ನೀವು ಅರಿಯಲೇಬೇಕಾಗಿರುವ ಭೂಮಿಯ ಮೇಲಿನ ಕೌತುಕಗಳು
ನಿಗೂಢತೆಯು ಅದ್ಭುತವನ್ನು ಸೃಷ್ಟಿಸುತ್ತದೆ ಮತ್ತು ಅದ್ಭುತವು ಮಾನವನ ಅರ್ಥಮಾಡಿಕೊಳ್ಳುವ ಬಯಕೆಯ ಮೂಲವಾಗಿದೆ ಎಂಬುದು ನೀಲ್ ಆರ್ಮ್ಸ್ಟ್ರಾಂಗ್ ಹೇಳಿರುವ ಮಾತಾಗಿದೆ. ಅಜ್ವಾತ, ಅನೂಹ್ಯ, ಕೌತುಕಮಯವಾಗಿರುವ ಅಂಶಗಳನ್ನು ನಾವು ನಿಗೂಢತೆಯೊಂದಿಗೆ ಜೋಡಿಸುತ್ತೇವೆ.
ಓದಿರಿ: ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್ ವೈರಲ್ ವೀಡಿಯೋ!
ನೈಸರ್ಗಿಕವಾಗಿ ನಡೆಯುವ ಕೆಲವೊಂದು ಘಟನೆಗಳನ್ನು ನಮಗೆ ಯಥಾವತ್ತಾಗಿ ವಿವರಿಸಲಾಗುವುದಿಲ್ಲ. ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ. ಇಂತಹುದೇ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಸೃಷ್ಟಿಯು ಒಳಗೊಂಡಿದ್ದು ಅವುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳ ಒಳಾರ್ಥ ವಿವರಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

#1
ಇದು ಪರ್ವತದಂತೆಯೇ ತೋರುತ್ತದೆ. ಇದು ತುದಿಯನ್ನು ಒಳಗೊಂಡಿರದೇ, ಮೋಡಗಳಿಂದ ಅವೃತವಾಗಿದೆ. ಇದರ ಮೇಲ್ಮೈ ಸಮತಟ್ಟಾಗಿದೆ. ಇದು ನಿಸರ್ಗದ ಕೌತುಕಗಳಲ್ಲಿ ಒಂದು ಎಂಬುದಾಗಿ ಪರಿಗಣಿತವಾಗಿದ್ದು ಪರ್ವತದ ಮೇಲ್ಮೈ ಸಮತಟ್ಟಾಗಿರುವುದು ನಿಜಕ್ಕೂ ಸೋಜಿಗವನ್ನುಂಟು ಮಾಡಿದೆ.

#2
ಯುಎಸ್‌ನ ನೆವೆಡಾ ಮರುಭೂಮಿಯಲ್ಲಿ ಫ್ಲೈ ಗೀಸರ್ ಇದ್ದು 1916 ರಲ್ಲಿ ಇದು ಪತ್ತೆಯಾಗಿದೆ. ಈ ಕಾರಂಜಿಗಳಲ್ಲಿ ಬಿಸಿನೀರು ಹೊರಬರುತ್ತಿದ್ದು ವಿಶ್ವದ ಕೌತುಕಗಳಲ್ಲಿ ಒಂದೆನಿಸಿದೆ. ಇದು ಯಾತ್ರಾ ಸ್ಥಳವಾಗದೇ ಇದ್ದರೂ ವಿಶ್ವದ ಮೂಲೆಗಳಲ್ಲೂ ಮನೆಮಾತಾಗಿದೆ.

#3
ಅಟ್ಲಾಂಟಿಕ್ ಸಾಗರದಲ್ಲಿ ಬರ್ಮುಡಾ ಟ್ರಯಾಂಗಲ್ ಮೂರು ಮೂಲೆಗಳಿರುವ ಪ್ರದೇಶವೆಂದೇ ಪ್ರತೀತಿಯನ್ನು ಪಡೆದುಕೊಂಡಿದೆ. ಬರ್ಮುಡಾ, ಮಿಯಾಮಿ ಮತ್ತು ಸ್ಯಾನ್ ಜುವಾನ್ ಪ್ರದೇಶದಲ್ಲಿ ಈ ಮೂಲೆಗಳಿದ್ದು ಜನರು, ಹಡಗುಗಳು ಮತ್ತು ವಿಮಾನಗಳನ್ನು ಅದೃಶ್ಯವಾಗಿಸುತ್ತಿದೆ. ಈ ಅದೃಶ್ಯತೆಗೆ ಕಾರಣ ಇನ್ನೂ ದೊರಕಿಲ್ಲ.

#4
ಅಂಟಾರ್ಟಿಕಾದಲ್ಲಿ ಒಂದು ಪ್ರದೇಶವಿದ್ದು, ಇಲ್ಲಿಗೆ ಭೇಟಿ ನೀಡುವ ಸುವರ್ಣವಕಾಶ ಹೆಚ್ಚಿನವರಿಗೆ ಲಭ್ಯವಾಗಿಲ್ಲ. ಇದನ್ನು ಹೆಚ್ಚು ನಿಗೂಢ ಸ್ಥಳವೆಂದೇ ಕರೆಯಲಾಗಿದೆ. ಜಲಾಶಯದ ನೀರು ರಕ್ತದ ಬಣ್ಣದಲ್ಲಿರುವುದರಿಂದ ಇದನ್ನು ರಕ್ತ ಜಲಪಾತ ಎಂದೂ ಕರೆಯಲಾಗಿದೆ.

#5
ಹಿಮದಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಸಣ್ಣ ಸಣ್ಣ ಕೊಳಗಳಿವೆ ಕ್ಯಾಲ್ಶಿಯಮ್ ಕಾರ್ಬೋನೇಟ್‌ಗಳ ಉಳಿಕೆಯಿಂದ ಈ ಕೊಳ ನಿರ್ಮಿತವಾಗಿದೆ.

#6
ಸಹಾರಾದ ಕಣ್ಣು ಎಂದೂ ಕೂಡ ಇದನ್ನು ಕರೆದಿದ್ದು, ಮರುಭೂಮಿಯಲ್ಲಿ ನಿರ್ಮಿತವಾಗಿರುವ ನಿಗೂಢ ವೃತ್ತಾಕಾರದ ಆಕಾರವಾಗಿದೆ. ಇದರ ಪಕ್ಕದಲ್ಲಿ ನಿಂತು ನೀವು ನೋಡಿದಾಗ ಇದು ನಿಮಗೆ ನಿಖರವಾಗಿ ಗೋಚರಿಸುತ್ತದೆ. ಜ್ವಾಲಾಮುಖಿ ನಿರ್ಮಿಸಿರಬಹುದಾದ ಕುಳಿಯೂ ಇದಾಗಿರಬಹುದು ಎಂಬ ಸಂಶಯವೂ ಇಲ್ಲದಿಲ್ಲ.

#7
ಕೆಲವೊಂದು ಸಂದರ್ಭಗಳಲ್ಲಿ ನೀವು ಕಾರನ್ನು ಚಾಲನೆ ಮಾಡದೆಯೇ ತನ್ನಷ್ಟಕ್ಕೆ ಅದು ಮೇಲ್ಮಟ್ಟಕ್ಕೆ ಹೋದ ಅನುಭವ ನಿಮಗುಂಟಾಗುತ್ತದೆ. ನಿಜಕ್ಕೂ ಇದು ಭಯಾನಕವಾಗಿದೆ ಅಲ್ಲವೇ? ಭೂಮಿಯ ಕೆಳಭಾಗ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಪ್ರಭಾವವವೇ ಇಲ್ಲಾ ದೆವ್ವಗಳ ಕೆಲಸವೇ ಎಂಬುದು ಇನ್ನೂ ತಿಳಿದಿಲ್ಲ.

#8
ನ್ಯೂಜಿಲ್ಯಾಂಡ್‌ನ ಸೌತ್ ಐಲ್ಯಾಂಡ್‌ನಲ್ಲಿರುವ ಕೊಕೊ ಬೀಚ್‌ನಲ್ಲಿ ಬಹುದೊಡ್ಡ ಕಲ್ಲಿನಾಕೃತಿಗಳನ್ನು ಕಾಣಬಹುದಾಗಿದೆ. 12 ಫೀಟ್ ದೊಡ್ಡದಾಗಿರುವ ಈ ಕಲ್ಲಿನ ರಚನೆಗಳು ನಿಜಕ್ಕೂ ನಿಗೂಢತಯೆನ್ನು ಒಳಗೊಂಡಿದೆ.

#9
ನದಿಗಳ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಎಂಬ ಊಹೆಯನ್ನು ಕ್ಯಾನೊ ಕ್ರಿಸ್ಟಲ್ಸ್ ಸುಳ್ಳು ಮಾಡುತ್ತದೆ ವಿಶ್ವದಲ್ಲೇ ಅತ್ಯಂತ ಸುಂದರ ನದಿಯೆಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದ್ದು ಸಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ನಡೆಯುವ ಚಮತ್ಕಾರದಿಂದ ಇದಕ್ಕೆ ಈ ಹೆಸರು ಬಂದಿದೆ. ಹಳದಿ, ಗುಲಾಬಿ, ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ನದಿಯ ಬಣ್ಣ ಬದಲಾಗುತ್ತದೆ.

#10
ಇದೊಂದು ಅರಣ್ಯವಾಗಿದ್ದು, 3500 ಹೆಕ್ಟೇರುಗಳ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಜಪಾನ್‌ನ ಮೌಂಟ್ ಫ್ಯೂಜಿನಲ್ಲಿ ಇದು ನೆಲೆಗೊಂಡಿದೆ. ವಿಶ್ವದಲ್ಲೇ ಹೆಚ್ಚು ಮೋಡಿ ಮಾಡುವ ಅರಣ್ಯವೆಂದೇ ಇದು ಪ್ರಸಿದ್ಧಗೊಂಡಿದೆ. ಜನರು ಇಲ್ಲಿ ಪ್ರಾಣವನ್ನೂ ತೆತ್ತಿದ್ದು ಕಳೆದ 65 ವರ್ಷಗಳಿಂದ 500 ಜನರು ಇಲ್ಲಿ ಸಾವನ್ನಪ್ಪಿದ್ದಾರೆ.


Click it and Unblock the Notifications








