಿ‌ಗಳು ಹೊರ ಹೊಮ್ಮಿದ್ದಾರೆ. ಜೊತೆಗೆ ಐದೇ ವರ್ಷದಲ್ಲಿ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ.

ಹೆಚ್ಚು ಓದಿದ್ರೂ ಕಡಿಮೆ ಸಂಬಳ:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ಪದವಿಧರರ ಸಂಖ್ಯೆ ಹೆಚ್ಚಳವಾದರಿಂದ ಅದು ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೆಚ್ಚು ಓದಿದ್ರೂ, ಆ ಕೆಲಸ ಸಿಗದಿದ್ದರಿಂದ ಕಡಿಮೆ ಸಂಬಳದ ಕೆಲಸವನ್ನು ಮಾಡಬೇಕಾದ ಅನಿವಾರ್ಯ‌ತೆ ಸೃಷ್ಟಿಯಾಗುತ್ತದೆ.

ಎಂಜಿನಿಯರಿಂಗ್‌ ಡಿಗ್ರಿ ಮಾತ್ರ ಸಾಲದು.ಹೆಚ್ಚಿನ ವಿಚಾರ ತಿಳಿದಿರಬೇಕು:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ಹಿಂದೆ ಇದ್ದಂತೆ ಇಂದು ಕಾರ್ಪೋರೆಟ್‌ ಕಂಪೆನಿಗಳ ನಿಯಮಗಳು ಬದಲಾಗಿದೆ.ಇಂದು ಬಹುತೇಕ ಕಂಪೆನಿಗಳು ಅಂಕಗಳ ಜೊತೆಗೆ ಸಂದರ್ಶ‌ನದಲ್ಲಿ ಇನ್ನಿತರ ಮ್ಯಾನೇಜ್‌ಮೆಂಟ್‌,ಕ್ರಿಯೇಟಿವ್‌, ಟೀಮ್ ವರ್ಕ್‌ಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಹೆಚ್ಚಿನ ವಿದ್ಯಾರ್ಥಿ‌ಗಳು ಫೇಲಾಗುತ್ತಿದ್ದಾರೆ.

ಸಂಖ್ಯೆ ಪ್ರಮಾಣ ಹೆಚ್ಚಿದ್ದರೆ ಸಾಲದು.ಗುಣಮಟ್ಟ ಉತ್ತಮವಾಗಿರಬೇಕು:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ವಿಶೇಷವಾಗಿ ಕ್ಯಾಂಪಸ್‌ ಆಯ್ಕೆ ವೇಳೆ ಕಂಪೆನಿಗಳು ಆ ಕಾಲೇಜಿನ ವಿದ್ಯಾರ್ಥಿ‌ಗಳ ಗುಣಮಟ್ಟ ಚೆನ್ನಾಗಿದ್ದರೆ,ಪ್ರತಿ ವರ್ಷ‌ವು ಅದೇ ಕಾಲೇಜಿಗೆ ಭೇಟಿ ನೀಡುತ್ತಾರೆ. ಒಂದು ವೇಳೆ ಕ್ಯಾಂಪಸ್‌ ಸೆಲೆಕ್ಷನ್‌ ವೇಳೆ ಕಾಲೇಜಿನ ವಿದ್ಯಾರ್ಥಿ‌ಗಳು ಅವರು ನಿರೀಕ್ಷೆ ಮಾಡಿದ್ದಕ್ಕಿಂತಲೂ ಕಡಿಮೆ ಮಟ್ಟದ ಫಲಿತಾಂಶವನ್ನು ನೀಡಿದ್ದಲ್ಲಿ. ಆ ಕಾಲೇಜಿನ ಶಿಕ್ಷಣ ಗುಣಮಟ್ಟ ಉತ್ತಮವಾಗಿಲ್ಲ ಎಂದು ಭಾವಿಸಿ ಮುಂದಿನ ವರ್ಷದಿಂದ ಆ ಕಾಲೇಜಿಗೆ ಕ್ಯಾಂಪಸ್‌ ಸೆಲೆಕ್ಷನ್‌ಗೆ ಬಾರದೇ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಲೇಜುಗಳು ವಿದ್ಯಾರ್ಥಿ‌ಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗುತ್ತದೆ.

ಜಾಗತೀಕ ಆರ್ಥಿ‌ಕತೆ ವಸರ್ಸ್‌ ಪ್ರಸ್ತುತ ಎಂಜಿನಿಯರಿಂಗ್‌ ಟ್ರೆಂಡ್‌:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ಜಾಗತೀಕ ಮಟ್ಟದ ಟೆಕ್‌ ಕಂಪೆನಿಗಳು 2008-09ರಲ್ಲಿ ಸಂಭವಿಸಿದ ಆರ್ಥಿಕ ಕುಸಿತದಿಂದ ಪಾಠ ಕಲಿತಿದ್ದು.ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ನಿಯಮವನ್ನು ಪಾಲಿಸಲಾರಂಭಿಸಿದೆ. ಈಗಾಗಲೇ ಕೆಲವು ಆರ್ಥಿಕ ತಜ್ಞರು 2015ರ ಒಳಗೆ ವಿಶ್ವದಲ್ಲಿ ಮತ್ತೊಮ್ಮೆ ಆರ್ಥಿ‌ಕ ಕುಸಿತ ಸಂಭವಿಸಲಿದೆ ಎನ್ನುವ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಹೀಗಾಗಿ ಐಟಿ ಕಂಪೆನಿಗಳು ಹೊಸ ನೇಮಕಾತಿಯನ್ನುಕಡಿಮೆ ಮಾಡಿದ್ದು, ಆರ್ಥಿ‌ಕ ಕುಸಿತವಾಗದಂತೆ ಎಚ್ಚರಿಕ ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.

ಹೊಸದಾಗಿ ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದು:

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ಜಾಗತೀಕ ಆರ್ಥಿ‌ಕತೆ ನೇರ ಪರಿಣಾಮ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಉದ್ಯೋಗದ ಮೇಲೆ ಬೀಳುತ್ತವೆ. ಹೀಗಾಗಿ ವಿದ್ಯಾರ್ಥಿ‌ಗಳು ಪದವಿ ಹೊಂದಿದರೂ ಕ್ಯಾಂಪಸ್‌ ಸೆಲೆಕ್ಷನ್‌ ಆಗದೇ ಇರುವುದರಿಂದ ಆರಂಭದಲ್ಲಿ ಕೆಲಸ ಪಡೆಯಲು ಬಹಳ ಕಷ್ಟ ಪಡಬೇಕಾಗುತ್ತದೆ.

ಒತ್ತಾಯದ ಎಂಜಿನಿಯರಿಂಗ್‌ ಶಿಕ್ಷಣ :

ಭಾರತದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಡವುತ್ತಿರುವುದು ಎಲ್ಲಿ?

ಕೈತುಂಬಾ ಸಂಬಳ ನೀಡುವ ಎಂಜಿನಿಯರಿಂಗ್‌ನ್ನು ಮಕ್ಕಳು ಓದಿದ್ರೆ ನಮ್ಮ ಜೀವನ ಸುಖಕರವಾಗಿರುತ್ತದೆ ಎನ್ನುವ ಕಲ್ಪನೆ ಬಹಳಷ್ಟು ಪೋಷಕರಲ್ಲಿದೆ. ಹೀಗಾಗಿ ಅನೇಕ ಮಕ್ಕಳು ಪೋಷಕರ ಒತ್ತಾಯದ ಮೇರೆಗೆ ಹೆಚ್ಚು ಹಣ ನೀಡಿ ಎಂಜಿನಿಯರಿಂಗ್‌ ಪದವಿಯನ್ನು ಓದುತ್ತಿದ್ದಾರೆ. ಕೊನೆಗೆ ಆಸಕ್ತಿ ಇಲ್ಲದ ವಿಷಯವನ್ನು ಅಧ್ಯಯನ ಮಾಡಿ ಕಡಿಮೆ ಅಂಕ ಪಡೆದು ಉದ್ಯೋಗ ಪಡೆಯಲು ಹರ ಸಾಹಸ ಪಡಬೇಕಾಗುತ್ತದೆ. ಹೀಗಾಗಿ ಪದವಿ ಪಡೆದು ಶಿಕ್ಷಣವನ್ನು ದೂರುವುದಕ್ಕಿಂತ ಮೊದಲೇ ಅವರ ಅಭಿಪ್ರಾಯವನ್ನು ತಿಳಿದು ಅವರ ಆಸಕ್ತಿಯ ಕ್ಷೇತ್ರದಲ್ಲಿಅವರನ್ನು ಸೇರಿಸುವುದು ಉತ್ತಮ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot